ಸಂಚಾರಿ ನಿಯಮ ಉಲ್ಲಂಘನೆ- ಮಾಡಿಫೈ ಆರ್‌ಇ ಬೈಕ್ ಮಾಲೀಕರಿಂದ ರೂ. 30 ಲಕ್ಷ ದಂಡ ವಸೂಲಿ

ಹೆಚ್ಚುತ್ತಿರುವ ಮಾಡಿಫೈಡ್ ವಾಹನಗಳ ಹಾವಳಿಯನ್ನು ತಡೆಯಲು ಟ್ರಾಫಿಕ್ ಪೊಲೀಸರು ಹಲವು ಕಠಿಣ ಕ್ರಮಗಳನ್ನು ಕೈಗೊಳ್ಳುತ್ತಿದ್ದು, ಕಾನೂನುಬಾಹಿರವಾಗಿ ವಾಹನಗಳನ್ನು ಮಾಡಿಫೈ ಮಾಡುವುದಲ್ಲದೆ ಸಾರ್ವಜನಿಕರಿಗೆ ಕಿರಿಕಿರಿ ಉಂಟು ಮಾಡುತ್ತಿರುವ ವಾಹನ ಮಾಲೀಕರ ವಿರುದ್ದ ಭಾರೀ ಪ್ರಮಾಣದ ದಂಡ ವಸೂಲಿ ಮಾಡಲಾಗುತ್ತಿದೆ.

ಮಾಡಿಫೈ ಆರ್‌ಇ ಬೈಕ್ ಮಾಲೀಕರಿಂದ ರೂ. 30 ಲಕ್ಷ ದಂಡ ವಸೂಲಿ

ದೇಶಾದ್ಯಂತ ವಿವಿಧ ನಗರಗಳಲ್ಲಿ ಮಾಡಿಫೈ ವಾಹನಗಳ ವಿರುದ್ಧ ದೊಡ್ಡ ಮಟ್ಟದ ಕಾರ್ಯಾಚರಣೆ ನಡೆಸಲಾಗುತ್ತಿದ್ದು, ಇತ್ತೀಚೆಗೆ ಪುಣೆ ನಗರದ ಹೊರವಲಯದಲ್ಲಿರುವ ಪಿಂಪ್ರಿ-ಚಿಂಚ್ವಾಡ್ ವ್ಯಾಪ್ತಿಯಲ್ಲೂ ಕೂಡಾ ರಾಯಲ್ ಎನ್‌ಫೀಲ್ಡ್ ಬೈಕ್‌ಗಳಲ್ಲಿ ಅಳವಡಿಸಲಾಗುವ ಆಫ್ಟರ್ ಮಾರ್ಕೆಟ್ ಎಕ್ಸಾಸ್ಟ್ ವಿರುದ್ಧ ವಿಶೇಷ ಕಾರ್ಯಾಚರಣೆ ನಡೆಸಲಾಗಿದೆ. ರಾಯಲ್ ಎನ್‌ಫೀಲ್ಡ್ ಬೈಕ್‌ಗಳಲ್ಲಿ ಅಳವಡಿಸಲಾಗುವ ಎಕ್ಸಾಸ್ಟ್ ತೆಗೆದು ಹಾಕುವ ಉದ್ದೇಶದಿಂದಲೇ ನಡೆಸಲಾಗದ ಅಭಿಯಾನದಲ್ಲಿ ಸಮಾರು 2,970 ಆರ್‌ಇ ಬೈಕ್ ಮಾಲೀಕರು ಸಿಕ್ಕಿಬಿದ್ದಿದ್ದಾರೆ.

ಮಾಡಿಫೈ ಆರ್‌ಇ ಬೈಕ್ ಮಾಲೀಕರಿಂದ ರೂ. 30 ಲಕ್ಷ ದಂಡ ವಸೂಲಿ

ಸಾರ್ವಜನಿಕ ದೂರುಗಳನ್ನು ಆಧರಿಸಿ ನಡೆಸಲಾದ ವಿಶೇಷ ಅಭಿಯಾನದಲ್ಲಿ ನಿಯಮ ಉಲ್ಲಂಘಿಸಿದ್ದ 2,970 ರಾಯಲ್ ಎನ್‌ಫೀಲ್ಡ್ ಬೈಕ್ ಮಾಲೀಕರು ಬರೋಬ್ಬರಿ ರೂ. 30 ಲಕ್ಷ ದಂಡ ಪಾವತಿಸಿದ್ದು, ದಂಡದ ಜೊತೆಗೆ ಸ್ಥಳದಲ್ಲೇ ಕರ್ಕಶ ಶಬ್ದ ಹೊಂದಿರುವ ಎಕ್ಸಾಸ್ಟ್‌ಗಳನ್ನು ಕಿತ್ತುಹಾಕಲಾಗುತ್ತಿದೆ.

