ಮೇಡ್ ಇನ್ ಇಂಡಿಯಾ ಎಲೆಕ್ಟ್ರಿಕ್ ಸೈಕಲ್‌ಗಳ ಬುಕ್ಕಿಂಗ್ ಆರಂಭಿಸಿದ ನಹಾಕ್ ಮೋಟಾರ್ಸ್

ನಹಾಕ್ ಮೋಟಾರ್ಸ್ ಕಂಪನಿಯು ತನ್ನ ಹೊಸ ಮೇಡ್ ಇನ್ ಇಂಡಿಯಾ ಎಲೆಕ್ಟ್ರಿಕ್ ಸೈಕಲ್‌ಗಳನ್ನು ಮನೆ ಬಾಗಿಲಿಗೆ ವಿತರಿಸುವುದಾಗಿ ತಿಳಿಸಿದೆ. ಕಂಪನಿಯು ದೇಶಿಯ ಮಾರುಕಟ್ಟೆಯಲ್ಲಿ ಗರುಡ ಹಾಗೂ ಜಿಪ್ಪಿ ಎಂಬ ಎರಡು ಸೈಕಲ್‌ಗಳನ್ನು ಬಿಡುಗಡೆಗೊಳಿಸಿದೆ.

ಮೇಡ್ ಇನ್ ಇಂಡಿಯಾ ಎಲೆಕ್ಟ್ರಿಕ್ ಸೈಕಲ್‌ಗಳ ಬುಕ್ಕಿಂಗ್ ಆರಂಭಿಸಿದ ನಹಾಕ್ ಮೋಟಾರ್ಸ್

ಗರುಡ ಸೈಕಲ್ ಬೆಲೆ ರೂ.31,999ಗಳಾದರೆ, ಜಿಪ್ಪಿ ಸೈಕಲ್ ಬೆಲೆ ರೂ.33,499ಗಳಾಗಿದೆ. ಕಂಪನಿಯು ಈ ಸೈಕಲ್‌ಗಳಿಗಾಗಿ ದೇಶಾದ್ಯಂತ ಬುಕ್ಕಿಂಗ್'ಗಳನ್ನು ಆರಂಭಿಸಿದೆ. ಮೊದಲ ಹಂತದ ಬುಕ್ಕಿಂಗ್ ಜುಲೈ 2ರಿಂದ ಜುಲೈ 11ರವರೆಗೆ ತೆರೆದಿರುತ್ತದೆ.

ಮೇಡ್ ಇನ್ ಇಂಡಿಯಾ ಎಲೆಕ್ಟ್ರಿಕ್ ಸೈಕಲ್‌ಗಳ ಬುಕ್ಕಿಂಗ್ ಆರಂಭಿಸಿದ ನಹಾಕ್ ಮೋಟಾರ್ಸ್

ಈ ಸೈಕಲ್‌ಗಳನ್ನು ಖರೀದಿಸ ಬಯಸುವವರು ನಹಾಕ್ ಮೋಟರ್ಸ್ ಕಂಪನಿಯ ವೆಬ್ ಸೈಟ್'ನಲ್ಲಿ ಬುಕ್ ಮಾಡಬಹುದು. ಗ್ರಾಹಕರು www.nahakmotors.eco ವೆಬ್ ಸೈಟ್'ಗೆ ತೆರಳಿ ತಮ್ಮ ಇಷ್ಟದ ಮಾದರಿಯನ್ನು ಆಯ್ಕೆ ಮಾಡಿಕೊಳ್ಳಬಹುದು.

ಮೇಡ್ ಇನ್ ಇಂಡಿಯಾ ಎಲೆಕ್ಟ್ರಿಕ್ ಸೈಕಲ್‌ಗಳ ಬುಕ್ಕಿಂಗ್ ಆರಂಭಿಸಿದ ನಹಾಕ್ ಮೋಟಾರ್ಸ್

ಗ್ರಾಹಕರು ರೂ.2999 ಪಾವತಿಸಿ ಈ ಸೈಕಲ್‌ಗಳನ್ನು ಬುಕ್ಕಿಂಗ್ ಮಾಡಬಹುದು. ನಹಾಕ್ ಮೋಟಾರ್ಸ್ ಕಂಪನಿಯು ಜುಲೈ 13ರ ವೇಳೆಗೆ ಈ ಎಲೆಕ್ಟ್ರಿಕ್ ಸೈಕಲ್‌ಗಳನ್ನು ಬುಕ್ಕಿಂಗ್ ಮಾಡಿರುವವರ ಪಟ್ಟಿಯನ್ನು ಸಿದ್ದಪಡಿಸಿಕೊಳ್ಳಲಿದೆ.

