ಆಕರ್ಷಕ ವಿನ್ಯಾಸದಲ್ಲಿ ಅನಾವರಣಗೊಂಡ 2022ರ Kawasaki W800 ಬೈಕ್

ಜನಪ್ರಿಯ ದ್ವಿಚಕ್ರ ವಾಹನ ತಯಾರಕ ಕಂಪನಿಯಾದ ಕವಾಸಕಿ ತನ್ನ 2022ರ ಕವಾಸಕಿ ಡಬ್ಲ್ಯೂ800(Kawasaki W800) ಬೈಕ್ ಅನ್ನು ಅಂತರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಅನಾವರಣಗೊಳಿಸಿದೆ. ನವೀಕರಿಸಿದ 2022ರ ಕವಾಸಕಿ ಡಬ್ಲ್ಯೂ800 ಬೈಕ್ ಮುಂದಿನ ವರ್ಷದ ಆರಂಭದಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ.

ಆಕರ್ಷಕ ವಿನ್ಯಾಸದಲ್ಲಿ ಅನಾವರಣಗೊಂಡ 2022ರ Kawasaki W800 ಬೈಕ್

ಕವಾಸಕಿ ಡಬ್ಲ್ಯೂ800 ಬೈಕ್ ಅನ್ನು ಕೆಲವು ವಾರಗಳ ಹಿಂದೆ, ಇದನ್ನು ಯುನೈಟೆಡ್ ಸ್ಟೇಟ್ಸ್‌ನಲ್ಲಿ ಪರಿಚಯಿಸಲಾಯಿತು ಮತ್ತು ಈಗ ಈ ರೆಟ್ರೊ ಕ್ಲಾಸಿಕ್ ಮೋಟಾರ್‌ಸೈಕಲ್ ಅನ್ನು ಯುರೋಪಿಯನ್ ಮಾರುಕಟ್ಟೆಗಳಿಗೂ ಪರಿಚಯಿಸಿದೆ. ನವೀಕರಿಸಿದ 2022ರ ಕವಾಸಕಿ ಡಬ್ಲ್ಯೂ800 ಬೈಕ್ ಕೆಲವು ಕಾಸ್ಮೆಟಿಕ್ ಬದಲಾವಣೆಗಳನ್ನು ಪಡೆಯುತ್ತದೆ, ಇದರಲ್ಲಿ ಹೊಸ ಬಣ್ಣದ ಯೋಜನೆ, ಆಕರ್ಷಕ ದೇಹದ ಗ್ರಾಫಿಕ್ಸ್ ಮತ್ತು ಇತ್ಯಾದಿಗಳನ್ನು ಒಳಗೊಂಡಿದೆ, ಆದರೆ ಯಾಂತ್ರಿಕ ವಿಭಾಗದಲ್ಲಿ ಯಾವುದೇ ಬದಲಾವಣೆಗಳನ್ನು ಮಾಡಲಾಗಿಲ್ಲ, ಅದೇ ರೀತಿ ಮುಂದುವರೆದಿದೆ.

ಆಕರ್ಷಕ ವಿನ್ಯಾಸದಲ್ಲಿ ಅನಾವರಣಗೊಂಡ 2022ರ Kawasaki W800 ಬೈಕ್

ಜಾಗತಿಕವಾಗಿ 2022ರ ಕವಾಸಕಿ ಡಬ್ಲ್ಯೂ800 ಬೈಕ್ ಹೊಸ ಡ್ಯುಯಲ್-ಟೋನ್ ಕಲರ್ ಸ್ಕೀಮ್‌ನಲ್ಲಿ ಪರಿಚಯಿಸಲಾಗಿದೆ, ಇದು ಮೆಟಾಲಿಕ್ ಡಯಾಬ್ಲೊ ಬ್ಲ್ಯಾಕ್ ಜೊತೆಗೆ ಕ್ಯಾಂಡಿ ಫೈರ್ ರೆಡ್ ಎಂದು ಕರೆಯಲಾಗುತ್ತದೆ. ಇದು ಮೆಟಾಲಿಕ್ ಶೇಡ್ ಆಗಿದ್ದರೂ, ಪ್ರಸ್ತುತ ಭಾರತದಲ್ಲಿ ಮಾರಾಟದಲ್ಲಿರುವ ಡಬ್ಲ್ಯೂ800 ಮ್ಯಾಟ್ ಪೇಂಟ್ ಸ್ಕೀಮ್ ಅನ್ನು ಪಡೆಯುತ್ತದೆ.

