ವಿಶ್ವದ ಮೊದಲ ಎಲೆಕ್ಟ್ರೋ ಲ್ಯುಮಿನೆಸೆಂಟ್ ಟೆಕ್ನಾಲಜಿ ಹೊಂದಿರುವ ಸೈಕಲ್‌ಗಳನ್ನು ಬಿಡುಗಡೆಗೊಳಿಸಿದ ಅಹೊಯ್

ಅಹೊಯ್ ಕಂಪನಿಯು ವಿಶ್ವದ ಮೊದಲ ಎಲೆಕ್ಟ್ರೋ ಲ್ಯುಮಿನೆಸೆಂಟ್ ತಂತ್ರಜ್ಞಾನ ಆಧಾರಿತ ಬೈಸಿಕಲ್‌ಗಳನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸುವುದಾಗಿ ತಿಳಿಸಿದೆ.

ವಿಶ್ವದ ಮೊದಲ ಎಲೆಕ್ಟ್ರೋ ಲ್ಯುಮಿನೆಸೆಂಟ್ ಟೆಕ್ನಾಲಜಿ ಹೊಂದಿರುವ ಸೈಕಲ್‌ಗಳನ್ನು ಬಿಡುಗಡೆಗೊಳಿಸಿದ ಅಹೊಯ್

ಪೇಟೆಂಟ್ ಪಡೆದ ತಂತ್ರಜ್ಞಾನವನ್ನು ಹೊಂದಿರುವ ಮೇಡ್-ಇನ್-ಇಂಡಿಯಾದ ಹೊಸ ಬೈಸಿಕಲ್ ಸರಿಸಾಟಿಯಿಲ್ಲದ ಸುರಕ್ಷತೆಯೊಂದಿಗೆ ಸೈಕ್ಲಿಂಗ್ ಅನುಭವವನ್ನುನೀಡುತ್ತದೆ. ಸದ್ಯಕ್ಕೆ 200 ಡೀಲರ್'ಗಳನ್ನು ಹೊಂದಿರುವ ಕಂಪನಿಯು ತನ್ನ ಬೈಸಿಕಲ್ ಅನ್ನು ದೇಶಾದ್ಯಂತ ಮಾರಾಟ ಮಾಡಲು ಬಯಸಿದೆ. ರೂ.20,000ಗಳ ಆರಂಭಿಕ ಬೆಲೆಯನ್ನು ಹೊಂದಿರುವ ಅಹೊಯ್ ಸೈಕಲ್ ವ್ಯಾಪಕ ಶ್ರೇಣಿಯನ್ನು ಹೊಂದಿದೆ.

ವಿಶ್ವದ ಮೊದಲ ಎಲೆಕ್ಟ್ರೋ ಲ್ಯುಮಿನೆಸೆಂಟ್ ಟೆಕ್ನಾಲಜಿ ಹೊಂದಿರುವ ಸೈಕಲ್‌ಗಳನ್ನು ಬಿಡುಗಡೆಗೊಳಿಸಿದ ಅಹೊಯ್

ಅಹೊಯ್ ಬೈಸಿಕಲ್‌ಗಳ ಬಗ್ಗೆ ಮಾತನಾಡಿದ ಕಂಪನಿಯ ವ್ಯವಹಾರ ಮುಖ್ಯಸ್ಥ ಸಂದೀಪ್ ಸಿನ್ಹಾ, ಹೊಸ ತಂತ್ರಜ್ಞಾನವನ್ನು ಹೊಂದಿರುವ ಅಹೊಯ್ ಬೈಕ್ ಸಾಟಿಯಿಲ್ಲದ ರಸ್ತೆ ಸುರಕ್ಷತೆಯನ್ನು ನೀಡುತ್ತದೆ.

MOST READ:ರಿಕ್ಷಾ ಕಳೆದುಕೊಂಡವನಿಗೆ ಹೊಸ ರಿಕ್ಷಾ ಕೊಡಿಸಿದ ಆಪದ್ಭಾಂಧವ

ವಿಶ್ವದ ಮೊದಲ ಎಲೆಕ್ಟ್ರೋ ಲ್ಯುಮಿನೆಸೆಂಟ್ ಟೆಕ್ನಾಲಜಿ ಹೊಂದಿರುವ ಸೈಕಲ್‌ಗಳನ್ನು ಬಿಡುಗಡೆಗೊಳಿಸಿದ ಅಹೊಯ್

ಈ ಹೊಸ ತಂತ್ರಜ್ಞಾನವನ್ನು ತರಲು ಗ್ರಾಹಕರ ಸುರಕ್ಷತೆಯೇ ನಮಗೆ ಮುಖ್ಯ ಪ್ರೇರಣೆ ಎಂದು ಹೇಳಿದರು. ಅಹೊಯ್ ಬೈಕ್‌ಗಳನ್ನು ಎಲೆಕ್ಟ್ರೋ ಲ್ಯುಮಿನೆಸೆಂಟ್ ಬಣ್ಣದಿಂದ ಕೋಟ್ ಮಾಡಲಾಗಿದೆ.

