ಅಗಸ್ಟ್ ತಿಂಗಳಿನಲ್ಲಿ ಬಿಡುಗಡೆಯಾದ ಟಾಪ್ 5 ಬೈಕ್ ಮಾದರಿಗಳಿವು..!

ಕರೋನಾ ವೈರಸ್ ಪರಿಣಾಮ ಸಂಕಷ್ಟಕ್ಕೆ ಸಿಲುಕಿದ್ದ ಆಟೋ ಉದ್ಯಮವು ಇದೀಗ ನಿಧಾನವಾಗಿ ಚೇತರಿಸಿಕೊಳ್ಳುತ್ತಿದ್ದು, ಹೊಸ ವಾಹನಗಳ ಮಾರಾಟ ಹೆಚ್ಚುವುದರ ಜೊತೆಗೆ ವಾಹನಗಳ ಬಿಡುಗಡೆ ಪ್ರಕ್ರಿಯೆಯೂ ಕೂಡಾ ಜೋರಾಗುತ್ತಿದೆ.

ಅಗಸ್ಟ್ ತಿಂಗಳಿನಲ್ಲಿ ಬಿಡುಗಡೆಯಾದ ಟಾಪ್ 5 ಬೈಕ್ ಮಾದರಿಗಳಿವು..!

ಕಳೆದ ಏಪ್ರಿಲ್ ಮತ್ತು ಮೇ ಅವಧಿಯ ಭಾರೀ ಪ್ರಮಾಣದ ನಷ್ಟ ಅನುಭವಿಸಿದ್ದ ಆಟೋ ಉತ್ಪಾದನಾ ಕಂಪನಿಗಳು ಕಳೆದ ಎರಡು ತಿಂಗಳಿನಿಂದ ನಿಧಾನವಾಗಿ ಚೇತರಿಸಿಕೊಳ್ಳುತ್ತಿದ್ದು, ಪ್ರಸ್ತುತ ಮಾರುಕಟ್ಟೆಯಲ್ಲಿರುವ ವಾಹನಗಳ ಜೊತೆಗೆ ಹೊಸ ವಾಹನಗಳು ಸಹ ಮಾರುಕಟ್ಟೆ ಪ್ರವೇಶಿಸುತ್ತಿವೆ. ಕರೋನಾ ವೈರಸ್ ಪರಿಣಾಮ ಹಲವು ಹೊಸ ವಾಹನಗಳ ಬಿಡುಗಡೆಯೂ ಮುಂದೂಡಿಕೆಯಾಗಿದ್ದು, ಇನ್ನು ಕೆಲವು ವಾಹನ ಮಾದರಿಗಳು ಸಂಕಷ್ಟ ಪರಿಸ್ಥಿತಿ ಗ್ರಾಹಕರನ್ನು ಸೆಳೆಯುವ ನೀರಿಕ್ಷೆಯಲ್ಲಿವೆ.

ಅಗಸ್ಟ್ ತಿಂಗಳಿನಲ್ಲಿ ಬಿಡುಗಡೆಯಾದ ಟಾಪ್ 5 ಬೈಕ್ ಮಾದರಿಗಳಿವು..!

ಟಿವಿಎಸ್ ಜೂಪಿಟರ್ ಝಡ್ಎಕ್ಸ್(ಡಿಸ್ಕ್ ಬ್ರೇಕ್)

ಟಿವಿಎಸ್ ಮೋಟಾರ್ ಕಂಪನಿಯು ತನ್ನ ಜೂಪಿಟರ್ ಝಡ್ಎಕ್ಸ್ ಸ್ಕೂಟರ್ ಮಾದರಿಯನ್ನು ಫ್ರಂಟ್ ಡಿಸ್ಕ್ ಬ್ರೇಕ್‌ಗಳೊಂದಿಗೆ ಬಿಡುಗಡೆಗೊಳಿಸಿದ್ದು, ಹೊಸ ಸ್ಕೂಟರಿನ ಬೆಲೆಯು ಎಕ್ಸ್ ಶೋರೂಂ ದರದಂತೆ ರೂ.69,052 ಗಳಾಗಿದೆ. ಫ್ರಂಟ್ ಡಿಸ್ಕ್ ಬ್ರೇಕ್, ಝಡ್ಎಕ್ಸ್ ಮಾದರಿಗೆ ಮಾತ್ರ ಸೀಮಿತವಾಗಿದೆ.

