ಆಕ್ಸೆಸ್ 125 ಸ್ಕೂಟರ್ ಬೆಲೆಯನ್ನು ಹೆಚ್ಚಿಸಿದ ಸುಜುಕಿ ಮೋಟಾರ್‌ಸೈಕಲ್

ಜನಪ್ರಿಯ ದ್ವಿಚಕ್ರ ವಾಹನ ತಯಾರಕ ಕಂಪನಿಯಾದ ಸುಜುಕಿ ಮೋಟಾರ್‌ಸೈಕಲ್ ತನ್ನ ಸರಣಿಯಲ್ಲಿರುವ ಆಕ್ಸೆಸ್ 125 ಸ್ಕೂಟರ್‌ನ ಬೆಲೆಯನ್ನು ಹೆಚ್ಚಿಸಿದೆ. ಸುಜುಕಿ ಆಕ್ಸೆಸ್ 125 ಭಾರತೀಯ ಮಾರುಕಟ್ಟೆಯಲ್ಲಿ ಜನಪ್ರಿಯ ಸ್ಕೂಟರ್ ಗಳಲ್ಲಿ ಒಂದಾಗಿದೆ.

ಆಕ್ಸೆಸ್ 125 ಸ್ಕೂಟರ್ ಬೆಲೆಯನ್ನು ಹೆಚ್ಚಿಸಿದ ಸುಜುಕಿ ಮೋಟಾರ್‌ಸೈಕಲ್

ಸುಜುಕಿ ಆಕ್ಸೆಸ್ 125 ಸ್ಕೂಟರ್ ಭಾರತೀಯ ಮಾರುಕಟ್ಟೆಯಲ್ಲಿ ಏಳು ರೂಪಾಂತರಗಳಲ್ಲಿ ಮಾರಾಟವಾಗುತ್ತಿದೆ. ಆಕ್ಸೆಸ್ 125 ಸ್ಕೂಟರ್‌ನ ಎಲ್ಲಾ ಏಳು ರೂಪಾಂತರಗಳ ಬೆಲೆಯನ್ನು ರೂ.186 ಗಳವರೆಗೂ ಹೆಚ್ಚಿಸಿದೆ. ಬೆಲೆ ಏರಿಕೆಯ ಬಳಿಕ ಎಲ್ಲಾ ರೂಪಾಂತರಗಳ ಅನುಗುಣವಾಗಿ ಹೇಳುವುದಾದರೆ, ಡ್ರಮ್ ವಿತ್ ಅಲಾಯ್ ವ್ಹೀಲ್ಸ್ ರೂಪಾಂತರದ ಬೆಲೆಯು ರೂ.70,686, ಡಿಸ್ಕ್ ವಿಥ್ ಅಲಾಯ್ ವ್ಹೀಲ್ಸ್ ರೂಪಾಂತರದ ಬೆಲೆಯು ರೂ.73,286 ಗಳಾದರೆ, ಕಾಸ್ಟ್ ವ್ಹೀಲ್ ವರ್ಷನ್ ಬೆಲೆಯು ರೂ.72,386 ಗಳಾಗಿದೆ.

ಆಕ್ಸೆಸ್ 125 ಸ್ಕೂಟರ್ ಬೆಲೆಯನ್ನು ಹೆಚ್ಚಿಸಿದ ಸುಜುಕಿ ಮೋಟಾರ್‌ಸೈಕಲ್

ಇನ್ನು ಡ್ರಮ್ ರೂಪಾಂತರದ ಬೆಲೆಯು ರೂ.74,086 ಮತ್ತು ಡಿಸ್ಕ್ ರೂಪಾಂತರದ ಬೆಲೆಯು ರೂ.74,986 ಗಳಾಗಿದೆ. ಇನ್ನು ಬ್ಲೂಟೂತ್ ಫೀಚರ್ ಒಳಗೊಂಡಿರುವ ಡ್ರಮ್ ರೂಪಾಂತರದ ಬೆಲೆಯು ರೂ.77,886 ಗಳಾದರೆ ಡಿಸ್ಕ್ ಬ್ರೇಕ್ ರೂಪಾಂತರದ ಬೆಲೆಯು ರೂ.78,786 ಗಳಾಗಿದೆ. ಈ ಎಲ್ಲಾ ಬೆಲೆಗಳು ಭಾರತದ ಎಕ್ಸ್ ಶೋರೂಂ ಪ್ರಕಾರವಾಗಿದೆ.

