ಸಿಂಗಲ್ ಚಾರ್ಜ್‌ನಲ್ಲಿ 300 ಕಿ.ಮೀ ಮೈಲೇಜ್ ನೀಡುವ ಹಾರ್ವಿನ್ SK3 ಇವಿ ಸ್ಕೂಟರ್ ಬಿಡುಗಡೆ

ಚೀನಾದ ಎಲೆಕ್ಟ್ರಿಕ್ ವಾಹನ ತಯಾರಕ ಕಂಪನಿಯಾದ ಹಾರ್ವಿನ್, ಹೈ-ರೇಂಜ್ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಬಿಡುಗಡೆ ಮಾಡಿದೆ. ಈ ವಾಹನವು ಇದುವರೆಗೆ ಬಿಡುಗಡೆ ಮಾಡಿರುವ ಅತ್ಯಂತ ಲಾಂಗ್‌ ರೇಂಜ್ ಮೈಲೇಜ್ ಹೊಂದಿರುವ ಎಲೆಕ್ಟ್ರಿಕ್ ಸ್ಕೂಟರ್‌ಗಳಲ್ಲಿ ಅಗ್ರ ಸ್ಥಾನವನ್ನು ಪಡೆದುಕೊಂಡಿದೆ.

 ಸಿಂಗಲ್ ಚಾರ್ಜ್‌ನಲ್ಲಿ 300 ಕಿ.ಮೀ ಮೈಲೇಜ್ ನೀಡುವ ಹಾರ್ವಿನ್ SK3 ಇವಿ ಸ್ಕೂಟರ್ ಬಿಡುಗಡೆ

ಭಾರತದಲ್ಲಿ ಪ್ರಸ್ತುತ ಮಾರಾಟಕ್ಕಿರುವ ಟಾಟಾ ಮೋಟಾರ್ಸ್‌ನ ನೆಕ್ಸಾನ್ ಇವಿ ಅಧಿಕ ಮೈಲೇಜ್ ನೀಡುವ ಪ್ರಮುಖ ಎಲೆಕ್ಟ್ರಿಕ್ ಕಾರು ಮಾದರಿಗಳಲ್ಲಿ ಒಂದಾಗಿದೆ. ಇದು ಭಾರತದ ಅತ್ಯಂತ ಜನಪ್ರಿಯ ಎಲೆಕ್ಟ್ರಿಕ್ ಕಾರು ಮಾದರಿಯಾಗಿದೆ. ಈ ವಾಹನವನ್ನು ಪೂರ್ಣ ಚಾರ್ಜ್ ಮಾಡಿದರೆ 312 ಕಿ.ಮೀ ವರೆಗೆ ಪ್ರಯಾಣಿಸಬಹುದು.

ಸಿಂಗಲ್ ಚಾರ್ಜ್‌ನಲ್ಲಿ 300 ಕಿ.ಮೀ ಮೈಲೇಜ್ ನೀಡುವ ಹಾರ್ವಿನ್ SK3 ಇವಿ ಸ್ಕೂಟರ್ ಬಿಡುಗಡೆ

ವರದಿಗಳ ಪ್ರಕಾರ, ಈ ಶ್ರೇಣಿಯ ಸಾಮರ್ಥ್ಯದೊಂದಿಗೆ ಸ್ಪರ್ಧಿಸಬಲ್ಲ ಎಲೆಕ್ಟ್ರಿಕ್ ಸ್ಕೂಟರ್ ಯಾವುದೂ ಇಲ್ಲ. ಆದರೆ ಇದೀಗ ಬಿಡುಗಡೆ ಮಾಡಿರುವ ಚೀನಾದ ಎಲೆಕ್ಟ್ರಿಕ್ ವಾಹನ ತಯಾರಕ ಕಂಪನಿಯ ಹಾರ್ವಿನ್‌ನ ಎಲೆಕ್ಟ್ರಿಕ್ ಸ್ಕೂಟರ್ ಟಾಟಾ ಮೋಟಾರ್ಸ್‌ನ ನೆಕ್ಸಾನ್ ಇವಿಯಷ್ಟೇ ಮೈಲೇಜ್ ರೇಂಜ್ ಅನ್ನು ಹೊಂದಿದೆ.

