ಕೀವೇ ಕೆ300 ಎನ್ ಮತ್ತು ಕೆ300 ಆರ್ ಮೋಟಾರ್‌ಸೈಕಲ್ ಭಾರತದಲ್ಲಿ ಬಿಡುಗಡೆ

ಹೊಸ ಪೀಳಿಗೆಯ ವಾಹನಗಳ ಮಾರಾಟದಲ್ಲಿ ಮುಂಚೂಣಿ ಸಾಧಿಸುತ್ತಿರುವ ದೇಶಿಯ ಮಾರುಕಟ್ಟೆಯಲ್ಲಿ ಹಲವಾರು ಹೊಸ ವಾಹನ ಉತ್ಪಾದನಾ ಕಂಪನಿಗಳು ಸಹಭಾಗಿತ್ವ ಯೋಜನೆಗಳೊಂದಿಗೆ ಮಾರುಕಟ್ಟೆ ಪ್ರವೇಶಿಸುತ್ತಿದ್ದು, ಇದೀಗ ಹಂಗೇರಿಯನ್ ಮೂಲದ ಕೀವೇ ಕಂಪನಿಯು ಸಹ ತನ್ನ ಪ್ರಮುಖ ದ್ವಿ-ಚಕ್ರ ವಾಹನಗಳೊಂದಿಗೆ ಭಾರತದಲ್ಲಿ ಹೊಸ ಸಂಚಲನಕ್ಕೆ ಕಾರಣವಾಗಿದೆ.

ಕೀವೇ ಕೆ300 ಎನ್ ಮತ್ತು ಕೆ300 ಆರ್ ಮೋಟಾರ್‌ಸೈಕಲ್ ಭಾರತದಲ್ಲಿ ಬಿಡುಗಡೆ

ಕೀವೇ ಕಂಪನಿಯು 1999ರಲ್ಲಿ ಸ್ಥಾಪಿತವಾದ ಹಂಗೇರಿಯನ್ ಆಟೋಮೊಬೈಲ್ ತಯಾರಕ ಕಂಪನಿಯಾಗಿದ್ದು, ಕೀವೇ ಕಂಪನಿಯಲ್ಲಿ ಇತ್ತೀಚೆಗೆ ಚೀನಾ ಮೂಲದ ಕಿಯಾನ್‌ಜಿಯಾಂಗ್ (ಕ್ಯೂಜೆ) ಗ್ರೂಪ್‌ ಸಹಭಾಗಿತ್ವ ಯೋಜನೆಯಡಿ ಭಾರೀ ಪ್ರಮಾಣದಲ್ಲಿ ಹೂಡಿಕೆ ಮಾಡಿದೆ. ಕ್ಯೂಜೆ ಗ್ರೂಪ್‌ ಕಂಪನಿಯು ಕೀವೇ ಕಂಪನಿಯಲ್ಲಿ ಮಾತ್ರವಲ್ಲದೆ ಬೆನೆಲ್ಲಿ ಮೋಟಾರ್‌ಸೈಕಲ್ ಕಂಪನಿಯಲ್ಲೂ ಕೂಡಾ ಭಾರೀ ಪ್ರಮಾಣದ ಹೂಡಿಕೆ ಮಾಡಿದೆ.

ಕೀವೇ ಕೆ300 ಎನ್ ಮತ್ತು ಕೆ300 ಆರ್ ಮೋಟಾರ್‌ಸೈಕಲ್ ಭಾರತದಲ್ಲಿ ಬಿಡುಗಡೆ

ಭಾರತದಲ್ಲಿ ಸದ್ಯ ಬೆನೆಲ್ಲಿ ಮೋಟಾರ್‌ಸೈಕಲ್ ಉತ್ಪಾದನೆ ಮತ್ತು ಮಾರಾಟವನ್ನು ನಿರ್ವಹಿಸುತ್ತಿರುವ ಕ್ಯೂಜೆ ಗ್ರೂಪ್ ಇದೀಗ ಕೀವೇ ಮಾದರಿಗಳನ್ನು ಭಾರತದಲ್ಲೂ ಪರಿಚಯಿಸಿದ್ದು, ಪ್ರಮುಖ ದ್ವಿಚಕ್ರ ವಾಹನಗಳನ್ನು ಹಂತ-ಹಂತವಾಗಿ ಬಿಡುಗಡೆ ಮಾಡುತ್ತಿದೆ.