MOST READ: ಯೂನಿಕಾರ್ನ್ ಬೈಕಿನ ಬೆಲೆ ಹೆಚ್ಚಿಸಿದ ಹೋಂಡಾ ಮೋಟಾರ್‌ಸೈಕಲ್

ಆಕ್ಸೆಸ್ 125 ಸ್ಕೂಟರ್ ಬೆಲೆಯನ್ನು ಹೆಚ್ಚಿಸಿದ ಸುಜುಕಿ ಮೋಟಾರ್‌ಸೈಕಲ್

ಎಂಟ್ರಿ ಲೆವೆಲ್ ಸುಜುಕಿ ಆಕ್ಸೆಸ್ 125 ಸ್ಕೂಟರ್ ನಲ್ಲಿ ಬೆಲೆ ಏರಿಕೆಯನ್ನು ಹೊರತುಪಡಿಸಿ ಉಳಿದಂತೆ ಯಾವುದೇ ಬದಲಾವಣೆಗಳನ್ನು ಹೊಂದಿರುವುದಿಲ್ಲ. ಈ ಸುಜುಕಿ ಆಕ್ಸೆಸ್ 125 ಸ್ಕೂಟರ್‌ನಲ್ಲಿ 124 ಸಿಸಿ, ಸಿಂಗಲ್ ಸಿಲಿಂಡರ್ ಎಂಜಿನ್ ಅನ್ನು ಅಳವಡಿಸಲಾಗಿದೆ.

ಆಕ್ಸೆಸ್ 125 ಸ್ಕೂಟರ್ ಬೆಲೆಯನ್ನು ಹೆಚ್ಚಿಸಿದ ಸುಜುಕಿ ಮೋಟಾರ್‌ಸೈಕಲ್

ಈ ಎಂಜಿನ್ 8.6 ಬಿಹೆಚ್‌ಪಿ ಪವರ್ ಮತ್ತು 10 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಬಿಎಸ್-6 ಮಾಲಿನ್ಯ ನಿಯಮಕ್ಕೆ ಅನುಗುಣವಾಗಿ ನವೀಕರಿಸಿದ ಬಳಿಕ ಟಾರ್ಕ್ ಅಂಕಿ ಅಂಶದಲ್ಲಿ 0.2 ಎನ್ಎಂ ಟಾರ್ಕ್ ಕಡಿಮೆಯಾಗಿದೆ.

MOST READ: ದುಬಾರಿಯಾಯ್ತು ಬಿಎಸ್-6 ಟಿವಿಎಸ್ ಎನ್‌ಟಾರ್ಕ್ 125 ಸ್ಕೂಟರ್

ಆಕ್ಸೆಸ್ 125 ಸ್ಕೂಟರ್ ಬೆಲೆಯನ್ನು ಹೆಚ್ಚಿಸಿದ ಸುಜುಕಿ ಮೋಟಾರ್‌ಸೈಕಲ್

ಸುಜುಕಿ ಆಕ್ಸೆಸ್ 125 ಸ್ಕೂಟರ್‌ನ ಎಲ್ಲಾ ರೂಪಾಂತರಗಳು ಎಲ್‌ಇಡಿ ಹೆಡ್ ಲ್ಯಾಂಪ್ ಅನ್ನು ಹೊಂದಿದೆ. ಟಾಪ್ ಸ್ಪೆಕ್ ಬ್ಲೂಟೂತ್ ಕನೆಕ್ಟಿವಿಟಿ ಹೊಂದಿರುವ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಅನ್ನು ಹೊಂದಿದೆ. ಇದು ಸುಜುಕಿ ರೈಡ್ ಕನೆಕ್ಟ್ ಅಪ್ಲಿಕೇಶನ್‌ನೊಂದಿಗೆ ಜೋಡಿಸಲಾಗಿದೆ.

