Just In
- 2 hrs ago
ಹೊಸ ರೂಪದೊಂದಿಗೆ ರಸ್ತೆಗಿಳಿಯಲಿವೆ ತೆರೆಮರೆಗೆ ಸರಿದ ಜಟಕಾ ಬಂಡಿ
- 3 hrs ago
ಫೆಬ್ರವರಿ ತಿಂಗಳಿನಲ್ಲಿ 12 ಸಾವಿರಕ್ಕೂ ಹೆಚ್ಚು ಎಂಪಿವಿಗಳನ್ನು ಮಾರಾಟ ಮಾಡಿದ ಮಾರುತಿ ಸುಜುಕಿ
- 3 hrs ago
ಸಿಎನ್ಜಿ ವರ್ಷನ್ನಲ್ಲೂ ಬಿಡುಗಡೆಯಾಗಲಿದೆ ಸ್ಕೋಡಾ ರ್ಯಾಪಿಡ್ ಸೆಡಾನ್
- 4 hrs ago
ಸ್ಕ್ರ್ಯಾಪೇಜ್ ನೀತಿ ಅಳವಡಿಸಿಕೊಳ್ಳುವ ವಾಹನ ಮಾಲೀಕರಿಗೆ ಸಿಹಿಸುದ್ದಿ ನೀಡಿದ ಕೇಂದ್ರ ಸರ್ಕಾರ
Don't Miss!
- News
ಪೆಟ್ರೋಲ್, ಡೀಸೆಲ್ ದರ ಏರಿಕೆ: ಕೇಂದ್ರಕ್ಕೆ ಬಿಸಿ ಮುಟ್ಟಿಸಿದ ಮಲ್ಲಿಕಾರ್ಜುನ್ ಖರ್ಗೆ
- Movies
ಬಿಗ್ಬಾಸ್: ಪ್ರಶಾಂತ್ ಸಂಬರ್ಗಿ ಮೇಲೆ ಉರಿದು ಬಿದ್ದ ಮನೆ ಸದಸ್ಯರು
- Education
UAS Dharwad Recruitment 2021: ಸೀನಿಯರ್ ರಿಸರ್ಚ್ ಫೆಲೋ ಹುದ್ದೆಗೆ ಮಾ.10ಕ್ಕೆ ನೇರ ಸಂದರ್ಶನ
- Sports
ಐಎಸ್ಎಲ್: ಫೈನಲ್ಗಾಗಿ ನಾರ್ಥ್ ಈಸ್ಟ್, ಬಾಗನ್ ನಡುವೆ ಫೈನಲ್ ಫೈಟ್
- Lifestyle
ಮಾ.11ಕ್ಕೆ ಕುಂಭ ರಾಶಿಗೆ ಬುಧನ ಪ್ರವೇಶ: ನಿಮ್ಮ ಬದುಕಿನಲ್ಲಿ ಆಗಲಿದೆ ಈ ಬದಲಾವಣೆ
- Finance
ಅಡಿಕೆ, ಕಾಫೀ, ಮೆಣಸು ಹಾಗೂ ರಬ್ಬರ್ನ ಮಾ. 08ರ ಮಾರುಕಟ್ಟೆ ದರ ಇಲ್ಲಿದೆ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಬೈಕ್ ಉತ್ಪಾದನೆಯಲ್ಲಿ ಹೊಸ ಮೈಲಿಗಲ್ಲು- 10 ಕೋಟಿ ಬೈಕ್ ಉತ್ಪಾದಿಸಿದ ಹೀರೋ ಮೋಟೊಕಾರ್ಪ್
ಭಾರತದಲ್ಲಿ ಮಾತ್ರವಲ್ಲ ವಿಶ್ವದ ಮುಂಚೂಣಿ ಬೈಕ್ ಉತ್ಪಾದನಾ ಕಂಪನಿಯಾಗಿರುವ ಹೀರೋ ಮೋಟೊಕಾರ್ಪ್ ಬೈಕ್ ಉತ್ಪಾದನೆಯಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ್ದು, ಬೈಕ್ ಉತ್ಪಾದನೆಯ ಆರಂಭಿಸಿದ 36 ವರ್ಷಗಳ ಅವಧಿಯಲ್ಲಿ ಬರೋಬ್ಬರಿ 10 ಕೋಟಿ ಬೈಕ್ ಉತ್ಪಾದನೆಯನ್ನು ಪೂರ್ಣಗೊಳಿಸುವ ಮೂಲಕ ಹೊಸ ದಾಖಲೆಗೆ ಕಾರಣವಾಗಿದೆ.

