Just In
- 53 min ago
ರೀ ಎಂಟ್ರಿ ಕೊಡಲಿವೆಯೇ ಮಿಂಚಿ ಮರೆಯಾದ ಲೆಜೆಂಡರಿ ಕಾರುಗಳು?: ಹೊಸ ವಿನ್ಯಾಸ, ಎಂಜಿನ್ ಬದಲಾವಣೆ!
- 1 hr ago
ಟೊಯೊಟಾ ಇನೋವಾ ಹೈಕ್ರಾಸ್ ವಿತರಣೆ ಪ್ರಾರಂಭ: ಹೈಬ್ರಿಡ್ ರೂಪಾಂತರಕ್ಕೆ 1 ವರ್ಷ ಕಾಯಬೇಕು
- 1 hr ago
ಹೊಸ ಕ್ರಾಂತಿಗೆ ನಾಂದಿ: ಎಲೆಕ್ಟ್ರಿಕ್ ಕಾರಾಗಲಿದೆ ಜಿಮ್ನಿ..!
- 3 hrs ago
ಅತಿಹೆಚ್ಚು ಮೈಲೇಜ್ ನೀಡುವ ಟೊಯೊಟಾ ಅರ್ಬನ್ ಕ್ರೂಸರ್ ಹೈರೈಡರ್ ಸಿಎನ್ಜಿ ಲಾಂಚ್
Don't Miss!
- Movies
ಕಿಚ್ಚನ ಸಿನಿಮಾ ಜರ್ನಿಗೆ 27 ವರ್ಷ; 4 ಚಿತ್ರರಂಗಗಳಿಗೆ ಧನ್ಯವಾದ ತಿಳಿಸಿದ ಸುದೀಪ್
- News
Bengaluru-Mysuru Expressway: ಫೆ. 15ರೊಳಗೆ ಟೋಲ್ ಸಂಗ್ರಹ ಆರಂಭ
- Technology
ಏರ್ಟೆಲ್ ಜೊತೆಗೆ ಕೈ ಮಿಲಾಯಿಸಿದ ಮೆಟ್ರೋ, ಇನ್ಮುಂದೆ ಪ್ರಯಾಣಿಕರಿಗೆ ಈ ಸೇವೆ ಇನ್ನಷ್ಟು ಸರಳ!
- Sports
ಬಾರ್ಡರ್-ಗವಾಸ್ಕರ್ ಟ್ರೋಫಿ: ಭಾರತದತ್ತ ಪ್ರಯಾಣ ಆರಂಭಿಸಿದ ಆಸಿಸ್ ಆಟಗಾರರು
- Lifestyle
February 2023 Horoscope : ಫೆಬ್ರವರಿ ತಿಂಗಳ ಭವಿಷ್ಯ: ಮೇಷ-ಮೀನದವರೆಗಿನ ರಾಶಿಗಳ ರಾಶಿಫಲ ಹೇಗಿದೆ?
