ಗುಜರಾತ್‌ನಲ್ಲಿ ಎಥರ್ ಇವಿ ಸ್ಕೂಟರ್ ಖರೀದಿಸುವ ಗ್ರಾಹಕರಿಗೆ ರೂ.33 ಸಾವಿರ ಸಬ್ಸಡಿ

ಕೇಂದ್ರ ಸರ್ಕಾರವು ಕಳೆದ ವಾರವಷ್ಟೇ ಫೇಮ್ 2 ಯೋಜನೆಯ ತಿದ್ದುಪಡಿಯ ಮೂಲಕ ಇವಿ ದ್ವಿಚಕ್ರ ವಾಹನಗಳಿಗೆ ಭರ್ಜರಿ ಸಬ್ಸಡಿ ನೀಡುತ್ತಿದ್ದು, ಕೇಂದ್ರ ಸರ್ಕಾರದ ಹೊಸ ಸಬ್ಸಡಿ ಯೋಜನೆ ಘೋಷಣೆ ಬೆನ್ನಲ್ಲೇ ಗುಜರಾತ್ ಸರ್ಕಾರವು ಹೊಸ ಎಲೆಕ್ಟ್ರಿಕ್ ವಾಹನ ನೀತಿ ಅಳವಡಿಸಿಕೊಂಡಿದೆ.

ಗುಜರಾತ್‌ನಲ್ಲಿ ಎಥರ್ ಇವಿ ಸ್ಕೂಟರ್ ಖರೀದಿಸುವ ಗ್ರಾಹಕರಿಗೆ ರೂ.33 ಸಾವಿರ ಸಬ್ಸಡಿ

ಇಂಧನಗಳ ಬೆಲೆ ಏರಿಕೆ ಮತ್ತು ಮಾಲಿನ್ಯ ಹೆಚ್ಚಳದಿಂದಾಗಿ ಎಲೆಕ್ಟ್ರಿಕ್ ವಾಹನಗಳ ಬಳಕೆಗೆ ಹೆಚ್ಚಿನ ಒತ್ತು ನೀಡಲಾಗುತ್ತಿದ್ದು, ಕೇಂದ್ರ ಸರ್ಕಾರವು ಸಬ್ಸಡಿ ಯೋಜನೆಯೊಂದಿಗೆ ಇವಿ ವಾಹನಗಳ ಬಳಕೆಯನ್ನು ಉತ್ತೇಜಿಸಲಾಗುತ್ತಿದೆ. ಕೇಂದ್ರ ಸರ್ಕಾರ ಜೊತೆ ವಿವಿಧ ರಾಜ್ಯ ಸರ್ಕಾರಗಳು ಸಹ ತಮ್ಮದೇ ಎಲೆಕ್ಟ್ರಿಕ್ ವಾಹನ ನೀತಿಯನ್ನು ಅಳವಡಿಸಿಕೊಳ್ಳುತ್ತಿದ್ದು, ಇವಿ ವಾಹನ ಮಾಲೀಕರಿಗೆ ಹೆಚ್ಚಿನ ಮಟ್ಟದ ಪ್ರೋತ್ಸಾಹ ಲಭ್ಯವಾಗಿರುವುದು ಹೊಸ ಬದಲಾವಣೆಗೆ ಕಾರಣವಾಗಿದೆ.

ಗುಜರಾತ್‌ನಲ್ಲಿ ಎಥರ್ ಇವಿ ಸ್ಕೂಟರ್ ಖರೀದಿಸುವ ಗ್ರಾಹಕರಿಗೆ ರೂ.33 ಸಾವಿರ ಸಬ್ಸಡಿ

ಪರಿಸರ ಸ್ನೇಹಿ ಎಲೆಕ್ಟ್ರಿಕ್ ವಾಹನಗಳತ್ತ ಸೆಳೆಯಲು ಕೇಂದ್ರ ಸರ್ಕಾರವು ಫೇಮ್ 2 ಸಬ್ಸಡಿ ಯೋಜನೆಯಡಿ ಎಲೆಕ್ಟ್ರಿಕ್ ವಾಹನಗಳ ಉತ್ಪಾದಕ ಕಂಪನಿಗಳಿಗೆ ಮತ್ತು ಖರೀದಿ ಮಾಡುವ ಗ್ರಾಹಕರಿಗೂ ಗರಿಷ್ಠ ಧನಸಹಾಯ ಒದಗಿಸುತ್ತಿದ್ದು, ಕೇಂದ್ರ ಸರ್ಕಾರದ ಸಬ್ಸಡಿ ಯೋಜನೆಯೊಂದಿಗೆ ಗುಜರಾತ್ ಸರ್ಕಾರವು ಇವಿ ವಾಹನ ನೀತಿ ಜಾರಿಗೆ ತಂದಿದೆ.

