ತಾಂತ್ರಿಕ ದೋಷ: ಹೈನೆಸ್ ಸಿಬಿ350 ಹಿಂಪಡೆದ ಹೋಂಡಾ ಮೋಟಾರ್‌ಸೈಕಲ್

ಕ್ಲಾಸಿಕ್ ಬೈಕ್ ಮಾರಾಟದಲ್ಲಿ ಹೋಂಡಾ ಮೋಟಾರ್‌ಸೈಕಲ್ ಕಂಪನಿಯ ನಿರ್ಮಾಣದ ಹೊಚ್ಚ ಹೊಸ ಹೈನೆಸ್ ಸಿಬಿ350 ಬೈಕ್ ಮಾದರಿಯು ಉತ್ತಮ ಬೇಡಿಕೆಯೊಂದಿಗೆ ಮಾರಾಟವಾಗುತ್ತಿದೆ. ಈ ನಡುವೆ ಹೊಸ ಬೈಕ್ ಖರೀದಿಸಿ ಬಳಕೆ ಮಾಡುತ್ತಿರುವ ಕೆಲವು ಗ್ರಾಹಕರಿಗೆ ಹೊಸ ಬೈಕಿನಲ್ಲಿ ಗೇರ್‌ಬಾಕ್ಸ್‌ನಲ್ಲಿ ಸಣ್ಣದಾದ ತಾಂತ್ರಿಕ ಸಮಸ್ಯೆ ಎದುರಿಸುತ್ತಿರುವ ವರದಿಗಳು ಪ್ರಕಟವಾಗಿದ್ದವು.

ತಾಂತ್ರಿಕ ದೋಷ: ಹೈನೆಸ್ ಸಿಬಿ 350 ಹಿಂಪಡೆದ ಹೋಂಡಾ ಮೋಟಾರ್‌ಸೈಕಲ್

ಗ್ರಾಹಕರ ದೂರಿನ ಮೇರೆಗೆ ಹೊಸ ಬೈಕ್ ತಾಂತ್ರಿಕ ಸಮಸ್ಯೆ ಬಗೆಗೆ ಕೂಲಂಕುಶವಾಗಿ ಪರಿಶೀಲನೆ ನಡೆಸಿದ ಹೋಂಡಾ ಮೋಟಾರ್‌ಸೈಕಲ್ ಕಂಪನಿಯ ತಾಂತ್ರಿಕ ತಂಡವು ಹೊಸ ಬೈಕಿನ ಕೆಲವು ಯುನಿಟ್‌ಗಳಲ್ಲಿನ ಗೇರ್‌ಬಾಕ್ಸ್ ಸಮಸ್ಯೆಯನ್ನು ಪತ್ತೆಹಚ್ಚಿದ್ದು, ಸ್ವಯಂಪ್ರರಣೆಯಿಂದ ಎಲ್ಲಾ ಹೊಸ ಬೈಕ್‌ಗಳನ್ನು ಹಿಂದಕ್ಕೆ ಪಡೆಯುವ ಮೂಲಕ ಉಚಿತವಾಗಿ ತಾಂತ್ರಿಕ ಸಮಸ್ಯೆಯನ್ನು ಸರಿಪಡಿಸಿಕೊಡಲಾಗುತ್ತಿದೆ.

