ರಾಯಲ್ ಎನ್‌ಫೀಲ್ಡ್ ಹೊಸ ಮಿಟಿಯೊರ್ 350 ಬೈಕ್ ಮಾದರಿಗೆ ಟೈರ್ ಒದಗಿಸಲಿದೆ ಸಿಯೆಟ್

ರಾಯಲ್ ಎನ್‌ಫೀಲ್ಡ್ ತನ್ನ ಹೊಚ್ಚ ಹೊಸ ಕ್ರೂಸರ್ ಬೈಕ್ ಮಾದರಿಯಾದ ಮಿಟಿಯೊರ್ 350 ಆವೃತ್ತಿಯನ್ನು ಭಾರತದಲ್ಲಿ ಬಿಡುಗಡೆ ಮಾಡಿದ್ದು, ಹೊಸ ಬೈಕ್ ಮಾದರಿಗಾಗಿ ಸಿಯೆಟ್ ಕಂಪನಿಯು ತನ್ನ ಹೊಸ ಸರಣಿಯ ಜೂಮ್ ಪ್ಲಸ್ ಮಾದರಿಯ ಟೈರ್ ಒದಗಿಸಲಿದೆ.

ಹೊಸ ಮಿಟಿಯೊರ್ 350 ಬೈಕ್ ಮಾದರಿಗೆ ಟೈರ್ ಒದಗಿಸಲಿದೆ ಸಿಯೆಟ್

ಜನಪ್ರಿಯ ಟೈರ್ ಉತ್ಪಾದನಾ ಕಂಪನಿಯಾಗಿರುವ ಸಿಯೆಟ್ ಟೈರ್ ಈಗಾಗಲೇ ದೇಶದ ಮಾರಾಟವಾಗುತ್ತಿರುವ ಪ್ರಮುಖ ವಾಹನ ಮಾದರಿಗಳಲ್ಲಿ ಜೋಡಣೆಯಾಗುತ್ತಿದ್ದು, ರಾಯಲ್ ಎನ್‌ಫೀಲ್ಡ್ ಕಂಪನಿಯು ತನ್ನ ಹೊಸ ಮಿಟಿಯೊರ್ 350 ಮಾದರಿಗಾಗಿ ಸಿಯೆಟ್ ಟೈರ್ ಆಯ್ಕೆ ಮಾಡಿದೆ. ರಾಯಲ್ ಉತ್ಪಾದನೆಯ ಕ್ಲಾಸಿಕ್ 350, ಬುಲೆಟ್, ಹಿಮಾಲಯನ್ ಅಡ್ವೆಂಚರ್ ಮಾದರಿಗಳಲ್ಲಿ ಪ್ರಮುಖ ವೆರಿಯೆಂಟ್ ಈಗಾಗಲೇ ಸಿಯೆಟ್ ಟೈರ್ ಬಳಕೆ ಮಾಡಲಾಗುತ್ತಿದ್ದು, ಇದೀಗ ಮಿಟಿಯೊರ್ 350 ಬೈಕಿನ ಎಲ್ಲಾ ವೆರಿಯೆಂಟ್‌ಗಳಲ್ಲೂ ಸ್ಟ್ಯಾಂಡರ್ಡ್ ಆಗಿ ಸಿಯೆಟ್ ಜೂಮ್ ಪ್ಲಸ್ ಮಾದರಿಯ ಟೈರ್ ಬಳಕೆ ಮಾಡಲಾಗಿದೆ.

ಹೊಸ ಮಿಟಿಯೊರ್ 350 ಬೈಕ್ ಮಾದರಿಗೆ ಟೈರ್ ಒದಗಿಸಲಿದೆ ಸಿಯೆಟ್

ಸಿಯೆಟ್ ಜೂಮ್ ಪ್ಲಸ್ ಟೈರ್ ಮಾದರಿಯು ಟ್ಯೂಬ್‌ಲೆಸ್ ವೈಶಿಷ್ಟ್ಯತೆಯೊಂದಿಗೆ ಅತ್ಯುತ್ತಮ ಹಿಡಿತ ಹೊಂದಿದ್ದು, ಸುಧಾರಿತ ತಂತ್ರಜ್ಞಾನ ಬಳಕೆಯಿಂದಾಗಿ ದೂರದ ಪ್ರಯಾಣಕ್ಕೆ ಅನುಕೂಲಕರವಾದ ವಿನ್ಯಾಸ ಪಡೆದುಕೊಂಡಿವೆ.