ಮಾಡಿಫೈ ಆರ್‌ಇ ಬೈಕ್ ಮಾಲೀಕರಿಂದ ರೂ. 30 ಲಕ್ಷ ದಂಡ ವಸೂಲಿ

ವಶಪಡಿಸಿಕೊಳ್ಳಲಾದ ಸೈಲೆನ್ಸರ್ ಮತ್ತೆ ಬಳಕೆ ಮಾಡದಂತೆ ರೋಡ್ ರೋಲರ್ ಮೂಲಕ ಅನುಪಯುಕ್ತಗೊಳಿಸುತ್ತಿರುವ ಪೊಲೀಸರು ಆರ್‌ಇ ಬೈಕ್ ಮಾಲೀಕರಿಗೆ ಖಡಕ್ ವಾರ್ನಿಂಗ್ ನೀಡಲಾಗಿದ್ದು, ಮತ್ತೊಮ್ಮೆ ಸಿಕ್ಕಿಬಿದ್ದಲ್ಲಿ ಇನ್ನು ಹೆಚ್ಚಿನ ಮಟ್ಟದ ದಂಡ ವಿಧಿಸುವ ಎಚ್ಚರಿಕೆ ನೀಡಲಾಗುತ್ತಿದೆ.

ಮಾಡಿಫೈ ಆರ್‌ಇ ಬೈಕ್ ಮಾಲೀಕರಿಂದ ರೂ. 30 ಲಕ್ಷ ದಂಡ ವಸೂಲಿ

ಮೋಟಾರ್ ವೆಹಿಕಲ್ ನಿಯಮಗಳ ಪ್ರಕಾರ ಬೈಕ್ ಸೈಲೆನ್ಸರ್‌ನಿಂದ ಹೊರಸೂಸುವ ಶಬ್ದವು ಇಂತಿಷ್ಟೇ ಪ್ರಮಾಣದಲ್ಲಿರಬೇಕೆಂದು ರಾಷ್ಟ್ರೀಯ ಮಾನದಂಡಗಳನ್ನು ನಿಗದಿ ಪಡಿಸಲಾಗಿದ್ದರೂ 80 ಡೆಸಿಬಲ್ ಗಿಂತ ಹೆಚ್ಚಿನ ಶಬ್ದವನ್ನು ಹೊಂದಿರುವ ಸೈಲೆನ್ಸರ್‌ಗಳು ರಾಯಲ್ ಎನ್‌ಫೀಲ್ಡ್ ಬೈಕ್‌ಗಳಲ್ಲಿ ಹೆಚ್ಚಿನ ಮಟ್ಟದಲ್ಲಿ ಅಳವಡಿಕೆಯಾಗುತ್ತಿರುವುದು ಕಂಡುಬಂದಿದೆ.

ಮಾಡಿಫೈ ಆರ್‌ಇ ಬೈಕ್ ಮಾಲೀಕರಿಂದ ರೂ. 30 ಲಕ್ಷ ದಂಡ ವಸೂಲಿ

ಇದೇ ಕಾರಾಣಕ್ಕೆ ದೇಶಾದ್ಯಂತ ಪ್ರಮುಖ ನಗರಗಳಲ್ಲಿ ರಾಯಲ್ ಎನ್‌ಫೀಲ್ಡ್ ಬೈಕ್ ಮಾಲೀಕರ ವಿರುದ್ದ ಹಲವಾರು ಕಾರ್ಯಾಚರಣೆಗಳನ್ನು ಕೈಗೊಂಡಿರುವ ಸಂಚಾರಿ ಪೊಲೀಸರು ದಿನಂಪ್ರತಿ ಸಾವಿರಾರು ಪ್ರಕರಣಗಳನ್ನು ದಾಖಲಿಸುತ್ತಿದ್ದು, ನಿಯಮ ಬಾಹಿರ ಸೈಲೆನ್ಸರ್ ಅಳವಡಿಸುವ ಬಿಡಿಭಾಗಗಳ ಮಾರಾಟಗಾರರ ವಿರುದ್ದ ಕ್ರಮ ಕೈಗೊಳ್ಳಲಾಗುತ್ತಿದೆ.

ಮಾಡಿಫೈ ಆರ್‌ಇ ಬೈಕ್ ಮಾಲೀಕರಿಂದ ರೂ. 30 ಲಕ್ಷ ದಂಡ ವಸೂಲಿ

ಮೋಟಾರ್ ವೆಹಿಕಲ್ ಕಾಯ್ದೆಯಲ್ಲಿ ಕಲಂ 52 ಮತ್ತು 190(2) ಗಳಲ್ಲಿ ಈ ರೀತಿಯ ಮಾರ್ಪಾಡುಗೊಂಡಿರುವ ವಾಹನಗಳಿಗೆ ರೂ. 500 ರೂಪಾಯಿಯಿಂದ 2 ಸಾವಿರ ರೂಪಾಯಿ ವರೆಗೂ ದಂಡ ವಿಧಿಸಬಹುದಾಗಿದ್ದು, ಮಾರ್ಪಾಡುಗೊಂಡ ಬಿಡಿಭಾಗಗಳನ್ನು ಸ್ಥಳದಲ್ಲೇ ಕಿತ್ತುಹಾಕಬಹುದಾಗಿದೆ.