ಕೀವೇ ಕೆ300 ಎನ್ ಮತ್ತು ಕೆ300 ಆರ್ ಮೋಟಾರ್‌ಸೈಕಲ್ ಭಾರತದಲ್ಲಿ ಬಿಡುಗಡೆ

ಭಾರತದಲ್ಲಿ ಕಳೆದ ಐದು ತಿಂಗಳಿನಲ್ಲಿ ನಾಲ್ಕು ಹೊಸ ದ್ವಿಚಕ್ರ ವಾಹನ ಉತ್ಪನ್ನಗಳನ್ನು ಪರಿಚಯಿಸಿರುವ ಕೀವೇ ಕಂಪನಿಯು ಇದೀಗ ಕೆ300 ಎನ್ ಮತ್ತು ಕೆ300 ಆರ್ ಬೈಕ್ ಮಾದರಿಗಳನ್ನು ಬಿಡುಗಡೆ ಮಾಡಿದೆ.

ಕೀವೇ ಕೆ300 ಎನ್ ಮತ್ತು ಕೆ300 ಆರ್ ಮೋಟಾರ್‌ಸೈಕಲ್ ಭಾರತದಲ್ಲಿ ಬಿಡುಗಡೆ

ಕೆ300 ಎನ್ ಮತ್ತು ಕೆ300 ಆರ್ ಬೈಕ್ ಮಾದರಿಗಳು ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ. 2.65 ಲಕ್ಷದಿಂದ ರೂ. 2.99 ಲಕ್ಷ ಬೆಲೆ ಹೊಂದಿದ್ದು, ಎಂಟ್ರಿ ಲೆವಲ್ ಸ್ಪೋರ್ಟ್ ಬೈಕ್ ವೈಶಿಷ್ಟ್ಯತೆ ಹೊಂದಿರುವ ಮಾದರಿಗಳು ಹಲವಾರು ವಿಶೇಷತೆಗಳೊಂದಿಗೆ ಮಾರುಕಟ್ಟೆ ಪ್ರವೇಶಿಸಿವೆ.

ಕೀವೇ ಕೆ300 ಎನ್ ಮತ್ತು ಕೆ300 ಆರ್ ಮೋಟಾರ್‌ಸೈಕಲ್ ಭಾರತದಲ್ಲಿ ಬಿಡುಗಡೆ

ಹೊಸ ಬೈಕ್ ಬಿಡುಗಡೆಯೊಂದಿಗೆ ಕೀವೇ ಕಂಪನಿಯು ರೂ. 1 ಸಾವಿರ ಮುಂಗಡದೊಂದಿಗೆ ಇಂದಿನಿಂದಲೇ ಬುಕಿಂಗ್ ಆರಂಭಿಸಿದ್ದು, ಈ ತಿಂಗಳಾಂತ್ಯಕ್ಕೆ ಹೊಸ ಬೈಕ್ ವಿತರಣೆ ಮಾಡುವ ಭರವಸೆ ನೀಡಿದೆ.

