ದೀಪಾವಳಿ ಆಫರ್: ಜಾವಾ ಕ್ಲಾಸಿಕ್ ಬೈಕ್‌ಗಳ ಖರೀದಿ ಮೇಲೆ ಆಕರ್ಷಕ ಇಎಂಐ ಆಫರ್

ದೀಪಾವಳಿ ಸಂಭ್ರಮದಲ್ಲಿ ಹೊಸ ವಾಹನ ಖರೀದಿ ಭರಾಟೆ ಜೋರಾಗಿದ್ದು, ಬಹುತೇಕ ಆಟೋ ಕಂಪನಿಗಳು ವಿವಿಧ ಆಫರ್‌ಗಳ ಮೂಲಕ ಗ್ರಾಹಕರನ್ನು ಆಕರ್ಷಿಸುತ್ತಿವೆ. ಜಾವಾ ಮೋಟಾರ್‌ಸೈಕಲ್ ಕೂಡಾ ಗ್ರಾಹಕರನ್ನು ಸೆಳೆಯಲು ಆಕರ್ಷಕ ಇಎಂಐ ಆಫರ್ ನೀಡುತ್ತಿದ್ದು, ದೀಪಾವಳಿ ಸಂಭ್ರಮಕ್ಕಾಗಿ ಹೊಸ ಬೈಕ್ ವಿತರಿಸುವ ಭರವಸೆ ನೀಡಿದೆ.

ದೀಪಾವಳಿ ಆಫರ್: ಜಾವಾ ಕ್ಲಾಸಿಕ್ ಬೈಕ್‌ಗಳ ಖರೀದಿ ಮೇಲೆ ಆಕರ್ಷಕ ಇಎಂಐ ಆಫರ್

ಕ್ಲಾಸಿಕ್ ಬೈಕ್ ಬಿಡುಗಡೆಯ ಸಂದರ್ಭದಲ್ಲಿ ಗ್ರಾಹಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದ್ದ ಜಾವಾ ಮೋಟಾರ್‌ಸೈಕಲ್ ಕಂಪನಿಯು ಇತ್ತೀಚೆಗೆ ವಿತರಣಾ ಅವಧಿಯ ವಿಚಾರವಾಗಿ ಗ್ರಾಹಕರ ಅಸಮಾಧಾನಕ್ಕೆ ಕಾರಣವಾಗಿತ್ತು. ಈ ಹಿನ್ನಲೆ ನಿಗದಿತ ಅವಧಿಯಲ್ಲಿ ಹೊಸ ಬೈಕ್ ವಿತರಣೆಯ ಭರವಸೆ ನೀಡಿರುವ ಕಂಪನಿಯು ಆಕರ್ಷಕ ಇಎಂಐ ಆಫರ್ ಜೊತೆಗೆ ಗ್ರಾಹಕರನ್ನು ಸೆಳೆಯುವ ಯೋಜನೆಯಲ್ಲಿದ್ದು, ಆಸಕ್ತ ಗ್ರಾಹಕರು ನಿಮ್ಮ ಹತ್ತಿರ ಶೋರೂಂಗಳಲ್ಲಿ ಅಥವಾ ಆನ್‌ಲೈನ್ ಪ್ಲ್ಯಾಟ್‌ಫಾರ್ಮ್‌ಗಳಲ್ಲಿ ಬುಕ್ಕಿಂಗ್ ಸಲ್ಲಿಕೆ ಮಾಡಬಹುದಾಗಿದೆ.

ದೀಪಾವಳಿ ಆಫರ್: ಜಾವಾ ಕ್ಲಾಸಿಕ್ ಬೈಕ್‌ಗಳ ಖರೀದಿ ಮೇಲೆ ಆಕರ್ಷಕ ಇಎಂಐ ಆಫರ್

ಜಾವಾ ಮತ್ತು ಜಾವಾ 42 ಬೈಕ್ ಖರೀದಿಸುವ ಗ್ರಾಹಕರಿಗೆ ಗರಿಷ್ಠ ಅವಧಿಯ ಸಾಲ ಮರುಪಾವತಿಯ ಆಯ್ಕೆಯೊಂದಿಗೆ ಪ್ರತಿ ತಿಂಗಳು ರೂ. 4,444 ಇಎಂಐ ನಿಗದಿ ಮಾಡಿದ್ದು, ದಸರಾ ಸಂಭ್ರಮದ ಸಂದರ್ಭದಲ್ಲೂ ಹೊಸ ಆಫರ್‌ಗಳೊಂದಿಗೆ ಗರಿಷ್ಠ ಪ್ರಮಾಣದ ಬೈಕ್ ವಿತರಣೆ ಮಾಡಿದೆ.

ದೀಪಾವಳಿ ಆಫರ್: ಜಾವಾ ಕ್ಲಾಸಿಕ್ ಬೈಕ್‌ಗಳ ಖರೀದಿ ಮೇಲೆ ಆಕರ್ಷಕ ಇಎಂಐ ಆಫರ್

ಇನ್ನು 2018ರ ಕೊನೆಯಲ್ಲಿ ಭಾರತದಲ್ಲಿ ಬಿಡುಗಡೆಗೊಂಡಿದ್ದ ಜಾವಾ ಹೊಸ ಬೈಕ್‌ಗಳು ಭಾರತದಲ್ಲಿ ಕ್ಲಾಸಿಕ್ ಬೈಕ್ ಪ್ರಿಯರ ಆಕರ್ಷಣೆಗೆ ಕಾರಣವಾಗಿದ್ದು, ದೇಶಾದ್ಯಂತ ಕಡ್ಡಾಯವಾಗಿ ಜಾರಿಗೆ ಬಂದಿರುವ ಬಿಎಸ್-6 ಎಂಜಿನ್‌ನೊಂದಿಗೆ ಮಾರಾಟಗೊಳ್ಳುತ್ತಿವೆ.

ದೀಪಾವಳಿ ಆಫರ್: ಜಾವಾ ಕ್ಲಾಸಿಕ್ ಬೈಕ್‌ಗಳ ಖರೀದಿ ಮೇಲೆ ಆಕರ್ಷಕ ಇಎಂಐ ಆಫರ್

ಬಿಎಸ್-6 ಎಂಜಿನ್ ಜೋಡಣೆ ನಂತರ ಜಾವಾ ಕ್ಲಾಸಿಕ್ ಮತ್ತು ಜಾವಾ 42 ಬೈಕ್ ಬೆಲೆಯಲ್ಲಿ ತುಸು ದುಬಾರಿಯಾಗಿದ್ದು, ಹೊಸ ಎಂಜಿನ್ ಜೋಡಣೆ ನಂತರ ಬೈಕ್ ಎಂಜಿನ್ ಕಾರ್ಯಕ್ಷಮತೆ ಮತ್ತು ಮಾಲಿನ್ಯ ಹೊರಸೂಸುವಿಕೆಯಲ್ಲಿ ಸಾಕಷ್ಟು ಸುಧಾರಣೆ ಕಂಡಿವೆ. ಜಾವಾ ಕ್ಲಾಸಿಕ್ ಬೈಕ್ ಮಾದರಿಯು ಎಕ್ಸ್‌ಶೋರೂಂ ಪ್ರಕಾರ ಸಿಂಗಲ್ ಚಾನೆಲ್ ಎಬಿಎಸ್ ಮಾದರಿಯು ಆರಂಭಿಕವಾಗಿ ರೂ. 1.73 ಲಕ್ಷ ಬೆಲೆ ಹೊಂದಿದ್ದಲ್ಲಿ, ಡ್ಯುಯಲ್ ಚಾನೆಲ್ ಎಬಿಎಸ್ ಮಾದರಿಯು ರೂ.1.82 ಲಕ್ಷ ಬೆಲೆ ಪಡೆದುಕೊಂಡಿದೆ.

ದೀಪಾವಳಿ ಆಫರ್: ಜಾವಾ ಕ್ಲಾಸಿಕ್ ಬೈಕ್‌ಗಳ ಖರೀದಿ ಮೇಲೆ ಆಕರ್ಷಕ ಇಎಂಐ ಆಫರ್

ಹಾಗೆಯೇ ಜಾವಾ 42 ಬೈಕ್ ಮಾದರಿಯು ಎಕ್ಸ್‌ಶೋರೂಂ ಪ್ರಕಾರ ಸಿಂಗಲ್ ಚಾನೆಲ್ ಎಬಿಎಸ್ ಮಾದರಿಯು ಆರಂಭಿಕವಾಗಿ ರೂ. 1.60 ಲಕ್ಷ ಬೆಲೆ ಹೊಂದಿದ್ದು, ಡ್ಯುಯಲ್ ಚಾನೆಲ್ ಎಬಿಎಸ್ ಮಾದರಿಯು ರೂ. 1.69 ಲಕ್ಷ ಬೆಲೆ ಪಡೆದುಕೊಂಡಿದೆ.