ಆಕ್ಸೆಸ್ 125 ಸ್ಕೂಟರ್ ಬೆಲೆಯನ್ನು ಹೆಚ್ಚಿಸಿದ ಸುಜುಕಿ ಮೋಟಾರ್‌ಸೈಕಲ್

ಬೆಲೆ ಏರಿಕೆಯ ಹೊರತಾಗಿಯೂ, 125 ಸಿಸಿ ವಿಭಾಗದಿಂದ ಸುಜುಕಿ ಆಕ್ಸೆಸ್ 125 ಸ್ಕೂಟರ್ ಆಹಾರ ಸರಪಳಿಯಲ್ಲಿ ಅಗ್ರಸ್ಥಾನದಲ್ಲಿದೆ ಎಂದು ನಾವು ನಿರೀಕ್ಷಿಸುತ್ತೇವೆ ಅದರ ಸಾಂಪ್ರದಾಯಿಕ ಸ್ಟೈಲಿಂಗ್, ಲೋಡ್ ಸೌಕರ್ಯಗಳು ಮತ್ತು ಪ್ರಬಲವಾದ ಇನ್ನೂ ಮಿತವ್ಯಯದ ಎಂಜಿನ್. ಇದು ಹೋಂಡಾ ಆಕ್ಟಿವಾ 125 ಮತ್ತು ಹೀರೋ ಮೆಸ್ಟ್ರೋ ಎಡ್ಜ್ 125 ವಿರುದ್ಧ ಸ್ಪರ್ಧಿಸುತ್ತದೆ.

MOST READ: ದುಬಾರಿಯಾಯ್ತು ಜನಪ್ರಿಯ ಬಿಎಸ್-6 ಯಮಹಾ ಎಂಟಿ-15 ಬೈಕ್

ಆಕ್ಸೆಸ್ 125 ಸ್ಕೂಟರ್ ಬೆಲೆಯನ್ನು ಹೆಚ್ಚಿಸಿದ ಸುಜುಕಿ ಮೋಟಾರ್‌ಸೈಕಲ್

ಸುಜುಕಿ ಆಕ್ಸೆಸ್ 125 ಸ್ಕೂಟರ್ ಪರ್ಲ್ ಸುಜುಕಿ ಡೀಪ್ ಬ್ಲೂ, ಮೆಟಾಲಿಕ್ ಮ್ಯಾಟ್ ಪ್ಲಾಟಿನಂ ಸಿಲ್ವರ್, ಪರ್ಲ್ ಮಿರಾಜ್ ವೈಟ್, ಗ್ಲಾಸ್ ಸ್ಪಾರ್ಕಲ್ ಬ್ಲ್ಯಾಕ್ ಮತ್ತು ಮೆಟಾಲಿಕ್ ಮ್ಯಾಟ್ ಫೈಬ್ರೊಯಿನ್ ಗ್ರೇ ಎಂಬ ಬಣ್ಣಗಳ ಆಯ್ಕೆಯಲ್ಲಿ ಮಾರಾಟವಾಗುತ್ತಿವೆ.

ಆಕ್ಸೆಸ್ 125 ಸ್ಕೂಟರ್ ಬೆಲೆಯನ್ನು ಹೆಚ್ಚಿಸಿದ ಸುಜುಕಿ ಮೋಟಾರ್‌ಸೈಕಲ್

ಈ ಸ್ಕೂಟರ್ 1,870 ಎಂಎಂ ಉದ್ದ, 690 ಎಂಎಂ ಅಗಲ ಮತ್ತು 1,160 ಎಂಎಂ ಎತ್ತರವನ್ನು ಹೊಂದಿದೆ. ಈ ಸ್ಕೂಟರ್ 1,265 ಎಂಎಂ ವ್ಹೀಲ್ ಬೇಸ್ ಮತ್ತು 160 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಹೊಂದಿದೆ.

ಆಕ್ಸೆಸ್ 125 ಸ್ಕೂಟರ್ ಬೆಲೆಯನ್ನು ಹೆಚ್ಚಿಸಿದ ಸುಜುಕಿ ಮೋಟಾರ್‌ಸೈಕಲ್

ಸುಜುಕಿ ಆಕ್ಸೆಸ್ 125 ಭಾರತೀಯ ಮಾರರುಕಟ್ಟೆಯಲ್ಲಿ ಆಕ್ಟಿವಾ 125 ಮತ್ತು ಹೀರೋ ಮೆಸ್ಟ್ರೋ ಎಡ್ಜ್ 125 ಸ್ಕೂಟರ್ ಗಳಿಗೆ ಪೈಪೋಟಿ ನೀಡುತ್ತದೆ. ಸುಜುಕಿ ಆಕ್ಸೆಸ್ 125 ಸ್ಕೂಟರ್ ಬೆಲೆ ಏರಿಕೆಯು ಮಾರಾಟದ ಮೇಲೆ ಪರಿಣಾಮ ಬೀರುವ ಸಾಧ್ಯತೆಗಳಿಲ್ಲ.

Most Read Articles

Kannada
English summary
Suzuki Access 125 Prices Increased. Read In Kannada.
Story first published: Thursday, January 21, 2021, 14:59 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X