ಭಾರತದ ಮೊದಲ ಬಹುಪಯೋಗಿ ಇವಿ ಸ್ಕೂಟರ್ ಬಹಿರಂಗ: 2023 ರಲ್ಲಿ ಬಿಡುಗಡೆ

ಎಲೆಕ್ಟ್ರಿಕ್ ವಾಹನಗಳನ್ನು ತಯಾರಿಸುವ ಭಾರತೀಯ ಸ್ಟಾರ್ಟ್ಅಪ್ ಕಂಪನಿಯಾದ ಡಿಸ್ಪ್ಯಾಚ್, ವಿಶ್ವದ ಮೊದಲ ಮಾಡ್ಯುಲರ್ ಎಲೆಕ್ಟ್ರಿಕ್ ಸ್ಕೂಟರ್ ಕ್ವಿರ್ಕಿಯನ್ನು ಬಹಿರಂಗಪಡಿಸಿದೆ. ಕಂಪನಿಯು ಈ ಎಲೆಕ್ಟ್ರಿಕ್ ಸ್ಕೂಟರ್ ಅನ್ನು 2023 ರಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಲು ತಯಾರಿ ನಡೆಸುತ್ತಿದೆ.

ಭಾರತದ ಮೊದಲ ಬಹುಪಯೋಗಿ ಇವಿ ಸ್ಕೂಟರ್ ಬಹಿರಂಗ: 2023 ರಲ್ಲಿ ಬಿಡುಗಡೆ ಸಾಧ್ಯತೆ

ಕಂಪನಿಯು ಈ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಜಾಗತಿಕ ಉತ್ಪನ್ನವಾಗಿ ಅಭಿವೃದ್ಧಿಪಡಿಸುತ್ತಿದ್ದು, ಇದರಿಂದ ಸಾಗರೋತ್ತರ ಮಾರುಕಟ್ಟೆಗಳಿಗೂ ರಫ್ತು ಮಾಡಲು ಯೋಜಿಸಿದೆ. ಈ ಕ್ವಿರ್ಕಿ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಅಗತ್ಯಕ್ಕೆ ಅನುಗುಣವಾಗಿ ಹಲವು ರೀತಿಯಲ್ಲಿ ಬಳಸಿಕೊಳ್ಳುವಂತೆ ವಿನ್ಯಾಸಗೊಳಿಸಲಾಗಿದೆ.

ಭಾರತದ ಮೊದಲ ಬಹುಪಯೋಗಿ ಇವಿ ಸ್ಕೂಟರ್ ಬಹಿರಂಗ: 2023 ರಲ್ಲಿ ಬಿಡುಗಡೆ ಸಾಧ್ಯತೆ

ಇದನ್ನು ವೈಯಕ್ತಿಕ ವಾಹನಗಳಿಗೆ ಹಾಗೂ ಡೆಲಿವರಿ, ಟ್ಯಾಕ್ಸಿ ಸ್ಕೂಟರ್, ಗಸ್ತು ತಿರುಗುವಿಕೆ ಮತ್ತು ಇನ್ನಿತರ ವಾಣಿಜ್ಯ ಚಟುವಟಿಕೆಗಳಿಗೆ ಬಳಸಬಹುದು. ಈ ಎಲೆಕ್ಟ್ರಿಕ್ ಸ್ಕೂಟರ್ ಕಾರ್ಯನಿರ್ವಹಿಸಲು ಸುಲಭ, ಹೆಚ್ಚು ವಿಶ್ವಾಸಾರ್ಹ ಮತ್ತು ಭವಿಷ್ಯಕ್ಕೆ ಸಿದ್ಧವಾಗಿರುವ ಸ್ಕೂಟರ್ ಎಂದು ಕಂಪನಿ ಹೇಳಿಕೊಂಡಿದೆ.