ಗುಜರಾತ್‌ನಲ್ಲಿ ಎಥರ್ ಇವಿ ಸ್ಕೂಟರ್ ಖರೀದಿಸುವ ಗ್ರಾಹಕರಿಗೆ ರೂ.33 ಸಾವಿರ ಸಬ್ಸಡಿ

ಕೇಂದ್ರ ಸರ್ಕಾರದ ಫೇಮ್ 2 ಯೋಜನೆಯ ಸಬ್ಸಡಿ ಜೊತೆಗೆ ವಿವಿಧ ರಾಜ್ಯದ ಸರ್ಕಾರಗಳು ಸಹ ಇವಿ ವಾಹನಗಳ ಖರೀದಿ ಮೇಲೆ ಕೆಲವು ವಿನಾಯ್ತಿಗಳನ್ನು ನೀಡುತ್ತಿದ್ದು, ಗುಜುರಾತ್ ಸರ್ಕಾರವು ಹೊಸ ಇವಿ ನೀತಿ ಘೋಷಣೆಯೊಂದಿಗೆ ಇವಿ ವಾಹನಗಳನ್ನು ಖರೀದಿಸುವ ಗ್ರಾಹಕರಿಗಾಗಿ ಮುಂದಿನ ನಾಲ್ಕು ವರ್ಷಗಳ ಅವಧಿಯಲ್ಲಿ ರೂ. 870 ಕೋಟಿ ಸಬ್ಸಡಿ ವಿತರಿಸಲು ನಿರ್ಧರಿಸಿದೆ.

ಗುಜರಾತ್‌ನಲ್ಲಿ ಎಥರ್ ಇವಿ ಸ್ಕೂಟರ್ ಖರೀದಿಸುವ ಗ್ರಾಹಕರಿಗೆ ರೂ.33 ಸಾವಿರ ಸಬ್ಸಡಿ

ಗುಜರಾತ್ ಸರ್ಕಾರವು ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳಿಗೆ ರೂ.5 ಸಾವಿರದಿಂದ ರೂ.20,000ವರೆಗೆ ಮತ್ತು ಎಲೆಕ್ಟ್ರಿಕ್ ಕಾರುಗಳಿಗೆ ರೂ.1.50 ಲಕ್ಷಗಳವರೆಗೆ ಸಬ್ಸಡಿ ನೀಡುತ್ತಿದ್ದು, ಗುಜರಾತ್‌ನಲ್ಲಿ ಇವಿ ವಾಹನ ಖರೀದಿಸುವ ಗ್ರಾಹಕರಿಗೆ ರಾಜ್ಯ ಸರ್ಕಾರದ ಸಬ್ಸಡಿ ಸೌಲಭ್ಯ ಜೊತೆಗೆ ಕೇಂದ್ರ ಸರ್ಕಾರದ ಸಬ್ಸಡಿ ಲಭ್ಯವಿದೆ.

ಗುಜರಾತ್‌ನಲ್ಲಿ ಎಥರ್ ಇವಿ ಸ್ಕೂಟರ್ ಖರೀದಿಸುವ ಗ್ರಾಹಕರಿಗೆ ರೂ.33 ಸಾವಿರ ಸಬ್ಸಡಿ

ಗುಜರಾತ್ ಸರ್ಕಾರದ ಹೊಸ ಇವಿ ಪಾಲಿಸಿ ಜಾರಿ ನಂತರ ಎಥರ್ ಎನರ್ಜಿ ಎಲೆಕ್ಟ್ರಿಕ್ ಬೈಕ್‌ಗಳ ಬೆಲೆಯಲ್ಲಿ ಸಾಕಷ್ಟು ಇಳಿಕೆಯಾಗಿದ್ದು, ಕೇಂದ್ರ ಸರ್ಕಾರದ ಸಬ್ಸಡಿ ಯೋಜನೆ ಅಡಿಯಲ್ಲಿ ರೂ. 15 ಸಾವಿರ ಬೆಲೆ ಕಡಿತ ಮಾಡಿದ್ದ ಎಥರ್ ಕಂಪನಿಯು ಇದೀಗ ಗುಜರಾತ್ ಸರ್ಕಾರದ ಸಬ್ಸಡಿ ಯೋಜನೆ ಅಡಿಯಲ್ಲಿ ಇದೀಗ ಮತ್ತೆ ರೂ. 18 ಸಾವಿರ ತನಕ ಬೆಲೆ ಕಡಿತ ಮಾಡಿದೆ.

