ಭಾರತದಲ್ಲಿ ಮಾರಾಟವಾಗುತ್ತಿರುವ ಕಡಿಮೆ ಬೆಲೆಯ ಜನಪ್ರಿಯ ಬೈಕ್‌ಗಳು

ಇತ್ತೀಚಿನ ದಿನಗಳಲ್ಲಿ ದೇಶಿಯ ಮಾರುಕಟ್ಟೆಯಲ್ಲಿ ವಾಹನಗಳ ಬೆಲೆಗಳು ಸ್ಥಿರವಾಗಿ ಏರುತ್ತಿವೆ. ಅದು ದ್ವಿಚಕ್ರ ವಾಹನ ಅಥವಾ ಕಾರುಗಳ ಬೆಲೆಯಾಗಿರಬಹುದು. ಇದಕ್ಕೆ ಮುಖ್ಯ ಕಾರಣವೆಂದರೆ ಉಕ್ಕಿನ ಜೊತೆ ಕಚ್ಚಾ ವಸ್ತುಗಳ ಬೆಲೆಯು ಹೆಚ್ಚಾಗಿರುವುದು.

ಭಾರತದಲ್ಲಿ ಮಾರಾಟವಾಗುತ್ತಿರುವ ಕಡಿಮೆ ಬೆಲೆಯ ಜನಪ್ರಿಯ ಬೈಕ್‌ಗಳು

ಆದರೂ ಭಾರತದಲ್ಲಿ ಕಡಿಮೆ ಅಥವಾ ಕೈಗೆಟುವ ದರದಲ್ಲಿ ಕೆಲವು ಜನಪ್ರಿಯ ಬೈಕ್‌ಗಳ ಆಯ್ಕೆಗಳಿವೆ. ಆದರೆ ಮಧ್ಯಮ ಮತ್ತು ಕೆಳ ವರ್ಗದ ಜನರಿಗೆ ಯಾವ ಬೈಕ್ ಖರೀದಿಸಬೇಕೆಂಬ ಗೊಂದಲವಿರುತ್ತದೆ. ಯಾಕೆಂದರೆ ದೇಶಿಯ ಮಾರುಕಟ್ಟೆಯಲ್ಲಿ ಸೂಪರ್ ಬೈಕ್‌ಗಳು ಸೇರಿದಂತೆ ಸಾಕಷ್ಟು ಆಯ್ಕೆಗಳಿವೆ. ಇದರಿಂದಾಗಿ ಕಡಿಮೆ ಬೆಲೆ, ಉತ್ತಮ ಮೈಲೇಜ್ ಮತ್ತು ಕಡಿಮೆ ನಿರ್ವಹಣೆ ವೆಚ್ಚದ ಜನಪ್ರಿಯ ಬೈಕ್‌ಗಳ ಮಾಹಿತಿ ಇಲ್ಲಿದೆ.

ಭಾರತದಲ್ಲಿ ಮಾರಾಟವಾಗುತ್ತಿರುವ ಕಡಿಮೆ ಬೆಲೆಯ ಜನಪ್ರಿಯ ಬೈಕ್‌ಗಳು

ಬಜಾಜ್ ಸಿಟಿ100

ಬಜಾಜ್ ಆಟೋ ಕಂಪನಿಯ ಬಜಾಜ್ ಸಿಟಿ100 ಉತ್ತಮ ಬೇಡಿಕೆಯ ಬೈಕ್ ಆಗಿದೆ. ಈ ಬೈಕ್ ಕ್ ಸ್ಟಾರ್ಟ್ (ಕೆಎಸ್) ಮತ್ತು ಎಲೆಕ್ಟ್ರಿಕ್ ಸ್ಟಾರ್ಟ್ (ಇಎಸ್) ಎಂಬ ಎರಡು ರೂಪಾಂತರಗಳಲ್ಲಿ ಲಭ್ಯವಿದೆ. ಬಜಾಜ್ ಸಿಟಿ 100 ಬೈಕಿನ ಆರಂಭಿಕ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ.47,654 ಗಳಾಗಿದೆ.