ಕೀವೇ ಕೆ300 ಎನ್ ಮತ್ತು ಕೆ300 ಆರ್ ಮೋಟಾರ್‌ಸೈಕಲ್ ಭಾರತದಲ್ಲಿ ಬಿಡುಗಡೆ

ಕೆ300 ಎನ್ ಬೈಕ್ ಮಾದರಿಯು ಪ್ರಮುಖ ಮೂರು ಬಣ್ಣಗಳ ಆಯ್ಕೆಯೊಂದಿಗೆ ಖರೀದಿಗೆ ಲಭ್ಯವಿದ್ದು, ಮ್ಯಾಟೆ ವೈಟ್ ಬಣ್ಣದ ಮಾದರಿಯು ಎಕ್ಸ್‌ಶೋರೂಂ ಪ್ರಕಾರ ರೂ. 2.65 ಲಕ್ಷ ಬೆಲೆ ಹೊಂದಿದ್ದರೆ, ಮ್ಯಾಟೆ ರೆಡ್ ಮಾದರಿಯು ರೂ. 2.75 ಲಕ್ಷ ಮತ್ತು ಮ್ಯಾಟೆ ಬ್ಲ್ಯಾಕ್ ಮಾದರಿಯು ರೂ. 2.85 ಲಕ್ಷ ಬೆಲೆ ಹೊಂದಿದೆ.

ಕೀವೇ ಕೆ300 ಎನ್ ಮತ್ತು ಕೆ300 ಆರ್ ಮೋಟಾರ್‌ಸೈಕಲ್ ಭಾರತದಲ್ಲಿ ಬಿಡುಗಡೆ

ಹಾಗೆಯೇ ಕೆ300 ಆರ್ ಮಾದರಿಯು ಪ್ರಮುಖ ಮೂರು ಬಣ್ಣಗಳ ಆಯ್ಕೆ ಹೊಂದಿದ್ದು, ಇದರಲ್ಲಿ ಗ್ಲಾಸಿ ವೈಟ್ ಮಾದರಿಯು ಎಕ್ಸ್‌ಶೋರೂಂ ಪ್ರಕಾರ ರೂ. 2.99 ಲಕ್ಷ ಬೆಲೆ ಹೊಂದಿದ್ದರೆ ಗ್ಲಾಸಿ ರೆಡ್ ಮಾದರಿಯು ರೂ. 3.10 ಲಕ್ಷ ಮತ್ತು ಗ್ಲಾಸಿ ಬ್ಲ್ಯಾಕ್ ಮಾದರಿಯು ರೂ. 3.20 ಲಕ್ಷ ಬೆಲೆ ಹೊಂದಿದೆ.

ಕೀವೇ ಕೆ300 ಎನ್ ಮತ್ತು ಕೆ300 ಆರ್ ಮೋಟಾರ್‌ಸೈಕಲ್ ಭಾರತದಲ್ಲಿ ಬಿಡುಗಡೆ

ಎಂಜಿನ್ ಮತ್ತು ಪರ್ಫಾಮೆನ್ಸ್

ಕೀವೇ ಕಂಪನಿಯು ಕೆ300 ಎನ್ ಮತ್ತು ಕೆ300 ಆರ್ ಬೈಕ್‌ಗಳಲ್ಲಿ ಒಂದೇ ಮಾದರಿಯ ಎಂಜಿನ್ ಆಯ್ಕೆ ನೀಡಿದ್ದು, 6-ಸ್ಪೀಡ್ ಗೇರ್‌ಬಾಕ್ಸ್ ಜೋಡಣೆ ಹೊಂದಿರುವ 292.4 ಸಿಸಿ ಸಿಂಗಲ್ ಸಿಲಿಂಡರ್ ಎಂಜಿನ್ 27.12 ಬಿಎಚ್‌ಪಿ ಮತ್ತು 25 ಎನ್ಎಂ ಟಾರ್ಕ್ ಉತ್ಪಾದನೆ ಮಾಡುತ್ತವೆ.

