Just In
Don't Miss!
- Education
HAL Recruitment 2021: 4 ಡಿಪ್ಲೋಮಾ ಟೆಕ್ನೀಶಿಯನ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Lifestyle
ಮೂತ್ರದ ಸೋಂಕು: ಕಾರಣ, ಲಕ್ಷಣಗಳು ಹಾಗೂ ಮನೆಮದ್ದುಗಳು ಇಲ್ಲಿವೆ..
- Sports
ಭಾರತದ ವಿರುದ್ಧದ ಸರಣಿಯಲ್ಲಿ ಆ ನಿರ್ಧಾರ ತೆಗೆದುಕೊಳ್ಳಬಾರದಿತ್ತು: ಡೇವಿಡ್ ವಾರ್ನರ್
- News
ಬಿಜೆಪಿ ಸೇರುವರೇ ಸೌರವ್ ಗಂಗೂಲಿ? ಪಶ್ಚಿಮ ಬಂಗಾಳ ಬಿಜೆಪಿ ಮುಖಂಡನ ಸ್ಪಷ್ಟನೆ
- Movies
'ಈ ಜಗತ್ತನ್ನು ಉಳಿಸಲು ವನ್ಯಜೀವಿಗಳನ್ನು ಉಳಿಸಿ'- ನಟ ದರ್ಶನ್
- Finance
ದೇಶದ ಪ್ರಮುಖ ನಗರಗಳಲ್ಲಿ ಮಾರ್ಚ್ 03ರ ಪೆಟ್ರೋಲ್, ಡೀಸೆಲ್ ದರ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಬೆಂಗಳೂರು ಮೂಲದ ಆಲ್ಟ್ರಾವಯೊಲೆಟ್ ಎಲೆಕ್ಟ್ರಿಕ್ ಬೈಕ್ ಉತ್ಪಾದನೆ ಮೇಲೆ ಹೂಡಿಕೆ ಮಾಡಿದ ಟಿವಿಎಸ್
ಬೆಂಗಳೂರು ಮೂಲದ ಆಲ್ಟ್ರಾವಯೊಲೆಟ್ ಆಟೋ ಕಂಪನಿಯು ಕಳೆದ ವರ್ಷ ಸುಧಾರಿತ ತಂತ್ರಜ್ಞಾನ ಪ್ರೇರಿತ ಎಫ್77 ಸೂಪರ್ ಎಲೆಕ್ಟ್ರಿಕ್ ಬೈಕ್ ಮಾದರಿಯನ್ನು ಬಿಡುಗಡೆಗೊಳಿಸುವ ಮೂಲಕ ಆಟೋ ಉದ್ಯಮದಲ್ಲಿ ಹೊಸ ಸಂಚಲನಕ್ಕೆ ಕಾರಣವಾಗಿದ್ದು, ಹಲವು ವಿಶೇಷತೆಗಳಿಗೆ ಕಾರಣವಾಗಿರುವ ಆಲ್ಟ್ರಾವಯೊಲೆಟ್ ಎಲೆಕ್ಟ್ರಿಕ್ ಬೈಕ್ ಕಂಪನಿಯು ಗ್ರಾಹಕರ ಬೇಡಿಕೆಯೆಂತೆ ಮತ್ತಷ್ಟು ಹೊಸ ಉತ್ಪನ್ನಗಳನ್ನು ಸಿದ್ದಪಡಿಸುತ್ತಿದೆ.