MOST READ: ಭಾರತದಲ್ಲಿ ಕೈಗೆಟುಕುವ ದರದಲ್ಲಿ ಸಿಗುವ ಸ್ಕೂಟರ್‌ಗಳಿವು

ಭಾರತದಲ್ಲಿ ಮಾರಾಟವಾಗುತ್ತಿರುವ ಕಡಿಮೆ ಬೆಲೆಯ ಜನಪ್ರಿಯ ಬೈಕ್‌ಗಳು

ಬಜಾಜ್ ಸಿಟಿ 100 ಬೈಕಿನಲ್ಲಿ ಏರ್-ಕೂಲ್ಡ್, ಸಿಂಗಲ್ ಸಿಲಿಂಡರ್, ಫ್ಯೂಯಲ್ ಇಂಜೆಕ್ಟೆಡ್ 102 ಸಿಸಿ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 7,500 ಆರ್‌ಪಿಎಂನಲ್ಲಿ 7.5 ಬಿಹೆಚ್‌ಪಿ ಪವರ್ ಮತ್ತು 5,500 ಆರ್‌ಪಿಎಂನಲ್ಲಿ 8.34 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ಅನ್ನು 4-ಸ್ಪೀಡ್ ಗೇರ್ ಬಾಕ್ಸ್ ಅನ್ನು ಸ್ಟ್ಯಾಂಡರ್ಡ್ ಆಗಿ ಜೋಡಿಸಲಾಗಿದೆ. ಈ ಬೈಕ್ 90 ಕಿಲೋಮೀಟರ್ ಮೈಲೇಜ್ ಅನ್ನು ನೀಡುತ್ತದೆ ಎಂದು ಹೇಳಲಾಗುತ್ತಿದೆ.

ಭಾರತದಲ್ಲಿ ಮಾರಾಟವಾಗುತ್ತಿರುವ ಕಡಿಮೆ ಬೆಲೆಯ ಜನಪ್ರಿಯ ಬೈಕ್‌ಗಳು

ಹೀರೋ ಹೆಚ್‌ಎಫ್ ಡಿಲಕ್ಸ್

ಹೀರೋ ಮೊಟೊಕಾರ್ಪ್‌ನ ಸಾಲಿನಲ್ಲಿ ಹೆಚ್‌ಎಫ್ ಡಿಲಕ್ಸ್ ಅತ್ಯಂತ ಒಳ್ಳೆಯ ಬೈಕ್‌ಗಳಲ್ಲಿ ಒಂದಾಗಿದೆ. ಈ ಬೈಕ್ ಸ್ಪೋಕ್ ವ್ಹೀಲ್‌ಗಳೊಂದಿಗೆ ಕಿಕ್ ಸ್ಟಾರ್ಟ್, ಕಿಕ್ ಸ್ಟಾರ್ಟ್ (ಅಲಾಯ್ ವ್ಹೀಲ್ಸ್), ಸೆಲ್ಫ್ ಸ್ಟಾರ್ಟ್, ಮತ್ತು ಐ3ಎಸ್‌ನೊಂದಿಗೆ ಸೆಲ್ಫ್ ಸ್ಟಾರ್ಟ್ ಎಂಬ ರೂಪಾಂತರಗಳಲ್ಲಿ ಲಭ್ಯವಿದೆ.

MOST READ: ಹೊಸ ಹೀರೋ ಎಕ್ಸ್‌ಟ್ರಿಮ್ 160ಆರ್ 100 ಮಿಲಿಯನ್ ಎಡಿಷನ್ ಬಿಡುಗಡೆ

ಭಾರತದಲ್ಲಿ ಮಾರಾಟವಾಗುತ್ತಿರುವ ಕಡಿಮೆ ಬೆಲೆಯ ಜನಪ್ರಿಯ ಬೈಕ್‌ಗಳು

ಹೀರೋ ಹೆಚ್‌ಎಫ್ ಡಿಲಕ್ಸ್ ಬೈಕಿನ ಆರಂಭಿಕ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ.50,200 ಗಳಾಗಿದೆ. ಈ ಹೀರೋ ಹೆಚ್‌ಎಫ್ ಡೀಲಕ್ಸ್ ಬೈಕಿನಲ್ಲಿ 97.2 ಸಿಸಿಯ ಸಿಂಗಲ್ ಸಿಲಿಂಡರ್ ಫ್ಯೂಯಲ್ ಇಂಜೆಕ್ಟ್ ಎಂಜಿನ್ ಅಳವಡಿಸಲಾಗಿದೆ. ಈ ಎಂಜಿನ್ 8000 ಆರ್‌ಪಿಎಂನಲ್ಲಿ 8.02 ಬಿಹೆಚ್‌ಪಿ ಪವರ್ ಹಾಗೂ 6000 ಆರ್‌ಪಿಎಂನಲ್ಲಿ 8.05 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಬೈಕಿನಲ್ಲಿ 4-ಸ್ಪೀಡಿನ ಸಾಮಾನ್ಯ ಗೇರ್‌ಬಾಕ್ಸ್ ನೀಡಲಾಗಿದೆ.