ಅಗಸ್ಟ್ ತಿಂಗಳಿನಲ್ಲಿ ಬಿಡುಗಡೆಯಾದ ಟಾಪ್ 5 ಬೈಕ್ ಮಾದರಿಗಳಿವು..!

ಇದರ ಜೊತೆಗೆ ಟಿವಿಎಸ್ ಜೂಪಿಟರ್ ಝಡ್ಎಕ್ಸ್ ಸ್ಕೂಟರಿನಲ್ಲಿ ಹೊಸ ಎಲೆಕ್ಟ್ರಿಕ್ ಸ್ಟಾರ್ಟ್ ಐ-ಟಚ್ ಸ್ಟಾರ್ಟ್ ಸಿಸ್ಟಂ ಅನ್ನು ಅಳವಡಿಸಲಾಗಿದೆ. ಈ ಸಿಸ್ಟಂ ವೇಗವಾಗಿ ಹಾಗೂ ನಿಶಬ್ದವಾಗಿ ಸ್ಕೂಟರ್ ಅನ್ನು ಸ್ಟಾರ್ಟ್ ಮಾಡುತ್ತದೆ. ಹೊಸ ಡಿಸ್ಕ್ ಮಾದರಿಯ ಬೆಲೆ ಮಾರುಕಟ್ಟೆಯಲ್ಲಿರುವ ಡ್ರಮ್ ಮಾದರಿಗಿಂತ ರೂ. 3,950ಗಳಷ್ಟು ಹೆಚ್ಚಾಗಿದ್ದು ,ಬಿಎಸ್ 4 ಮಾದರಿಗಿಂತ ಬಿಎಸ್ 6 ಮಾದರಿಯು ರೂ. 9062 ಗಳಷ್ಟು ಹೆಚ್ಚುವರಿ ಬೆಲೆ ಪಡೆದಿದೆ.

ಹೆಚ್ಚಿನ ಮಾಹಿತಿ ಈ ಲಿಂಕ್ ಒತ್ತಿ..

ಅಗಸ್ಟ್ ತಿಂಗಳಿನಲ್ಲಿ ಬಿಡುಗಡೆಯಾದ ಟಾಪ್ 5 ಬೈಕ್ ಮಾದರಿಗಳಿವು..!

ಹೋಂಡಾ ಹೋಂಡಾ ಹಾರ್ನೆಟ್ 2.0

ಹೋಂಡಾ ಮೋಟಾರ್‌ಸೈಕಲ್ ಇಂಡಿಯಾ ಕಂಪನಿಯು ತನ್ನ ಹೊಸ ಹಾರ್ನೆಟ್ 2.0 ಬೈಕ ಅನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ. ಹೊಸ ಹಾರ್ನೆಟ್ 2.0 ಬೈಕಿನ ಬೆಲೆಯು ಎಕ್ಸ್ ಶೋರೂಂ(ಗುರುಗ್ರಾಮ್) ಪ್ರಕಾರ ರೂ.1.26 ಲಕ್ಷಗಳಾಗಿದ್ದು, ವಿನೂತನ ವಿನ್ಯಾಸ ಪಡೆದುಕೊಂಡಿದೆ.

ಅಗಸ್ಟ್ ತಿಂಗಳಿನಲ್ಲಿ ಬಿಡುಗಡೆಯಾದ ಟಾಪ್ 5 ಬೈಕ್ ಮಾದರಿಗಳಿವು..!

ಹಾರ್ನೆಟ್ 2.0 ಬೈಕ್ ಮಾದರಿಯು ಪಿಜಿಎಂ-ಫೈ ತಂತ್ರಜ್ಞಾನದೊಂದಿಗೆ ಬ್ರಾಂಡ್‌ನ ಹೊಸ ಬಿಎಸ್-6 ಪ್ರೇರಿತ 184-ಸಿಸಿ ಸಿಂಗಲ್ ಸಿಲಿಂಡರ್ ಎಂಜಿನ್‌ ಅನ್ನು ಹೊಂದಿದ್ದು, ಈ ಎಂಜಿನ್ 17 ಬಿಹೆಚ್‌ಪಿ, 16.1 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್ ಒತ್ತಿ..

ಅಗಸ್ಟ್ ತಿಂಗಳಿನಲ್ಲಿ ಬಿಡುಗಡೆಯಾದ ಟಾಪ್ 5 ಬೈಕ್ ಮಾದರಿಗಳಿವು..!