ವಿಶ್ವದ ಮೊದಲ ಎಲೆಕ್ಟ್ರೋ ಲ್ಯುಮಿನೆಸೆಂಟ್ ಟೆಕ್ನಾಲಜಿ ಹೊಂದಿರುವ ಸೈಕಲ್‌ಗಳನ್ನು ಬಿಡುಗಡೆಗೊಳಿಸಿದ ಅಹೊಯ್

ಈ ಬಣ್ಣವು ಮಿಂಚು ಹಾದುಹೋದಾಗ ಪ್ರಕಾಶಮಾನವಾದ ಬೆಳಕನ್ನು ನೀಡುತ್ತದೆ. ಅಹೊಯ್ ಬೈಕ್ಸ್ ಈ ಬೈಸಿಕಲ್‌ನಲ್ಲಿ ಕಸ್ಟಮೈಸ್ ಆಯ್ಕೆಯನ್ನು ಸಹ ನೀಡುತ್ತದೆ. ಅಹೊಯ್ ಬೈಕ್ಸ್ ಉದ್ಯಮವು ಪ್ರತಿವರ್ಷ 5% - 7%ನಷ್ಟು ಬೆಳೆಯುತ್ತಿದೆ.

MOST READ:ಶೋಚನೀಯ ಸ್ಥಿತಿಯಲ್ಲಿವೆ ದುಬಾರಿ ಬೆಲೆಯ ಐಷಾರಾಮಿ ರೋಲ್ಸ್ ರಾಯ್ಸ್ ಕಾರುಗಳು

ವಿಶ್ವದ ಮೊದಲ ಎಲೆಕ್ಟ್ರೋ ಲ್ಯುಮಿನೆಸೆಂಟ್ ಟೆಕ್ನಾಲಜಿ ಹೊಂದಿರುವ ಸೈಕಲ್‌ಗಳನ್ನು ಬಿಡುಗಡೆಗೊಳಿಸಿದ ಅಹೊಯ್

ಆದರೆ ಕರೋನಾ ವೈರಸ್ ಸಾಂಕ್ರಾಮಿಕದಿಂದಾಗಿ ಈ ಪ್ರಮಾಣವು 15% - 20%ನಷ್ಟು ಬೆಳೆಯುವ ನಿರೀಕ್ಷೆಗಳಿವೆ ಎಂದು ಆಲ್ ಇಂಡಿಯಾ ಸೈಕಲ್ ತಯಾರಕರ ಸಂಘವು ತಿಳಿಸಿದೆ.

ವಿಶ್ವದ ಮೊದಲ ಎಲೆಕ್ಟ್ರೋ ಲ್ಯುಮಿನೆಸೆಂಟ್ ಟೆಕ್ನಾಲಜಿ ಹೊಂದಿರುವ ಸೈಕಲ್‌ಗಳನ್ನು ಬಿಡುಗಡೆಗೊಳಿಸಿದ ಅಹೊಯ್

ಮೊದಲ ಬಾರಿಗೆ ಸೈಕಲ್‌ ಬಳಸುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವುದೇ ಇದಕ್ಕೆ ಮುಖ್ಯ ಕಾರಣ. ಬೈಸಿಕಲ್ ಉದ್ಯಮದ ಮಾಹಿತಿಯ ಪ್ರಕಾರ, ಭಾರತವು ವಿಶ್ವದ ಎರಡನೇ ಅತಿ ದೊಡ್ಡ ಸೈಕಲ್‌ ಉತ್ಪಾದಕ ರಾಷ್ಟ್ರವಾಗಿದೆ.