ಸಿಂಗಲ್ ಚಾರ್ಜ್‌ನಲ್ಲಿ 300 ಕಿ.ಮೀ ಮೈಲೇಜ್ ನೀಡುವ ಹಾರ್ವಿನ್ SK3 ಇವಿ ಸ್ಕೂಟರ್ ಬಿಡುಗಡೆ

ಹಾರ್ವಿನ್ ಕಂಪನಿಯು ಸುಧೀರ್ಘ ದೂರದವರೆಗೆ ಪ್ರಯಾಣಿಸಬಲ್ಲ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಅಭಿವೃದ್ಧಿಪಡಿಸಿದ ಏಕೈಕ ಸಂಸ್ಥೆಯಾಗಿದೆ. ಇದು ವಿಶ್ವದ ಎರಡು ಪ್ರಮುಖ ಮಾರುಕಟ್ಟೆಗಳಲ್ಲಿ ತನ್ನ SK3 ಎಂಬ ಎಲೆಕ್ಟ್ರಿಕ್ ಮಾದರಿಯನ್ನು ಮಾರಾಟಕ್ಕಾಗಿ ಬಿಡುಗಡೆ ಮಾಡಿದೆ. ಇದರ ವೈಶಿಷ್ಟ್ಯ, ಮೈಲೇಜ್, ವಿನ್ಯಾಸ, ಪರ್ಫಾಮೆನ್ಸ್‌ ಎಲ್ಲದರಲ್ಲೂ ಇತರ ಇವಿಗಳಿಗಿಂತ ಭಿನ್ನವಾಗಿದೆ.

ಸಿಂಗಲ್ ಚಾರ್ಜ್‌ನಲ್ಲಿ 300 ಕಿ.ಮೀ ಮೈಲೇಜ್ ನೀಡುವ ಹಾರ್ವಿನ್ SK3 ಇವಿ ಸ್ಕೂಟರ್ ಬಿಡುಗಡೆ

ಕಂಪನಿಯ ಪ್ರಕಾರ, ಈ ಎಲೆಕ್ಟ್ರಿಕ್ ಸ್ಕೂಟರ್ ಪೂರ್ಣ ಚಾರ್ಜ್‌ನಲ್ಲಿ ಸುಮಾರು 300 ಕಿ.ಮೀ ದೂರದವರೆಗೆ ಚಲಿಸುತ್ತದೆ. ಇದು ನಾವು ನಿರೀಕ್ಷಿಸಿದ್ದಕ್ಕಿಂತ ಹೆಚ್ಚು ದೀರ್ಘ ವ್ಯಾಪ್ತಿಯ ಸಾಮರ್ಥ್ಯವಾಗಿದೆ. ಇದು ಕೆಂಪು ಬ್ಯಾಟರಿಗಳನ್ನು ಹೊಂದಿದ್ದು, SK3 ಎಲೆಕ್ಟ್ರಿಕ್ ಸ್ಕೂಟರ್‌ನ ಅಧಿಕ ಮೈಲೇಜ್‌ಗೆ ಹೆಚ್ಚು ಸಹಕಾರಿಯಾಗಿದೆ ಎಂದು ಕಂಪನಿ ಹೇಳಿಕೊಂಡಿದೆ.

ಸಿಂಗಲ್ ಚಾರ್ಜ್‌ನಲ್ಲಿ 300 ಕಿ.ಮೀ ಮೈಲೇಜ್ ನೀಡುವ ಹಾರ್ವಿನ್ SK3 ಇವಿ ಸ್ಕೂಟರ್ ಬಿಡುಗಡೆ

ಒಂದೇ ಬ್ಯಾಟರಿ ಆಯ್ಕೆಯಲ್ಲಿ ಮಾರಾಟಕ್ಕೆ ಲಭ್ಯವಿರುವ ಅದೇ ಮಾದರಿಯ ಇತರ ಇ-ಸ್ಕೂಟರ್‌ಗಳು ಕೇವಲ 160 ಕಿ.ಮೀ ಮೈಲೇಜ್‌ ನೀಡುತ್ತವೆ. ಪ್ರಸ್ತುತ ಭಾರತೀಯ ಮಾರುಕಟ್ಟೆಯಲ್ಲಿ ಮಾರಾಟಕ್ಕೆ ಲಭ್ಯವಿರುವ ಅನೇಕ ಎಲೆಕ್ಟ್ರಿಕ್ ಸ್ಕೂಟರ್ ಮಾದರಿಗಳಿಗಿಂತ ಇದು ಹೆಚ್ಚಿನ ಶ್ರೇಣಿಯನ್ನು ಹೊಂದಿದೆ ಎಂಬುದು ಗಮನಾರ್ಹವಾಗಿದೆ.

