ಶೀಘ್ರದಲ್ಲೇ ಪ್ರಾರಂಭವಾಗಲಿದೆ ಜಾವಾ ಪೆರಾಕ್ ಬೈಕ್ ವಿತರಣೆ

ಜಾವಾ ಮೋಟಾರ್‌ಸೈಕಲ್ ಕಂಪನಿಯು ಕಳೆದ ವರ್ಷದ ಕೊನೆಯಲ್ಲಿ ಜಾವಾ ಪೆರಾಕ್ ಬೈಕನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿತ್ತು. ಈ ಜಾವಾ ಪೆರಾಕ್ ಬೈಕಿನ ಬೆಲೆಯು ಭಾರತದ ಎಕ್ಸ್ ಶೋರೂಂ ಪ್ರಕಾರ ರೂ.1.94 ಲಕ್ಷಗಳಾಗಿದೆ.

ಶೀಘ್ರದಲ್ಲೇ ಪ್ರಾರಂಭವಾಗಲಿದೆ ಜಾವಾ ಪೆರಾಕ್ ಬೈಕ್ ವಿತರಣೆ

ಈ ಜಾವಾ ಪೆರಾಕ್ ಬೈಕಿಗಾಗಿ ಕಂಪನಿಯು ಈ ವರ್ಷದ ಆರಂಭದಲ್ಲಿ ಬುಕ್ಕಿಂಗ್ ಅನ್ನು ಸ್ವೀಕರಿಸಲು ಪ್ರಾರಂಭಿಸಿದ್ದರು. ಆದರೆ ಕರೋನಾ ಭೀತಿಯಿಂದಾಗಿ ಈ ಜಾವಾ ಪೆರಾಕ್ ಬೈಕಿನ ವಿತರಣೆಯು ವಿಳಂಬವಾಗಿದೆ. ಇದೀಗ ಜಾವಾ ಕಂಪನಿಯು ಈ ಪೆರಾಕ್ ಬೈಕಿನ ಹೊಸ ಟೀಸರ್ ವೀಡಿಯೋವನ್ನು ಬಿಡುಗಡೆಗೊಳಿಸಿದೆ. ಪೆರಾಕ್ ಬೈಕಿನ ವಿತರಣೆಗೆ ಸಂಬಂಧಿಸಿದಂತೆ ಈ ಟೀಸರ್ ವೀಡಿಯೋದಲ್ಲಿ 07 ಮತ್ತು 20 ಸಂಖ್ಯೆಗಳೊಂದಿಗೆ ಕೆಲವು ಸೂಕ್ಷ್ಮ ಸುಳಿವುಗಳನ್ನು ನೀಡಿದೆ.

ಶೀಘ್ರದಲ್ಲೇ ಪ್ರಾರಂಭವಾಗಲಿದೆ ಜಾವಾ ಪೆರಾಕ್ ಬೈಕ್ ವಿತರಣೆ

ಟೀಸರ್ ವೀಡಿಯೋದಲ್ಲಿರುವ ಕೆಲವು ಸುಳಿವುಗಳನ್ನು ಆಧರಿಸಿ ಈ ಜಾವಾ ಪೆರಾಕ್ ಬೈಕಿನ ವಿತರಣೆಯನ್ನು ಈ ತಿಂಗಳ 20ರಂದು ಪ್ರಾರಂಭಿಸಬಹುದು ಎಂದು ನಿರೀಕ್ಷಿಸುತ್ತೇವೆ.

MOST READ: ಬಿಡುಗಡೆಯಾಯ್ತು ಬಹುನಿರೀಕ್ಷಿತ ಹೊಸ ಹೋಂಡಾ ಎಕ್ಸ್-ಬ್ಲೇಡ್ ಬೈಕ್

ಶೀಘ್ರದಲ್ಲೇ ಪ್ರಾರಂಭವಾಗಲಿದೆ ಜಾವಾ ಪೆರಾಕ್ ಬೈಕ್ ವಿತರಣೆ

ಹೊಸ ಜಾವಾ ಪೆರಾಕ್ ಬೈಕಿನಲ್ಲಿ ಫ್ಲೋಟಿಂಗ್ ಸೀಟ್, ಬಾರ್-ಎಂಡ್ ಮೀರರ್ ಮತ್ತು ಸ್ಟಬಿ ಎಕ್ಸಾಸ್ಟ್ ಅನ್ನು ಹೊಂದಿರಲಿದೆ. ಇನ್ನು ಈ ಪೆರಾಕ್ ಬೈಕನ್ನು ಜಾವಾ 42 ಮತ್ತು ಜಾವಾ 300 ಮಾದರಿಗಳಿಗೆ ಹೋಲಿಸಿದರೆ ರೇರ್ ಸಬ್-ಫ್ರೇಮ್ ಮತ್ತು ಸಸ್ಪೆಂಕ್ಷನ್ ಸೆಟಪ್ ವಿಭಿನ್ನವಾಗಿರುತ್ತದೆ. ಪೆರಾಕ್ ಬೈಕಿನಲ್ಲಿ ಡ್ಯುಯಲ್-ಚಾನೆಲ್ ಎಬಿಎಸ್ ಅನ್ನು ಸಹ ಹೊಂದಿದೆ.