- Finance
Budget 2023: ರಾಷ್ಟ್ರಪತಿ ಭಾಷಣದೊಂದಿಗೆ ಜ.31ರಿಂದ ಬಜೆಟ್ ಅಧಿವೇಶನ ಆರಂಭ, ಈ ಮಾಹಿತಿ ತಿಳಿದಿರಿ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಬೇಡಿಕೆ ಪೂರೈಸಲು 'Tork' ಕಂಪನಿ ಹೊಸ ಪ್ಲ್ಯಾನ್... ತಿಂಗಳಿಗೆ 5,000 ಬೈಕ್ ಪಕ್ಕಾ
ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಸ್ಟಾರ್ಟ್ಅಪ್ 'ಟಾರ್ಕ್ ಮೋಟಾರ್ಸ್' ತನ್ನ ವಾಹನಗಳಿಗೆ ಇರುವ ಬೇಡಿಕೆಯನ್ನು ಗಮನದಲ್ಲಿ ಇಟ್ಟುಕೊಂಡು ಶೀಘ್ರದಲ್ಲೇ ಮಹಾರಾಷ್ಟ್ರದ ಚಕ್ಕನ್‌ನಲ್ಲಿ ಹೊಸ ಉತ್ಪಾದನಾ ಘಟಕ ತೆರಳಲು ಸಿದ್ಧವಾಗಿದೆ. ನೂತನ ಘಟಕವು ಸುಮಾರು 95 ಪ್ರತಿಶತದಷ್ಟು ರೆಡಿಯಾಗಿದೆ. ಕೆಲವೇ ವಾರಗಳಲ್ಲಿ ಕಾರ್ಯಾಚರಣೆಯನ್ನು ಪ್ರಾರಂಭಿಸಲಿದೆ ಎಂದು ವರದಿಯಾಗಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಟಾರ್ಕ್ ಮೋಟಾರ್ಸ್‌ನ ಸಹ-ಸ್ಥಾಪಕ ಮತ್ತು ಸಿಇಒ ಕಪಿಲ್ ಶೆಲ್ಕೆ, ಹೊಸ ಉತ್ಪಾದನಾ ಘಟಕವು 60,000 ಚದರ ಅಡಿಗಳಷ್ಟು ಇದ್ದು, ತಿಂಗಳಿಗೆ ಸರಾಸರಿ 4,000-5,000 ಯುನಿಟ್ ಎಲೆಕ್ಟ್ರಿಕ್ ಬೈಕುಗಳನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಟಾರ್ಕ್‌ನ ಪ್ರಸ್ತುತ ಇರುವ ಘಟಕದಲ್ಲಿ ಪ್ರತಿ ತಿಂಗಳು 500 ಯುನಿಟ್ ಮಾತ್ರ ಉತ್ಪಾದನೆ ನಡೆಯುತ್ತಿದೆ. ಈಗಾಗಲೇ ನೂತನ ಘಟಕದ ಶೇ.95 ರಷ್ಟು ಕಾಮಗಾರಿ ಪೂರ್ಣಗೊಂಡಿದೆ ಎಂದು ಹೇಳಿದ್ದಾರೆ.
ಟಾರ್ಕ್ ಮೋಟಾರ್ಸ್, ಪ್ರಸ್ತುತ ಭಾರತದ ಮಾರುಕಟ್ಟೆಯಲ್ಲಿ ಕ್ರಾಟೋಸ್ ಮತ್ತು ಕ್ರಾಟೋಸ್ ಆರ್ ಎಂಬ ಎಲೆಕ್ಟ್ರಿಕ್ ಬೈಕ್‌ಗಳನ್ನು ಮಾರಾಟ ಮಾಡುತ್ತಿದೆ. ಕ್ರಾಟೋಸ್ ಎಕ್ಸ್ ಶೋ ರೂಂ ಬೆಲೆ 1,22 ಲಕ್ಷ ರೂಪಾಯಿ ಮತ್ತು ಕ್ರಾಟೋಸ್ ಆರ್ ಬೆಲೆ 1,37 ಲಕ್ಷ ರೂಪಾಯಿ ಇದೆ. ಈ ಎರಡು ಬೈಕ್‌ಗಳು ಕೆಂಪು, ಬಿಳಿ, ನೀಲಿ ಮತ್ತು ಕಪ್ಪು ಬಣ್ಣಗಳ ಆಯ್ಕೆಯಲ್ಲಿ ಖರೀದಿಗೆ ಸಿಗಲಿದ್ದು, ಕಂಪನಿಯ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡುವ ಮೂಲಕ ಆನ್‌ಲೈನ್‌ನಲ್ಲಿ ಬುಕ್ ಮಾಡಬಹುದು.