ಸಿಂಗಲ್ ಚಾರ್ಜ್‌ನಲ್ಲಿ 300 ಕಿ.ಮೀ ಮೈಲೇಜ್ ನೀಡುವ ಹಾರ್ವಿನ್ SK3 ಇವಿ ಸ್ಕೂಟರ್ ಬಿಡುಗಡೆ

72V36AH ಬ್ಯಾಟರಿ ಪ್ಯಾಕ್ ಅನ್ನು ಹಾರ್ವಿನ್ SK3 ಎಲೆಕ್ಟ್ರಿಕ್ ಸ್ಕೂಟರ್ ನಲ್ಲಿ ಬಳಸಲಾಗಿದೆ. ಅಲ್ಲದೆ, ಉತ್ತಮ ದಕ್ಷತೆಯನ್ನು ಪ್ರದರ್ಶಿಸಲು 3.1 ಕಿಲೋವ್ಯಾಟ್ ಸಾಮರ್ಥ್ಯದ ಎಲೆಕ್ಟ್ರಿಕ್ ಮೋಟರ್ ಅನ್ನು ಅಳವಡಿಸಲಾಗಿದೆ. ಈ ಮೋಟರ್ 6.3 ಕಿಲೋವ್ಯಾಟ್ ಸಾಮರ್ಥ್ಯವನ್ನು ಉತ್ಪಾದಿಸುತ್ತದೆ.

ಸಿಂಗಲ್ ಚಾರ್ಜ್‌ನಲ್ಲಿ 300 ಕಿ.ಮೀ ಮೈಲೇಜ್ ನೀಡುವ ಹಾರ್ವಿನ್ SK3 ಇವಿ ಸ್ಕೂಟರ್ ಬಿಡುಗಡೆ

SK3 ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಕೇವಲ ಹೆಚ್ಚಿನ ಶ್ರೇಣಿ ಮತ್ತು ದಕ್ಷತೆಯನ್ನು ಪ್ರದರ್ಶಿಸುವ ಸ್ಕೂಟರ್ ಆಗಿ ಅಭಿವೃದ್ಧಿಪಡಿಸಲಾಗಿಲ್ಲ. ಬದಲಿಗೆ ಹೆಚ್ಚು ತಾಂತ್ರಿಕವಾಗಿ ಸುಧಾರಿತ ಎಲೆಕ್ಟ್ರಿಕ್ ವಾಹನವಾಗಿ ಅಭಿವೃದ್ಧಿಪಡಿಸಿದ್ದಾರೆ. ಪೂರ್ಣ-ಬಣ್ಣದ ಟಿಎಫ್ಟಿ ಪರದೆ, ಬ್ಲೂಟೂತ್ ಕನೆಕ್ಟಿವಿಟಿ, ಕೀ ಇಲ್ಲದೆ ಪವರ್ ಅನ್ನು ಆನ್ ಮಾಡುವ ಸಿಸ್ಟಂ ಮತ್ತು ಕ್ರೂಸ್ ಕಂಟ್ರೋಲ್ ವೈಶಿಷ್ಟ್ಯಗಳನ್ನು ಒಳಗೊಂಡಿದೆ.