ಭಾರತದಲ್ಲಿ ಮಾರಾಟವಾಗುತ್ತಿರುವ ಕಡಿಮೆ ಬೆಲೆಯ ಜನಪ್ರಿಯ ಬೈಕ್‌ಗಳು

ಬಜಾಜ್ ಪ್ಲಾಟಿನಾ 100

ಹೊಸ ಬಜಾಜ್ ಪ್ಲಾಟಿನಾ 100 ಹಲವಾರು ಫೀಚರ್ ಮತ್ತು ಉಪಕರಣಗಳನ್ನು ಒಳಗೊಂಡಿದೆ. ಜೊತೆಗೆ ರಿಫ್ರೆಶ್ ಸ್ಟೈಲಿಂಗ್ ಅಂಶಗಳೂ ಸಹ ಇವೆ. ಈ ಹೊಸ ಬಜಾಜ್ ಪ್ಲಾಟಿನಾ 100 ಕೆಎಸ್ ಬೈಕ್ ಸರಳ ವಿನ್ಯಾಸದೊಂದಿಗೆ ನೋಡಲು ಆಕರ್ಷಕವಾಗಿದೆ. ಬಜಾಜ್ ಪ್ಲಾಟಿನಾ ಬೈಕ್ ಕೈಗೆಟುಕುವ ದರ, ಅಧಿಕ ಮೈಲೇಜ್ ಮತ್ತು ಉತ್ತಮ ಕಂಫರ್ಟ್ ಗಾಗಿ ಹೆಚ್ಚು ಜನಪ್ರಿಯತೆಯನ್ನು ಗಳಿಸಿದೆ.

MOST READ: ಬಿಡುಗಡೆಯಾಯ್ತು ಹೊಸ ಟ್ರಯಂಫ್ ಬೊನೊವೆಲ್ಲಿ ಸ್ಪೀಡ್‍‍ಮಾಸ್ಟರ್ ಬೈಕ್

ಭಾರತದಲ್ಲಿ ಮಾರಾಟವಾಗುತ್ತಿರುವ ಕಡಿಮೆ ಬೆಲೆಯ ಜನಪ್ರಿಯ ಬೈಕ್‌ಗಳು

ಬಜಾಜ್ ಪ್ಲಾಟಿನಾ 100 ಬೈಕಿನ ಆರಂಭಿಕ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ.52,166 ಗಳಾಗಿದೆ. ಹೊಸ ಬಜಾಜ್ ಪ್ಲಾಟಿನಾ 100 ಬೈಕಿನಲ್ಲಿ 102 ಸಿಸಿಯ ಏರ್-ಕೂಲ್ಡ್ ಸಿಂಗಲ್ ಸಿಲಿಂಡರ್ ಎಂಜಿನ್ ಅಳವಡಿಸಲಾಗಿದೆ. ಈ ಎಂಜಿನ್ 7.7 ಬಿಹೆಚ್‌ಪಿ ಪವರ್ ಹಾಗೂ 8.34 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್ ನೊಂದಿಗೆ 4-ಸ್ಪೀಡಿನ ಗೇರ್‌ಬಾಕ್ಸ್ ಅನ್ನು ಜೋಡಿಸಲಾಗಿದೆ.

