Just In
Don't Miss!
- News
ಬೆಂಗಳೂರಿನ ವಿವಿಧೆಡೆ ಜನವರಿ 18 ರಿಂದ 22ರವರೆಗೆ ವಿದ್ಯುತ್ ವ್ಯತ್ಯಯ
- Lifestyle
"ಸೋಮವಾರದ ರಾಶಿಫಲ: ಮೇಷ-ಮೀನದವರೆಗಿನ ದಿನ ಭವಿಷ್ಯ"
- Finance
Flipkart Big Saving Days: ಆಪಲ್, ಸ್ಯಾಮ್ಸಂಗ್ ಸೇರಿ ಹಲವು ಬ್ರ್ಯಾಂಡ್ ಗಳ ಆಫರ್
- Sports
ಐಎಸ್ಎಲ್: ಜೆಮ್ಷೆಡ್ಪುರಕ್ಕೆ ಆಘಾತ ನೀಡಿದ ನಾರ್ಥ್ಈಸ್ಟ್
- Movies
ಹರ ಜಾತ್ರೆಯಲ್ಲಿ ಪುನೀತ್ ರಾಜ್ ಕುಮಾರ್; ಅಪ್ಪು ಹಾಡು ಕೇಳಿ ಸಂಭ್ರಮಿಸಿದ ಅಭಿಮಾನಿಗಳು
- Education
BEL Recruitment 2021: 205 ಟೆಕ್ನೀಶಿಯನ್ ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ದುಬಾರಿಯಾಯ್ತು ಜನಪ್ರಿಯ ಕೆಟಿಎಂ ಮತ್ತು ಹಸ್ಕ್ವರ್ನಾ ಬೈಕುಗಳು
ಕೆಟಿಎಂ ಮತ್ತು ಹಸ್ಕ್ವರ್ನಾ ಕಂಪನಿಗಳು ಭಾರತೀಯ ಮಾರುಕಟ್ಟೆಯಲ್ಲಿ ತಮ್ಮ ಸರಣಿಯಲ್ಲಿರುವ ಆಯ್ದ ಬೈಕುಗಳ ಬೆಲೆಯನ್ನು ಏರಿಕೆ ಮಾಡಿದೆ. ಎರಡು ಬ್ರ್ಯಾಂಡ್‌ಗಳ ಬೈಕುಗಳ ಮಾದರಿಯನ್ನು ಅವಲಂಬಿಸಿ ರೂ.1,200 ರಿಂದ ರೂ.8,500 ಗಳವರೆಗೆ ಬೆಲೆಯನ್ನು ಹೆಚ್ಚಿಸಿದೆ.

ಕೆಟಿಎಂ ಕಂಪನಿಯು ತನ್ನ ಸರಣಿಯಲ್ಲಿ ಆಯ್ದ ಮಾದರಿಗಳ ಬೆಲೆಯನ್ನು ಹೆಚ್ಚಿಸಿದೆ. ಆದರೆ ಕೆಟಿಎಂ ಕಂಪನಿಯು ಇತ್ತೀಚೆಗೆ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದ ಕೆಟಿಎಂ 125 ಡ್ಯೂಕ್ ಮತ್ತು ಕೆಟಿಎಂ 250 ಅಡ್ವೆಂಚರ್ ಬೈಕುಗಳ ಬೆಲೆಯಲ್ಲಿ ಯಾವುದೇ ಬದಲಾವಣೆಗಳಿಲ್ಲ. ಈ ಎರಡು ಹೊಸ ಬೈಕುಗಳು ಬಿಡುಗಡೆಗೊಳಿಸಿದ ಅದೇ ಬೆಲೆಗಳಲ್ಲಿ ಲಭ್ಯವಿರುತ್ತದೆ.