ಒಕಿನಾವ ಆರ್30 ಎಲೆಕ್ಟ್ರಿಕ್ ಸ್ಕೂಟರ್

ಎಲೆಕ್ಟ್ರಿಕ್ ದ್ವಿಚಕ್ರ ವಾಹನ ತಯಾರಕ ಕಂಪನಿಯಾದ ಒಕಿನಾವ ತನ್ನ ಹೊಸ ಆರ್30 ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದ್ದು, ಆರ್30 ಎಲೆಕ್ಟ್ರಿಕ್ ಸ್ಕೂಟರ್ ಬೆಲೆಯನ್ನು ಎಕ್ಸ್ ಶೋರೂಂ ಪ್ರಕಾರ ರೂ.58,992ಕ್ಕೆ ನಿಗದಿಪಡಿಸಲಾಗಿದೆ.

ಅಗಸ್ಟ್ ತಿಂಗಳಿನಲ್ಲಿ ಬಿಡುಗಡೆಯಾದ ಟಾಪ್ 5 ಬೈಕ್ ಮಾದರಿಗಳಿವು..!

ಒಕಿನಾವ ಕಂಪನಿಯು ಈ ಹೊಸ ಆರ್30 ಎಲೆಕ್ಟ್ರಿಕ್ ಸ್ಕೂಟರ್‌ಗಾಗಿ ಈಗಾಗಲೇ ಪ್ರಿ-ಬುಕ್ಕಿಂಗ್ ಅನ್ನು ಕೂಡ ಪ್ರಾರಂಭಿಸಲಾಗಿದೆ. ಹೊಸ ಒಕಿನಾವ ಆರ್30 ಎಲೆಕ್ಟ್ರಿಕ್ ಸ್ಕೂಟರ್‌ಗಾಗಿ ರೂ.2 ಸಾವಿರ ಪಾವತಿಸಿ ಬುಕ್ಕಿಂಗ್ ಮಾಡಿಕೊಳ್ಳಬಹುದಾಗಿದೆ. ಹೊಸ ಇವಿ ಸ್ಕೂಟರಿನ ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್ ಒತ್ತಿ..

ಅಗಸ್ಟ್ ತಿಂಗಳಿನಲ್ಲಿ ಬಿಡುಗಡೆಯಾದ ಟಾಪ್ 5 ಬೈಕ್ ಮಾದರಿಗಳಿವು..!

ಕವಾಸಕಿ ವಲ್ಕನ್ ಎಸ್(ಬಿಎಸ್ 6)

ಕವಾಸಕಿ ಇಂಡಿಯಾ ಮೋಟಾರ್‌ಸೈಕಲ್ ಕಂಪನಿಯು ಸದ್ದಿಲ್ಲದೇ ತನ್ನ ಹೊಸ ವಲ್ಕನ್ ಎಸ್ ಬೈಕ್ ಅನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ. 2021ರ ಕವಾಸಕಿ ವಲ್ಕನ್ ಎಸ್ ಬೈಕಿನ ಬೆಲೆಯು ಎಕ್ಸ್‌ಶೋರೂಂ ದರದಂತೆ ರೂ.5.79 ಲಕ್ಷಗಳಾಗಿದೆ.

ಅಗಸ್ಟ್ ತಿಂಗಳಿನಲ್ಲಿ ಬಿಡುಗಡೆಯಾದ ಟಾಪ್ 5 ಬೈಕ್ ಮಾದರಿಗಳಿವು..!

ಕವಾಸಕಿ ವಲ್ಕನ್ ಎಸ್ ಬೈಕಿನಲ್ಲಿ 649-ಸಿಸಿ ಪ್ಯಾರೆಲಲ್ ಲಿಕ್ವಿಡ್-ಟ್ವಿನ್ ಎಂಜಿನ್ ಜೋಡಿಸಲಾಗಿದ್ದು, ಈ ಎಂಜಿನ್ 60-ಬಿಹೆಚ್‍ಪಿ ಮತ್ತು 62.4-ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ಅನ್ನು 6-ಸ್ಪೀಡ್ ಗೇರ್‌ಬಾಕ್ಸ್‌ಗೆ ಜೋಡಿಸಲಾಗಿದ್ದು, ಹೆಚ್ಚಿನ ಮಾಹಿತಿ ಈ ಲಿಂಕ್ ಒತ್ತಿ..