1984ರಲ್ಲಿ ಹೀರೋ ಹೋಂಡಾ ಮೋಟಾರ್ ಸೈಕಲ್ಸ್ ಲಿಮಿಟೆಡ್ ಹೆಸರಿನಲ್ಲಿ ಆರಂಭಗೊಂಡಿದ್ದ ಕಂಪನಿಯು ಜಪಾನ್ ಕಂಪನಿಯಾದ ಹೋಂಡಾ ಮೋಟಾರ್‌ಸೈಕಲ್ ಜೊತೆಗೂಡಿ ಆಟೋ ಉತ್ಪಾದನಾ ವಲಯದಲ್ಲಿ ಮೊದಲ ಕಾರ್ಯಾಚರಣೆ ಆರಂಭಿಸಿತ್ತು. 2000ನೇ ಇಸವಿ ಹೊತ್ತಿಗೆ ವಿಶ್ವದ ಪ್ರಮುಖ ಬೈಕ್ ಉತ್ಪಾದನಾ ಕಂಪನಿಯಾಗಿ ಗುರುತಿಸಿಕೊಂಡಿದ್ದ ಹೀರೋ-ಹೋಂಡಾ ಕಂಪನಿಯು ಬರೋಬ್ಬರಿ 26 ವರ್ಷಗಳ ನಂತರ 2010ರಲ್ಲಿ ಸಹಭಾಗಿತ್ವ ಯೋಜನೆಯಿಂದ ಹಿಂದೆ ಸರಿದು ಸ್ವತಂತ್ರ ಕಾರ್ಯಾಚರಣೆ ಆರಂಭಿಸಿದವು.

1985ರಲ್ಲಿ ಹರಿಯಾಣದ ಧರುಹೆರ ಎಂಬಲ್ಲಿ ಮೊದಲ ಬೈಕ್ ಉತ್ಪಾದನಾ ಘಟಕಕ್ಕೆ ಚಾಲನೆ ನೀಡಿದ್ದ ಹೀರೋ-ಹೋಂಡಾ ಕಂಪನಿಯು ಸಹಭಾಗಿತ್ವದ ಯೋಜನೆಯ ಮೊದಲ ಬೈಕ್ ಮಾದರಿಯಾಗಿ ಸಿಡಿ100 ಮಾದರಿಯನ್ನು ಮಾರುಕಟ್ಟೆಗೆ ಪರಿಚಯಿಸಿದ್ದವು.

ಹೊಸ ಬೈಕ್ ಉತ್ಪಾದನೆ ಆರಂಭಿಸಿ ಕೆಲವೇ ದಿನಗಳಲ್ಲಿ ಭಾರೀ ಪ್ರಮಾಣದ ಬೇಡಿಕೆ ಪಡೆದುಕೊಂಡ ಹೀರೋ ಹೋಂಡಾ ಕಂಪನಿಗಳು 1987ರ ಹೊತ್ತಿಗೆ 1 ಲಕ್ಷ ಯುನಿಟ್ ಮಾರಾಟ ಗುರಿ ಸಾಧಿಸಿದವು.

ತದನಂತರ ಬೈಕ್ ಉತ್ಪಾದನೆಯಲ್ಲಿ ಹಲವಾರು ದಾಖಲೆಗಳನ್ನು ಸರಿಗಟ್ಟಿದ್ದ ಸಹಭಾಗಿತ್ವ ಕಂಪನಿಗಳು 2004ರ ಹೊತ್ತಿಗೆ 1 ಕೋಟಿ ಬೈಕ್ ಉತ್ಪಾದನೆ ಗುರಿ ತಲುಪುವ ಮೂಲಕ ವಿಶ್ವದ ಮುಂಚೂಣಿ ಬೈಕ್ ಕಂಪನಿಯಾಗಿ ಹೊರಹೊಮ್ಮಿದವು. ತದನಂತರ ಬೈಕ್ ಮಾರಾಟದಲ್ಲಿ ಹಲವಾರು ದಾಖಲೆಗಳಿಗೆ ಕಾರಣವಾದ ಸಹಭಾಗಿತ್ವ ಕಂಪನಿಗಳಾದ ಹೀರೋ ಹೋಂಡಾ ಕಂಪನಿಗಳು ಕಾರಣಾಂತರಗಳಿಂದ 2010ರಲ್ಲಿ ಸ್ವತಂತ್ರ ಕಾರ್ಯಾಚರಣೆ ಆಂಭಿಸಿದವು.