ಹೊಸ ಮಿಟಿಯೊರ್ 350 ಬೈಕ್ ಮಾದರಿಗೆ ಟೈರ್ ಒದಗಿಸಲಿದೆ ಸಿಯೆಟ್

ಇನ್ನು ಮಿಟಿಯೊರ್ 350 ಹೊಸ ಬೈಕ್ ಮಾದರಿಯು ಸುಧಾರಿತ ತಂತ್ರಜ್ಞಾನ ಪ್ರೇರಿತ ಫೀಚರ್ಸ್‌ಗಳೊಂದಿಗೆ ಪ್ರಮುಖ ಮೂರು ವೆರಿಯೆಂಟ್‌ಗಳೊಂದಿಗೆ ಖರೀದಿಗೆ ಲಭ್ಯವಿದ್ದು, ತಾಂತ್ರಿಕವಾಗಿ ಥಂಡರ್‌ಬರ್ಡ್ ಎಕ್ಸ್ ಮಾದರಿಗಿಂತಲೂ ಸಾಕಷ್ಟು ವಿಭಿನ್ನತೆಗಳನ್ನು ಹೊಂದಿದೆ.

ಹೊಸ ಮಿಟಿಯೊರ್ 350 ಬೈಕ್ ಮಾದರಿಗೆ ಟೈರ್ ಒದಗಿಸಲಿದೆ ಸಿಯೆಟ್

ಹೊಸ ಬೈಕ್ ಮಾದರಿಯು ಗ್ರಾಹಕರ ಬೇಡಿಕೆಯೆಂತೆ ಫೈರ್‌ಬಾಲ್, ಸ್ಟೆಲ್ಲಾರ್ ಮತ್ತು ಸೂಪರ್‌ನೊವಾ ಎಂಬ ಮೂರು ವೆರಿಯೆಂಟ್‌ಗಳಲ್ಲಿ ಖರೀದಿಗೆ ಲಭ್ಯವಿದ್ದು, ಬೆಂಗಳೂರಿನಲ್ಲಿ ಆನ್‌ರೋಡ್ ಪ್ರಕಾರ ರೂ.2.18 ಲಕ್ಷ (ಫೈರ್‌ಬಾಲ್), ರೂ. 2.36 ಲಕ್ಷ (ಸ್ಟೆಲ್ಲಾರ್) ಮತ್ತು ಹೈ ಎಂಡ್ ಮಾದರಿಯಾದ (ಸೂಪರ್‌ನೊವಾ) ಮಾದರಿಯು ರೂ. 2.25 ಲಕ್ಷ ಬೆಲೆ ಹೊಂದಿದೆ.

ಹೊಸ ಮಿಟಿಯೊರ್ 350 ಬೈಕ್ ಮಾದರಿಗೆ ಟೈರ್ ಒದಗಿಸಲಿದೆ ಸಿಯೆಟ್

ಡಬಲ್ ಡೌನ್‌ಟ್ಯೂಬ್ ಕ್ರೆಡಲ್ ಫ್ರೇಮ್ ಮೇಲೆ ಅಭಿವೃದ್ದಿಗೊಂಡಿರುವ ಹೊಸ ಬೈಕ್ ಮಾದರಿಯು ಥಂಡರ್‌ಬರ್ಡ್ ಮಾದರಿಗಿಂತಲೂ ಹೆಚ್ಚು ಅರಾಮದಾಯಕ ರೈಡಿಂಗ್ ಒದಗಿಸಲಿದ್ದು, ಮುಂಭಾಗದಲ್ಲಿ 41-ಎಂಎಂ ಟೆಲಿಸ್ಕೋಪಿಕ್ ಫೋರ್ಕ್ ಮತ್ತು ಹಿಂಭಾಗದಲ್ಲಿ 6 ಹಂತಗಳಲ್ಲಿ ಹೊಂದಾಣಿಕೆ ಮಾಡಿಕೊಳ್ಳಬಹುದಾದ ಟ್ವಿನ್ ಶಾಕ್‌ ಅಬ್ಸಾರ್ಬರ್‌ ನೀಡಲಾಗಿದೆ.