ಸಿಂಗಲ್ ಚಾರ್ಜ್‌ನಲ್ಲಿ 300 ಕಿ.ಮೀ ಮೈಲೇಜ್ ನೀಡುವ ಹಾರ್ವಿನ್ SK3 ಇವಿ ಸ್ಕೂಟರ್ ಬಿಡುಗಡೆ

ಇದನ್ನು ಬಾಡಿ ಪ್ಯಾನೆಲ್ ಹೊಂದಿರುವ ಎಲೆಕ್ಟ್ರಿಕ್ ಸ್ಕೂಟರ್ ಆಗಿಯೂ ಅಭಿವೃದ್ಧಿಪಡಿಸಲಾಗಿದೆ. ತದನಂತರ, ತನ್ನ ಆಕರ್ಷಕ ನೋಟವನ್ನು ಹೆಚ್ಚಿಸಲು, ಸ್ಕೂಟರ್ ಟ್ವಿನ್ ಬೀಮ್ ಎಲ್ಇಡಿ ಹೆಡ್ಲ್ಯಾಂಪ್, ದೊಡ್ಡ ವಿಂಡ್ ಸ್ಕ್ರೀನ್, ಅಲಾಯ್ ವ್ಹೀಲ್ ಮುಂತಾದ ವೈಶಿಷ್ಟ್ಯಗಳನ್ನು ಹೊಂದಿದೆ. ಇನ್ನು ಲುಕ್‌ನಲ್ಲಿ ಆಕರ್ಷಕ ನೋಟವನ್ನು ಪಡೆದುಕೊಂಡಿದೆ.

ಸಿಂಗಲ್ ಚಾರ್ಜ್‌ನಲ್ಲಿ 300 ಕಿ.ಮೀ ಮೈಲೇಜ್ ನೀಡುವ ಹಾರ್ವಿನ್ SK3 ಇವಿ ಸ್ಕೂಟರ್ ಬಿಡುಗಡೆ

ಹಾರ್ವಿನ್ ಪ್ರಸ್ತುತ ಅತ್ಯಂತ ವಿಶೇಷ ಎಲೆಕ್ಟ್ರಿಕ್ ಸ್ಕೂಟರ್ ಆಗಿ ಮಾರುಕಟ್ಟೆಯಲ್ಲಿ ಹೊರಹೊಮ್ಮಿದೆ. ದುರದೃಷ್ಟವಶಾತ್, ಕಂಪನಿಯು ಈ ವಾಹನವನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿಲ್ಲ. ಪ್ರಸ್ತುತ ಇದು ದೇಶದಲ್ಲಿ ಮಾರಾಟಕ್ಕೆ ಸಿಗುವ ಸಾಧ್ಯತೆಗಳಿಲ್ಲ. ಪ್ರಸ್ತುತ, ಎಸ್‌ಕೆ3 ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಚೀನಾ ಮತ್ತು ಯುರೋಪ್‌ನಲ್ಲಿ ಮಾತ್ರ ಬಿಡುಗಡೆ ಮಾಡಲಾಗಿದೆ.

ಸಿಂಗಲ್ ಚಾರ್ಜ್‌ನಲ್ಲಿ 300 ಕಿ.ಮೀ ಮೈಲೇಜ್ ನೀಡುವ ಹಾರ್ವಿನ್ SK3 ಇವಿ ಸ್ಕೂಟರ್ ಬಿಡುಗಡೆ

ಪ್ರಸ್ತುತ ಭಾರತದಲ್ಲಿ ಓಲಾ ಎಲೆಕ್ಟ್ರಿಕ್ ಸ್ಕೂಟರ್ ಎಸ್ 1 ಪ್ರೊ ಮತ್ತು ಸಿಂಪಲ್ ಎನರ್ಜಿ ಒನ್ ಹೆಚ್ಚಿನ ಶ್ರೇಣಿಯ ಸಾಮರ್ಥ್ಯದೊಂದಿಗೆ ಮಾರಾಟಕ್ಕೆ ಲಭ್ಯವಿದೆ. ಆದರೆ ಈ ವಾಹನಗಳು ಸದ್ಯ ಮಾರುಕಟ್ಟೆಯಲ್ಲಿ ಬೇಡಿಕೆ ಕಳೆದುಕೊಳ್ಳುತ್ತಿದ್ದು, ಇವಿ ವಾಹನಗಳಲ್ಲಿ ಕಾಣಿಸಿಕೊಳ್ಳುತ್ತಿರುವ ಬೆಂಕಿ ಅವಘಡಗಳು ಇದಕ್ಕೆ ಕಾರಣವಾಗಿದೆ.

