ಭಾರತದಲ್ಲಿ ಹೊಸ ಬಿಎಂಡಬ್ಲ್ಯು ಎಸ್1000ಆರ್ ಬೈಕ್ ವಿತರಣೆ ಆರಂಭ

ಐಷಾರಾಮಿ ದ್ವಿಚಕ್ರ ವಾಹನ ತಯಾರಕ ಕಂಪನಿಯಾದ ಬಿಎಂಡಬ್ಲ್ಯು ಮೋಟೊರಾಡ್ ತನ್ನ ಹೊಸ 2021ರ ಎಸ್1000ಆರ್ ಬೈಕನ್ನು ಇತ್ತೀಚೆಗೆ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿತ್ತು. ಈ ಹೊಸ ಬಿಎಂಡಬ್ಲ್ಯು ಎಸ್1000ಆರ್ ಬೈಕ್ ನೇಕೆಡ್ ರೋಡ್‌ಸ್ಟರ್ ಸ್ಟೈಲಿಂಗ್ ಅನ್ನು ಹೊಂದಿದೆ.

ಭಾರತದಲ್ಲಿ ಹೊಸ ಬಿಎಂಡಬ್ಲ್ಯು ಎಸ್1000ಆರ್ ಬೈಕ್ ವಿತರಣೆ ಆರಂಭ

ಇದೀಗ ಬಿಎಂಡಬ್ಲ್ಯು ಮೋಟೊರಾಡ್ ಕಂಪನಿಯು ತನ್ನ ಭಾರತದಲ್ಲಿ ಈ ಬಿಎಂಡಬ್ಲ್ಯು ಎಸ್1000ಆರ್ ಬೈಕಿನ ವಿತರಣೆಯನ್ನು ಪ್ರಾರಂಭಿಸಿದ್ದಾರೆ. ಆದರೆ ಬಿಡುಗಡೆಯ ದಿನಾಂಕವನ್ನು ಬಹಿರಂಗಪಡಿಸಿಲ್ಲ. ಬಿಎಂಡಬ್ಲ್ಯುಎಸ್1000ಆರ್ ವಿನ್ಯಾಸ ಮಾತ್ರವಲ್ಲದೇ ಇದರ ಪರ್ಫಾಮೆನ್ಸ್ ಮತ್ತು ಉತ್ತಮ ಕಂಟ್ರೋಲ್ ಗಳಿಂದ ಹೆಚ್ಚು ಜನಪ್ರಿಯತೆಯ ಗಳಿಸಿದ ಬೈಕ್ ಆಗಿದೆ. ಈ ಸೂಪರ್ ಬೈಕ್ ರೇಸಿಂಗ್ ರೆಡ್ ಮತ್ತು ಲೈಟ್ ವೈಟ್/ಎಂ ಮೋಟಾರ್ಸ್ಪೋರ್ಟ್ ಎಂಬ ಬಣ್ಣಗಳಲ್ಲಿ ಲಭ್ಯವಿದೆ.

ಭಾರತದಲ್ಲಿ ಹೊಸ ಬಿಎಂಡಬ್ಲ್ಯು ಎಸ್1000ಆರ್ ಬೈಕ್ ವಿತರಣೆ ಆರಂಭ

ಹೊಸ ಬಿಎಂಡಬ್ಲ್ಯು ಎಸ್1000ಆರ್ ಬೈಕ್ ವಿನ್ಯಾಸದ ಬಗ್ಗೆ ಹೇಳುವುದಾದರೆ, ಕೆಲವು ಹೊಸ ಬದಲಾವಣೆಗಳನ್ನು ಪಡೆದುಕೊಂಡಿದೆ. ಇದರಲ್ಲಿ ಹೊಸ ಸಿಂಗಲ್-ಪೀಸ್ ಎಲ್ಇಡಿ ಹೆಡ್ ಲ್ಯಾಂಪ್ ಅದರ ಮಧ್ಯ ಎಲ್ಇಡಿ ಡಿಆರ್ಎಲ್ ಹೊಂದಿದೆ.

ಭಾರತದಲ್ಲಿ ಹೊಸ ಬಿಎಂಡಬ್ಲ್ಯು ಎಸ್1000ಆರ್ ಬೈಕ್ ವಿತರಣೆ ಆರಂಭ

ಇದರೊಂದಿಗೆ ಫ್ಯೂಯಲ್ ಟ್ಯಾಂಕ್ ವಿನ್ಯಾಸ, ಕ್ವಾರ್ಟರ್ ಫೇರಿಂಗ್, ಎಕ್ಸಾಸ್ಟ್ ಮತ್ತು ಟೈಲ್ ವಿಭಾಗದಲ್ಲಿಯು ಸಣ್ಣ ಮಟ್ಟದ ನವೀಕರಿಸಲಾಗಿದೆ. ಹೊಸ ಬಿಎಂಡಬ್ಲ್ಯು ಎಸ್ 1000 ಆರ್ ಬೈಕಿನ ವಿನ್ಯಾಸದಲ್ಲಿನ ಬದಲಾವಣೆಗಳ ಜೊತೆಗೆ ಚಾಸಿಸ್ ಅನ್ನು ಫ್ಲೆಕ್ಸ್ ಫ್ರೇಮ್ ನೊಂದಿಗೆ ನವೀಕರಿಸಲಾಗಿದೆ.