ಅಗಸ್ಟ್ ತಿಂಗಳಿನಲ್ಲಿ ಬಿಡುಗಡೆಯಾದ ಟಾಪ್ 5 ಬೈಕ್ ಮಾದರಿಗಳಿವು..!

ಟ್ರಯಂಫ್ ಸ್ಟ್ರೀಟ್ ಟ್ರಿಪಲ್ ಆರ್

ಟ್ರಯಂಫ್ ಇಂಡಿಯಾ ಕಂಪನಿಯು ತನ್ನ ಹೊಸ ಸ್ಟ್ರೀಟ್ ಟ್ರಿಪಲ್ ಆರ್ ಬೈಕ್ ಮಾದರಿಯನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ. ಹೊಸ ಟ್ರಯಂಫ್ ಸ್ಟ್ರೀಟ್ ಟ್ರಿಪಲ್ ಆರ್ ಬೈಕಿನ ಬೆಲೆಯು ಭಾರತದ ಎಕ್ಸ್ ಶೋರೂಂ ಪ್ರಕಾರ ರೂ.8.84 ಲಕ್ಷಗಳಾಗಿದೆ.

ಅಗಸ್ಟ್ ತಿಂಗಳಿನಲ್ಲಿ ಬಿಡುಗಡೆಯಾದ ಟಾಪ್ 5 ಬೈಕ್ ಮಾದರಿಗಳಿವು..!

ಟ್ರಯಂಫ್ ಸ್ಟ್ರೀಟ್ ಟ್ರಿಪಲ್ ಆರ್ ಬೈಕಿನಲ್ಲಿ 765-ಸಿಸಿ, 3-ಸಿಲಿಂಡರ್ ಎಂಜಿನ್ ಅನ್ನು ಅಳವಡಿಸಲಾಗಿದ್ದು, ಈ ಎಂಜಿನ್ 116 ಬಿಹೆಚ್‌ಪಿ, 77 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್ ಒತ್ತಿ..

ಅಗಸ್ಟ್ ತಿಂಗಳಿನಲ್ಲಿ ಬಿಡುಗಡೆಯಾದ ಟಾಪ್ 5 ಬೈಕ್ ಮಾದರಿಗಳಿವು..!

ಡುಕಾಟಿ ಪಾನಿಗಲೆ ವಿ2

ಇಟಲಿ ಮೂಲದ ದ್ವಿಚಕ್ರ ವಾಹನ ತಯಾರಕ ಕಂಪನಿ ಡುಕಾಟಿ ತನ್ನ ಬಿಎಸ್-6 ಪಾನಿಗಲೆ ವಿ2 ಬೈಕನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದ್ದು, ಹೊಸ ಪಾನಿಗಲೆ ವಿ2 ಬೈಕ್ ಮಾದರಿಯು ದೆಹಲಿ ಎಕ್ಸ್ ಶೋರೂಂ ಪ್ರಕಾರ ರೂ.16.99 ಲಕ್ಷ ಬೆಲೆ ಹೊಂದಿದೆ.

ಅಗಸ್ಟ್ ತಿಂಗಳಿನಲ್ಲಿ ಬಿಡುಗಡೆಯಾದ ಟಾಪ್ 5 ಬೈಕ್ ಮಾದರಿಗಳಿವು..!

ಡುಕಾಟಿ ಪಾನಿಗಲೆ ವಿ2 ಬೈಕ್ ಮಾದರಿಯು ದೇಶದ ಮೊದಲ ಬಿಎಸ್-6 ಪ್ರೇರಿತಯ ಸೂಪರ್ ಬೈಕ್ ಆವೃತ್ತಿಯಾಗಿದ್ದು, ಹೂಸ ಬೈಕಿನಲ್ಲಿ 955-ಸಿಸಿ ಸೂಪರ್‌ಕ್ವಾಡ್ರೊ 90-ಡಿಗ್ರಿ ವಿ2 ಎಂಜಿನ್‌ ಅನ್ನು ಹೊಂದಿದೆ. ಹೆಚ್ಚಿನ ಮಾಹಿತಿ ಈ ಲಿಂಕ್ ಒತ್ತಿ..

Most Read Articles

Kannada
English summary
Two-Wheelers Launched In August. Read in Kannada.
Story first published: Monday, August 31, 2020, 20:40 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X