Just In
Don't Miss!
- News
ಗಗನಕ್ಕೇರಿದ ಪೆಟ್ರೋಲ್, ಡೀಸೆಲ್ ದರ: ಹೊಸ ದಾಖಲೆ ಸೃಷ್ಟಿ
- Sports
'ಭಾರತೀಯರಿಗೆ ಹೋಲಿಸಿದರೆ ಯುವ ಆಸೀಸ್ ಇನ್ನೂ ಪ್ರೈಮರಿ ಶಾಲೆಯಲ್ಲಿದೆ'
- Lifestyle
ಕೊಲೆಸ್ಟ್ರಾಲ್ ಹೆಚ್ಚಾಗಿದೆಯೇ? ಈ ಆಹಾರ ಸೇವಿಸಿ
- Education
RITES Limited Recruitment 2021: ವಿವಿಧ 9 ಹುದ್ದೆಗಳಿಗೆ ಅರ್ಜಿ ಆಹ್ವಾನ
- Movies
ದುಬಾರಿ ವಿವಾಹ; ವರುಣ್ ಧವನ್ ಮದುವೆ ನಡೆಯುತ್ತಿರುವ ಐಷಾರಾಮಿ ಹೋಟೆಲ್ ಗೆ ಇಷ್ಟೊಂದು ಖರ್ಚು ಮಾಡುತ್ತಿದ್ದಾರಾ?
- Finance
ಬಜೆಟ್ 2021: ಜ. 23ರಂದು ಹಲ್ವಾ ಕಾರ್ಯಕ್ರಮ- ಇದೇನು, ಎತ್ತ?
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಮತ್ತಷ್ಟು ಡೀಲರ್ಶಿಪ್'ಗಳನ್ನು ತೆರೆಯಲು ಮುಂದಾದ ಪಿಯಾಜಿಯೊ
ಪಿಯಾಜಿಯೊ ಕಂಪನಿಯು ಭಾರತದಲ್ಲಿನ ತನ್ನ ಸೇಲ್ಸ್ ಹಾಗೂ ಸರ್ವೀಸ್ ಹೆಚ್ಚಿಸಲು ಮತ್ತಷ್ಟು ಡೀಲರ್ಶಿಪ್'ಗಳನ್ನು ತೆರೆಯಲು ಬಯಸಿದೆ. ಇಟಲಿ ಮೂಲದ ವಾಹನ ತಯಾರಕ ಕಂಪನಿಯಾದ ಪಿಯಾಜಿಯೊ, ಏಪ್ರಿಲಿಯಾ ಹಾಗೂ ವೆಸ್ಪಾ ಬ್ರಾಂಡ್ ಸ್ಕೂಟರ್‌ಗಳನ್ನು ತಯಾರಿಸುತ್ತದೆ.

ಪಿಯಾಜಿಯೊ, ವೆಸ್ಪಾ ಹಾಗೂ ಏಪ್ರಿಲಿಯಾ ವಾಹನಗಳಿಗೆ ಭಾರತವು ಪ್ರಮುಖ ಮಾರುಕಟ್ಟೆಯಾಗಿದೆ. ಮಾಹಿತಿಗಳ ಪ್ರಕಾರ ಪಿಯಾಜಿಯೊ ಕಂಪನಿಯ 45%ನಷ್ಟು ವಾಹನಗಳು ಭಾರತದಲ್ಲಿ ಮಾರಾಟವಾಗಿವೆ. ಲಾಕ್‌ಡೌನ್ ತೆರುವುಗೊಂಡ ನಂತರ ಮಾರಾಟವು ಹೆಚ್ಚಾಗಿದೆ ಎಂದು ಪಿಯಾಜಿಯೊ ಇಂಡಿಯಾದ ಸೇಲ್ಸ್ ಮ್ಯಾನೇಜಿಂಗ್ ಡೈರೆಕ್ಟರ್ ಡಿಯಾಗೋ ಗ್ರಾಫಿ ಹೇಳಿದ್ದಾರೆ.

ಈಗ ಕಂಪನಿಯು ತನ್ನ ಡೀಲರ್ಶಿಪ್'ಗಳನ್ನು ವಿಸ್ತರಿಸಲು ಮುಂದಾಗಿದ್ದು, ಮುಂದಿನ ವರ್ಷ 100 ಹೊಸ ಡೀಲರ್ಶಿಪ್'ಗಳನ್ನು ತೆರೆಯುವ ಯೋಜನೆಯನ್ನು ಹೊಂದಿದೆ. 2021ರ ಅಂತ್ಯದ ವೇಳೆಗೆ 350 ಡೀಲರ್ಶಿಪ್ ಹಾಗೂ 2022ರ ಅಂತ್ಯದ ವೇಳೆಗೆ 450 ಡೀಲರ್ಶಿಪ್'ಗಳನ್ನು ತೆರೆಯಲು ಯೋಜಿಸಲಾಗಿದೆ ಎಂದು ಡಿಯಾಗೋ ಗ್ರಾಫಿ ಮಾಹಿತಿ ನೀಡಿದರು.
MOST READ:ರಿಕ್ಷಾ ಕಳೆದುಕೊಂಡವನಿಗೆ ಹೊಸ ರಿಕ್ಷಾ ಕೊಡಿಸಿದ ಆಪದ್ಭಾಂಧವ

ಪಿಯಾಜಿಯೊ ತನ್ನ ಏಪ್ರಿಲಿಯಾ ಎಸ್‌ಎಕ್ಸ್‌ಆರ್ 160 ಪ್ರೀಮಿಯಂ ಸ್ಕೂಟರ್ ಅನ್ನು ಈ ತಿಂಗಳು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲಿದೆ. ಭಾರತದಲ್ಲಿ ತಯಾರಾಗುತ್ತಿದ್ದರೂ ಈ ಸ್ಕೂಟರ್ ಅನ್ನು ಇಟಲಿಯಲ್ಲಿ ವಿನ್ಯಾಸಗೊಳಿಸಲಾಗಿದೆ.