ಗುಜರಾತ್‌ನಲ್ಲಿ ಎಥರ್ ಇವಿ ಸ್ಕೂಟರ್ ಖರೀದಿಸುವ ಗ್ರಾಹಕರಿಗೆ ರೂ.33 ಸಾವಿರ ಸಬ್ಸಡಿ

ಗುಜರಾತ್ ಸರ್ಕಾರದ ಸಬ್ಸಡಿ ಯೋಜನೆಯಡಿ ಎಥರ್ ಸ್ಕೂಟರ್ ಖರೀದಿಸುವ ಗ್ರಾಹಕರಿಗೆ ಒಟ್ಟು ರೂ.33 ಸಾವಿರ ಸಬ್ಸಡಿ ದೊರಲಿದ್ದು, ಗುಜುರಾತ್ ಸರ್ಕಾರದ ಸಬ್ಸಡಿ ಹೊರತುಪಡಿಸಿ ಕೇಂದ್ರ ಸರ್ಕಾರದ ಸಬ್ಸಡಿಯಲ್ಲಿ ಎಥರ್ ಸ್ಕೂಟರ್ ಖರೀದಿಸುವ ಗ್ರಾಹಕರಿಗೆ ರೂ. 15 ಸಾವಿರ ಸಬ್ಸಡಿ ಲಭ್ಯವಿರಲಿದೆ.

ಗುಜರಾತ್‌ನಲ್ಲಿ ಎಥರ್ ಇವಿ ಸ್ಕೂಟರ್ ಖರೀದಿಸುವ ಗ್ರಾಹಕರಿಗೆ ರೂ.33 ಸಾವಿರ ಸಬ್ಸಡಿ

ಕೇಂದ್ರ ಸರ್ಕಾರವು ಫೇಮ್ 2 ಯೋಜನೆಯಡಿಯಲ್ಲಿ ಈಗಾಗಲೇ ಲಭ್ಯವಿರುವ ಸಬ್ಸಡಿ ಪ್ರಮಾಣವನ್ನು ದ್ವಿಚಕ್ರ ವಾಹನಗಳಿಗಾಗಿ ಶೇ.50 ರಷ್ಟು ಹೆಚ್ಚಳ ಮಾಡಲಾಗಿದ್ದು, ಎಥರ್ ಕಂಪನಿಯು ಹೊಸ ಸಬ್ಸಡಿ ಮಾರ್ಗಸೂಚಿಯೆಂತೆ ಎಲ್ಲಾ ರಾಜ್ಯಗಳಿಗೆ ಅನ್ವಯವಾಗುವಂತೆ 450ಎಕ್ಸ್ ಸ್ಕೂಟರ್ ಬೆಲೆಯಲ್ಲಿ ರೂ. 15 ಸಾವಿರದಷ್ಟು ಇಳಿಕೆ ಮಾಡಿದೆ.

ಗುಜರಾತ್‌ನಲ್ಲಿ ಎಥರ್ ಇವಿ ಸ್ಕೂಟರ್ ಖರೀದಿಸುವ ಗ್ರಾಹಕರಿಗೆ ರೂ.33 ಸಾವಿರ ಸಬ್ಸಡಿ

ಬೆಲೆ ಪರಿಷ್ಕರಣೆ ನಂತರ ಎಥರ್ 450ಎಕ್ಸ್ ಸ್ಕೂಟರ್ ಬೆಲೆಯು ಎಕ್ಸ್‌ಶೋರೂಂ ಪ್ರಕಾರ ರೂ. 1.59 ಲಕ್ಷದಿಂದ ರೂ. 1.44 ಲಕ್ಷಕ್ಕೆ ಇಳಿಕೆಯಾಗಿದ್ದು, ಕೇಂದ್ರ ಸರ್ಕಾರದ ಹೊಸ ನಿರ್ಧಾರವನ್ನು ಸ್ವಾಗತಿಸಿರುವ ಎಥರ್ ಕಂಪನಿಯು ಈ ವರ್ಷಾಂತ್ಯಕ್ಕೆ ದೇಶದ 30 ಪ್ರಮುಖ ನಗರಗಳಲ್ಲಿಇವಿ ಮಾರಾಟ ಮಳಿಗೆಗಳನ್ನು ತೆರೆಯುವ ಸಿದ್ದತೆಯಲ್ಲಿದೆ.

Most Read Articles

Kannada
English summary
Ather Electric Scooters Price Cuts In Gujarat. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X