ಸ್ಟಾರ್ಟ್-ಅಪ್ ಕಂಪನಿಯಾಗಿರುವ ಆಲ್ಟ್ರಾವಯೊಲೆಟ್ ಸದ್ಯ ಸೀಮಿತ ಮಾರುಕಟ್ಟೆ ಸೌಲಭ್ಯವನ್ನು ಹೊಂದಿದ್ದು, ಕಂಪನಿಯ ವಿಶೇಷತೆ ಮತ್ತು ಭವಿಷ್ಯದ ಉತ್ಪನ್ನಗಳ ಆಧಾರದ ಮೇಲೆ ಆಟೋ ದಿಗ್ಗಜ ಕಂಪನಿಯಾದ ಟಿವಿಎಸ್ ಮೋಟಾರ್ಸ್ ಕಂಪನಿಯು ಇದೀಗ ಮಾರುಕಟ್ಟೆ ವಿಸ್ತರಣೆ ಮತ್ತು ಹೊಸ ಉತ್ಪನ್ನಗಳ ಹೂಡಿಕೆ ಮಾಡಲು ಒಪ್ಪಿಗೆ ಸೂಚಿಸಿದೆ. ಹೊಸ ಉದ್ಯಮ ವಿಸ್ತರಣೆಗೆ ಟಿವಿಎಸ್ ಜೊತೆ ಕೈಜೋಡಿಸಿರುವ ಬಗ್ಗೆ ಆಲ್ಟ್ರಾವಯೊಲೆಟ್ ಕಂಪನಿಯೇ ಖಚಿತಪಡಿಸಿದ್ದು, ಹೊಸ ಸಹಭಾಗೀತ್ವ ಯೋಜನೆ ಅಡಿ ಮತ್ತಷ್ಟು ಹೊಸ ಉತ್ಪನ್ನಗಳನ್ನು ಸಿದ್ದಪಡಿಸುವ ಉತ್ಸುಕತೆ ವ್ಯಕ್ತಪಡಿಸಿದೆ.

ಸದ್ಯ ಎಲೆಕ್ಟ್ರಿಕ್ ವಾಹನಗಳ ಮಾರಾಟ ಪ್ರಕ್ರಿಯೆ ಜೋರಾಗಿದ್ದು, ಬಹುತೇಕ ಆಟೋ ಉತ್ಪಾದನಾ ಕಂಪನಿಗಳು ಪೆಟ್ರೋಲ್ ಮತ್ತು ಡೀಸೆಲ್‌ಗಿಂತಲೂ ಹೆಚ್ಚು ಎಲೆಕ್ಟ್ರಿಕ್ ವಾಹನಗಳ ಅಭಿವೃದ್ದಿ ಮತ್ತು ಮಾರಾಟ ಮೇಲೆ ಹೆಚ್ಚು ಒತ್ತು ನೀಡುತ್ತಿದ್ದು, ಇದರಲ್ಲಿ ಸ್ಟಾರ್ಟ್-ಅಪ್ ಕಂಪನಿಗಳು ಎಲಕ್ಟ್ರಿಕ್ ವಾಹನಗಳ ಅಭಿವೃದ್ದಿಯಲ್ಲಿ ಮಹತ್ವದ ಬದಲಾವಣೆಗೆ ಕಾರಣವಾಗುತ್ತಿವೆ.

ಆಲ್ಟ್ರಾವಯೊಲೆಟ್ ಕೂಡಾ ಆಟೋ ಉದ್ಯಮಕ್ಕೆ ಭರ್ಜರಿಯಾಗಿ ಎಂಟ್ರಿ ನೀಡುವುದರೊಂದಿಗೆ ಎಫ್77 ಸೂಪರ್ ಎಲೆಕ್ಟ್ರಿಕ್ ಬೈಕ್ ಮೂಲಕ ಹಲವು ವಿಶೇಷತೆಗಳಿಗೆ ಕಾರಣವಾಗಿದ್ದು, ಇದೀಗ ಹೊಸ ಬೈಕ್ ಮಾರಾಟಕ್ಕೆ ಪೂರಕವಾದ ಮಾರುಕಟ್ಟೆ ವಿಸ್ತರಣೆ ಮತ್ತು ಮತ್ತಷ್ಟು ಇವಿ ಬೈಕ್‌ಗಳ ಉತ್ಪಾದನೆಗೆ ಟಿವಿಎಸ್ ಮೋಟಾರ್ಸ್ ಕೈಜೋಡಿಸಿರುವುದು ಮತ್ತೊಂದು ಹಂತದ ಬೆಳವಣಿಗೆ ಸಹಕಾರಿಯಾಗಲಿದೆ.