ಸಹಭಾಗಿತ್ವದ ಯೋಜನೆಯಿಂದ ಹಿಂದೆ ಸರಿದ ನಂತರ ಹೀರೋ ಮೋಟೋಕಾರ್ಪ್ ಕಂಪನಿಯಾಗಿ ಸ್ವತಂತ್ರ ಕಾರ್ಯಾಚರಣೆ ಆರಂಭಿಸಿ 2013ರ ಹೊತ್ತಿಗೆ 5 ಕೋಟಿ ಬೈಕ್ ಉತ್ಪಾದನಾ ಗುರಿ ಸಾಧಿಸಿತು. 2014 ರಿಂದ ಇತ್ತೀಚೆಗೆ ವಿವಿಧ ಹೊಸ ಬೈಕ್ ಮಾದರಿಗಳ ಮೂಲಕ ಕೇವಲ 7 ವರ್ಷಗಳಲ್ಲಿ 5 ಕೋಟಿ ಬೈಕ್‌ಗಳನ್ನು ಉತ್ಪಾದನೆ ಮಾಡಿದೆ.

ಒಟ್ಟು 34 ವರ್ಷಗಳಲ್ಲಿ 10 ಕೋಟಿ ಬೈಕ್ ಮಾದರಿಗಳನ್ನು ಉತ್ಪಾದನೆ ಮಾಡಿರುವ ಹೀರೋ ಮೋಟೊಕಾರ್ಪ್ ಕಂಪನಿಯು ಭಾರತ ಸೇರಿದಂತೆ ವಿಶ್ವದ ಪ್ರಮುಖ 40 ರಾಷ್ಟ್ರಗಳಲ್ಲಿ ಬೈಕ್ ಮಾರಾಟ ಜಾಲ ಹೊಂದಿದ್ದು, ಉತ್ತರಾಖಂಡ್‌ನಲ್ಲಿರುವ ಹರಿದ್ವಾರ್ ಬೈಕ್ ಉತ್ಪಾದನಾ ಘಟಕದಲ್ಲಿಂದು ಎಕ್ಸ್‌ಟ್ರಿಮ್ 160ಆರ್ ಮಾದರಿಯ ಉತ್ಪಾದನೆ ಕೈಗೊಳ್ಳುವ 10 ಕೋಟಿ ಬೈಕ್ ಉತ್ಪಾದನಾ ಗುರಿ ತಲುಪಿತು.

ಕಳೆದ 20 ವರ್ಷಗಳಿಂದ ವಿಶ್ವದ ಅತಿದೊಡ್ಡ ಬೈಕ್ ಉತ್ಪಾದನಾ ಕಂಪನಿ ಎಂಬ ಜನಪ್ರಿಯತೆಯನ್ನು ಕಾಯ್ದಕೊಂಡಿರುವ ಬಂದಿರುವ ಹೀರೋ ಕಂಪನಿಯು ಮುಂಬರುವ ದಿನಗಳಲ್ಲಿ ಮತ್ತಷ್ಟು ಹೊಸ ಉತ್ಪನ್ನಗಳೊಂದಿಗೆ ಮುಂಚೂಣಿ ಸಾಧಿಸುವ ತವಕದಲ್ಲಿದೆ.
MOST READ: ಪ್ರತಿ ಚಾರ್ಜ್‌ಗೆ ಬರೋಬ್ಬರಿ 240ಕಿ.ಮೀ ಮೈಲೇಜ್ ನೀಡುವ ಇವಿ ಸ್ಕೂಟರ್ ಬಿಡುಗಡೆ ಮಾಡಲಿದೆ ಓಲಾ

ಭಾರತೀಯ ಗ್ರಾಹಕರ ಆರ್ಥಿಕ ಪರಿಸ್ಥಿತಿಗೆ ಅನುಗುಣವಾಗಿ ಹಲವು ವಿವಿಧ ಬೈಕ್ ಆವೃತ್ತಿಗಳನ್ನು ಬಿಡುಗಡೆಗೊಳಿಸಿ ಬೇಡಿಕೆ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿರುವ ಹೀರೋ ಕಂಪನಿಯು ಸ್ಲೈಂಡರ್ ಬೈಕ್ ಸರಣಿ ಮೂಲಕ ಹಲವಾರು ದಾಖಲೆಗಳಿಗೆ ಕಾರಣವಾಗಿದೆ.