ಆಕರ್ಷಕ ವಿನ್ಯಾಸದಲ್ಲಿ ಅನಾವರಣಗೊಂಡ 2022ರ Kawasaki W800 ಬೈಕ್

ಈ ನವೀಕರಿಸಿದ ರೆಟ್ರೊ ಕ್ಲಾಸಿಕ್ ಬೈಕ್ ಫ್ಯೂಯಲ್ ಟ್ಯಾಂಕ್‌ನಲ್ಲಿ ಬಿಳಿ ಸ್ಟ್ರಿಪ್ ಗಳ ಜೊತೆ ಜೊತೆಗೆ ಬಹಳಷ್ಟು ಕ್ರೋಮ್ ಅಸ್ಸೆಂಟ್ ಗಳನ್ನು ಪಡೆಯುತ್ತದೆ. ಬೈಕಿನ ಸೈಡ್ ಪ್ಯಾನೆಲ್‌ಗಳು ಬ್ಲ್ಯಾಕ್ ಬಣ್ಣದಲ್ಲಿದೆ. ಇದರ ರಿಯರ್ ವ್ಯೂ ಮಿರರ್‌ಗಳು, ಫ್ರಂಟ್ ಮತ್ತು ರಿಯರ್ ಫೆಂಡರ್‌ಗಳು, ಹೆಡ್‌ಲ್ಯಾಂಪ್ ಸರೌಂಡ್‌ಗಳು, ಎಕ್ಸಾಸ್ಟ್ ಇತ್ಯಾದಿಗಳನ್ನು ಕ್ರೋಮ್‌ನ ಫಿನಿಶಿಂಗ್ ಹೊಂದಿದೆ.

ಆಕರ್ಷಕ ವಿನ್ಯಾಸದಲ್ಲಿ ಅನಾವರಣಗೊಂಡ 2022ರ Kawasaki W800 ಬೈಕ್

2022ರ ಕವಾಸಕಿ ಡಬ್ಲ್ಯೂ800 ಬೈಕ್ ಮೆಕ್ಯಾನಿಕಲ್‌ ಅಂಶಗಳಲ್ಲಿ ಯಾವುದೇ ಬದಲಾವಣೆಗಳನ್ನು ಹೊಂದಿಲ್ಲ. ಇದರಲ್ಲಿ ಅದೇ 773 ಸಿಸಿಯ ವರ್ಟಿಕಲ್ ಟ್ವಿನ್ ಸಿಲಿಂಡರ್, ಬೆವೆಲ್ ಡ್ರೈವನ್, ಏರ್ ಕೂಲ್ಡ್, ಫ್ಯೂಯಲ್ ಇಂಜೆಕ್ಷನ್ ಸಿಸ್ಟಂ ಹೊಂದಿರುವ ಎಂಜಿನ್ ಅನ್ನು ಅಳವಡಿಸಲಾಗಿದೆ.