ಕೆಟಿಎಂ ಆರ್‌ಸಿ 125 ಮಾದರಿಯು ತುಸು ದುಬಾರಿಯಾಗಿದೆ. ಎಂಟ್ರಿ ಲೆವೆಲ್ ಫುಲ್ ಫೇರ್ಡ್ ಕೆಟಿಎಂ ಆರ್‌ಸಿ 125 ಬೈಕಿನ ಬೆಲೆಯನ್ನು ರೂ.1,279 ಗಳವರೆಗೆ ಬೆಲೆಯನ್ನು ಹೆಚ್ಚಿಸಿದೆ. ಇದೀಗ ಈ ಕೆಟಿಎಂ ಆರ್‌ಸಿ 125 ಬೈಕಿನ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ.1.61 ಲಕ್ಷಗಳಾಗಿದೆ.
MOST READ: ದುಬಾರಿಯಾಯ್ತು ಜನಪ್ರಿಯ ಬಿಎಸ್-6 ಯಮಹಾ ಎಂಟಿ-15 ಬೈಕ್

ಇನ್ನು ಕೆಟಿಎಂ 390 ಡ್ಯೂಕ್ ಬೆಲೆಯನ್ನು ರೂ.8,517 ಗಳವರೆಗೆ ಬೆಲೆಯನ್ನು ಹೆಚ್ಚಿಸಿದೆ. ಇದೀಗ ಈ ನೇಕೆಡ್ ಕೆಟಿಎಂ 390 ಡ್ಯೂಕ್ ಬೈಕಿನ ಬೆಲೆಯು ಭಾರತದ ಎಕ್ಸ್ ಶೋರೂಂ ಪ್ರಕಾರ ರೂ. 2.66 ಲಕ್ಷಗಳಾಗಿದೆ. ಇದರೊಂದಿಗೆ ಕೆಟಿಎಂ ಕಂಪನಿಯು ತನ್ನ 250 ಡ್ಯೂಕ್ ಬೈಕಿನ ಬೆಲೆಯನ್ನು ರೂ.4,738 ಗಳವರೆಗೆ ಬೆಲೆಯನ್ನು ಹೆಚ್ಚಿಸಿದೆ. ಇದೀಗ ಈ ಹೊಸ ಕೆಟಿಎಂ 250 ಡ್ಯೂಕ್ ಬೈಕಿನ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ.2.14 ಲಕ್ಷಗಳಾಗಿದೆ.

ಇನ್ನು ಕೆಟಿಎಂ ಜನಪ್ರಿಯ ಆರ್‌ಸಿ 390 ಬೈಕಿನ ಬೆಲೆಯನ್ನು ರೂ.3,539 ಗಳವರೆಗೆ ಬೆಲೆಯನ್ನು ಹೆಚ್ಚಿಸಿದೆ. ಇದೀಗ ಈ ಹೊಸ ಕೆಟಿಎಂ ಆರ್‌ಸಿ 390 ಬೈಕಿನ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ.2.56 ಲಕ್ಷಗಳಾಗಿದೆ.
MOST READ: ಹೊಸ ಬಣ್ಣದ ಆಯ್ಕೆಯನ್ನು ಪಡೆದುಕೊಂಡ 2021ರ ಕವಾಸಕಿ ನಿಂಜಾ 1000 ಎಸ್‌ಎಕ್ಸ್ ಬೈಕ್

ಕೆಟಿಎಂ ಡ್ಯೂಕ್ 200 ಮತ್ತು 390 ಅಡ್ವೆಂಚರ್ ಬೈಕುಗಳ ಬೆಲೆಯನ್ನು ಕೂಡ ಹೆಚ್ಚಿಸಿದೆ. ಕೆಟಿಎಂ ಡ್ಯೂಕ್ 200 ಬೈಕಿನ ಬೆಲೆಯು ರೂ.1,923 ಗಳವರೆಗೆ ಹೆಚ್ಚಿಸಿದರೆ, ಕೆಟಿಎಂ ಡ್ಯೂಕ್ 390 ಅಡ್ವೆಂಚರ್ ಬೈಕಿನ ಬೆಲೆಯು ರೂ.1,442 ಗಳವರೆಗೆ ಹೆಚ್ಚಿಸಿದೆ. ಇದೀಗ ಈ ಕೆಟಿಎಂ ಡ್ಯೂಕ್ 200 ಬೈಕಿನ ಬೆಲೆಯು ರೂ.1.78 ಲಕ್ಷಗಳಾದರೆ, ಕೆಟಿಎಂ ಡ್ಯೂಕ್ 390 ಅಡ್ವೆಂಚರ್ ಬೈಕಿನ ಬೆಲೆಯು ರೂ.3.05 ಲಕ್ಷಗಳಾಗಿದೆ.
Model | Price (Old) | Price (New) | Increase |
200 Duke | ₹1,77,037 | ₹1,78,960 | ₹1,923 |
250 Duke | ₹2,09,472 | ₹2,14,210 | ₹4,738 |
390 Duke | ₹2,58,103 | ₹2,66,620 | ₹8,517 |
RC 125 | ₹1,59,821 | ₹1,61,100 | ₹1,279 |
RC 390 | ₹2,53,381 | ₹2,56,920 | ₹3,539 |
390 Adventure | ₹3,04,438 | ₹3,05,880 | ₹1,442 |
Svartpilen 250 | ₹1,84,960 | ₹1,86,750 | ₹1,790 |
Vitpilen 250 | ₹1,84,960 | ₹1,86,750 | ₹1,790 |