ತಾಂತ್ರಿಕ ದೋಷ: ಹೈನೆಸ್ ಸಿಬಿ 350 ಹಿಂಪಡೆದ ಹೋಂಡಾ ಮೋಟಾರ್‌ಸೈಕಲ್

ಹೊಸ ಬೈಕಿನಲ್ಲಿ ವೇಗದ ಚಾಲನೆಯ ಸಂದರ್ಭದಲ್ಲಿ ನಾಲ್ಕನೇ ಗೇರ್‌ಗೆ ಬದಲಿಸುವಾಗ ಕೆಲವು ಗ್ರಾಹಕರಿಗೆ ಗೇರ್‌ಬಾಕ್ಸ್‌ನಲ್ಲಿ ಕರ್ಕಶ ಶಬ್ದ ಉಂಟಾಗುವ ಸಮಸ್ಯೆ ಕಂಡುಬಂದಿದ್ದು, ಈ ತಾಂತ್ರಿಕ ಸಮಸ್ಯೆಯಿಂದ ಯಾವುದೇ ಗ್ರಾಹಕರಿಗೂ ಗಂಭೀರ ಪರಿಣಾಮಗಳು ಉಂಟಾಗಿಲ್ಲ.

ತಾಂತ್ರಿಕ ದೋಷ: ಹೈನೆಸ್ ಸಿಬಿ 350 ಹಿಂಪಡೆದ ಹೋಂಡಾ ಮೋಟಾರ್‌ಸೈಕಲ್

ಆದರೆ ಬೈಕ್ ಚಾಲನೆಯ ವೇಳೆ ಕಿರಿಕಿರಿ ಉಂಟಾಗುತ್ತಿರುವ ಬಗ್ಗೆ ಕೆಲವು ಗ್ರಾಹಕರು ಅಧಿಕೃತ ಡೀಲರ್ಸ್‌ಗಳ ಗಮನಕ್ಕೆ ತಂದಿದ್ದರು. ಗ್ರಾಹಕರ ದೂರುಗಳ ಹಿನ್ನಲೆಯಲ್ಲಿ ಪರೀಕ್ಷಿಸಿದ ತಾಂತ್ರಿಕ ತಂಡವು ಮಾರಾಟವಾಗಿರುವ ಎಲ್ಲಾ ಹೈನೆಸ್ ಸಿಬಿ350 ಬೈಕ್‌ಗಳನ್ನು ಒಂದು ಬಾರಿ ಸಾಮೂಹಿಕವಾಗಿ ಪರೀಕ್ಷಿಸುವುದಾಗಿ ಬೈಕ್ ಮಾಲೀಕರಿಗೆ ಮಾಹಿತಿ ನೀಡಿದೆ.

ತಾಂತ್ರಿಕ ದೋಷ: ಹೈನೆಸ್ ಸಿಬಿ 350 ಹಿಂಪಡೆದ ಹೋಂಡಾ ಮೋಟಾರ್‌ಸೈಕಲ್

ಹೊಸ ಬೈಕ್ ಮಾದರಿಯ ತಾಂತ್ರಿಕ ಸಮಸ್ಯೆ ಕುರಿತಂತೆ ಗ್ರಾಹಕರಿಗೆ ಇಮೇಲ್ ಮಾಡುವುದರ ಜೊತೆಗೆ ದೂರವಾಣಿಯ ಮೂಲಕವು ಸಂಪರ್ಕಿಸಿದ್ದು, ನಿಗದಿತ ಅವಧಿಯೊಳಗೆ ಈ ಸೇವೆಯನ್ನು ಪಡೆದುಕೊಳ್ಳಬೇಕಾಗಿ ಮಾಹಿತಿ ನೀಡಿದೆ. ಇನ್ನು 2020ರ ಅಕ್ಬೋಬರ್ ಮಧ್ಯಂತರದಲ್ಲಿ ಹೈನೆಸ್ ಸಿಬಿ350 ಬೈಕ್ ಮಾದರಿಯನ್ನು ಬಿಡುಗಡೆ ಮಾಡಿದ್ದ ಹೋಂಡಾ ಕಂಪನಿಯು ಇದುವರೆಗೆ 14 ಸಾವಿರ ಯುನಿಟ್ ಬೈಕ್ ವಿತರಣೆ ಮಾಡಿದ್ದು, ಪ್ರತಿಸ್ಪರ್ಧಿ ಮಾದರಿಯಾದ ರಾಯಲ್ ಎನ್‌ಫೀಲ್ಡ್ ಮಿಟಿಯೊರ್ 350, ಬೆನೆಲ್ಲಿ ಇಂಪೀರಿಯಲ್ 400 ಮತ್ತು ಜಾವಾ ಕ್ಲಾಸಿಕ್ ಬೈಕ್‌ಗಳಿಗೆ ಉತ್ತಮ ಪೈಪೋಟಿ ನೀಡುತ್ತಿದೆ.