ಏಪ್ರಿಲಿಯಾ ಎಸ್‌ಎಕ್ಸ್‌ಆರ್ 160 ಮ್ಯಾಕ್ಸಿ ಸ್ಕೂಟರ್ ಎಲ್ಇಡಿ ಹೆಡ್ ಲೈಟ್, ಎಲ್ಇಡಿ ಟೇಲ್ ಲೈಟ್, ಟೆಲಿಸ್ಕೋಪಿಕ್ ಫೋರ್ಕ್ ಸಸ್ಪೆಂಷನ್, ಫ್ರಂಟ್ ಡಿಸ್ಕ್ ಬ್ರೇಕ್, ಎಬಿಎಸ್-ಸಿಬಿಎಸ್, ಕ್ರೋಮ್ ಪ್ಲೇಟೆಡ್ ಎಕ್ಸಾಸ್ಟ್, ಆರಾಮದಾಯಕವಾದ ದೊಡ್ಡ ಸೀಟನ್ನು ಹೊಂದಿದೆ.
MOST READ:ಶೋಚನೀಯ ಸ್ಥಿತಿಯಲ್ಲಿವೆ ದುಬಾರಿ ಬೆಲೆಯ ಐಷಾರಾಮಿ ರೋಲ್ಸ್ ರಾಯ್ಸ್ ಕಾರುಗಳು

ಇದರ ಜೊತೆಗೆ ಈ ಸ್ಕೂಟರಿನಲ್ಲಿ ಪೂರ್ಣ ಪ್ರಮಾಣದ ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್, ಸ್ಪ್ಲಿಟ್ ಗ್ಲೋವ್ ಬಾಕ್ಸ್, ಯುಎಸ್ ಬಿ ಚಾರ್ಜರ್, ದೊಡ್ಡ ಅಂಡರ್ ಸೀಟ್ ಸ್ಟೋರೇಜ್ ಹಾಗೂ ದೊಡ್ಡ ವಿಂಡ್ ಸ್ಕ್ರೀನ್ ಗಳನ್ನು ನೀಡಲಾಗಿದೆ.

ಒಟ್ಟಾರೆಯಾಗಿ ಈ ಸ್ಕೂಟರಿನ ವಿನ್ಯಾಸ ಹಾಗೂ ನೋಟವು ಸ್ಪೋರ್ಟಿಯಾಗಿದೆ. ಕಂಪನಿಯು ದೆಹಲಿಯಲ್ಲಿ ನಡೆದಿದ್ದ 2020ರ ಆಟೋ ಎಕ್ಸ್‌ಪೋದಲ್ಲಿ ಈ ಸ್ಕೂಟರ್ ಅನ್ನು ಅನಾವರಣಗೊಳಿಸಿತ್ತು.
MOSTREAD: ಇನ್ನು ಮುಂದೆ ಈ ನಗರಗಳಲ್ಲಿ ಡೀಸೆಲ್ ವಾಹನಗಳನ್ನು ಮಾರಾಟ ಮಾಡುವಂತಿಲ್ಲ

ಪರ್ಫಾಮೆನ್ಸ್ ಬಗ್ಗೆ ಹೇಳುವುದಾದರೆ ಈ ಸ್ಕೂಟರ್ ಭಾರತದ ಅತ್ಯಂತ ಶಕ್ತಿಶಾಲಿಯಾದ ಮ್ಯಾಕ್ಸಿ ಸ್ಕೂಟರ್ ಆಗಿದೆ. ಈ ಸ್ಕೂಟರ್ 160 ಸಿಸಿ ಎಂಜಿನ್ ಹೊಂದಿದೆ. ಸದ್ಯಕ್ಕೆ ಬೇರೆ ಯಾವುದೇ ಸ್ಕೂಟರ್ ಈ ಪ್ರಮಾಣದ ಎಂಜಿನ್ ಅನ್ನು ಹೊಂದಿಲ್ಲ ಎಂಬುದು ಗಮನಾರ್ಹ.

ಈ ಸ್ಕೂಟರಿನಲ್ಲಿರುವ 160 ಸಿಸಿ ಎಂಜಿನ್ 11 ಬಿಹೆಚ್‌ಪಿ ಪವರ್ ಹಾಗೂ 11.6 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ. ಪಿಯಾಜಿಯೊ ತನ್ನ 125 ಸಿಸಿಯ ಏಪ್ರಿಲಿಯಾ ಎಸ್ಆರ್ 125 ಸ್ಕೂಟರ್ ಅನ್ನು ಸ್ಥಗಿತಗೊಳಿಸಲು ಯೋಜಿಸುತ್ತಿದೆ.
MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

ಪಿಯಾಜಿಯೊ ಕಂಪನಿಯು ದೇಶಿಯ ಮಾರುಕಟ್ಟೆಯ 125 ಸಿಸಿ ಸೆಗ್ ಮೆಂಟಿನಲ್ಲಿ, ಎಸ್‌ಆರ್ 125 ಹಾಗೂ ಸ್ಟಾರ್ಮ್ 125 ಸ್ಕೂಟರ್‌ಗಳನ್ನು ಮಾರಾಟ ಮಾಡುತ್ತದೆ.