ಭಾರತದಲ್ಲಿ ಹೊಸ ಬಿಎಂಡಬ್ಲ್ಯು ಎಸ್1000ಆರ್ ಬೈಕ್ ವಿತರಣೆ ಆರಂಭ

ಇದರಿಂದ ಈ ಹೊಸ ಬೈಕಿನ ಒಟ್ಟಾರೆ ತೂಕವನ್ನು ಕಡಿಮೆ ಮಾಡಲು ಸಹಕಾರಿಯಾಗಿದೆ, ಹೊಸ ಎಸ್1000ಆರ್ ಬೈಕ್ ಹಿಂದಿನ ಮಾದರಿಗೆ ಹೋಲಿಸಿದರೆ 6.5 ಕೆಜಿ ತೂಕ ಕಡಿಮೆಯಾಗಿದೆ. ಹೊಸ ಬಿಎಂಡಬ್ಲ್ಯು ಎಸ್ 1000 ಆರ್ ಬೈಕ್ 199 ಕೆಜೆ ತೂಕವನ್ನು ಹೊಂದಿದೆ.

ಭಾರತದಲ್ಲಿ ಹೊಸ ಬಿಎಂಡಬ್ಲ್ಯು ಎಸ್1000ಆರ್ ಬೈಕ್ ವಿತರಣೆ ಆರಂಭ

ಈ ಬಿಎಂಡಬ್ಲ್ಯು ಎಸ್1000ಆರ್ ಬೈಕಿನೊಂದಿಗೆ ಮತ್ತಷ್ಟು 'ಎಂ ಪ್ಯಾಕೇಜ್' ಆಯ್ಕೆ ಮಾಡಿಕೊಳ್ಳಬಹುದು. ತೂಕವನ್ನು ಕಡಿಮೆ ಮಾಡಲಾಗಿದ್ದರೂ, ಬೈಕಿನ ಎಂಜಿನ್ ನಲ್ಲಿ ಯಾವುದೇ ಬದಲಾವಣೆಗಳನ್ನು ಮಾಡಲಾಗಿಲ್ಲ. ಹಿಂದಿನ ಮಾದರಿಯ ಎಂಜಿನ್ ಅನ್ನು ಮುಂದೆ ಸಾಗಿಸಿದೆ. ಆದರೆ ಎಂಜಿನ್ ಅನ್ನು ಬಿಎಸ್6 ಮಾಲಿನ್ಯ ನಿಯಮಕ್ಕೆ ಅನುಗುಣವಾಗಿ ಅಪ್ಡೇಟ್ ಮಾಡಲಾಗಿದೆ.

ಭಾರತದಲ್ಲಿ ಹೊಸ ಬಿಎಂಡಬ್ಲ್ಯು ಎಸ್1000ಆರ್ ಬೈಕ್ ವಿತರಣೆ ಆರಂಭ

ಈ ಹೊಸ ಬಿಎಂಡಬ್ಲ್ಯು ಎಸ್1000ಆರ್ ಬೈಕಿನಲ್ಲಿ 999 ಸಿಸಿ ಇನ್-ಲೈನ್ ನಾಲ್ಕು ಸಿಲಿಂಡರ್ ಲಿಕ್ವಿಡ್-ಕೂಲ್ಡ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 11,000 ಆರ್‌ಪಿಎಂನಲ್ಲಿ 165 ಬಿಹೆಚ್‍ಪಿ ಪವರ್ ಮತ್ತು 9,250 ಆರ್‌ಪಿಎಂನಲ್ಲಿ 114 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇನ್ನು ಬಿಎಂಡಬ್ಲ್ಯು ಕಂಪನಿಯು ಈ ಬೈಕಿನ ಗೇರ್ ಬಾಕ್ಸ್ ಅನ್ನು ನವೀಕರಿಸಿದ್ದಾರೆ.