ಹಸ್ಕ್ವರ್ನಾ ಬೈಕುಗಳ ಬೆಲೆ ಏರಿಕೆಯ ಬಗ್ಗೆ ಹೇಳುವುದಾದರೆ, ಹಸ್ಕ್ವರ್ನಾ ಕಂಪನಿಯು ಭಾರತೀಯ ಮಾರುಕಟ್ಟೆಯಲ್ಲಿ ಎರಡು ಬೈಕುಗಳನ್ನು ಮಾರಾಟ ಮಾಡುತ್ತಿದ್ದಾರೆ. ಈ ಎರಡು ಸ್ವಾರ್ಟ್‌ಪಿಲೆನ್ 250 ಹಾಗೂ ವಿಟ್‌ಪಿಲೆನ್ 250 ಬೈಕುಗಳು 250 ಸಿಸಿ ವಿಭಾಗದ ಮಾದರಿಗಳಾಗಿದೆ.
MOST READ: ಬಿಡುಗಡೆಯಾಯ್ತು ಹೊಸ ಟ್ರಯಂಫ್ ಬೊನೊವೆಲ್ಲಿ ಸ್ಪೀಡ್‍ಮಾಸ್ಟರ್ ಬೈಕ್

ಹಸ್ಕ್ವರ್ನಾ ಸ್ವಾರ್ಟ್‌ಪಿಲೆನ್ 250 ಹಾಗೂ ವಿಟ್‌ಪಿಲೆನ್ 250 ಬೈಕುಗಳು ಒಂದೇ ರೀತಿಯ ಬೆಲೆಗಳನ್ನು ಹೊಂದಿದೆ. ಅಲ್ಲದೇ ಈ ಎರಡು ಬೈಕುಗಳ ಬೆಲೆಯನ್ನು ರೂ.1,790 ಗಳವರೆಗೆ ಹೆಚ್ಚಿಸಲಾಗಿದೆ. ಬೆಲೆ ಏರಿಕೆಯ ಬಳಿಕ ಈ ಸ್ವಾರ್ಟ್‌ಪಿಲೆನ್ 250 ಹಾಗೂ ವಿಟ್‌ಪಿಲೆನ್ 250 ಬೈಕುಗಳ ಬೆಲೆಯು ದೆಹಲಿ ಎಕ್ಸ್ ಶೋರೂಂ ಪ್ರಕಾರ ರೂ.1.86 ಲಕ್ಷಗಳಾಗಿದೆ.

ಕೆಟಿಎಂ ಬೈಕುಗಳು ಭಾರತೀಯ ಮಾರುಕಟ್ಟೆಯಲ್ಲಿ ದ್ವಿಚಕ್ರ ವಾಹನ ಖರೀದಿದಾರರಿಗೆ ಅತ್ಯಂತ ಜನಪ್ರಿಯ ಮಾದರಿಗಳಾಗಿವೆ. ಕಂಪನಿಯು ದೇಶದಲ್ಲಿ ತನ್ನ ಮಾದರಿಗಳ ಬೆಲೆಯನ್ನು ಹಲವಾರು ಬಾರಿ ಹೆಚ್ಚಿಸಿದೆ. ಹೊಸದಾಗಿ ಕೆಟಿಎಂ ತನ್ನ ಆಯ್ದ ಮಾದರಿಗಳ ಬೆಲೆ ಏರಿಕೆ ಮಾಡಿರುವುದರ ಕಾರಣವನ್ನು ಬಹಿರಂಗಪಡಿಸಲಿಲ್ಲ.