ಆಲ್ಟ್ರಾವಯೊಲೆಟ್ ಕಂಪನಿಯ ಮಾರುಕಟ್ಟೆ ವಿಸ್ತರಣೆ ಮತ್ತು ಹೊಸ ಬೈಕ್ ಅಭಿವೃದ್ದಿಗಾಗಿ ಟಿವಿಎಸ್ ಮೋಟಾರ್ಸ್ ಕಂಪನಿಯು ಸುಮಾರು ರೂ.30 ಕೋಟಿ ಬಂಡವಾಳ ಹೂಡಿಕೆ ಮಾಡಿದ್ದು, ಶೀಘ್ರದಲ್ಲೇ ಹೊಸ ಎಲೆಕ್ಟ್ರಿಕ್ ಉತ್ಪಾದನೆ ಪ್ರಕ್ರಿಯೆಗೆ ಚಾಲನೆ ನೀಡುವುದರ ಜೊತೆಗೆ ಹೊಸ ಉತ್ಪನ್ನಗಳನ್ನು ಅಭಿವೃದ್ದಿಯನ್ನು ಕೈಗೊಳ್ಳಲಿವೆ.

ಈ ಕುರಿತಂತೆ ಮಾತನಾಡಿರುವ ಆಲ್ಟ್ರಾವಯೊಲೆಟ್ ಕಂಪನಿಯ ಸಂಸ್ಥಾಪಕ ಮತ್ತು ತಂತ್ರಜ್ಞಾನ ವಿಭಾಗದ ಮುಖ್ಯಸ್ಥರು ಆಗಿರುವ ನೀರಜ್ ರಾಜಮೋಹನ್ ಅವರು, ಟಿವಿಎಸ್ ಜೊತೆಗೂಡಿ ಹೊಸ ಪ್ರಯಾಣ ಆರಂಭಿಸುತ್ತಿರುವುದರ ಬಗೆಗೆ ಹೆಮ್ಮೆ ವ್ಯಕ್ತಪಡಿಸಿದ್ದಲ್ಲದೆ ಅತ್ಯಾಧುನಿಕ ಸೌಲಭ್ಯವುಳ್ಳ ಬೈಕ್ ಮಾದರಿಯ ಅಭಿವೃದ್ದಿಗೆ ಹೊಸ ಬಲಬಂದಂತಾಗಿದೆ ಎಂದಿದ್ದಾರೆ.

ಜೊತೆಗೆ ಮುಂಬರುವ 2021ರಿಂದಲೇ ಮಾರುಕಟ್ಟೆ ವಿಸ್ತರಣೆ ಮಾಡುವುದರ ಜೊತೆಗೆ ಮತ್ತಷ್ಟು ಹೊಸ ಉತ್ಪನ್ನಗಳನ್ನು ಸಿದ್ದಪಡಿಸುತ್ತಿರುವುದಾಗಿ ಖಚಿತಪಡಿಸಿದ್ದು, ಗ್ರಾಹಕರ ಬೇಡಿಕೆಯೆಂತೆ ವಿವಿಧ ಮಾದರಿಯ ಇವಿ ಬೈಕ್ ಉತ್ಪನ್ನಗಳನ್ನು ಸಿದ್ದಪಡಿಸುವ ಯೋಜನೆ ರೂಪಿಸಲಾಗಿದೆ.

ಆಲ್ಟ್ರಾವಯೊಲೆಟ್ ಕಂಪನಿಯ ಸದ್ಯ ಅನಾವರಣಗೊಳಿಸಿರುವ ಹೊಸ ಎಫ್77 ಸೂಪರ್ ಎಲೆಕ್ಟ್ರಿಕ್ ಬೈಕ್ ಬೆಲೆಯು ವಿವಿಧ ವೆರಿಯೆಂಟ್‌ಗಳಿಗೆ ಅನುಗುಣವಾಗಿ ಆನ್ ರೋಡ್ ಪ್ರಕಾರ ಆರಂಭಿಕ ಆವೃತ್ತಿಗೆ ರೂ.3 ಲಕ್ಷದಿಂದ ಟಾಪ್ ಎಂಡ್ ಮಾದರಿಗೆ ರೂ.3.25 ಲಕ್ಷ ಬೆಲೆ ನಿಗದಿಪಡಿಸಲಾಗಿದೆ.
MOST READ: ಪ್ರತಿ ಚಾರ್ಜ್‌ಗೆ ಗರಿಷ್ಠ 509ಕಿ.ಮೀ ಮೈಲೇಜ್ ನೀಡಲಿದೆ ಸ್ಕೋಡಾ ಎನ್ಯಾಕ್ ಎಲೆಕ್ಟ್ರಿಕ್ ಎಸ್‌ಯುವಿ..!

