ಹೀರೋ ಎಲೆಕ್ಟ್ರಿಕ್ ಸ್ಕೂಟರ್‍‍ಗಳ ಮೇಲೆ ಭರ್ಜರಿ ಆಫರ್

ಹೀರೋ ಎಲೆಕ್ಟ್ರಿಕ್ ಕಂಪನಿಯು ತನ್ನ ಸರಣಿಯಲ್ಲಿರುವ ಎಲ್ಲಾ ಎಲೆಕ್ಟ್ರಿಕ್ ಸ್ಕೂಟರ್‍‍ಗಳಿಗೆ ಭರ್ಜರಿ ಆಫರ್ ಅನ್ನು ಘೋಷಿಸಿದೆ. ಹೀರೋ ಎಲೆಕ್ಟ್ರಿಕ್ ಕಂಪನಿಯು ತನ್ನ ಎಲ್ಲಾ ಎಲೆಕ್ಟ್ರಿಕ್ ಸ್ಕೂಟರ್‍‍ಗಳಿಗೆ ಒಟ್ಟು ರೂ.6,000 ಗಳವರೆಗೆ ಆಫರ್ ನೀಡಿದೆ.

ಹೀರೋ ಎಲೆಕ್ಟ್ರಿಕ್ ಸ್ಕೂಟರ್‍‍ಗಳ ಮೇಲೆ ಭರ್ಜರಿ ಆಫರ್

74ನೇ ಸ್ವಾತಂತ್ರ್ಯ ದಿನಚರಣೆ ಸಂಭ್ರಮ ದಿನದಂದು ಹೊಸ 'ಸೆಲಬ್ರೆಟ್ ಯುವರ್ ಫ್ರೀಡಂ' ಎಂಬ ಅಭಿಯಾನದ ಅಡಿಯಲ್ಲಿ ಈ ಹೊಸ ರಿಯಾಯಿತಿಗಳನ್ನು ಹೀರೋ ಎಲೆಕ್ಟ್ರಿಕ್ ಕಂಪನಿ ಘೋಷಿಸಿತು. ಈ ಅಭಿಯಾನದ ಭಾಗವಾಗಿ ಹೀರೋ ಎಲೆಕ್ಟ್ರಿಕ್ ತನ್ನ ಯಾವುದೇ ಹೈ-ಸ್ಪೀಡ್ ಲಿಥಿಯಂ-ಐಯಾನ್ ಸ್ಕೂಟರ್‌ಗಳ ಖರೀದಿಯ ಮೇಲೆ ರೂ.3,000 ಗಳವರೆಗೆ ನಗದು ರಿಯಾಯಿತಿಯನ್ನು ನೀಡುತ್ತಿದೆ. ಇದಲ್ಲದೇ ಹೀರೋ ಎಲೆಕ್ಟ್ರಿಕ್ ಗ್ರಾಹಕರು ರೆಫರೆನ್ಸ್ ಇದ್ದರೆ ಹೆಚ್ಚುವರಿ ರೂ.2,000 ಗಳವರೆಗೆ ರಿಯಾಯಿತಿಯನ್ನು ಪಡೆಯಬಹುದು.

ಹೀರೋ ಎಲೆಕ್ಟ್ರಿಕ್ ಸ್ಕೂಟರ್‍‍ಗಳ ಮೇಲೆ ಭರ್ಜರಿ ಆಫರ್

ಅಲ್ಲದೇ ರೂ.1,000 ಮೌಲ್ಯದ ಅಮೆಜಾನ್ ವೊಚರ್ ಅನ್ನು ಪಡೆಯಬಹುದಾಗಿದೆ. ಈ ಎಲ್ಲಾ ಆಫರ್ ಗಳು ಈ ತಿಂಗಳ ಅಂತ್ಯದವರೆಗೆ ಲಭ್ಯವಿರುತ್ತದೆ. ಹೊಸ ಅಭಿಯಾನದ ಹೊರತಾಗಿ, ಹೀರೋ ಎಲೆಕ್ಟ್ರಿಕ್‌ನ 3 ದಿನಗಳ ರಿಟರ್ನ್ ಪಾಲಿಸಿ ಮತ್ತು ಹೋಮ್ ಡೆಲಿವರಿ ಆಯ್ಕೆಗಳು ಭಾರತದಾದ್ಯಂತ ಮೊದಲಿನಂತೆ ಮುಂದುವರಿಸಲಿದೆ.