ಆಕರ್ಷಕ ವಿನ್ಯಾಸದಲ್ಲಿ ಅನಾವರಣಗೊಂಡ 2022ರ Kawasaki W800 ಬೈಕ್

ಈ ಎಂಜಿನ್ 6,500 ಆರ್‌ಪಿಎಂನಲ್ಲಿ 48 ಬಿಹೆಚ್‍ಪಿ ಪವರ್ ಮತ್ತು 4,800 ಆರ್‌ಪಿಎಂನಲ್ಲಿ 62.9 ಎನ್‌ಎಂ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ ಅನ್ನು 5-ಸ್ಪೀಡ್ ಗೇರ್‌ಬಾಕ್ಸ್‌ಗೆ ಜೋಡಿಸಲಾಗಿದೆ ಮತ್ತು ಇದು ಅಸಿಸ್ಟ್ ಮತ್ತು ಸ್ಲಿಪ್ಪರ್ ಕ್ಲಚ್ ಅನ್ನು ಸಹ ಪಡೆಯುತ್ತದೆ.

ಆಕರ್ಷಕ ವಿನ್ಯಾಸದಲ್ಲಿ ಅನಾವರಣಗೊಂಡ 2022ರ Kawasaki W800 ಬೈಕ್

2022ರ ಕವಾಸಕಿ ಡಬ್ಲ್ಯೂ800 ಬೈಕ್‌ನ ವಿನ್ಯಾಸವನ್ನು ಕವಾಸಕಿ ಡಬ್ಲ್ಯು1 650 ಸಿಸಿ ಬೈಕ್‌‌ನಿಂದ ಎರೆವಲು ಪಡೆಯಲಾಗಿದೆ. ಈ ಬೈಕ್ ರೌಂಡ್ ಎಲ್ಇಡಿ ಹೆಡ್‌ಲೈಟ್ ಗಳನ್ನು ಹೊಂದಿದೆ. ಇದರ ಜೊತೆಗೆ ಈ ಬೈಕಿನಲ್ಲಿ ಟಯರ್ ಡ್ರಾಪ್ ಫ್ಯೂಯಲ್ ಟ್ಯಾಂಕ್, ಸ್ಪೋಕ್ ವ್ಹೀಲ್ಸ್, ವೈಡ್ ಹ್ಯಾಂಡಲ್ ಬಾರ್ ಹಾಗೂ ಸೆಂಟರ್-ಸೆಟ್ ಫೂಟ್ ಪೆಗ್‌ಗಳನ್ನು ಅಳವಡಿಸಲಾಗಿದೆ. ಈ ಬೈಕ್‌ಗೆ ರೆಟ್ರೊ ಲುಕ್ ನೀಡಲು ಕ್ರೋಮ್, ಡಿಜಿಟಲ್ ರೀಡ್‌ ಔಟ್‌ನೊಂದಿಗೆ ಟ್ವಿನ್-ಪಾಡ್ ಇನ್ಸ್‌ಟ್ರೂಮೆಂಟ್ ಕನ್ಸೋಲ್ ಅನ್ನು ಅಳವಡಿಸಲಾಗಿದೆ.

ಆಕರ್ಷಕ ವಿನ್ಯಾಸದಲ್ಲಿ ಅನಾವರಣಗೊಂಡ 2022ರ Kawasaki W800 ಬೈಕ್

ಹೊಸ ಕವಾಸಕಿ ಡಬ್ಲ್ಯೂ800 ಬೈಕ್ ಸಸ್ಪೆಂಕ್ಷನ್ ಸೆಟಪ್ ಬಗ್ಗೆ ಹೇಳುವುದಾದರೆ, ಇದು ಡಬಲ್-ಕ್ರೇಡಲ್ ಫ್ರೇಮ್ ಅನ್ನು ಆಧರಿಸಿದೆ. ಇದು ಮುಂಭಾಗದಲ್ಲಿ ಟೆಲಿಸ್ಕೋಪಿಕ್ ಫೋರ್ಕ್‌ಗಳನ್ನು ಮತ್ತು ಹಿಂಭಾಗದಲ್ಲಿ ಡ್ಯುಯಲ್ ಸ್ಪ್ರಿಂಗ್-ಲೋಡೆಡ್ ಶಾಕ್ ಅಬ್ಸಾರ್ಬರ್‌ಗಳನ್ನು ಪಡೆಯುತ್ತದೆ.