ಜನಪ್ರಿಯ ಜೆಟ್ ಫೈಟರ್ ಎಫ್77 ವಿನ್ಯಾಸದ ಪ್ರೇರಣೆಯೊಂದಿಗೆ ಎಫ್77 ಎಲೆಕ್ಟ್ರಿಕ್ ಬೈಕ್ ಅಭಿವೃದ್ದಿಗೊಳಿಸಿರುವ ಆಲ್ಟ್ರಾವಯೊಲೆಟ್ ಕಂಪನಿಯು ಬೆಲೆಗೆ ತಕ್ಕಂತೆ ಹೊಸ ಬೈಕಿನಲ್ಲಿ ಹಲವಾರು ಪ್ರೀಮಿಯಂ ಫೀಚರ್ಸ್‌ಗಳನ್ನು ಪರಿಚಯಿಸಿದೆ. ಹೊಸ ಬೈಕಿನಲ್ಲಿ ಆ್ಯಂಗುಲರ್ ಬಾಡಿ ಪ್ಯಾನೆಲ್, ಶಾರ್ಪ್ ಫ್ರಂಟ್ ಫ್ಯಾಸಿಯಾ ಮತ್ತು ಫುಲ್ ಎಲ್ಇಡಿ ಹೆಡ್‌ಲೈಟ್ ಸೌಲಭ್ಯವು ಪ್ರಮುಖ ಆಕರ್ಷಣೆಯಾಗಿದ್ದು, ಕ್ಲಿಪ್ ಹ್ಯಾಂಡ್ ಬಾರ್ ಮತ್ತು ಹಿಂಬದಿಯಲ್ಲಿರುವ ಫುಟ್ ಪೆಗ್ ಸೌಲಭ್ಯವು ಬೈಕ್ ರೈಡಿಂಗ್ ಶೈಲಿಗೆ ಮತ್ತಷ್ಟು ಬಲಿಷ್ಠತೆ ನೀಡುತ್ತವೆ.

ಹೊಸ ಬೈಕಿನಲ್ಲಿ ಇಕೋ, ಸ್ಪೋರ್ಟ್ ಮತ್ತು ಇನ್‌ಸೆನ್ ಎನ್ನುವ ಮೂರು ರೀತಿಯ ರೈಡಿಂಗ್ ಮೋಡ್‌ಗಳನ್ನು ನೀಡಲಾಗಿದ್ದು, 25ಕಿಲೋ ವ್ಯಾಟ್ ಬಿಎಲ್‌ಡಿಸಿ ಮೋಟಾರ್ ಪ್ರೇರಣೆಯೊಂದಿಗೆ 33.5-ಬಿಎಚ್‌ಪಿ ಮೂಲಕ 147ಕಿ.ಮಿ ಟಾಪ್ ಸ್ಪೀಡ್ ಗುರಿಹೊಂದಬಲ್ಲ ಬಲಿಷ್ಠ ಎಲೆಕ್ಟ್ರಿಕ್ ಬೈಕ್ ಮಾದರಿಯಾಗಿದೆ.
MOST READ: ಅತಿ ಕಡಿಮೆ ಬೆಲೆಯ ಈ ರೆಟ್ರೊ ಎಲೆಕ್ಟ್ರಿಕ್ ಬೈಕ್ ಚಾಲನೆಗೆ ಬೇಕಿಲ್ಲ ನೋಂದಣಿ ಮತ್ತು ಡಿಎಲ್..

ಕೇವಲ 50 ನಿಮಿಷಗಳಲ್ಲಿ ಶೇ.80 ಬ್ಯಾಟರಿ ಚಾರ್ಜ್ ಮಾಡಬಹುದಾದ ಡಿಸಿ ಫಾಸ್ಟ್ ಚಾರ್ಜಿಂಗ್ ಸೌಲಭ್ಯವನ್ನು ಹೊಂದಿರುವ ಎಫ್77 ಬೈಕ್ ಪ್ರತಿ ಚಾರ್ಜ್‌ಗೆ ರೈಡಿಂಗ್ ಮೋಡ್ ಆಧಾರದ ಮೇಲೆ ಕನಿಷ್ಠ 140ಕಿ.ಮಿನಿಂದ ಗರಿಷ್ಠ 150 ಕಿ.ಮೀ ಮೈಲೇಜ್ ಹಿಂದಿರುಗಿಸಬಲ್ಲದು.