ತಾಂತ್ರಿಕ ದೋಷ: ಹೈನೆಸ್ ಸಿಬಿ 350 ಹಿಂಪಡೆದ ಹೋಂಡಾ ಮೋಟಾರ್‌ಸೈಕಲ್

ಹೈನೆಸ್ ಸಿಬಿ350 ಬೈಕ್ ಮಾದರಿಯು ಗ್ರಾಹಕರ ಬೇಡಿಕೆಯೆಂತೆ ಡಿಲಕ್ಸ್ ಮತ್ತು ಡಿಲಕ್ಸ್ ಪ್ರೋ ವೆರಿಯೆಂಟ್‌ಗಳಲ್ಲಿ ಖರೀದಿಗೆ ಲಭ್ಯವಿದ್ದು, ಡಿಲಕ್ಸ್ ಮಾದರಿಯ ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ. 1,86,500 ಮತ್ತು ಡಿಲಕ್ಸ್ ಪ್ರೋ ಮಾದರಿಯು ರೂ. 1,92,500 ಬೆಲೆ ಹೊಂದಿದೆ.

ತಾಂತ್ರಿಕ ದೋಷ: ಹೈನೆಸ್ ಸಿಬಿ 350 ಹಿಂಪಡೆದ ಹೋಂಡಾ ಮೋಟಾರ್‌ಸೈಕಲ್

ಹೈನೆಸ್ ಸಿಬಿ 350 ಬೈಕಿನ ವಿನ್ಯಾಸವು ಹಳೆಯ ಕ್ಲಾಸಿಕ್ ಸಿಬಿ ಬೈಕ್ ಸರಣಿಯನ್ನು ನೆನಪಿಸಲಿದ್ದು, ಈ ಬೈಕಿನ ಮುಂಭಾಗದಲ್ಲಿ ರೌಂಡ್ ಎಲ್ಇಡಿ ಹೆಡ್‌ಲ್ಯಾಂಪ್ ಕ್ರೋಮ್ ಫ್ರಂಟ್ ಫೆಂಡರ್‌ ಹಾಗೂ ಫೋರ್ಕ್‌ಗಳನ್ನು ಪಡೆದುಕೊಂಡಿದೆ. ಈ ಬೈಕಿನಲ್ಲಿ ದೊಡ್ಡದಾದ 15-ಲೀಟರಿನ ಫ್ಯೂಯಲ್ ಟ್ಯಾಂಕ್ ಜೋಡಿಸಲಾಗಿದ್ದು, ಈ ಬೈಕಿನ ಸೈಡ್ ಗಳಲ್ಲಿ ಹೊಂಡಾ ಬ್ಯಾಡ್ಜಿಂಗ್ ಅಳವಡಿಸಲಾಗಿದೆ.

MOST READ: ಅತಿ ಹೆಚ್ಚು ಮೈಲೇಜ್ ನೀಡುವ ಟಾಪ್ 10 ಬಜೆಟ್ ಬೆಲೆಯ ಬೈಕುಗಳಿವು..!

