390 ಅಡ್ವೆಂಚರ್ ಬೈಕ್ ಖರೀದಿ ಮೇಲೆ ಆಕರ್ಷಕ ಇಎಂಐ ಪರಿಚಯಿಸಿದ ಕೆಟಿಎಂ

ಕೆಟಿಎಂ ಕಂಪನಿಯು ತನ್ನ ಜನಪ್ರಿಯ ಅಡ್ವೆಂಚರ್ ಬೈಕ್ ಮಾದರಿಯಾದ 390 ಅಡ್ವೆಂಚರ್ ಆವೃತ್ತಿಯ ಖರೀದಿ ಮೇಲೆ ವಿಶೇಷ ಆಫರ್‌ಗಳನ್ನು ಘೋಷಣೆ ಮಾಡಿದ್ದು, ಲಾಕ್‌ಡೌನ್ ಸಂದರ್ಭದಲ್ಲಿ ಬೈಕ್ ಖರೀದಿಯನ್ನು ಸುಲಭವಾಗಿಸಲು ಸರಳ ಇಎಂಐ ಯೋಜನೆಗಳನ್ನು ಜಾರಿಗೆ ತಂದಿದೆ.

390 ಅಡ್ವೆಂಚರ್ ಬೈಕ್ ಖರೀದಿ ಮೇಲೆ ಆಕರ್ಷಕ ಇಎಂಐ ಪರಿಚಯಿಸಿದ ಕೆಟಿಎಂ

ಆಟೋ ಉದ್ಯಮವು ಸೇರಿದಂತೆ ಎಲ್ಲಾ ವಲಯದಲ್ಲೂ ಕರೋನಾ ವೈರಸ್ ಮಹಾಮಾರಿಯಿಂದಾಗಿ ಆರ್ಥಿಕ ಸಂಕಷ್ಟ ಎದುರಾಗಿದ್ದು, ವ್ಯಾಪಾರ ಅಭಿವೃದ್ದಿಯು ಇದೀಗ ಹೊಸ ಸವಾಲಾಗಿ ಪರಿಣಮಿಸಿದೆ. ಸದ್ಯಕ್ಕೆ ಆಟೋ ಉದ್ಯಮಕ್ಕೆ ಕೆಲವು ವಿನಾಯ್ತಿಗಳನ್ನು ನೀಡಲಾಗಿದ್ದರೂ ಸಹ ವಾಹನ ಖರೀದಿದಾರರು ಇಲ್ಲದೆ ಪರದಾಡುವಂತಹ ಪರಿಸ್ಥಿತಿ ಎದುರಾಗಿದೆ. ಲಾಕ್‌ಡೌನ್‌ನಿಂದಾಗಿ ಬಹುತೇಕ ವಾಣಿಜ್ಯ ಚಟುವಟಿಕೆಗಳು ನೆಲಕಚ್ಚಿದ್ದು, ಎಲ್ಲಾ ಕ್ಷೇತ್ರಗಳಲ್ಲೂ ಉದ್ಯೋಗದ ಅಭದ್ರತೆ ಇದೀಗ ಅತಿ ದೊಡ್ಡ ಸಮಸ್ಯೆಯಾಗಿ ಕಾಡತೋಡಗಿದೆ.

390 ಅಡ್ವೆಂಚರ್ ಬೈಕ್ ಖರೀದಿ ಮೇಲೆ ಆಕರ್ಷಕ ಇಎಂಐ ಪರಿಚಯಿಸಿದ ಕೆಟಿಎಂ

ಹೀಗಿರುವಾಗ ಹೊಸ ವಾಹನಗಳ ಮಾರಾಟವನ್ನು ಸರಿದಾರಿಗೆ ತರಲು ಯತ್ನಿಸುತ್ತಿರುವ ಆಟೋ ಕಂಪನಿಯು ಕೆಲವು ಮಹತ್ವದ ನಿರ್ಧಾರಗಳನ್ನು ಪ್ರಕಟಿಸುತ್ತಿದ್ದು, ಕೆಟಿಎಂ ಕಂಪನಿಯು 390 ಅಡ್ವೆಂಚರ್ ಬೈಕ್ ಮಾದರಿಯ ಬೆಲೆ ಆಕರ್ಷಕ ಇಎಂಐ ಆಯ್ಕೆ ನೀಡುತ್ತಿದೆ.

390 ಅಡ್ವೆಂಚರ್ ಬೈಕ್ ಖರೀದಿ ಮೇಲೆ ಆಕರ್ಷಕ ಇಎಂಐ ಪರಿಚಯಿಸಿದ ಕೆಟಿಎಂ

ಸದ್ಯ ಎಚ್‌ಡಿಎಫ್‌ಸಿ ಬ್ಯಾಂಕ್ ಜೊತೆ ತನ್ನ ಗ್ರಾಹಕರಿಗೆ ಆಕರ್ಷಕ ಲೋನ್ ಸೌಲಭ್ಯಗಳನ್ನು ನೀಡುತ್ತಿರುವ ಕೆಟಿಎಂ ಕಂಪನಿಯು 390 ಅಡ್ವೆಂಚರ್ ಬೈಕ್ ಮಾದರಿಯ ಮೇಲೆ ಶೇ.95ರಷ್ಟು ಆನ್‌ರೋಡ್ ಸಾಲಸೌಲಭ್ಯದೊಂದಿಗೆ ಪ್ರತಿ ತಿಂಗಳು ರೂ.6,999 ಇಎಂಐ ಪಾವತಿ ಮಾಡಬಹುದಾದ ಆಫರ್ ನೀಡುತ್ತಿದೆ.