ಭಾರತದಲ್ಲಿ ಮಾರಾಟವಾಗುತ್ತಿರುವ ಕಡಿಮೆ ಬೆಲೆಯ ಜನಪ್ರಿಯ ಬೈಕ್‌ಗಳು

ಟಿವಿಎಸ್ ಸ್ಪೋರ್ಟ್

ಬಜಾಜ್ ಸಿಟಿ 100 ಬೈಕಿನಂತೆ ಟಿವಿಎಸ್ ಸ್ಪೋರ್ಟ್ ಅನ್ನು ಕಿಕ್ ಸ್ಟಾರ್ಟ್ ಮತ್ತು ಎಲೆಕ್ಟ್ರಿಕ್ ಸ್ಟಾರ್ಟ್ ಎಂಬ ಎರಡು ರೂಪಾಂತರಗಳಲ್ಲಿ ನೀಡಲಾಗುತ್ತದೆ. ವಿಎಸ್ ಸ್ಪೋರ್ಟ್ ಬೈಕಿನ ಬೆಲೆಯು ರೂ.62,950 ಗಳಾಗಿದೆ.

ಭಾರತದಲ್ಲಿ ಮಾರಾಟವಾಗುತ್ತಿರುವ ಕಡಿಮೆ ಬೆಲೆಯ ಜನಪ್ರಿಯ ಬೈಕ್‌ಗಳು

ಟಿವಿಎಸ್ ಸ್ಪೋರ್ಟ್ ಬೈಕಿನಲ್ಲಿ ಬಿಎಸ್-6, 109.7 ಸಿಸಿ, ಸಿಂಗಲ್ ಸಿಲಿಂಡರ್, ಏರ್-ಕೂಲ್ಡ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 8.17 ಬಿಹೆಚ್‌ಪಿ ಪವರ್ ಮತ್ತು 8.7 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಭಾರತದಲ್ಲಿ ಮಾರಾಟವಾಗುತ್ತಿರುವ ಕಡಿಮೆ ಬೆಲೆಯ ಜನಪ್ರಿಯ ಬೈಕ್‌ಗಳು

ಹೋಂಡಾ ಸಿಡಿ 110 ಡ್ರೀಮ್

ಹೋಂಡಾ ಸಿಡಿ 110 ಡ್ರೀಮ್ ಬೈಕ್ ಸ್ಟ್ಯಾಂಡರ್ಡ್ ಮತ್ತು ಡಿಲಕ್ಸ್ ಎಂಬ ಎರಡು ರೂಪಾಂತರಗಳಲ್ಲಿ ಲಭ್ಯವಿದೆ. ಈ ಎರಡು ರೂಪಾಂತರಗಳು ಹಲವಾರು ನವೀಕರಣಗಳು ಮತ್ತು ಹಲವಾರು ಫೀಚರ್ ಗಳಿಂದ ಕೂಡಿದೆ. ಇದು ಹಿಂದಿನ ಮಾದರಿಗಿಂತ ಹೆಚ್ಚು ಆಕರ್ಷಕ ಎಂಟ್ರಿ ಲೆವೆಲ್ ಬೈಕ್ ಆಗಿದೆ. ಹೋಂಡಾ ಸಿಡಿ 110 ಡ್ರೀಮ್ ಬೈಕಿನ ಆರಂಭಿಕ ಬೆಲೆಯು ದೆಹಲಿ ಎಕ್ಸ್ ಶೋರೂಂ ಪ್ರಕಾರ ರೂ.64,508 ಗಳಾಗಿದೆ

ಭಾರತದಲ್ಲಿ ಮಾರಾಟವಾಗುತ್ತಿರುವ ಕಡಿಮೆ ಬೆಲೆಯ ಜನಪ್ರಿಯ ಬೈಕ್‌ಗಳು

ಹೊಸ ಹೋಂಡಾ ಸಿಡಿ 110 ಬೈಕಿನಲ್ಲಿ 110 ಸಿಸಿ ಏರ್-ಕೂಲ್ಡ್ ಸಿಂಗಲ್ ಸಿಲಿಂಡರ್ ಎಂಜಿನ್‌ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 7,500 ಆರ್‌ಪಿಎಂನಲ್ಲಿ 8.97 ಬಿಹೆಚ್‍ಪಿ ಪವರ್ ಮತ್ತು 5,500 ಆರ್‌ಪಿಎಂನಲ್ಲಿ 9.30 ಎನ್‌ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ಅನ್ನು 4-ಸ್ಪೀಡ್ ಗೇರ್ ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ.

Most Read Articles

Kannada
English summary
Top 5 Most Affordable New Motorcycles. Read In Kannada.
Story first published: Wednesday, March 31, 2021, 18:46 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X