ಮೂರು ಹೊಸ ಲೋ ಸ್ಪೀಡ್ ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಪರಿಚಯಿಸಲಿದೆ ದಾವೊ

ಹೆಚ್ಚುತ್ತಿರುವ ಇಂಧನ ಬೆಲೆಗಳ ಪರಿಣಾಮ ಪರಿಸರ ಸ್ನೇಹಿ ಎಲೆಕ್ಟ್ರಿಕ್ ವಾಹನಗಳ ಮಾರಾಟವು ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಹಲವಾರು ಹೊಸ ಆಟೋ ಕಂಪನಿಗಳು ವಿವಿಧ ಮಾದರಿಯ ಎಲೆಕ್ಟ್ರಿಕ್ ವಾಹನ ಮಾದರಿಗಳನ್ನು ಪರಿಚಯಿಸುತ್ತಿರುವುದು ಮಾರುಕಟ್ಟೆಯಲ್ಲಿ ಭಾರೀ ಬದಲಾವಣೆಗೆ ಕಾರಣವಾಗುತ್ತಿದೆ.

ಮೂರು ಹೊಸ ಲೋ ಸ್ಪೀಡ್ ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಪರಿಚಯಿಸಲಿದೆ ದಾವೊ

ಹೊಸ ಮಾದರಿಯ ಎಲೆಕ್ಟ್ರಿಕ್ ವಾಹನಗಳ ಉತ್ಪಾದನೆಯಲ್ಲಿ ಸಾಂಪ್ರಾದಾಯಿಕ ವಾಹನ ಮಾರಾಟ ಮಾಡುತ್ತಿರುವ ಕಂಪನಿಗಳಿಂತಲೂ ಸ್ಟಾರ್ಟ್-ಅಪ್ ಕಂಪನಿಗಳ ಹೊಸ ಎಲೆಕ್ಟ್ರಿಕ್ ವಾಹನ ಉತ್ಪನ್ನಗಳೇ ಸದ್ಯ ಮಾರುಕಟ್ಟೆಯಲ್ಲಿ ಹೆಚ್ಚು ಗ್ರಾಹಕರನ್ನು ಸೆಳೆಯುವಲ್ಲಿ ಯಶಸ್ವಿಯಾಗುತ್ತಿವೆ. ಚೀನಿ ಮೂಲದ ದಾವೊ ಕಂಪನಿಯು ಕೂಡಾ ಗ್ರಾಹಕರ ಬೇಡಿಕೆಯೆಂತೆ ವಿವಿಧ ಮಾದರಿಯ ಮೂರು ಹೊಸ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳನ್ನು ಉತ್ಪಾದನೆ ಕೈಗೊಳ್ಳುತ್ತಿದ್ದು, ಹೊಸ ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಶೀಘ್ರದಲ್ಲೇ ಬಿಡುಗಡೆ ಮಾಡಲಿದೆ.

ಮೂರು ಹೊಸ ಲೋ ಸ್ಪೀಡ್ ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಪರಿಚಯಿಸಲಿದೆ ದಾವೊ

ಗ್ರಾಹಕರ ಬೇಡಿಕೆಯ ಆಧಾರ ಮೇಲೆ ವ್ಯಯಕ್ತಿಕ ಬಳಕೆಗೆ ಮತ್ತು ಬ್ಯುಸಿನೆಸ್ ಟು ಬ್ಯುಸಿನೆಸ್(ಬಿಟುಬಿ) ಉದ್ದೇಶಕ್ಕಾಗಿ ದಾವೊ ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ನಿರ್ಮಾಣ ಮಾಡಲಾಗಿದ್ದು, ಬಿಡುಗಡೆಯಾಗಲಿರುವ ಒಟ್ಟು ನಾಲ್ಕು ಸ್ಕೂಟರ್‌ನಲ್ಲಿ ಒಂದು ಹೈ ಸ್ಪೀಡ್ ಮಾದರಿಯಾಗಲಿದ್ದರೆ ಇನ್ನುಳಿದ ಮೂರು ಸ್ಕೂಟರ್‌ಗಳು ಲೋ ಸ್ಪೀಡ್ ಮಾದರಿಗಳಾಗಿವೆ.

ಮೂರು ಹೊಸ ಲೋ ಸ್ಪೀಡ್ ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಪರಿಚಯಿಸಲಿದೆ ದಾವೊ

ಹೈ ಸ್ಪೀಡ್ ವಿಭಾಗದಲ್ಲಿ 703 ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆಯನ್ನು ಖಚಿತಪಡಿಸಿರುವ ದಾವೊ ಕಂಪನಿಯು ಲೋ ಸ್ಪೀಡ್ ವಿಭಾಗದಲ್ಲಿ 106, 108 ಮತ್ತು 405 ಮಾದರಿಗಳನ್ನು ಬಿಡುಗಡೆ ಮಾಡುವ ಯೋಜನೆಯಲ್ಲಿದೆ.