ಭಾರತದಲ್ಲಿ ಹೊಸ ಬಿಎಂಡಬ್ಲ್ಯು ಎಸ್1000ಆರ್ ಬೈಕ್ ವಿತರಣೆ ಆರಂಭ

ಇದರಿಂದ ಗೇರ್ ಗಳನ್ನು ಯಾವುದೇ ಲ್ಯಾಗ್ ಗಳಿಲ್ಲದೇ ಮತ್ತಷ್ಟು ಸುಲಭವಾಗಿ ಬದಲಾಯಿಸುವಂತೆ ನವೀಕರಿಸರಿಲಾಗಿದೆ.2021ರ ಬಿಎಂಡಬ್ಲ್ಯು ಎಸ್1000ಆರ್ ಬೈಕ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಗಾಗಿ ಹೊಸ 6.5-ಇಂಚಿನ ಟಿಎಫ್ಟಿ ಡಿಸ್ ಪ್ಲೇಯನ್ನು ಹೊಂದಿದೆ. ಇದು ಎಲೆಕ್ಟ್ರಾನಿಕ್ ರೈಡರ್ ಏಡ್ಸ್ ಅನ್ನು ಸಹ ಹೊಂದಿದೆ. ಇದರೊಂದಿಗೆ ರೈನ್, ರೋಡ್, ಡೈನಾಮಿಕ್ ಮತ್ತು ಡೈನಾಮಿಕ್ ಪ್ರೊ ಎಂಬ ರೈಡಿಂಗ್ ಮೋಡ್‌ಗಳನ್ನು ಒಳಗೊಂಡಿವೆ.

ಭಾರತದಲ್ಲಿ ಹೊಸ ಬಿಎಂಡಬ್ಲ್ಯು ಎಸ್1000ಆರ್ ಬೈಕ್ ವಿತರಣೆ ಆರಂಭ

ಬಿಎಂಡಬ್ಲ್ಯು ಮೋಟೊರಾಡ್ ಕಂಪನಿಯು ತನ್ನ ಈ ಜಿ 310 ಟ್ವಿನ್ ಬೈಕುಗಳ ಬೆಲೆಯನ್ನು ಹೆಚ್ಚಿಸಿದೆ. ಬಿಎಂಡಬ್ಲ್ಯುಜಿ 310 ಆರ್ ಮತ್ತು ಜಿ 310 ಜಿಎಸ್ ಬೈಕ್‌ಗಳ ಬೆಲೆಯನ್ನು ರೂ.10,000 ಗಳವರೆಗೆ ಹೆಚ್ಚಿಸಿದೆ. ಬೆಲೆ ಏರಿಕೆಯ ಬಳಿಕ ಇದೀಗ, ಬಿಎಂಡಬ್ಲ್ಯು ಜಿ 310 ಆರ್ ಬೈಕಿನ ಬೆಲೆಯು ರೂ.2.60 ಲಕ್ಷಗಳಾದರೆ, ಜಿ 310 ಜಿಎಸ್ ಬೈಕಿನ ಬೆಲೆಯು ರೂ.3 ಲಕ್ಷಗಳಾಗಿದೆ. ಈ ಎಲ್ಲಾ ಬೆಲೆಗಳು ಎಕ್ಸ್ ಶೋರೂಂ ಪ್ರಕಾರವಾಗಿದೆ.

ಭಾರತದಲ್ಲಿ ಹೊಸ ಬಿಎಂಡಬ್ಲ್ಯು ಎಸ್1000ಆರ್ ಬೈಕ್ ವಿತರಣೆ ಆರಂಭ

ಬಿಎಂಡಬ್ಲ್ಯು ಮೋಟೊರಾಡ್ ಕಂಪನಿಯು ತನ್ನ 2022ರ ಎಫ್ 750 ಜಿಎಸ್ ಮತ್ತು ಎಫ್ 850 ಜಿಎಸ್ ಬೈಕ್‌ಗಳನ್ನು ಅನಾವರಣಗೊಳಿಸಿದೆ. ಈ ಹೊಸ ಬಿಎಂಡಬ್ಲ್ಯು ಎಫ್ 750 ಜಿಎಸ್ ಮತ್ತು ಎಫ್ 850 ಜಿಎಸ್ ಬೈಕ್‌ಗಳು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗುವ ಸಾಧ್ಯತೆಯಿದೆ. ಇನ್ನು 2021ರ ಬಿಎಂಡಬ್ಲ್ಯು ಎಸ್1000ಆರ್ ಬೈಕ್ ಹಲವಾರು ನವೀಕರಣಗಳೊಂದಿಗೆ ಭಾರತೀಯ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ ಈ ಬಿಎಂಡಬ್ಲ್ಯು ಎಸ್1000ಆರ್ ಬೈಕ್ ಭಾರತೀಯ ಮಾರುಕಟ್ಟೆಯಲ್ಲಿ ಕವಾಸಕಿ ಝಡ್1000 ಮತ್ತು ಟ್ರಯಂಫ್ ಸ್ಪೀಡ್ ಟ್ರಿಪಲ್ ಬೈಕ್ ಗಳಿಗೆ ಪೈಪೋಟಿ ನೀಡುತ್ತದೆ.

Most Read Articles

Kannada
English summary
Bmw motorrad commences deliveries for the s1000r in india details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X