ಕ್ರಾಟೋಸ್ 7.5 kW ಎಲೆಕ್ಟ್ರಿಕ್ ಮೋಟಾರ್‌ನೊಂದಿಗೆ ಬರಲಿದ್ದು, ಅದು 10bhp ಪವರ್ ಮತ್ತು 28Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಲೆಕ್ಟ್ರಿಕ್ ಬೈಕ್ ಅನ್ನು ಪೂರ್ತಿ ಚಾರ್ಜ್ ಮಾಡಿದರೆ 120 ಕಿಲೋಮೀಟರ್ ಮೈಲೇಜ್ ನೀಡುತ್ತದೆ. ಕ್ರಾಟೋಸ್ ಆರ್ 9kW ಎಲೆಕ್ಟ್ರಿಕ್ ಮೋಟಾರ್ ಅನ್ನು ಹೊಂದಿದ್ದು, ಶಕ್ತಿಶಾಲಿ ರೂಪಾಂತರವಾಗಿದೆ ಎಂದು ಹೇಳಬಹುದು. ಇದು 12bhp ಪವರ್ ಮತ್ತು 38Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಕ್ರಾಟೋಸ್ ಆರ್ ಗಂಟೆಗೆ 105 ಕಿಲೋಮೀಟರ್ ವೇಗವನ್ನು ತಲುಪುತ್ತದೆ.
ಟಾರ್ಕ್ ಮೋಟಾರ್ಸ್, ಇತ್ತೀಚೆಗೆ ಪುಣೆಯಲ್ಲಿ ತನ್ನ ಮೊದಲ ಎಕ್ಸ್ಪೀರಿಯೆನ್ಸ್ ಸೆಂಟರ್ ಅನ್ನು ಉದ್ಘಾಟಿಸಿದೆ. ಮಾರ್ಚ್ 2023ರ ವೇಳೆಗೆ ಹೈದರಾಬಾದ್, ಬೆಂಗಳೂರು, ಚೆನ್ನೈ, ಥಾಣೆ ಮತ್ತು ಮುಂಬೈ ಸೇರಿದಂತೆ ದೇಶದ ಏಳು ನಗರಗಳಲ್ಲಿ ಈ ಸೆಂಟರ್ ಆರಂಭಿಸಲು ಯೋಜಿಸಿದೆ. ತಯಾರಕರು, ಈ ವರ್ಷದ ಆರಂಭದಲ್ಲಿ ಪುಣೆಯಲ್ಲಿ ಕ್ರಾಟೋಸ್ ಎಲೆಕ್ಟ್ರಿಕ್ ಬೈಕ್ ವಿತರಣೆಯನ್ನು ಪ್ರಾರಂಭಿಸಿದ್ದರು. ಇದುವರೆಗೆ ಸುಮಾರು 250 ಯುನಿಟ್‌ಗಳನ್ನು ಮಾರಾಟ ಮಾಡಿದ್ದಾರೆ. ಇತ್ತೀಚೆಗೆ, ಕಂಪನಿಯು ಮುಂಬೈನಲ್ಲೂ ವಿತರಣೆಯನ್ನು ಪ್ರಾರಂಭಿಸಿದೆ.
ಈ ವರ್ಷದ ಆರಂಭದಲ್ಲಿ ಟಾರ್ಕ್ ಮೋಟಾರ್ಸ್, ಮೊಬೈಲ್ ಸರ್ವಿಸ್ ವ್ಯಾನ್ ಅನ್ನು ತನ್ನ ಗ್ರಾಹಕರಿಗಾಗಿ ಪರಿಚಯಿಸಿತ್ತು. ಈ ವಾಹನವನ್ನು ಬಳಸಿಕೊಂಡು ಗ್ರಾಹಕರಿಗೆ ಮನೆ ಬಾಗಿಲಿಗೆ ಸೇವಾ ಸೌಲಭ್ಯ ನೀಡುವುದು ಕಂಪನಿಯ ಉದ್ದೇಶವಾಗಿದೆ. ಟಾರ್ಕ್ ಮೋಟಾರ್ಸ್ ಸದ್ಯ ತನ್ನ ಗಮನವನ್ನು ಕ್ರಾಟೋಸ್ ಮತ್ತು ಕ್ರಾಟೋಸ್ ಆರ್ ಎಲೆಕ್ಟ್ರಿಕ್ ಬೈಕ್ ಮೇಲೆ ಕೇಂದ್ರೀಕರಿಸಿದ್ದು, ಈ ಮಾದರಿಗಳು ಹೆಚ್ಚು ಜನಪ್ರಿಯ ಹಾಗೂ ವಿಶ್ವಾಸಾರ್ಹವಾಗಿಸಲು ಕೆಲಸ ಮಾಡುತ್ತಿದೆ. ಕೆಲವು ಯುನಿಟ್‌ಗಳಲ್ಲಿನ ಆರಂಭಿಕ ದೋಷವನ್ನು ಈಗಾಗಲೇ ಸರಿಪಡಿಸಿದೆ.