ತಾಂತ್ರಿಕ ದೋಷ: ಹೈನೆಸ್ ಸಿಬಿ 350 ಹಿಂಪಡೆದ ಹೋಂಡಾ ಮೋಟಾರ್‌ಸೈಕಲ್

ಎಂಜಿನ್ ಕವರ್, ಎಕ್ಸಾಸ್ಟ್ ಸೇರಿದಂತೆ ಈ ಬೈಕಿನ ಹಲವು ಭಾಗಗಳಲ್ಲಿ ಕ್ರೋಮ್ ಬಣ್ಣವನ್ನು ನೀಡಲಾಗಿದ್ದು, ಎಕ್ಸಾಸ್ಟ್ ಕ್ಲಾಸಿಕ್ ಲೋ-ಪಿಚ್ ಥಂಪಿ ನೋಟ್ ಹೊಂದಿದೆ. ಬೈಕ್ ವಿನ್ಯಾಸವನ್ನು ಸರಳಗೊಳಿಸಲು ಹಿಂಭಾಗವನ್ನು ಚಿಕ್ಕದು ಮಾಡಲಾಗಿದ್ದು, ಈ ಸೆಗ್ ಮೆಂಟಿನಲ್ಲಿ ಮೊದಲ ಬಾರಿಗೆ ಈ ಬೈಕಿನಲ್ಲಿ ರಿಂಗ್-ಟೈಪ್ ವಿಂಕರ್ ಗಳನ್ನು ನೀಡಲಾಗಿದೆ.

ತಾಂತ್ರಿಕ ದೋಷ: ಹೈನೆಸ್ ಸಿಬಿ 350 ಹಿಂಪಡೆದ ಹೋಂಡಾ ಮೋಟಾರ್‌ಸೈಕಲ್

ಹೋಂಡಾ ಹೈನೆಸ್ ಸಿಬಿ 350 ಬೈಕಿನಲ್ಲಿ ಅಸಿಸ್ಟ್ ಸ್ಲಿಪ್ಪರ್-ಕ್ಲಚ್, ಎಂಜಿನ್ ಸ್ಟಾರ್ಟ್/ಸ್ಟಾಪ್ ಸ್ವಿಚ್, ಯುಎಸ್‌ಬಿ ಟೈಪ್-ಸಿ ಚಾರ್ಜಿಂಗ್ ಪೋರ್ಟ್‌, ಹೋಂಡಾ ಸೆಲೆಕ್ಟಬಲ್ ಟಾರ್ಕ್ ಕಂಟ್ರೋಲ್ ಸಿಸ್ಟಂ ಸೇರಿದಂತೆ ಹಲವಾರು ಫೀಚರ್ಸ್‌ಗಳಿವೆ.

MOST READ: ಪ್ರತಿ ಚಾರ್ಜ್‌ಗೆ ಬರೋಬ್ಬರಿ 240ಕಿ.ಮೀ ಮೈಲೇಜ್ ನೀಡುವ ಇವಿ ಸ್ಕೂಟರ್ ಬಿಡುಗಡೆ ಮಾಡಲಿದೆ ಓಲಾ

ತಾಂತ್ರಿಕ ದೋಷ: ಹೈನೆಸ್ ಸಿಬಿ 350 ಹಿಂಪಡೆದ ಹೋಂಡಾ ಮೋಟಾರ್‌ಸೈಕಲ್

ಈ ಬೈಕ್ ಅನಲಾಗ್-ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಹೋಂಡಾ ಸ್ಮಾರ್ಟ್‌ಫೋನ್ ವಾಯ್ಸ್ ಕಂಟ್ರೋಲ್ ಸಿಸ್ಟಂಗಳನ್ನು ಹೊಂದಿದ್ದು, 5-ಸ್ಪೀಡ್ ಗೇರ್‌ಬಾಕ್ಸ್ ಪ್ರೇರಣೆಯ 348.36 ಸಿಸಿ ಏರ್-ಕೂಲ್ಡ್ ಸಿಂಗಲ್ ಸಿಲಿಂಡರ್ ಎಂಜಿನ್‌ನೊಂದಿಗೆ 20.8-ಬಿಎಚ್‌ಪಿ ಮತ್ತು 30-ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ.

Most Read Articles

Kannada
English summary
Honda H’ness CB350 recalled over gear issue. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X