ಹೀರೋ ಮೋಟೊಕಾರ್ಪ್ ಕಂಪನಿಯ ಬೈಕ್ ಉತ್ಪಾದನಾ ಪಟ್ಟಿಯಲ್ಲಿ ಸ್ಲೈಂಡರ್ ಸರಣಿ ಮಾದರಿಗಳೇ ಅಗ್ರಸ್ಥಾನದಲ್ಲಿದ್ದು, ಕಂಪನಿಯು ಸದ್ಯ ಗ್ರಾಹಕರ ಬೇಡಿಕೆ ಅನುಸಾರವಾಗಿ ಎರಡು ಪ್ರಮುಖ ಘಟಕಗಳಲ್ಲಿ ಪ್ರತಿ 4.5 ಸೇಕೆಂಡುಗಳಲ್ಲಿ 1 ಬೈಕ್ ಮಾದರಿಯನ್ನು ನಿರ್ಮಾಣ ಮಾಡುತ್ತಿದೆ.
MOST READ: ಅತಿ ಹೆಚ್ಚು ಮೈಲೇಜ್ ನೀಡುವ ಟಾಪ್ 10 ಬಜೆಟ್ ಬೆಲೆಯ ಬೈಕುಗಳಿವು..!

ಹೀರೋ ಮೋಟೊಕಾರ್ಪ್ ಕಂಪನಿಯು ಸದ್ಯ ಮಾರುಕಟ್ಟೆಯಲ್ಲಿ ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಎಕ್ಸ್‌ಟ್ರಿಮ್ 160ಆರ್, ಎಕ್ಸ್‌ಪಲ್ಸ್ 200, ಎಕ್ಸ್‌ಟ್ರಿಮ್ 200ಎಸ್, ಎಕ್ಸ್‌ಪಲ್ಸ್ 200ಟಿ, ಪ್ಯಾಶನ್ ಪ್ರೋ, ಸ್ಲೈಂಡರ್ ಐ ಸ್ಮಾರ್ಟ್, ಗ್ಲ್ಯಾಮರ್, ಸ್ಲೈಂಡರ್ ಪ್ಲಸ್, ಹೆಚ್‍ಎಫ್ ಡಿಲಕ್ಸ್, ಸೂಪರ್ ಸ್ಲೈಂಡರ್, ಡೆಸ್ಟಿನಿ 125, ಮ್ಯಾಸ್ಟ್ರೊ ಎಡ್ಜ್ 125, ಮ್ಯಾಸ್ಟ್ರೊ ಎಡ್ಜ್ 110, ಪ್ರೆಷರ್ ಪ್ಲಸ್ ಆವೃತ್ತಿಗಳನ್ನು ಮಾರಾಟ ಮಾಡುತ್ತಿದ್ದು, ಶೀಘ್ರದಲ್ಲೇ 10 ಕೋಟಿ ಬೈಕ್ ಉತ್ಪಾದನಾ ಸಂಭ್ರಮಕ್ಕಾಗಿ ಪ್ರಮುಖ ಬೈಕ್ ಮತ್ತು ಸ್ಕೂಟರ್‌ಗಳಲ್ಲಿ ಸ್ಪೆಷಲ್ ಎಡಿಷನ್ ಪರಿಚಯಿಸುತ್ತಿದೆ.

10 ಕೋಟಿ ಬೈಕ್ ಉತ್ಪಾದನಾ ಸಂಭ್ರಮದಲ್ಲಿ ಭಾಗಿಯಾಗಿದ್ದ ಬ್ರಾಂಡ್ ಅಂಬಾಸಿಡರ್ ಬಾಲಿವುಡ್ ನಟ ಶಾರುಖ್ ಖಾನ್ ಹಸ್ತಾಕ್ಷರ ಹೊಂದಿರುವ ಸ್ಪೆಷಲ್ ಎಡಿಷನ್ ಬೈಕ್ ಮಾದರಿಗಳನ್ನು ಸೆಲೆಬ್ರಿಟಿ ಎಡಿಷನ್‌ಗಳಾಗಿ ಮಾರಾಟ ಮಾಡುವುದಾಗಿ ಹೇಳಿಕೊಂಡಿರುವ ಕಂಪನಿಯು ಶೀಘ್ರದಲ್ಲೇ ಸ್ಪೆಷಲ್ ಎಡಿಷನ್‌ಗಳನ್ನು ಮಾರಾಟ ಆರಂಭಿಸಲಿದೆ.