ಭಾರತದ ಮೊದಲ ಬಹುಪಯೋಗಿ ಇವಿ ಸ್ಕೂಟರ್ ಬಹಿರಂಗ: 2023 ರಲ್ಲಿ ಬಿಡುಗಡೆ ಸಾಧ್ಯತೆ

ಈ ಸ್ಕೂಟರ್ ಡೆಲಿವರಿ ಫ್ಲೀಟ್‌ನಲ್ಲಿ ಹೆಚ್ಚಿನ ಲಾಭವನ್ನು ಗಳಿಸಲು ಬಳಕೆದಾರರಿಗೆ ಸಹಾಯ ಮಾಡುತ್ತದೆ ಎಂದು ಕಂಪನಿ ಹೇಳಿದೆ. ಡಿಸ್ಪ್ಯಾಚ್ ವೆಹಿಕಲ್ಸ್ ತನ್ನ ಇ-ಸ್ಕೂಟರ್‌ಗಳನ್ನು ವಿಶ್ವಾಸಾರ್ಹತೆ ಮತ್ತು ಪರಿಶೀಲನೆಗಾಗಿ ಸುಮಾರು ಒಂದು ವರ್ಷದಿಂದ ಪರೀಕ್ಷಿಸುತ್ತಿದೆ.

ಭಾರತದ ಮೊದಲ ಬಹುಪಯೋಗಿ ಇವಿ ಸ್ಕೂಟರ್ ಬಹಿರಂಗ: 2023 ರಲ್ಲಿ ಬಿಡುಗಡೆ ಸಾಧ್ಯತೆ

ಕಂಪನಿಯು ಜಾಗತಿಕವಾಗಿ ವರ್ಷಕ್ಕೆ 6 ಮಿಲಿಯನ್ ಇ-ಸ್ಕೂಟರ್‌ಗಳನ್ನು ಉತ್ಪಾದಿಸಲು ಜಾಗತಿಕವಾಗಿ ಅತಿದೊಡ್ಡ ಗುತ್ತಿಗೆ ತಯಾರಕರೊಂದಿಗೆ ಪಾಲುದಾರಿಕೆ ಹೊಂದಿದೆ. ಕಂಪನಿಯು ಪ್ರಪಂಚದಾದ್ಯಂತ ತನ್ನ ಇ-ಸ್ಕೂಟರ್‌ಗಳ ಮೆಕ್ಯಾನಿಕಲ್ ಘಟಕಗಳು, ಎಲೆಕ್ಟ್ರಾನಿಕ್ಸ್ ಘಟಕಗಳು ಮತ್ತು ಪವರ್‌ಟ್ರೇನ್‌ಗಳು ಸೇರಿದಂತೆ ವ್ಯಾಪಕ ಶ್ರೇಣಿಯ ನಿರ್ಣಾಯಕ ಘಟಕಗಳನ್ನು ಲಭ್ಯವಾಗುವಂತೆ ಮಾಡುತ್ತದೆ.

ಭಾರತದ ಮೊದಲ ಬಹುಪಯೋಗಿ ಇವಿ ಸ್ಕೂಟರ್ ಬಹಿರಂಗ: 2023 ರಲ್ಲಿ ಬಿಡುಗಡೆ ಸಾಧ್ಯತೆ

ವಾಣಿಜ್ಯ ಬಳಕೆಗಾಗಿ ವಿನ್ಯಾಸಗೊಳಿಸಲಾದ ಸ್ಕೂಟರ್‌ನೊಂದಿಗೆ, ಕಂಪನಿಯು ಅಸ್ತಿತ್ವದಲ್ಲಿರುವ ಉತ್ಪನ್ನಗಳಿಗಿಂತ ಉತ್ತಮವಾಗಿ ಮಾರುಕಟ್ಟೆಗೆ ಸೇವೆ ಸಲ್ಲಿಸಲು ಯೋಜಿಸಿದೆ. ಡಿಸ್ಪ್ಯಾಚ್ ವೆಹಿಕಲ್ಸ್ ಪ್ರಪಂಚದಾದ್ಯಂತದ ಅನೇಕ ಪ್ರಯಾಣಿಕ ಮತ್ತು ವಾಣಿಜ್ಯ ಫ್ಲೀಟ್ ಕಂಪನಿಗಳಿಗೆ 2030ರ ವೇಳೆಗೆ ತಮ್ಮ ಫ್ಲೀಟ್‌ಗಳಲ್ಲಿ ಶೇ100 ರಷ್ಟು ಎಲೆಕ್ಟ್ರಿಕ್ ವಾಹನಗಳನ್ನು ಹೊಂದಲು ಸಹಾಯ ಮಾಡುವ ಗುರಿಯನ್ನು ಹೊಂದಿದೆ.