ಎಲೆಕ್ಟ್ರಿಕ್ ಮೋಟಾರ್‌ಸೈಕಲ್‌ಗಳಿಗೆ ವೇಗದ ಚಾರ್ಜರ್‌ಗಳನ್ನು ಒದಗಿಸಲು ಸಹ ಟಾರ್ಕ್ ಮೋಟಾರ್ಸ್ ಕೆಲಸ ಮಾಡುತ್ತಿದೆ. ವೇಗದ ಚಾರ್ಜರ್‌ಗಳು ಪ್ರಸ್ತುತ ಪ್ರಾಯೋಗಿಕ ಹಂತದಲ್ಲಿವೆ. ಆದರೆ, ಮೊದಲು ಅವುಗಳನ್ನು ಪುಣೆ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಅಳವಡಿಸಲು ಯೋಜನೆ ರೂಪಿಸಲಾಗಿದೆ ಎಂದು ಕಂಪನಿ ಹೇಳಿಕೊಂಡಿದೆ. ನಂತರದ ಚಾರ್ಜರ್ ಪಾಯಿಂಟ್‌ಗಳನ್ನು ಮುಂಬೈ-ಪುಣೆ ಹೆದ್ದಾರಿಯಲ್ಲಿ ಅಳವಡಿಕೆ ಮಾಡಲು ಹಾಟ್‌ಸ್ಪಾಟ್‌ಗಳನ್ನು ಗುರುತಿಸುತ್ತಿದೆ. ಇನ್ನೂ ದೇಶದ ಇತರೆ ನಗರಗಳಲ್ಲೂ ಮುಂಬರುವ ದಿನದಲ್ಲಿ ಈ ರೀತಿಯ ಚಾರ್ಜರ್ ಪಾಯಿಂಟ್ ಅಳವಡಿಸಲು ಕಂಪನಿ ಚಿಂತನೆ ನಡೆಸಿದೆ.
ಟಾರ್ಕ್ ಮೋಟಾರ್ಸ್ ಕಂಪನಿಯು ದೇಶದಲ್ಲಿ 2015ರಿಂದ ಎಲೆಕ್ಟ್ರಿಕ್ ವಾಹನಗಳ ಅಭಿವೃದ್ದಿಯಲ್ಲಿ ತೊಡಗಿಕೊಂಡಿದ್ದು, ಬರೋಬ್ಬರಿ 7 ವರ್ಷಗಳ ಆವಿಷ್ಕಾರ, ಅಭಿವೃದ್ದಿ ಮತ್ತು ತಂತ್ರಜ್ಞಾನದ ಸುಧಾರಣೆ ಬಳಿಕ ನೂತನ ಕ್ರಾಟೋಸ್ ಮತ್ತು ಕ್ರಾಟೋಸ್ ಆರ್ ಬೈಕ್ ಮಾದರಿಗಳನ್ನು ಭಾರತದ ಮಾರುಕಟ್ಟೆಯಲ್ಲಿ ಪರಿಚಯಿಸಿತ್ತು. ಈ ಹೊಸ ಬೈಕುಗಳು ರೇಸಿಂಗ್ ತಂತ್ರಜ್ಞಾನ ಹೊಂದಿದ್ದು, ಅಟಿಫೀಶಿಯಲ್ ಇಂಟಲಿಜೆನ್ಸ್ ಆಧಾರಿತ ಟಾರ್ಕ್ ಇನ್ಶೂಟಿವ್ ರೆಸ್ಪಾನ್ಸ್ ಆಪರೇಟಿಂಗ್ ಸಿಸ್ಟಂ- ಟಿಐಆರ್‍ಒಎಸ್ ಎಂಬ ಡ್ರೈವ್ ಟ್ರೇನ್ ಟೆಕ್ನಾಲಜಿಯನ್ನು ಹೊಂದಿವೆ.