MOST READ: ಭಾರತದಲ್ಲಿಯೂ ಬಿಡುಗಡೆಯಾಗಲಿದೆ ದುಬಾರಿ ಬೆಲೆಯ ಫೋರ್ಜಾ ಮ್ಯಾಕ್ಸಿ ಸ್ಕೂಟರ್

ಮಾಡಿಫೈ ಆರ್‌ಇ ಬೈಕ್ ಮಾಲೀಕರಿಂದ ರೂ. 30 ಲಕ್ಷ ದಂಡ ವಸೂಲಿ

ಇನ್ನು ನಮ್ಮ ಬೆಂಗಳೂರಿನ ಟ್ರಾಫಿಕ್ ಪೊಲೀಸರು ಕೂಡಾ ಇದೇ ವಿಚಾರಕ್ಕೆ ಈಗಾಗಲೇ ಸಾವಿರಾರು ಪ್ರಕರಣಗಳನ್ನು ದಾಖಲಿಸಿ ಕಾನೂನುಬಾಹಿರವಾಗಿ ಮಾಡಿಫೈ ಮಾಡಲಾದ ವಾಹನಗಳ ವಿರುದ್ಧ ಕ್ರಮ ಕೈಗೊಂಡಿದ್ದಾರೆ. ಸ್ಥಳದಲ್ಲೇ ಮಾಡಿಫೈ ಮಾಡಲಾದ ಬೈಕ್‌ಗಳ ಎಕ್ಸಾಸ್ಟ್ ಕಿತ್ತುಹಾಕಿ ಬೈಕ್ ಮಾಲೀಕರಿಗೆ ಬಿಸಿ ಮುಟ್ಟಿಸುತ್ತಿರುವ ಪೊಲೀಸರು ಭಾರೀ ಪ್ರಮಾಣದ ದಂಡ ವಸೂಲಿ ಮಾಡಿದ್ದಾರೆ.

ಮಾಡಿಫೈ ಆರ್‌ಇ ಬೈಕ್ ಮಾಲೀಕರಿಂದ ರೂ. 30 ಲಕ್ಷ ದಂಡ ವಸೂಲಿ

ದುಬಾರಿ ದಂಡಗಳ ಜಾರಿ ನಡುವೆಯೂ ಹೆಚ್ಚುತ್ತಿರುವ ಬೈಕ್ ಮಾಡಿಫೈ ಮತ್ತು ಬೈಕ್ ವ್ಹೀಲಿಂಗ್ ವಿರುದ್ಧವೂ ಹೊಸ ಕ್ರಮ ಕೈಗೊಂಡಿರುವ ಬೆಂಗಳೂರು ನಗರ ಪೊಲೀಸರು ದಂಡದ ಮೊತ್ತವನ್ನು ಹತ್ತು ಪಟ್ಟು ಹೆಚ್ಚಿಸಿದ್ದಾರೆ.

MOST READ: ಅತಿ ಹೆಚ್ಚು ಮೈಲೇಜ್ ನೀಡುವ ಟಾಪ್ 10 ಬಜೆಟ್ ಬೆಲೆಯ ಬೈಕುಗಳಿವು..!

ಮಾಡಿಫೈ ಆರ್‌ಇ ಬೈಕ್ ಮಾಲೀಕರಿಂದ ರೂ. 30 ಲಕ್ಷ ದಂಡ ವಸೂಲಿ

ಹಾಗೆಯೇ ನಗರ ಪ್ರದೇಶಗಳಲ್ಲಿ ಮಿತಿ ಮೀರುತ್ತಿರುವ ಪುಂಡರ ವ್ಹೀಲಿಂಗ್ ಹಾವಳಿಯನ್ನು ತಡೆಯಲು ಕೆಲವು ಕಠಿಣ ನಿರ್ಧಾರಗಳನ್ನು ತೆಗೆದುಕೊಂಡಿರುವ ಪೊಲೀಸ್ ಇಲಾಖೆಯು ಮೊದಲ ಬಾರಿಗೆ ವ್ಹೀಲಿಂಗ್ ಸಿಕ್ಕಿಬಿಳುವ ಬೈಕ್ ಸವಾರರಿಗೆ ದಂಡದ ಜೊತೆಗೆ ಪುನರಾವರ್ತನೆಯಾದಲಲ್ಲಿ ಜೈಲಿಗಟ್ಟುತ್ತಿದ್ದಾರೆ.

Most Read Articles

Kannada
English summary
Police Fine 3,000 Royal Enfield Bike Owners For Aftermarket Exhaust. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X