ಆಕರ್ಷಕ ವಿನ್ಯಾಸದಲ್ಲಿ ಅನಾವರಣಗೊಂಡ 2022ರ Kawasaki W800 ಬೈಕ್

ಇನ್ನು ಪ್ರಮುಖವಾಗಿ 2022ರ ಕವಾಸಕಿ ಡಬ್ಲ್ಯೂ800 ಬೈಕಿನ ಬ್ರೇಕಿಂಗ್ ಸಿಸ್ಟಂ ಬಗ್ಗೆ ಹೇಳುವುದಾದರೆ, ಮುಂಭಾಗದಲ್ಲಿ 320 ಎಂಎಂ ಡಿಸ್ಕ್ ಬ್ರೇಕ್ ಮತ್ತು ಹಿಂಭಾಗದಲ್ಲಿ 270 ಎಂಎಂ ಡಿಸ್ಕ್ ಯೂನಿಟ್ ಅನ್ನು ನೀಡಲಾಗಿದೆ. ಇದರೊಂದಿಗೆ ಹೆಚ್ಚಿನ ಸುರಕ್ಷತೆಗಾಗಿ ಡ್ಯುಯಲ್-ಚಾನೆಲ್ ಎಬಿಎಸ್ ಅನ್ನು ಸ್ಟ್ಯಾಂಡರ್ಡ್ ಆಗಿ ನೀಡಲಾಗುತ್ತದೆ.

ಆಕರ್ಷಕ ವಿನ್ಯಾಸದಲ್ಲಿ ಅನಾವರಣಗೊಂಡ 2022ರ Kawasaki W800 ಬೈಕ್

ಕವಾಸಕಿಯು ತನ್ನ ನಿಂಜಾ ಝಡ್ಎಕ್ಸ್-10ಆರ್ ಬೈಕನ್ನು ಹೊಸ ಬಣ್ಣದ ಅಯ್ಕೆಯಲ್ಲಿ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಇತ್ತೀಚೆಗೆ ಪರಿಚಯಿಸಿತ್ತು. ಕವಾಸಕಿ ನಿಂಜಾ ಝಡ್ಎಕ್ಸ್-10ಆರ್ ವಿಶ್ವದಾದ್ಯಂತ ಅತ್ಯಂತ ಜನಪ್ರಿಯ ಲೀಟರ್-ಕ್ಲಾಸ್ ಬೈಕ್‌ಗಳಲ್ಲಿ ಒಂದಾಗಿದೆ. 2022ರ ಕವಾಸಕಿ ನಿಂಜಾ ಝಡ್ಎಕ್ಸ್-10ಆರ್ ಬೈಕ್ ಈಗ ಹೊಸ ಬಣ್ಣದ ಆಯ್ಕೆಯನ್ನು ಪಡೆದುಕೊಂಡಿದೆ. ಇದು ಮೆಟಾಲಿಕ್ ಮ್ಯಾಟ್ ಗ್ರ್ಯಾಫೆನೆಸ್ಟೀಲ್ ಗ್ರೇ ಬಣ್ಣದ ಜೊತೆಗೆ ಮೆಟಾಲಿಕ್ ಡಯಾಬ್ಲೊ ಬ್ಲ್ಯಾಕ್‌ನ ಅಂಶಗಳನ್ನು ಒಳಗೊಂಡಿದೆ. ಈ ಹೊಸ ಬಣ್ಣದ ಜೊತೆಗೆ ರೆಡ್ ಪಿನ್‌ಸ್ಟ್ರೈಪ್‌ಗಳನ್ನು ಮತ್ತು ಸೈಡ್ ಫೇರಿಂಗ್ ಅನ್ನು ಹೊಂದಿದೆ.