ಮೇಡ್ ಇನ್ ಇಂಡಿಯಾ ಎಲೆಕ್ಟ್ರಿಕ್ ಸೈಕಲ್‌ಗಳ ಬುಕ್ಕಿಂಗ್ ಆರಂಭಿಸಿದ ನಹಾಕ್ ಮೋಟಾರ್ಸ್

ಬುಕ್ಕಿಂಗ್ ಪ್ರಕ್ರಿಯೆ ಪೂರ್ಣಗೊಂಡ ನಂತರ ಆಗಸ್ಟ್ 15ರಿಂದ ಈ ಸೈಕಲ್‌ಗಳ ಹೋಂ ಡೆಲಿವರಿಯನ್ನು ಆರಂಭಿಸಲಾಗುತ್ತದೆ. ಈ ಎರಡೂ ಮಾದರಿಗಳು ಹೊಸ ತೆಗೆಯಬಹುದಾದ ಬ್ಯಾಟರಿ, ಎಲ್‌ಸಿ‌ಡಿ ಡಿಸ್ ಪ್ಲೇ, ಪೆಡಲ್ ಸೆನ್ಸಾರ್'ನಂತಹ ಹಲವಾರು ಸುಧಾರಿತ ಫೀಚರ್'ಗಳನ್ನು ಹೊಂದಿವೆ.

ಮೇಡ್ ಇನ್ ಇಂಡಿಯಾ ಎಲೆಕ್ಟ್ರಿಕ್ ಸೈಕಲ್‌ಗಳ ಬುಕ್ಕಿಂಗ್ ಆರಂಭಿಸಿದ ನಹಾಕ್ ಮೋಟಾರ್ಸ್

ಈ ಸೈಕಲ್‌ಗಳಲ್ಲಿ ಅಳವಡಿಸಿರುವ ಬ್ಯಾಟರಿ ಪೂರ್ತಿಯಾಗಿ ಚಾರ್ಜ್ ಆಗಲು ಸುಮಾರು 3 ಗಂಟೆ ಬೇಕಾಗುತ್ತದೆ. ಚಾರ್ಜರ್ ಅನ್ನು ಸಾಮಾನ್ಯ ಎಲೆಕ್ಟ್ರಿಕ್ ಸಾಕೆಟ್‌ಗೆ ಪ್ಲಗ್ ಮಾಡುವ ಮೂಲಕ ಈ ಬ್ಯಾಟರಿಯನ್ನು ಪೂರ್ತಿಯಾಗಿ ಚಾರ್ಜ್ ಮಾಡಬಹುದು.

ಮೇಡ್ ಇನ್ ಇಂಡಿಯಾ ಎಲೆಕ್ಟ್ರಿಕ್ ಸೈಕಲ್‌ಗಳ ಬುಕ್ಕಿಂಗ್ ಆರಂಭಿಸಿದ ನಹಾಕ್ ಮೋಟಾರ್ಸ್

ಈ ಎಲೆಕ್ಟ್ರಿಕ್ ಸೈಕಲ್‌ಗಳು ಪೂರ್ತಿಯಾಗಿ ಚಾರ್ಜ್ ಆದ ನಂತರ ಸುಮಾರು 40 ಕಿ.ಮೀ ಸಂಚರಿಸಬಲ್ಲವು. ಈ ಎಲೆಕ್ಟ್ರಿಕ್ ಸೈಕಲ್‌ಗಳನ್ನು ರಸ್ತೆಗಳಲ್ಲಿ ಚಾಲನೆ ಮಾಡಲು ಡ್ರೈವಿಂಗ್ ಲೈಸೆನ್ಸ್'ನ ಅಗತ್ಯವಿಲ್ಲ.