ಶೀಘ್ರದಲ್ಲೇ ಪ್ರಾರಂಭವಾಗಲಿದೆ ಜಾವಾ ಪೆರಾಕ್ ಬೈಕ್ ವಿತರಣೆ

ಜಾವಾ ಪೆರಾಕ್ ಬೈಕಿನಲ್ಲಿ 334 ಸಿಸಿ, ಸಿಂಗಲ್ ಸಿಲಿಂಡರ್, ಲಿಕ್ವಿಡ್-ಕೂಲ್ಡ್, ಡಿಒಹೆಚ್‌ಸಿ ಎಂಜಿನ್‌ ಅನ್ನು ಹೊಂದಿದೆ. ಈ ಎಂಜಿನ್ 30 ಬಿಹೆಚ್‌ಪಿ ಪವರ್ ಮತ್ತು 31 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

MOST READ: ದುಬಾರಿಯಾಯ್ತು ಜನಪ್ರಿಯ ಬಿ‍ಎಸ್-6 ಬಜಾಜ್ ಪಲ್ಸರ್ ಎನ್ಎಸ್200 ಬೈಕ್

ಶೀಘ್ರದಲ್ಲೇ ಪ್ರಾರಂಭವಾಗಲಿದೆ ಜಾವಾ ಪೆರಾಕ್ ಬೈಕ್ ವಿತರಣೆ

ಈ ಎಂಜಿನ್ ನೊಂದಿಗೆ 6-ಸ್ಫೀಡ್ ಮ್ಯಾನುವಲ್ ಗೇರ್ ಬಾಕ್ಸ್ ಅನ್ನು ಅಳವಡಿಸಿದೆ. ಇನ್ನು ಈ ಬೈಕಿನಲ್ಲಿ ಸಸ್ಪೆಂಕ್ಷನ್ ಗಾಗಿ ಮುಂಭಾಗದಲ್ಲಿ ಟೆಲಿಸ್ಕೋಪಿಕ್ ಫೋರ್ಕ್ಸ್ ಮತ್ತು ಹಿಂಭಾಗದಲ್ಲಿ ಮೊನೊ-ಶಾಕ್ ಅನ್ನು ಒಳಗೊಂಡಿದೆ.

ಶೀಘ್ರದಲ್ಲೇ ಪ್ರಾರಂಭವಾಗಲಿದೆ ಜಾವಾ ಪೆರಾಕ್ ಬೈಕ್ ವಿತರಣೆ

ಇನ್ನು ಬಿಎಸ್-6 ಜಾವಾ ಮತ್ತು ಜಾವಾ 42 ಬೈಕುಗಳು ಕೂಡ ಡೀಲರ್ ಬಳಿ ತಲುಪಿದೆ. ಹೊಸ ಜಾವಾ ಮತ್ತು ಜಾವಾ 42 ಬೈಕುಗಳು ಡೀಲರ್ ಬಳಿ ತಲುಪಿರುವುದರಿಂದ ಶೀಘ್ರದಲ್ಲೇ ವಿತರಣೆಯನ್ನು ಪ್ರಾರಂಭಿಸಬಹುದು.

MOST READ: ಹೊಸ ಬಿಎಂಡಬ್ಲ್ಯೂ ಆರ್ 18 ಕ್ರೂಸರ್ ಬೈಕ್ ಖರೀದಿಗೆ ಬುಕ್ಕಿಂಗ್ ಆರಂಭ

ಇನ್ನು ಈ ಎರಡು ಬೈಕುಗಳ ಪವರ್ ಮತ್ತು ಟಾರ್ಕ್ ಅಂಕಿ ಅಂಶಗಳು ಕೂಡ ಕಡಿಮೆಯಾಗಿದೆ. ಬಿಎಸ್-6 ಜಾವಾ ಮತ್ತು ಜಾವಾ 42 ಬೈಕುಗಳಲ್ಲಿ ಒಂದೇ ಮಾದರಿಯ 293 ಸಿಸಿ ಸಿಂಗಲ್ ಸಿಲಿಂಡರ್, ಲಿಕ್ವಿಡ್-ಕೂಲ್ಡ್ ಎಂಜಿನ್ ಅನ್ನು ಹೊಂದಿದೆ.

ಶೀಘ್ರದಲ್ಲೇ ಪ್ರಾರಂಭವಾಗಲಿದೆ ಜಾವಾ ಪೆರಾಕ್ ಬೈಕ್ ವಿತರಣೆ

ಇನ್ನು ಜಾವಾ ಕಂಪನಿಯು ಬಿಡುಗಡೆಗೊಳಿಸಿದ ಟೀಸರ್ ವೀಡಿಯೋದಲ್ಲಿನ ಕೆಲವು ಸುಳಿವುಗಳನ್ನು ಆಧರಿಸಿ ಈ ತಿಂಗಳ 20ರಂದು ವಿತರಣೆಯನ್ನು ಆರಂಭಿಸಬಹುದು ಎಂದು ನಿರೀಕ್ಷಿಸುತ್ತೇವೆ. ಕೊರೊನಾ ಭೀತಿಯಿಂದ ಈ ಜಾವಾ ಪೆರಾಕ್ ಬೈಕಿನ ವಿತರಣೆಯು ವಿಳಂಬವಾಗಿದೆ.

Most Read Articles

Kannada
English summary
Jawa Perak Deliveries To Begin Soon. Read In Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X