MOST READ: ದುಬಾರಿಯಾಯ್ತು ಜನಪ್ರಿಯ ಬಿಎಸ್-6 ಹೋಂಡಾ ಆಕ್ಟಿವಾ 6ಜಿ ಸ್ಕೂಟರ್

ಹೀರೋ ಎಲೆಕ್ಟ್ರಿಕ್ ಸ್ಕೂಟರ್‍‍ಗಳ ಮೇಲೆ ಭರ್ಜರಿ ಆಫರ್

ಪೆಟ್ರೋಲ್ ಬೆಲೆಗಳ ಹೆಚ್ಚಳ ಮತ್ತು ಹೆಚ್ಚು ನಿರ್ವಹಣೆ ವೆಚ್ಚಗಳಿಂದ ಹೆಚ್ಚಿನವರು ಎಲೆಕ್ಟ್ರಿಕ್ ವಾಹನಗಳ ಕಡೆ ಮುಖ ಮಾಡುತ್ತಿದ್ದಾರೆ. ಇಂತವರು ಎಲೆಕ್ಟ್ರಿಕ್ ಸ್ಕೂಟರ್ ಗಳನ್ನು ಖರೀದಿಸಲು ನಾವು ಈ ಅಭಿಯಾನವನ್ನು ಪ್ರಾರಂಭಿಸಿದ್ದೇವೆ ಎಂದು ಹೀರೋ ಎಲೆಕ್ಟ್ರಿಕ್ ಸಿಇಒ ಸೊಹಿಂದರ್ ಗಿಲ್ ಅವರು ಹೇಳಿದ್ದಾರೆ.

ಹೀರೋ ಎಲೆಕ್ಟ್ರಿಕ್ ಸ್ಕೂಟರ್‍‍ಗಳ ಮೇಲೆ ಭರ್ಜರಿ ಆಫರ್

ಪ್ರಸ್ತುತ ಹೀರೋ ಎಲೆಕ್ಟ್ರಿಕ್ ಕಂಪನಿಯ ಸರಣಿಯಲ್ಲಿ ಫ್ಲ್ಯಾಶ್, ನೈಕ್ಸ್, ಆಪ್ಟಿಮಾ, ಫೋಟನ್, ಫ್ಲ್ಯಾಶ್, ಡ್ಯಾಶ್ ಮತ್ತು ಇಆರ್ ಎಂಬ ಮಾದರಿಗಳನ್ನು ಒಳಗೊಂಡಿದೆ. ಈ ಎಲೆಕ್ಟ್ರಿಕ್ ಸ್ಕೂಟರ್‍‍ಗಳಲ್ಲಿ ಉತ್ತಮ ಗುಣಮಟ್ಟದ ಲಿಥಿಯಂ-ಐಯಾನ್ ಬ್ಯಾಟರಿಗಳನ್ನು ಹೊಂದಿದೆ.

MOST READ: ಬಿಡುಗಡೆಯಾಯ್ತು ಬಹುನಿರೀಕ್ಷಿತ ಹೊಸ ಹೋಂಡಾ ಎಕ್ಸ್-ಬ್ಲೇಡ್ ಬೈಕ್

ಹೀರೋ ಎಲೆಕ್ಟ್ರಿಕ್ ಸ್ಕೂಟರ್‍‍ಗಳ ಮೇಲೆ ಭರ್ಜರಿ ಆಫರ್

ಹೀರೋ ಫ್ಲ್ಯಾಶ್, ಎನ್‌ವೈಎಕ್ಸ್ ಮತ್ತು ಆಪ್ಟಿಮಾ ಎಲೆಕ್ಟ್ರಿಕ್ ಸ್ಕೂಟರ್‌ಗಳು ಗಂಟೆಗೆ 40ಕಿ.ಮಿ ವೇಗದೊಂದಿಗೆ ಪ್ರತಿ ಚಾರ್ಜ್‌ಗೆ 60 ಕಿ.ಮಿ ಮೈಲೇಜ್ ಅನ್ನು ಹೊಂದಿದೆ. ಇನ್ನು 48 ವಿ/ 28 ಎಹೆಚ್ ಲೀಥಿಯಂ ಅಯಾನ್ ಬ್ಯಾಟರಿಯನ್ನು ಪೂರ್ಣ ಪ್ರಮಾಣದಲ್ಲಿ ಚಾರ್ಜ್‌ಗೊಳ್ಳಲು ಕನಿಷ್ಠ 4 ಗಂಟೆ ಸಮಯ ತೆಗದುಕೊಳ್ಳುತ್ತವೆ.