MOSTREAD: ಇನ್ನು ಮುಂದೆ ಈ ನಗರಗಳಲ್ಲಿ ಡೀಸೆಲ್ ವಾಹನಗಳನ್ನು ಮಾರಾಟ ಮಾಡುವಂತಿಲ್ಲ

ವಿಶ್ವದ ಮೊದಲ ಎಲೆಕ್ಟ್ರೋ ಲ್ಯುಮಿನೆಸೆಂಟ್ ಟೆಕ್ನಾಲಜಿ ಹೊಂದಿರುವ ಸೈಕಲ್‌ಗಳನ್ನು ಬಿಡುಗಡೆಗೊಳಿಸಿದ ಅಹೊಯ್

ಭಾರತವು ಬೈಸಿಕಲ್‌ಗಳ ಮೂರನೇ ಅತಿದೊಡ್ಡ ಗ್ರಾಹಕ ದೇಶವಾಗಿದೆ. ಭಾರತದಲ್ಲಿ ಪ್ರತಿವರ್ಷ 2.20 ಲಕ್ಷ ಯುನಿಟ್ ಸೈಕಲ್‌ಗಳನ್ನು ಉತ್ಪಾದಿಸಲಾಗುತ್ತದೆ. ದೇಶದ ಬೈಸಿಕಲ್ ಉದ್ಯಮವು ವಾರ್ಷಿಕ ರೂ.7,000 ಕೋಟಿಗಳ ವಹಿವಾಟು ನಡೆಸುತ್ತದೆ.

ವಿಶ್ವದ ಮೊದಲ ಎಲೆಕ್ಟ್ರೋ ಲ್ಯುಮಿನೆಸೆಂಟ್ ಟೆಕ್ನಾಲಜಿ ಹೊಂದಿರುವ ಸೈಕಲ್‌ಗಳನ್ನು ಬಿಡುಗಡೆಗೊಳಿಸಿದ ಅಹೊಯ್

ಬೈಸಿಕಲ್ ಉದ್ಯಮದ ಅಂಕಿಅಂಶಗಳ ಪ್ರಕಾರ, 2018-19ರಲ್ಲಿ 2 ಕೋಟಿಗೂ ಹೆಚ್ಚು ಸೈಕಲ್‌ಗಳನ್ನು ಮಾರಾಟ ಮಾಡಲಾಗಿದ್ದರೆ, 2019-20ರಲ್ಲಿ 1.80 ಕೋಟಿ ಸೈಕಲ್‌ಗಳನ್ನು ಮಾರಾಟ ಮಾಡಲಾಗಿದೆ.

MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

ವಿಶ್ವದ ಮೊದಲ ಎಲೆಕ್ಟ್ರೋ ಲ್ಯುಮಿನೆಸೆಂಟ್ ಟೆಕ್ನಾಲಜಿ ಹೊಂದಿರುವ ಸೈಕಲ್‌ಗಳನ್ನು ಬಿಡುಗಡೆಗೊಳಿಸಿದ ಅಹೊಯ್

ಭಾರತೀಯ ಬೈಸಿಕಲ್ ಉದ್ಯಮದ ಬಗ್ಗೆ ಹೇಳುವುದಾದರೆ ಹೀರೋ ಸೈಕಲ್ ಕಂಪನಿಯು ಭಾರತದ ಅತಿದೊಡ್ಡ ಸೈಕಲ್‌ ತಯಾರಕ ಕಂಪನಿಯಾಗಿದೆ.

ವಿಶ್ವದ ಮೊದಲ ಎಲೆಕ್ಟ್ರೋ ಲ್ಯುಮಿನೆಸೆಂಟ್ ಟೆಕ್ನಾಲಜಿ ಹೊಂದಿರುವ ಸೈಕಲ್‌ಗಳನ್ನು ಬಿಡುಗಡೆಗೊಳಿಸಿದ ಅಹೊಯ್

ಹೀರೋ ಸೈಕಲ್ಸ್ ಪ್ರತಿದಿನ 19,000 ಸೈಕಲ್‌ಗಳನ್ನು ಉತ್ಪಾದಿಸುತ್ತದೆ. ಕಂಪನಿಯ ಸೈಕಲ್‌ಗಳನ್ನು ವಿಶ್ವದ 70ಕ್ಕೂ ಹೆಚ್ಚು ದೇಶಗಳಲ್ಲಿ ಮಾರಾಟ ಮಾಡಲಾಗುತ್ತದೆ. ಹೀರೋ ಸೈಕಲ್ಸ್ ಹೀರೋ ಮೋಟಾರ್ ಕಂಪನಿಯ ಅಂಗಸಂಸ್ಥೆಯಾಗಿದೆ.

Most Read Articles

Kannada
English summary
Ahoy bikes launches world's first luminous technology based bicycles in India. Read in Kannada.
Story first published: Monday, February 15, 2021, 13:46 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X