ಕೀವೇ ಕೆ300 ಎನ್ ಮತ್ತು ಕೆ300 ಆರ್ ಮೋಟಾರ್‌ಸೈಕಲ್ ಭಾರತದಲ್ಲಿ ಬಿಡುಗಡೆ

ಎರಡೂ ಹೊಸ ಬೈಕ್ ಮಾದರಿಗಳಲ್ಲೂ ಕಂಪನಿಯು ಮುಂಭಾಗದಲ್ಲಿ 37 ಎಂಎಂ ಅಪ್ ಸೈಡ್ ಡೌನ್ ಫೋರ್ಕ್ಸ್ ಮತ್ತು ಮೊನೊಶಾರ್ಕ್ಸ್ ಸಸ್ಷೆಂಷನ್ ನೀಡಿದ್ದು, ಡ್ಯುಯಲ್ ಚಾನೆಲ್ ಎಬಿಎಸ್ ಜೊತೆಗೆ ಮುಂಭಾಗದ ಚಕ್ರಗಳಲ್ಲಿ ನಾಲ್ಕು-ಪಿಸ್ಟನ್ ಕ್ಯಾಲಿಪರ್‌ಗಳನ್ನು ಹೊಂದಿರುವ 292 ಎಂಎಂ ಡಿಸ್ಕ್ ಬ್ರೇಕ್ ಮತ್ತು 220 ಎಂಎಂ ಸಿಂಗಲ್ ಪಿಸ್ಟನ್ ಕ್ಯಾಲಿಪರ್‌ ಹೊಂದಿರುವ ಡಿಸ್ಕ್ ಬ್ರೇಕ್ ಜೋಡಿಸಲಾಗಿದೆ.

ಕೀವೇ ಕೆ300 ಎನ್ ಮತ್ತು ಕೆ300 ಆರ್ ಮೋಟಾರ್‌ಸೈಕಲ್ ಭಾರತದಲ್ಲಿ ಬಿಡುಗಡೆ

ಹೊಸ ಬೈಕಿನಲ್ಲಿ 17 ಇಂಚಿನ ಅಲಾಯ್ ವ್ಹೀಲ್‌ನೊಂದಿಗೆ ಮುಂಭಾಗದಲ್ಲಿ 100/70 ಟೈರ್ ಮತ್ತು ಹಿಂಬದಿಯಲ್ಲಿ 140/60 ಟೈರ್ ನೀಡಲಾಗಿದ್ದು, ಕೆ300 ಎನ್ ಬೈಕ್ 151 ಕೆಜಿ ತೂಕ ಹೊಂದಿದ್ದರೆ ಕೆ300 ಆರ್ ಮಾದರಿಯು 165 ಕೆಜಿ ತೂಕ ಹೊಂದಿದೆ.

ಕೀವೇ ಕೆ300 ಎನ್ ಮತ್ತು ಕೆ300 ಆರ್ ಮೋಟಾರ್‌ಸೈಕಲ್ ಭಾರತದಲ್ಲಿ ಬಿಡುಗಡೆ

ಕೆ300 ಎನ್ ಬೈಕ್ ಮಾದರಿಯು 1,990 ಎಂಎಂ ಉದ್ದ, 780 ಎಂಎಂ ಅಗಲ, 1,070 ಎಂಎಂ ಎತ್ತರ, 1,360 ಎಂಎಂ ವ್ಹೀಲ್‌ಬೆಸ್ ಮತ್ತು 150 ಎಂಎಂ ಗ್ರೌಂಡ್ ಕ್ಲಿಯೆರೆನ್ಸ್ ಹೊಂದಿದ್ದರೆ ಕೆ300 ಆರ್ ಬೈಕ್ ಮಾದರಿಯು 2,010 ಎಂಎಂ ಉದ್ದ, 750 ಎಂಎಂ ಅಗಲ, 1,080 ಎಂಎಂ ಎತ್ತರ, 1,360 ಎಂಎಂ ವ್ಹೀಲ್‌ಬೆಸ್ ಮತ್ತು 135 ಎಂಎಂ ಗ್ರೌಂಡ್ ಕ್ಲಿಯೆರೆನ್ಸ್ ಹೊಂದಿದೆ.

ಕೀವೇ ಕೆ300 ಎನ್ ಮತ್ತು ಕೆ300 ಆರ್ ಮೋಟಾರ್‌ಸೈಕಲ್ ