ಭಾರತದಲ್ಲಿ 790 ಅಡ್ವೆಂಚರ್ ವರ್ಷನ್ ಬಿಡುಗಡೆ ಮಾಡಲಿದೆ ಕೆಟಿಎಂ

ಡ್ಯೂಕ್ 790 ಸೂಪರ್ ಬೈಕ್ ಬಿಡುಗಡೆಯ ನಂತರ ಮತ್ತಷ್ಟು ಹೊಸ ಬೈಕ್ ಮಾದರಿಗಳನ್ನು ಬಿಡುಗಡೆಗೊಳಿಸಲು ಉತ್ಸುಕವಾಗಿರುವ ಕೆಟಿಎಂ ಕಂಪನಿಯು 790 ಅಡ್ವೆಂಚರ್ ಬೈಕ್ ಮಾದರಿಯನ್ನು ಸಹ ಬಿಡುಗಡೆ ಮಾಡುತ್ತಿದ್ದು, ಹೊಸ ಅಡ್ವೆಂಚರ್ ಬೈಕ್ ಮಾದರಿಯು 2021ರ ಮಧ್ಯಂತರದಲ್ಲಿ ಬಿಡುಗಡೆಯಾಗುವ ಸಾಧ್ಯತೆಗಳಿವೆ.

ಭಾರತದಲ್ಲಿ 790 ಅಡ್ವೆಂಚರ್ ವರ್ಷನ್ ಬಿಡುಗಡೆ ಮಾಡಲಿದೆ ಕೆಟಿಎಂ

ಪರ್ಫಾಮೆನ್ಸ್ ಬೈಕ್ ಪ್ರಿಯರ ಬೇಡಿಕೆಯೆಂತೆ ಭಾರತದಲ್ಲಿ ಸೂಪರ್ ಬೈಕ್ ಮಾರಾಟವನ್ನು ಹೆಚ್ಚಿಸುವತ್ತ ಮಹತ್ವದ ಯೋಜನೆ ರೂಪಿಸುತ್ತಿರುವ ಕೆಟಿಎಂ ಕಂಪನಿಯು ಕಳೆದ ವರ್ಷ ಡ್ಯೂಕ್ 790 ಬೈಕ್ ಮಾದರಿಯನ್ನು ಬಿಡುಗಡೆಗೊಳಿಸಿತ್ತು. ಇದೀಗ ಆಫ್ ರೋಡ್ ಆವೃತ್ತಿಯಾದ 750 ಅಡ್ವೆಂಚರ್ ಬೈಕ್ ಬಿಡುಗಡೆಗೆ ಉತ್ಸುಕವಾಗಿರುವ ಕೆಟಿಎಂ ಕಂಪನಿಯು ಹೊಸ ಬೈಕ್ ಮೂಲಕ ಸೂಪರ್ ಬೈಕ್ ಮಾರಾಟದಲ್ಲಿ ಹೊಸ ಸಂಚಲನ ಸೃಷ್ಠಿಸಲಿದೆ.

ಭಾರತದಲ್ಲಿ 790 ಅಡ್ವೆಂಚರ್ ವರ್ಷನ್ ಬಿಡುಗಡೆ ಮಾಡಲಿದೆ ಕೆಟಿಎಂ

ಅಡ್ವೆಂಚರ್ ಟೂರರ್ ಬೈಕ್ ಮಾದರಿಗಳಿಗೆ ದೇಶಿಯ ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚುತ್ತಿದ್ದು, ಆಫ್ ರೋಡ್ ಜೊತೆಗೆ ದಿನನಿತ್ಯದ ಸವಾರಿಗೂ ಈ ಬೈಕ್‌ಗಳು ಉತ್ತಮವಾಗಿರುವುದೇ ಬೇಡಿಕೆ ಹೆಚ್ಚಕ್ಕೆ ಪ್ರಮುಖ ಕಾರಣವಾಗಿದೆ.

ಭಾರತದಲ್ಲಿ 790 ಅಡ್ವೆಂಚರ್ ವರ್ಷನ್ ಬಿಡುಗಡೆ ಮಾಡಲಿದೆ ಕೆಟಿಎಂ

ಕೆಟಿಎಂ ಕಂಪನಿಯು ಡ್ಯೂಕ್ ಸರಣಿಯೊಂದಿಗೆ ಅಡ್ವೆಂಚರ್ ಮಾದರಿಗಳ ಮಾರಾಟವನ್ನು ಸಹ ನಿಧಾನವಾಗಿ ಹೆಚ್ಚಿಸಿದ್ದು, ಕಳೆದ ಒಂದು ವರ್ಷದ ಅವಧಿಯಲ್ಲಿ 390 ಅಡ್ವೆಂಚರ್ ಮತ್ತು 250 ಅಡ್ವೆಂಚರ್ ಬೈಕ್ ಮಾದರಿಗಳನ್ನು ಬಿಡುಗಡೆ ಮಾಡಿದೆ.

ಭಾರತದಲ್ಲಿ 790 ಅಡ್ವೆಂಚರ್ ವರ್ಷನ್ ಬಿಡುಗಡೆ ಮಾಡಲಿದೆ ಕೆಟಿಎಂ

ಪ್ರಸ್ತುತ ಮಾರುಕಟ್ಟೆಯಲ್ಲಿ ಕೆಟಿಎಂ ಕಂಪನಿಯು ಗ್ರಾಹಕರ ಬೇಡಿಕೆಯೆಂತೆ 125 ಡ್ಯೂಕ್, 200 ಡ್ಯೂಕ್, ಡ್ಯೂಕ್ 250, ಡ್ಯೂಕ್ 390, ಆರ್‌ಸಿ 125 ಆರ್‌ಸಿ 200, ಆರ್‌ಸಿ 390, 250 ಅಡ್ವೆಂಚರ್, 390 ಅಡ್ವೆಂಚರ್ ಮತ್ತು 790 ಡ್ಯೂಕ್ ಬೈಕ್ ಮಾದರಿಗಳನ್ನು ಮಾರಾಟ ಮಾಡುತ್ತಿದ್ದು, ಮುಂಬರುವ ದಿನಗಳಲ್ಲಿ 790 ಅಡ್ವೆಂಚರ್ ಮತ್ತು 890 ಡ್ಯೂಕ್ ಆರ್ ಸೂಪರ್ ಬೈಕ್ ಮಾದರಿಗಳನ್ನು ಬಿಡುಗಡೆಗೊಳಿಸುವ ಸಿದ್ದತೆಯಲ್ಲಿದೆ.

ಭಾರತದಲ್ಲಿ 790 ಅಡ್ವೆಂಚರ್ ವರ್ಷನ್ ಬಿಡುಗಡೆ ಮಾಡಲಿದೆ ಕೆಟಿಎಂ

ಬಿಡುಗಡೆಯಾಗಲಿರುವ ಹೊಸ ಬೈಕ್‌ಗಳಲ್ಲಿ 790 ಅಡ್ವೆಂಚರ್ ಬೈಕ್ ಮಾದರಿಯು 799ಸಿಸಿ ಪ್ಯಾರಾಲೆಲ್ ಟ್ವಿನ್ ಎಂಜಿನ್ ಹೊಂದಿದ್ದು, ಅಡ್ವೆಂಚರ್ ಟೂರರ್ ಫರ್ಪಾಮೆನ್ಸ್ ಮಾದರಿಯಾಗಿ 94-ಬಿಎಚ್‌ಪಿ ಮತ್ತು 88-ಎನ್ಎಂ ಟಾರ್ಕ್ ಉತ್ಪಾದನೆಯೊಂದಿಗೆ ಸ್ಟ್ರೀಟ್, ಆಫ್ ರೋಡ್, ರೈನ್ ಮತ್ತು ರ‍್ಯಾಲಿ ಎನ್ನುವ ನಾಲ್ಕು ರೈಡಿಂಗ್ ಮೋಡ್‌ಗಳನ್ನು ಪಡೆದುಕೊಂಡಿದೆ.

ಭಾರತದಲ್ಲಿ 790 ಅಡ್ವೆಂಚರ್ ವರ್ಷನ್ ಬಿಡುಗಡೆ ಮಾಡಲಿದೆ ಕೆಟಿಎಂ

ಈ ಮೂಲಕ ಆಫ್ ರೋಡ್ ಮಾದರಿಗಳಲ್ಲಿ ಅತ್ಯುತ್ತಮ ಆಯ್ಕೆಯಾಗಿರುವ 790 ಅಡ್ವೆಂಚರ್ ಮಾದರಿಯು ಈಗಾಗಲೇ ವಿದೇಶಿ ಮಾರುಕಟ್ಟೆಗಳಲ್ಲಿ ಭಾರೀ ಬೇಡಿಕೆಯ ಬೈಕ್ ಆವೃತ್ತಿಯಾಗಿದ್ದು, ಇದೀಗ ದೇಶಿಯ ಮಾರುಕಟ್ಟೆಯಲ್ಲೂ ಸದ್ದು ಮಾಡುವ ನೀರಿಕ್ಷೆಯಲ್ಲಿದೆ.

ಭಾರತದಲ್ಲಿ 790 ಅಡ್ವೆಂಚರ್ ವರ್ಷನ್ ಬಿಡುಗಡೆ ಮಾಡಲಿದೆ ಕೆಟಿಎಂ

ಹೊಸ ಬೈಕಿನಲ್ಲಿ ಎಲ್ಇಡಿ ಡ್ಯುಯಲ್ ಹೆಡ್‌ಲ್ಯಾಂಪ್, 43-ಎಂಎಂ ನಾನ್ ಅಡ್ಜೆಸ್ಟ್‌ಬಲ್ ಅಪ್ ಸೈಡ್ ಡೌನ್ ಫೋರ್ಕ್ ಮತ್ತು ಮುಂಭಾಗದಲ್ಲಿ ಪ್ರಿಲೋಡ್ ಅಡ್ಜೆಸ್ಟ್‌ಬಲ್ ಮೊನೋಶಾರ್ಕ್ ಸಸ್ಫೆಷನ್ ಹೊಂದಿದ್ದು, ರೈಡಿಂಗ್ ಸುರಕ್ಷತೆಗಾಗಿ ಟ್ರಾಕ್ಷನ್ ಕಂಟ್ರೊಲ್, ಕಾರ್ನರ್ ಎಬಿಎಸ್, ಮಲ್ಟಿ ಇನ್‌ಫಾರ್ಮೆಷನ್ ಟಿಎಫ್‌ಟಿ ಸ್ಕ್ರೀನ್ ಫೀಚರ್ಸ್‌ಗಳನ್ನು ಹೊಂದಿದೆ.

MOST READ: ಪ್ರತಿ ಚಾರ್ಜ್‌ಗೆ ಬರೋಬ್ಬರಿ 240ಕಿ.ಮೀ ಮೈಲೇಜ್ ನೀಡುವ ಇವಿ ಸ್ಕೂಟರ್ ಬಿಡುಗಡೆ ಮಾಡಲಿದೆ ಓಲಾ

ಭಾರತದಲ್ಲಿ 790 ಅಡ್ವೆಂಚರ್ ವರ್ಷನ್ ಬಿಡುಗಡೆ ಮಾಡಲಿದೆ ಕೆಟಿಎಂ

ಹಾಗೆಯೇ ಆಫ್ ರೋಡ್ ರೈಡಿಂಗ್‌ಗಾಗಿ ಆರಾಮದಾಯಕ ಆಸನ, 15 ಲೀಟರ್ ಸಾಮರ್ಥ್ಯದ ಫ್ಯೂಲ್ ಟ್ಯಾಂಕ್, ವೀಂಡ್ ಸ್ಕ್ರೀನ್, 21-ಇಂಚಿನ ಫ್ರಂಟ್ ವೀಲ್ಹ್, 18-ಇಂಚಿನ ರಿಯರ್ ವೀಲ್ಹ್ ಸೌಲಭ್ಯವು ಹೊಸ ಬೈಕ್ ಬಲಿಷ್ಠತೆಗೆ ಪೂರಕವಾಗಿದ್ದು, ಈ ಮೂಲಕ ಬರೋಬ್ಬರಿ 189 ಕೆಜಿ ತೂಕ ಪಡೆದಿದೆ.

ಭಾರತದಲ್ಲಿ 790 ಅಡ್ವೆಂಚರ್ ವರ್ಷನ್ ಬಿಡುಗಡೆ ಮಾಡಲಿದೆ ಕೆಟಿಎಂ

ಅಡ್ವೆಂಚರ್ ಟೂರ್‌ಗೆ ಪೂರಕವಾಗಿ ಗರಿಷ್ಠ ಫೀಚರ್ಸ್‌ಗಳನ್ನು ಹೊಂದಿರುವುದು ಹೊಸ ಬೈಕ್ ಮಾದರಿಯು ಡ್ಯೂಕ್ 790 ಬೈಕ್ ಮಾದರಿಗಿಂತಲೂ ದುಬಾರಿ ಬೆಲೆ ಪಡೆದುಕೊಳ್ಳಲಿದ್ದು, ಎಕ್ಸ್‌ಶೋರೂಂ ಪ್ರಕಾರ ರೂ.10 ಲಕ್ಷದಿಂದ ರೂ.11 ಲಕ್ಷ ಬೆಲೆ ಪಡೆದುಕೊಳ್ಳುವ ಸಾಧ್ಯತೆಗಳಿವೆ.

MOST READ: ಅತಿ ಹೆಚ್ಚು ಮೈಲೇಜ್ ನೀಡುವ ಟಾಪ್ 10 ಬಜೆಟ್ ಬೆಲೆಯ ಬೈಕುಗಳಿವು..!

ಭಾರತದಲ್ಲಿ 790 ಅಡ್ವೆಂಚರ್ ವರ್ಷನ್ ಬಿಡುಗಡೆ ಮಾಡಲಿದೆ ಕೆಟಿಎಂ

ಈ ಮೂಲಕ ಸ್ಟ್ರೀಟ್ ಫೈಟ್, ಟ್ರ್ಯಾಕ್ ಮತ್ತು ಅಡ್ವೆಂಚರ್ ಟೂರರ್ ಮೂರು ಮಾದರಿಗಳ ಬೈಕ್ ಮಾದರಿಗಳ ಮಾರಾಟದಲ್ಲೂ ಗಮನಸೆಳೆಯಲಿರುವ ಕೆಟಿಎಂ ಕಂಪನಿಯು ಮಾರಾಟ ಮಳಿಗೆಗಳನ್ನು ಹೆಚ್ಚಿಸುತ್ತಿದ್ದು, ಗ್ರಾಹಕರ ಸೇವೆಗಳನ್ನು ಹೆಚ್ಚಿಸುವ ನಿಟ್ಟಿನಲ್ಲಿ ಹೊಸ ಯೋಜನೆಗಳಿಗೆ ಚಾಲನೆ ನೀಡಿದೆ.

Most Read Articles

Kannada
Read more on ಕೆಟಿಎಂ ktm
English summary
KTM Adventure 790 India Launch Expected In 2021 March. Read in Kannada.
Story first published: Thursday, December 17, 2020, 8:45 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X