390 ಅಡ್ವೆಂಚರ್ ಬೈಕ್ ಖರೀದಿ ಮೇಲೆ ಆಕರ್ಷಕ ಇಎಂಐ ಪರಿಚಯಿಸಿದ ಕೆಟಿಎಂ

ಇದು ಲಾಕ್‌ಡೌನ್ ಸಂದರ್ಭದಲ್ಲಿ ತಮ್ಮ ನೆಚ್ಚಿನ ವಾಹನ ಖರೀದಿಯನ್ನು ತಾತ್ಕಾಲಿಕವಾಗಿ ಮುಂದೂಡಿಕೆ ಮಾಡಿರುವ ಗ್ರಾಹಕರಿಗೆ ಸಾಕಷ್ಟು ಅನುಕೂಲಕರವಾಗಿದ್ದು, ಡೀಲರ್ಸ್ ಮಟ್ಟದಲ್ಲೂ ಹೊಸ ಬೈಕ್ ಖರೀದಿ ಮೇಲೆ ಕೆಲವು ಹೆಚ್ಚುವರಿ ಆಫರ್ ಪಡೆಯಬಹುದಾಗಿದೆ.

MOST READ: ದ್ವಿಚಕ್ರ ವಾಹನಗಳ ಖರೀದಿ ಮೇಲೆ ಹೊಸ ಲೋನ್ ಆಫರ್ ಘೋಷಿಸಿದ ಹೋಂಡಾ

390 ಅಡ್ವೆಂಚರ್ ಬೈಕ್ ಖರೀದಿ ಮೇಲೆ ಆಕರ್ಷಕ ಇಎಂಐ ಪರಿಚಯಿಸಿದ ಕೆಟಿಎಂ

ಇನ್ನು 390 ಅಡ್ವೆಂಚರ್ ಬೈಕ್ ಮಾದರಿಯು ಕೆಟಿಎಂ ನಿರ್ಮಾಣದ ಜನಪ್ರಿಯ ಬೈಕ್ ಆವೃತ್ತಿಯಾಗಿದ್ದು, ಕಳೆದ ಜನವರಿಯಲ್ಲಿ ಮೊದಲ ಬಾರಿಗೆ ಭಾರತದಲ್ಲಿ ಬಿಡುಗಡೆಗೊಳಿಸಿತ್ತು. ಸಾಮಾನ್ಯ ಬೈಕ್ ಮಾದರಿಯ ಡ್ಯೂಕ್ 390 ಬೈಕ್ ಮಾದರಿಯನ್ನೇ ಆಧರಿಸಿರುವ ಅಡ್ವೆಂಚರ್ ಆವೃತ್ತಿಯು ಆಫ್-ರೋಡ್ ಟೂರರ್ ಬೈಕ್ ಮಾದರಿಯಾಗಿದೆ.

390 ಅಡ್ವೆಂಚರ್ ಬೈಕ್ ಖರೀದಿ ಮೇಲೆ ಆಕರ್ಷಕ ಇಎಂಐ ಪರಿಚಯಿಸಿದ ಕೆಟಿಎಂ

390 ಅಡ್ವೆಂಚರ್ ಬೈಕಿನ ಬೆಲೆಯು ಭಾರತದ ಎಕ್ಸ್ ಶೋರೂಂ ಪ್ರಕಾರ ರೂ.3.04 ಲಕ್ಷಗಳಾಗಿದ್ದು, ಎಡಿವಿ ಸ್ಪೋರ್ಟ್ಸ್ ಸ್ಪ್ಲಿಟ್ ಎಲ್‍ಇಡಿ ಹೆಡ್‍‍ಲ್ಯಾಂಪ್‍, ಎಲ್‍ಇಡಿ ಟರ್ನ್‍ ಇಂಡಿಕೇಟರ್‍‍‍ಗಳು ಮತ್ತು ಬ್ಲೂಟೂತ್ ಕನೆಕ್ಟಿವಿಟಿಯನ್ನು ಹೊಂದಿದೆ.

MOST READ: ಬಜಾಜ್ ಅವೆಂಜರ್‌ಗೆ ಪೈಪೋಟಿಯಾಗಿ ಟಿವಿಎಸ್ ರೊನಿನ್ ಬಿಡುಗಡೆಗೆ ಸಿದ್ದತೆ

390 ಅಡ್ವೆಂಚರ್ ಬೈಕ್ ಖರೀದಿ ಮೇಲೆ ಆಕರ್ಷಕ ಇಎಂಐ ಪರಿಚಯಿಸಿದ ಕೆಟಿಎಂ

ಕೆಟಿಎಂ 390 ಅಡ್ವೆಂಚರ್ ಬೈಕಿನಲ್ಲಿ 200-ಎಂಎಂ ಗ್ರೌಂಡ್ ಕ್ಲಿಯರೆನ್ಸ್ ನೀಡಲಾಗಿದ್ದು, 373.2 ಸಿಸಿ ಲಿಕ್ವಿಡ್ ಕೂಲ್ಡ್ ಸಿಂಗಲ್ ಸಿಲಿಂಡರ್ ಎಂಜಿನ್ ಅಳವಡಿಸಲಾಗಿದೆ. ಈ ಎಂಜಿನ್ 43 ಬಿ‍‍ಹೆಚ್‍‍ಪಿ ಪವರ್ ಹಾಗೂ 37 ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ.

Most Read Articles

Kannada
Read more on ಕೆಟಿಎಂ ktm
English summary
KTM Offers Attractive EMI Schemes. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X