ಭಾರತದ ಮೊದಲ ಬಹುಪಯೋಗಿ ಇವಿ ಸ್ಕೂಟರ್ ಬಹಿರಂಗ: 2023 ರಲ್ಲಿ ಬಿಡುಗಡೆ ಸಾಧ್ಯತೆ

ಡಿಸ್ಪ್ಯಾಚ್ ವೆಹಿಕಲ್ಸ್‌ನ ಸಹ-ಸಂಸ್ಥಾಪಕ ರಂಜಿತ್ ಆರ್ಯ ಮಾತನಾಡಿ, ಪ್ರಸ್ತುತ ವಾಣಿಜ್ಯ ವಲಯದಲ್ಲಿ ಬಳಸಲಾಗುವ ಹೆಚ್ಚಿನ ದ್ವಿಚಕ್ರ ಎಲೆಕ್ಟ್ರಿಕ್ ವಾಹನಗಳು ವಾಸ್ತವವಾಗಿ ಪ್ರಯಾಣಿಕರ ವಲಯಕ್ಕಾಗಿ ವಿನ್ಯಾಸಗೊಳಿಸಲಾಗಿದೆ. ಈ ವಾಹನಗಳು ವಾಣಿಜ್ಯ ಫ್ಲೀಟ್‌ನ ಅವಶ್ಯಕತೆಗೆ ಸೂಕ್ತವಲ್ಲ, ಆದ್ದರಿಂದ ಕಂಪನಿಗಳು ತೊಂದರೆ ಅನುಭವಿಸಬೇಕಾಗಿದೆ.

ಭಾರತದ ಮೊದಲ ಬಹುಪಯೋಗಿ ಇವಿ ಸ್ಕೂಟರ್ ಬಹಿರಂಗ: 2023 ರಲ್ಲಿ ಬಿಡುಗಡೆ ಸಾಧ್ಯತೆ

ಡಿಸ್‌ಪ್ಯಾಚ್ ಇ-ಸ್ಕೂಟರ್‌ನೊಂದಿಗೆ, ಕೊನೆಯ ಮೈಲಿ ಮೊಬಿಲಿಟಿಗಾಗಿ ಫ್ಲೀಟ್ ಡೈನಾಮಿಕ್ಸ್ ಅನ್ನು ಹೆಚ್ಚು ಲಾಭದಾಯಕವಾಗಿಸಲು ನಾವು ಯೋಜಿಸಿದ್ದೇವೆ" ಎಂದ ಅವರುರು, ವಿತರಣಾ ಪಾಲುದಾರರು ಮತ್ತು ಫ್ಲೀಟ್ ಮಾಲೀಕರು ಎದುರಿಸುತ್ತಿರುವ ಮೊಬಿಲಿಟಿ ಸವಾಲುಗಳನ್ನು ಜಯಿಸಲು ಇ-ಸ್ಕೂಟರ್ ಅನ್ನು ಮುಂದೆ ತರಲಾಗಿದೆ ಎಂದು ಕಂಪನಿ ಉಲ್ಲೇಖಿಸಿದೆ ಎಂದರು.