ಮೂರು ಹೊಸ ಲೋ ಸ್ಪೀಡ್ ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಪರಿಚಯಿಸಲಿದೆ ದಾವೊ

ಹೊಸ ಉದ್ಯಮ ವ್ಯವಹಾರಕ್ಕಾಗಿ ಭಾರತೀಯ ಮೂಲದ ಕಂಪನಿಯೊಂದರ ಜೊತೆಗೆ ಸಹಭಾಗೀತ್ವ ಹೊಂದಿರುವ ದಾವೊ ಕಂಪನಿಯು ಮೊದಲ ಹಂತದಲ್ಲಿ 703 ಸ್ಕೂಟರ್ ಮಾದರಿಯನ್ನು ಬಿಡುಗಡೆ ಮಾಡುತ್ತಿದ್ದು, ರೆಟ್ರೋ ಶೈಲಿ ಹೊಂದಿರುವ ಹೊಸ ಇವಿ ಸ್ಕೂಟರ್ ಮಾದರಿಯು ತಾಂತ್ರಿಕವಾಗಿ ಬಲಿಷ್ಠವಾಗಿದೆ. ದಾವೊ 703 ಎಲೆಕ್ಟ್ರಿಕ್ ಸ್ಕೂಟರ್ ಮಾದರಿಯು ಲೀಥಿಯಂ ಐರನ್ ಫಾಸ್ಫೇಟ್ ಬ್ಯಾಟರಿ ಸೌಲಭ್ಯವನ್ನು ಹೊಂದಿದ್ದು, 3.5 ಕಿ.ವ್ಯಾ ಬಿಎಲ್‌ಡಿಸಿ ಮೋಟಾರ್ ಪ್ರೇರಣೆಯೊಂದಿಗೆ ಪ್ರತಿ ಚಾರ್ಜ್‌ಗೆ 100 ಕಿ.ಮೀ ಮೈಲೇಜ್ ಹಿಂದಿರುಗಿಸುತ್ತದೆ.

ಮೂರು ಹೊಸ ಲೋ ಸ್ಪೀಡ್ ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಪರಿಚಯಿಸಲಿದೆ ದಾವೊ

ಜೊತೆಗೆ ಹೊಸ ಸ್ಕೂಟರ್ ಪ್ರೀಮಿಯಂ ಆವೃತ್ತಿಯಾಗಿ ಗುರುತಿಸಿಕೊಳ್ಳಲು ಅಗತ್ಯವಿರುವ ಎಲ್ಲಾ ತಾಂತ್ರಿಕ ಅಂಶಗಳನ್ನು ಪಡೆದುಕೊಂಡಿದ್ದು, ಪ್ರತಿ ಗಂಟೆಗೆ 70ಕಿ.ಮೀ ಟಾಪ್ ಮೈಲೇಜ್ ಹೊಂದಿದೆ.

ಮೂರು ಹೊಸ ಲೋ ಸ್ಪೀಡ್ ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಪರಿಚಯಿಸಲಿದೆ ದಾವೊ

ಆದರೆ 106, 108 ಮತ್ತು 405 ಮಾದರಿಗಳು ಪ್ರತಿ ಗಂಟೆಗೆ 25 ಕಿ.ಮೀ ಟಾಪ್ ಸ್ಪೀಡ್‌ನೊಂದಿಗೆ ಪ್ರತಿಚಾರ್ಜ್‌ಗೆ ಗರಿಷ್ಠ 80 ಕಿ.ಮೀ ಮೈಲೇಜ್ ಹೊಂದಿರಲಿದ್ದು, ಗ್ರಾಹಕರು ತಮ್ಮ ಆದ್ಯತೆಗೆ ಅನುಗುಣವಾಗಿ ವಿವಿಧ ಮಾದರಿಗಳನ್ನು ಖರೀದಿಸಬಹುದಾಗಿದೆ.