ಸಿಂಗಲ್ ಚಾರ್ಜ್‌ನಲ್ಲಿ 300 ಕಿ.ಮೀ ಮೈಲೇಜ್ ನೀಡುವ ಹಾರ್ವಿನ್ SK3 ಇವಿ ಸ್ಕೂಟರ್ ಬಿಡುಗಡೆ

ಭಾರತದ ವಾತಾವರಣಕ್ಕೆ ತಕ್ಕಂತೆ ಇವಿ ಸ್ಕೂಟರ್‌ಗಳಲ್ಲಿನ ಬ್ಯಾಟರಿಗಳ ನಿರ್ಮಾಣವಾಗುತ್ತಿಲ್ಲ ಎಂದು ಈಗಾಗಲೇ ಹಲವರು ತಜ್ಞರು ತಿಳಿಸಿದ್ದಾರೆ. ಅತಿಯಾದ ಬಿಸಿಲಿನಿಂದ ಬ್ಯಾಟರಿಗಳಲ್ಲಿ ಬೆಂಕಿ ಕಾಣಿಸಿಕೊಳ್ಳುವುದು, ಸ್ಪೋಟಗೊಳ್ಳುವಂತಹ ಪ್ರಕರಣಗಳು ಹೆಚ್ಚಾಗಿವೆ. ಅಲ್ಲದೇ ಹಲವರು ಈ ಅವಘಡಗಳಿಂದ ಸಾವನ್ನಪ್ಪಿರುವುದು ಇವಿ ವಾಹನಗಳ ಹಿನ್ನಡೆಗೆ ಕಾರಣವಾಗಿದೆ.

ಸಿಂಗಲ್ ಚಾರ್ಜ್‌ನಲ್ಲಿ 300 ಕಿ.ಮೀ ಮೈಲೇಜ್ ನೀಡುವ ಹಾರ್ವಿನ್ SK3 ಇವಿ ಸ್ಕೂಟರ್ ಬಿಡುಗಡೆ

ಸದ್ಯ ಭಾರತೀಯ ಇವಿ ವಲಯವು ಚೇತರಿಸಿಕೊಳ್ಳಲು ಹೆಣಗಾಡುತ್ತಿದ್ದು, ಪ್ರಮಾಣಿತ ಬ್ಯಾಟಿಗಳ ಅಳವಡಿಕೆಯೊಂದಿಗೆ ಇವಿಗಳ ಮೇಲೆ ನಂಬಿಕೆ ಹೆಚ್ಚಿಸಲು ವಾಹನ ತಯಾರಕರು ಶ್ರಮಿಸುತ್ತಿದ್ದಾರೆ. ಈಗಾಗಲೇ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು ಕೂಡ ಬೆಂಖಿ ಅವಘಡಗಳ ಕುರಿತಾಗಿ ಸಭೆ ನಡೆಸಿ ಇವಿ ತಯಾರಕರಿಗೆ ಎಚ್ಚರಿಕೆ ನೀಡಿದ್ದಾರೆ.

ಸಿಂಗಲ್ ಚಾರ್ಜ್‌ನಲ್ಲಿ 300 ಕಿ.ಮೀ ಮೈಲೇಜ್ ನೀಡುವ ಹಾರ್ವಿನ್ SK3 ಇವಿ ಸ್ಕೂಟರ್ ಬಿಡುಗಡೆ

ಮುಂದಿನ ದಿನಗಳಲ್ಲಿ ಇವಿ ವಾಹನ ತಯಾರಕರು ಯಾವೆಲ್ಲಾ ಭದ್ರಾತಾ ಕ್ರಮಗಳನ್ನು ಕೈಗೊಂಡು ಜನರನ್ನು ಮತ್ತೆ ಇವಿ ವಾಹನಗಳತ್ತ ಬರುವಂತೆ ಮಾಡುತ್ತಾರೆಂಬುದನ್ನು ಕಾದು ನೋಡಬೇಕಿದೆ. ಸದ್ಯದ ಪರಿಸ್ಥಿತಿಯಲ್ಲಿ ಇವಿಗಳನ್ನು ಕೊಳ್ಳಲು ಜನರು ಹಿಂಜರಿಯುತ್ತಿದ್ದಾರೆ.

Most Read Articles

Kannada
English summary
Horwin sk3 electric scooter launched with 300km range
Story first published: Friday, May 6, 2022, 13:07 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X