ಆಕರ್ಷಕ ವಿನ್ಯಾಸದಲ್ಲಿ ಅನಾವರಣಗೊಂಡ 2022ರ Kawasaki W800 ಬೈಕ್

2022ರ ಕವಾಸಕಿ ನಿಂಜಾ ಝಡ್ಎಕ್ಸ್-10ಆರ್ ಬೈಕ್ ಶೀಘ್ರದಲ್ಲೇ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಲಭ್ಯವಿರಲಿದೆ, ಮುಂದಿನ ವರ್ಷ ಭಾರತದಲ್ಲಿ ಇದನ್ನು ಬಿಡುಗಡೆ ಮಾಡಬಹುದು ಎಂದು ನಾವು ನಿರೀಕ್ಷಿಸುತ್ತೆವೆ.2021ರ ಕವಾಸಕಿ ನಿಂಜಾ ಝಡ್ಎಕ್ಸ್-10ಆರ್ ಬೈಕ್ ಈಗಾಗಲೇ ಭಾರತೀಯ ಮಾರುಕಟ್ಟೆಯಲ್ಲಿ ಲಭ್ಯವಿದೆ. ಈ ಪ್ರೀಮಿಯಂ ಸೂಪರ್‌ಸ್ಪೋರ್ಟ್ ಬೈಕನ್ನು ಬಿಎಸ್ 6 ಮಾಲಿನ್ಯ ನಿಯಮಕ್ಕೆ ಅನುಸಾರವಾಗಿ ನವೀಕರಿಸಲಾಗಿದೆ. ಇನ್ನು ಇತರ ಅಂತರರಾಷ್ಟ್ರೀಯ ಮಾರುಕಟ್ಟೆಗಳಿಗಾಗಿ ಯುರೊ 6 ಮಾಲಿನ್ಯ ನಿಯಮಕ್ಕೆ ಅನುಗುಣವಾಗಿ ನವೀಕರಿಸಲಾಗಿದೆ. ಇದರೊಂದಿಗೆ ಕೆಲವು ಹೊಸ ಫೀಚರ್ ಗಳನ್ನು ಕೂಡ ಪಡೆದುಕೊಂಡಿವೆ.

ಆಕರ್ಷಕ ವಿನ್ಯಾಸದಲ್ಲಿ ಅನಾವರಣಗೊಂಡ 2022ರ Kawasaki W800 ಬೈಕ್

ಪ್ರಸ್ತುತ ಭಾರತೀಯ ಮಾರುಕಟ್ಟೆಯಲ್ಲಿ ಕವಾಸಕಿ ಡಬ್ಲ್ಯೂ800 ಬೈಕ್ ಬೆಲೆಯು ದೆಹಲಿ ಎಕ್ಸ್ ಶೋರೂಂ ಪ್ರಕಾರ ರೂ.7.26 ಲಕ್ಷಗಳಾಗಿದೆ. ಇನ್ನು 2022ರ ಕವಾಸಕಿ ಡಬ್ಲ್ಯೂ800 ಮಾದರಿಯನ್ನು ಪ್ರಸ್ತುತ ಬೆಲೆಗಿಂತ ಸ್ವಲ್ಪ ಹೆಚ್ಚು ಪ್ರೀಮಿಯಂ ಆಗಿ ಬಿಡುಗಡೆಗೊಳಿಸಬಹುದು ಎಂದು ನಿರೀಕ್ಷಿಸುತ್ತೇವೆ, 2022ರ ಕವಾಸಕಿ ಡಬ್ಲ್ಯೂ800 ಬೈಕ್ ಭಾರತದಲ್ಲಿ ಮುಂದಿನ ವರ್ಷ ಬಿಡುಗಡೆಯಾಗಲಿದೆ.

Most Read Articles

Kannada
English summary
Kawasaki unveiled 2022 w800 globally india launch will be next year details
Story first published: Thursday, October 28, 2021, 10:08 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X