MOST READ: ಪ್ರತಿ ಚಾರ್ಜ್‌ಗೆ ಬರೋಬ್ಬರಿ 240ಕಿ.ಮೀ ಮೈಲೇಜ್ ನೀಡುವ ಇವಿ ಸ್ಕೂಟರ್ ಬಿಡುಗಡೆ ಮಾಡಲಿದೆ ಓಲಾ

ಮೂರು ಹೊಸ ಲೋ ಸ್ಪೀಡ್ ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಪರಿಚಯಿಸಲಿದೆ ದಾವೊ

ಲೋ ಸ್ಪೀಡ್ ಮಾದರಿಗಳು 25 ಕಿ.ಮೀ ಟಾಪ್ ಸ್ಪೀಡ್ ವೈಶಿಷ್ಟ್ಯತೆ ಹೊಂದಿರುವುದರಿಂದ ಈ ಸ್ಕೂಟರ್‌ಗಳಿಗೆ ನೋಂದಣಿ, ಇನ್ಸುರೆನ್ಸ್ ಮತ್ತು ಚಾಲನೆಗೆ ಡಿಎಲ್ ಅವಶ್ಯವಿರುವುದಿಲ್ಲ. ಇದರಿಂದ ಹೈ ಸ್ಪೀಡ್ ಮಾದರಿಗಿಂತಲೂ ಸಾಕಷ್ಟು ಕಡಿಮೆ ದರದಲ್ಲಿ ಖರೀದಿಗೆ ಲಭ್ಯವಿರಲಿರುವ ಲೋ ಸ್ಪೀಡ್ ಮಾದರಿಗಳು ನಗರದಲ್ಲಿ ಸಂಚಾರಕ್ಕೆ ಸೂಕ್ತವಾಗಿವೆ.

ಮೂರು ಹೊಸ ಲೋ ಸ್ಪೀಡ್ ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಪರಿಚಯಿಸಲಿದೆ ದಾವೊ

ದಾವೊ ಕಂಪನಿಯ 703 ಎಲೆಕ್ಟ್ರಿಕ್ ಸ್ಕೂಟರ್ ಮಾದರಿಯಲ್ಲಿ ಲೀಥಿಯಂ ಐರನ್ ಫಾಸ್ಫೇಟ್ ಬ್ಯಾಟರಿ ಜೋಡಣೆ ಮಾಡಿದ್ದು, 3.5 ಕಿ.ವ್ಯಾ ಬಿಎಲ್‌ಡಿಸಿ ಮೋಟಾರ್ ಪ್ರೇರಣೆಯೊಂದಿಗೆ ಪ್ರತಿ ಚಾರ್ಜ್‌ಗೆ 100 ಕಿ.ಮೀ ಮೈಲೇಜ್ ಹಿಂದಿರುಗಿಸುತ್ತದೆ.

MOST READ: ಅತಿ ಹೆಚ್ಚು ಮೈಲೇಜ್ ನೀಡುವ ಟಾಪ್ 10 ಬಜೆಟ್ ಬೆಲೆಯ ಬೈಕುಗಳಿವು..!

ಮೂರು ಹೊಸ ಲೋ ಸ್ಪೀಡ್ ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಪರಿಚಯಿಸಲಿದೆ ದಾವೊ

ಜೊತೆಗೆ ಹೊಸ ಸ್ಕೂಟರ್ ಪ್ರೀಮಿಯಂ ಆವೃತ್ತಿಯಾಗಿ ಗುರುತಿಸಿಕೊಳ್ಳಲು ಅಗತ್ಯವಿರುವ ಎಲ್ಲಾ ತಾಂತ್ರಿಕ ಅಂಶಗಳನ್ನು ಪಡೆದುಕೊಂಡಿದ್ದು, ಪ್ರತಿ ಗಂಟೆಗೆ 70ಕಿ.ಮೀ ಟಾಪ್ ಮೈಲೇಜ್ ಹೊಂದಿದೆ. ಭಾರತದಲ್ಲಿ ಬಿಡುಗಡೆಯಾಗಲಿರುವ 703 ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆಯನ್ನು ಖಚಿತಪಡಿಸಿರುವ ದಾವೊ ಕಂಪನಿಯು ಶೀಘ್ರದಲ್ಲೇ ಹೊಸ ಸ್ಕೂಟರ್ ಬೆಲೆ ಮಾಹಿತಿ ಹಂಚಿಕೊಳ್ಳುವುದಾಗಿ ಹೇಳಿಕೊಂಡಿದ್ದು, ಹೊಸ ಸ್ಕೂಟರ್ ವಿತರಣೆಯನ್ನು ಶೀಘ್ರದಲ್ಲೇ ಕೈಗೊಳ್ಳುವ ಯೋಜನೆಯಲ್ಲಿದೆ.

Most Read Articles

Kannada
English summary
Dao EV Tech Introduced Three New Low Speed Electric Scooters. Read in Kannada.
Story first published: Thursday, April 22, 2021, 17:51 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X