ಮೇಡ್ ಇನ್ ಇಂಡಿಯಾ ಎಲೆಕ್ಟ್ರಿಕ್ ಸೈಕಲ್‌ಗಳ ಬುಕ್ಕಿಂಗ್ ಆರಂಭಿಸಿದ ನಹಾಕ್ ಮೋಟಾರ್ಸ್

ಈ ಎಲೆಕ್ಟ್ರಿಕ್ ಸೈಕಲ್‌ಗಳನ್ನು ಚಾಲನೆ ಮಾಡಲು ಪ್ರತಿ ಕಿ.ಮೀಗೆ ಕೇವಲ 10 ಪೈಸೆ ಖರ್ಚಾಗುತ್ತದೆ ಎಂದು ಎಂದು ನಹಾಕ್ ಮೋಟಾರ್ಸ್ ಕಂಪನಿ ಹೇಳಿಕೊಂಡಿದೆ. ಕಂಪನಿಯ ಹೋಂ ಡೆಲಿವರಿ ಕಲ್ಪನೆ ಬಗ್ಗೆ ನಹಾಕ್ ಗ್ರೂಪ್‌ನ ಅಧ್ಯಕ್ಷರಾದ ಡಾ.ಪ್ರವತ್ ನಹಾಕ್ ಮಾಹಿತಿ ನೀಡಿದ್ದಾರೆ.

ಮೇಡ್ ಇನ್ ಇಂಡಿಯಾ ಎಲೆಕ್ಟ್ರಿಕ್ ಸೈಕಲ್‌ಗಳ ಬುಕ್ಕಿಂಗ್ ಆರಂಭಿಸಿದ ನಹಾಕ್ ಮೋಟಾರ್ಸ್

ನಾವು ಈ ವರ್ಷದ ಆರಂಭದಲ್ಲಿ ನಮ್ಮ ಎಲೆಕ್ಟ್ರಿಕ್ ಸೈಕಲ್‌ಗಳನ್ನು ಆರಂಭಿಸಿದೆವು. ಆಗಿನಿಂದ ಸಾಕಷ್ಟು ಜನರು ಈ ಸೈಕಲ್‌ಗಳ ಬಗ್ಗೆ ವಿಚಾರಿಸಿದ್ದಾರೆ. ಆದರೆ ಕೋವಿಡ್ 19 ಕಾರಣದಿಂದಾಗಿ ಈ ಸೈಕಲ್‌ಗಳ ಉತ್ಪಾದನೆಯನ್ನು ನಿಧಾನಗೊಳಿಸಲಾಗಿತ್ತು.

ಮೇಡ್ ಇನ್ ಇಂಡಿಯಾ ಎಲೆಕ್ಟ್ರಿಕ್ ಸೈಕಲ್‌ಗಳ ಬುಕ್ಕಿಂಗ್ ಆರಂಭಿಸಿದ ನಹಾಕ್ ಮೋಟಾರ್ಸ್

ಎಲೆಕ್ಟ್ರಿಕ್ ಸೈಕಲ್‌ಗಳಿಗೆ ಭಾರಿ ಬೇಡಿಕೆಯಿದ್ದು, ಅವುಗಳನ್ನು ಗ್ರಾಹಕರ ಮನೆ ಬಾಗಿಲಿಗೆ ತಲುಪಲು ನಾವು ನಿರ್ಧರಿಸಿದ್ದೇವೆ. ಆಗಸ್ಟ್ 15ರಿಂದ ಗ್ರಾಹಕರ ಮನೆ ಬಾಗಿಲಿಗೆ ನಾವು ಈ ಎಲೆಕ್ಟ್ರಿಕ್ ಸೈಕಲ್‌ಗಳನ್ನು ತಲುಪಿಸಲಿದ್ದೇವೆ ಎಂದು ಹೇಳಿದರು.

Most Read Articles

Kannada
English summary
Nahak Motors starts online booking for Garuda and Zippy electric bicycles. Read in Kannada.
Story first published: Monday, July 5, 2021, 10:01 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X