MOST READ: ಭಾರತದಲ್ಲಿಯೂ ಬಿಡುಗಡೆಯಾಗಲಿದೆ ದುಬಾರಿ ಬೆಲೆಯ ಫೋರ್ಜಾ ಮ್ಯಾಕ್ಸಿ ಸ್ಕೂಟರ್

ಹೊಸ ಮಿಟಿಯೊರ್ 350 ಬೈಕ್ ಮಾದರಿಗೆ ಟೈರ್ ಒದಗಿಸಲಿದೆ ಸಿಯೆಟ್

ಹೊಸ ಬೈಕಿನಲ್ಲಿ ಮತ್ತೊಂದು ಪ್ರಮುಖ ಬದಲಾವಣೆ ಎಂದರೆ ಥಂಡರ್‌ಬರ್ಡ್ ಎಕ್ಸ್ ಮಾದರಿಗಿಂತಲೂ 6 ಕೆ.ಜಿ ಕಡಿಮೆ ತೂಕ ಹೊಂದಿರುವ ಹೊಸ ಮಿಟಿಯೊರ್ 350 ಬೈಕ್ ಮಾದರಿಯು 1,400-ಎಂಎಂ ವೀಲ್ಹ್‌ಬೆಸ್, 170-ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಪಡೆದುಕೊಂಡಿದೆ.

ಹೊಸ ಮಿಟಿಯೊರ್ 350 ಬೈಕ್ ಮಾದರಿಗೆ ಟೈರ್ ಒದಗಿಸಲಿದೆ ಸಿಯೆಟ್

ಹೊಸ ಮಿಟಿಯೊರ್ 350 ಬೈಕ್ ಮಾದರಿಯು ಹೊಸದಾಗಿ ಅಭಿವೃದ್ದಿಗೊಳಿಸಲಾದ ಜೆ-ಸೀರಿಸ್ ಮಾದರಿಯ 349-ಸಿಸಿ ಫ್ಯೂಲ್ ಇಂಜೆಕ್ಷೆಡ್ ಸಿಂಗಲ್ ಸಿಲಿಂಡರ್ ಹೊಂದಿದ್ದು, 5-ಸ್ಪೀಡ್ ಗೇ‌ರ್‌ಬಾಕ್ಸ್‌ನೊಂದಿಗೆ 20.2-ಬಿಎಚ್‌ಪಿ ಮತ್ತು 27-ಎನ್ಎಂ ಟಾರ್ಕ್ ಉತ್ಪಾದನೆ ಮಾಡಬಲ್ಲದು.

MOST READ: ಅತಿ ಕಡಿಮೆ ಬೆಲೆಯಲ್ಲಿ ಹೆಚ್ಚು ಮೈಲೇಜ್ ನೀಡುವ ರೆಟ್ರೊ ಎಲೆಕ್ಟ್ರಿಕ್ ಬೈಕ್ ಬಿಡುಗಡೆ

ಹೊಸ ಮಿಟಿಯೊರ್ 350 ಬೈಕ್ ಮಾದರಿಗೆ ಟೈರ್ ಒದಗಿಸಲಿದೆ ಸಿಯೆಟ್

ಹೊಸ ಬೈಕ್ ಖರೀದಿಗಾಗಿ ರಾಯಲ್ ಎನ್‌ಫೀಲ್ಡ್ ಕಂಪನಿಯು ಬುಕ್ಕಿಂಗ್ ಆರಂಭಿಸುವ ಮೂಲಕ ಈಗಾಗಲೇ ಬೈಕ್ ವಿತರಣೆ ಆರಂಭಿಸಿದ್ದು, ಮಿಟಿಯೊರ್ 350 ಬೈಕಿನಲ್ಲಿ ಹೊಸ ಎಂಜಿನ್‌ನಿಂದಾಗಿ ಬೈಕಿನ ವೈಬ್ರೆಷನ್ ಪ್ರಮಾಣವು ಸಾಕಷ್ಟು ಸುಧಾರಣೆಯಾಗಿದೆ.

Most Read Articles

Kannada
English summary
CEAT To Supply Tyres For The Royal Enfield Meteor 350. Read in Kannada.
Story first published: Saturday, November 7, 2020, 20:17 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X