ಭಾರತದ ಮೊದಲ ಬಹುಪಯೋಗಿ ಇವಿ ಸ್ಕೂಟರ್ ಬಹಿರಂಗ: 2023 ರಲ್ಲಿ ಬಿಡುಗಡೆ ಸಾಧ್ಯತೆ

ಮತ್ತೊಂದೆಡೆ, ಡಿಸ್‌ಪ್ಯಾಚ್‌ನ ದ್ವಿಚಕ್ರ ಎಲೆಕ್ಟ್ರಿಕ್ ವಾಹನಗಳನ್ನು ವಿಶೇಷವಾಗಿ ವಾಣಿಜ್ಯ ವಲಯಕ್ಕಾಗಿ ವಿನ್ಯಾಸಗೊಳಿಸಲಾಗಿದೆ, ಇದು ವ್ಯವಹಾರದಲ್ಲಿನ ಲಾಭದ ಜೊತೆಗೆ ಉದ್ಯೋಗಿಗಳ ದಕ್ಷತೆಯನ್ನು ಹೆಚ್ಚಿಸುತ್ತದೆ. ಜಾಗತಿಕ ಮಾರುಕಟ್ಟೆಯಲ್ಲಿ ಈ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಬಿಡುಗಡೆ ಮಾಡಲು ಕಂಪನಿಯು 32 ಕ್ಕೂ ಹೆಚ್ಚು ದೇಶಗಳಲ್ಲಿ ಪೇಟೆಂಟ್‌ಗಳನ್ನು ಸಲ್ಲಿಸಿದೆ ಎಂದು ತಿಳಿಸಿದರು.

ಭಾರತದ ಮೊದಲ ಬಹುಪಯೋಗಿ ಇವಿ ಸ್ಕೂಟರ್ ಬಹಿರಂಗ: 2023 ರಲ್ಲಿ ಬಿಡುಗಡೆ ಸಾಧ್ಯತೆ

ಇವಿ ವಾಹನಗಳ ಬೆಂಕಿ ಅವಘಡ

ಪ್ರಸ್ತುತ ದೇಶದಲ್ಲಿ ದಿನೆ ದಿನೇ ಹೆಚ್ಚಾಗುತ್ತಿರುವ ಇವಿ ವಾಹನ ಬೆಂಕಿ ಅವಘಡಗಳಿಂದ ಸಾರ್ವಜನಿಕರಲ್ಲಿ ಭೀತಿ ಹೆಚ್ಚಾಗಿದೆ. ಸದ್ಯ ಜನರು ಎಲೆಕ್ಟ್ರಿಕ್ ವಾಹನ ಖರೀದಿಸಲು ಮುಂದಾಗುತ್ತಿಲ್ಲ. ಕೆಲವೇ ಕಂಪನಿಗಳ ದ್ವಿಚಕ್ರ ವಾಹನಗಳಲ್ಲಿ ಇಂತಹ ದೋಷಗಳು ಕಂಡು ಬಂದರೂ ಎಲ್ಲಾ ಇವಿ ಕಂಪನಿಗಳ ಮೇಲೆ ಇದರ ಪ್ರಭಾವ ಭೀರುತ್ತಿದೆ.

ಭಾರತದ ಮೊದಲ ಬಹುಪಯೋಗಿ ಇವಿ ಸ್ಕೂಟರ್ ಬಹಿರಂಗ: 2023 ರಲ್ಲಿ ಬಿಡುಗಡೆ ಸಾಧ್ಯತೆ

ಇದೀಗ ಕೇಂದ್ರ ಸರ್ಕಾರ ಕೂಡ ಇವಿ ಕಂಪನಿಗಳ ವಿರುದ್ಧ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಲು ಮುಂದಾಗಿದೆ. ಅಲ್ಲದೇ ಇವಿ ಕಂಪನಿಗಳು ಕೂಡ ಜನರಲ್ಲಿ ಇವಿ ವಾಹನಗಳ ಮೇಲೆ ವಿಶ್ವಾಸ ಬರಲು ತಮ್ಮ ಗ್ರಾಹಕರಿಂದ ವಾಹನಗಳನ್ನು ಹಿಂಪಡೆಯುತ್ತಿದ್ದಾರೆ.