MOST READ: ಅತಿ ಕಡಿಮೆ ಬೆಲೆಯಲ್ಲಿ ಹೆಚ್ಚು ಮೈಲೇಜ್ ನೀಡುವ ರೆಟ್ರೊ ಎಲೆಕ್ಟ್ರಿಕ್ ಬೈಕ್ ಬಿಡುಗಡೆ

ದೀಪಾವಳಿ ಆಫರ್: ಜಾವಾ ಕ್ಲಾಸಿಕ್ ಬೈಕ್‌ಗಳ ಖರೀದಿ ಮೇಲೆ ಆಕರ್ಷಕ ಇಎಂಐ ಆಫರ್

ಈ ಮೂಲಕ ಹೊಸ ಬೈಕ್‌ಗಳ ಬೆಲೆಗೂ ಮತ್ತು ಹಳೆಯ ಆವೃತ್ತಿಯ ಬೈಕ್ ಬೆಲೆಗೂ ಎಕ್ಸ್‌ಶೋರೂಂ ದರದಲ್ಲಿ ರೂ.5 ಸಾವಿರದಿಂದ ರೂ.9,928 ಹೆಚ್ಚಳವಾಗಿದ್ದು, ಆನ್-ರೋಡ್ ದರಗಳಲ್ಲಿ ಇದು ಇನ್ನಷ್ಟು ದುಬಾರಿಯಾಗಿರುತ್ತದೆ.

ದೀಪಾವಳಿ ಆಫರ್: ಜಾವಾ ಕ್ಲಾಸಿಕ್ ಬೈಕ್‌ಗಳ ಖರೀದಿ ಮೇಲೆ ಆಕರ್ಷಕ ಇಎಂಐ ಆಫರ್

ಹೊಸ ಜಾವಾ ಮತ್ತು ಜಾವಾ 42 ಬೈಕ್‌ಗಳು ಈ ಹಿಂದಿನಂತೆಯೇ 293-ಸಿಸಿ ಸಿಂಗಲ್ ಸಿಲಿಂಡರ್ ಎಂಜಿನ್ ಪಡೆದುಕೊಂಡಿದ್ದು, ಲಿಕ್ವಿಡ್ ಕೂಲ್ಡ್ ಎಂಜಿನ್ ಬದಲಾಗಿ ಫ್ಯೂಲ್ ಇಂಜೆಕ್ಷನ್ ಫೀಚರ್ಸ್ ಪಡೆದುಕೊಂಡಿದೆ.

MOST READ: ಹೊಸ ಅವತಾರದಲ್ಲಿ ಬಿಡುಗಡೆಯಾಗಲಿದೆ ಟಿವಿಎಸ್ ಫಿಯರೊ 125 ಕಮ್ಯುಟರ್ ಬೈಕ್

ದೀಪಾವಳಿ ಆಫರ್: ಜಾವಾ ಕ್ಲಾಸಿಕ್ ಬೈಕ್‌ಗಳ ಖರೀದಿ ಮೇಲೆ ಆಕರ್ಷಕ ಇಎಂಐ ಆಫರ್

ಫ್ಯೂಲ್ ಇಂಜೆಕ್ಷನ್ ಯುನಿಟ್ ಬಳಕೆಯಿಂದಾಗಿ ಬೈಕ್ ಚಾಲನೆ ವೇಳೆ ಸ್ಮೂತ್ ಪರ್ಫಾಮೆನ್ಸ್ ನೀಡುವುದರ ಜೊತೆಗೆ ಮಾಲಿನ್ಯ ಹೊರಸೂವಿಕೆ ಪ್ರಮಾಣದಲ್ಲಿ ಸಾಕಷ್ಟು ಕಡಿತಗೊಂಡಿದೆ. ಇದು ಹೊಸ ಬೈಕಿನ ಪ್ರಮುಖ ಬದಲಾವಣೆಯಾಗಿದ್ದು, ಇನ್ನುಳಿದಂತೆ ಬಹುತೇಕ ತಾಂತ್ರಿಕ ಅಂಶಗಳು ಬಿಎಸ್-4 ಮಾದರಿಯಂತೆಯೇ ಮುಂದುವರಿಸಲಾಗಿದೆ.

Most Read Articles

Kannada
English summary
Jawa Offers Assured Deliveries & Low EMI Options. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X