ಹೀರೋ ಎಲೆಕ್ಟ್ರಿಕ್ ಸ್ಕೂಟರ್‍‍ಗಳ ಮೇಲೆ ಭರ್ಜರಿ ಆಫರ್

ಹಾಗೆಯೇ ಫೋಟನ್ ಎಲೆಕ್ಟ್ರಿಕ್ ಸ್ಕೂಟರ್ ಮಾದರಿಯು ಗಂಟೆಗೆ 45 ಕಿ.ಮೀ ಸ್ಪೀಡ್ ಹೊಂದಿದೆ, ಪವರ್ ಮೊಡ್‌ನಲ್ಲಿ ಸ್ಕೂಟರ್ ಚಾಲನೆ ಮಾಡಿದ್ದಲ್ಲಿ ಪ್ರತಿ ಚಾರ್ಜ್‌ಗೆ 85 ಕಿ.ಮಿ ಹಾಗೂ ಎಕಾನಮಿ ಮೊಡ್‌ನಲ್ಲಿ ಸ್ಕೂಟರ್ ಚಾಲನೆ ಮಾಡಿದ್ದಲ್ಲಿ ಪ್ರತಿ ಚಾರ್ಜ್‌ಗೆ 110 ಕಿ.ಮಿ ಮೈಲೇಜ್ ನೀಡುತ್ತದೆ.

MOST READ: ಬಿಡುಗಡೆಯಾಯ್ತು ಹೊಸ ಟ್ರಯಂಫ್ ಬೊನೊವೆಲ್ಲಿ ಸ್ಪೀಡ್‍‍ಮಾಸ್ಟರ್ ಬೈಕ್

ಹೀರೋ ಎಲೆಕ್ಟ್ರಿಕ್ ಸ್ಕೂಟರ್‍‍ಗಳ ಮೇಲೆ ಭರ್ಜರಿ ಆಫರ್

ಇನ್ನು ಫೋಟನ್ ಸ್ಕೂಟರ್‌ನಲ್ಲಿ 48 ವಿ/28 ಎಹೆಚ್ 2 ಲೀಥಿಯಂ ಅಯಾನ್ ಬ್ಯಾಟರಿ ಬಳಕೆ ಮಾಡಲಾಗಿದೆ. ಈ ಬ್ಯಾಟರಿ ಪೂರ್ಣ ಪ್ರಮಾಣದಲ್ಲಿ ಚಾರ್ಜ್‌ಗೊಳ್ಳಲು ಕನಿಷ್ಠ 4 ಗಂಟೆ ಸಮಯ ತೆಗೆದುಕೊಳ್ಳುತ್ತದೆ.

ಹೀರೋ ಎಲೆಕ್ಟ್ರಿಕ್ ಸ್ಕೂಟರ್‍‍ಗಳ ಮೇಲೆ ಭರ್ಜರಿ ಆಫರ್

ಹೀರೋ ನಿರ್ಮಾಣದ ಪ್ರತಿ ಎಲೆಕ್ಟ್ರಿಕ್ ಸ್ಕೂಟರ್ ಮಾದರಿಯಲ್ಲೂ ಸುರಕ್ಷತೆಗೂ ಹೆಚ್ಚಿನ ಒತ್ತು ನೀಡಲಾಗಿದೆ. ಮೊದಲ ಮೂರು ಸಾಮಾನ್ಯ ಸ್ಕೂಟರ್‌ಗಳಲ್ಲಿ ಕ್ರ್ಯಾಶ್ ಗಾರ್ಡ್, ಟೆಲಿಸ್ಕೊಪಿಕ್ ಸಸ್ಫೆಷನ್, ಡಿಜಿಟಲ್ ಸ್ಪಿಡೋ ಮೀಟರ್, ರಿಮೋಟ್ ಜೊತೆ ಆ್ಯಂಟಿ ಥೆಪ್ಟ್ ಅಲಾರಾಂ ಮತ್ತು ಫೋಟನ್ ಮಾದರಿಯಲ್ಲಿ ಡಿಸ್ಕ್ ಬ್ರೇಕ್ ಜೊತೆಗೆ ಪವರ್, ಎಕಾನಮಿ ಡ್ಯುಯಲ್ ರೈಡ್ ಮೊಡ್ ನೀಡಲಾಗಿದೆ.

Most Read Articles

Kannada
English summary
Hero Electric Announces Limited Time Offer With Benefits. Read In Kannada.
Story first published: Tuesday, August 18, 2020, 16:55 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X