ಭಾರತದ ಮೊದಲ ಬಹುಪಯೋಗಿ ಇವಿ ಸ್ಕೂಟರ್ ಬಹಿರಂಗ: 2023 ರಲ್ಲಿ ಬಿಡುಗಡೆ ಸಾಧ್ಯತೆ

ಇವಿ ವಲಯದಲ್ಲಿ ಈ ಬೆಂಕಿ ಅವಘಡಗಳಿಂದ ಕಂಪನಿಗಳಿಗೆ ಭಾರಿ ಹೊಡೆತ ಬಿದ್ದಿದೆ. ಸದ್ಯದ ಪರಿಸ್ಥಿತಿಯಲ್ಲಿ ಬಹುತೇಕ ಎಲ್ಲಾ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಕಂಪನಿಗಳ ಮಾರಾಟದಲ್ಲಿ ಭಾರಿ ಕುಸಿತ ಕಂಡುಬಂದಿದ್ದು, ಇದು ಹೀಗೆ ಮುಂದುವರಿದರೆ ಇವಿ ಕಂಪನಿಗಳು ಕೆಟ್ಟ ದಿನಗಳನ್ನು ಎದುರಿಸಬೇಕಾಗುತ್ತದೆ.

ಭಾರತದ ಮೊದಲ ಬಹುಪಯೋಗಿ ಇವಿ ಸ್ಕೂಟರ್ ಬಹಿರಂಗ: 2023 ರಲ್ಲಿ ಬಿಡುಗಡೆ ಸಾಧ್ಯತೆ

ತಜ್ಞರ ಪ್ರಕಾರ ಈಗಾಗಲೇ ಎಲೆಕ್ಟ್ರಿಕ್ ವಾಹನಗಳ ಮಾರಾಟವು ಸುಧಾರಿಸುವುದು ಕಷ್ಟವಾಗಿದ್ದು, ಮುಂದಿನ ದಿನಗಳಲ್ಲಿ ಗ್ರಾಹಕರಿಗೆ ಪ್ರಮಾಣಿತ ಮಾದರಿಗಳನ್ನು ನೀಡುವ ಮೂಲಕ ಮತ್ತೆ ಬೇಡಿಕೆ ಹಚ್ಚಿಸಿಕೊಳ್ಳಲು ಶ್ರಮಿಸಬೇಕಿದೆ ಎನ್ನುತ್ತಿದ್ದಾರೆ.

ಭಾರತದ ಮೊದಲ ಬಹುಪಯೋಗಿ ಇವಿ ಸ್ಕೂಟರ್ ಬಹಿರಂಗ: 2023 ರಲ್ಲಿ ಬಿಡುಗಡೆ ಸಾಧ್ಯತೆ

ಪ್ರಸ್ತುತದ ಸಂದರ್ಭದಲ್ಲಿ ಭಾರತೀಯ ವಾತಾವರಣಕ್ಕೆ ಅನುಗುಣವಾಗಿ ಇವಿ ಬ್ಯಾಟರಿಗಳನ್ನು ತಯಾರಿಸದಿದ್ದರೆ ಯಾವ ರೀತಿ ವಾಹನಗಳು ವಿಫಲವಾಗಲಿವೆ ಎಂಬ ಉದಾಹರಣೆಗಳು ಈಗಾಗಲೇ ಬೆಂಕಿ ಅವಘಡಗಳಿಂದ ನಮಗೆ ತಿಳಿದಿದೆ. ಇದೀಗ ಕ್ವಿರ್ಕಿ ಸ್ಕೂಟರ್‌ ಕೂಡ ಮಾರುಕಟ್ಟೆಗೆ ಲಗ್ಗೆಯಿಡುತ್ತಿದ್ದು, ಯಾವ ಮಟ್ಟಿಗೆ ಜನರನ್ನು ತನ್ನತ್ತ ಸೆಳೆಯಲಿದೆ ಎಂಬುದನ್ನು ಕಾದುನೋಡಬೇಕಿದೆ.

Most Read Articles

Kannada
English summary
Dispatch quirky modular electric scooter unveiled launch in 2023
Story first published: Friday, April 29, 2022, 15:23 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X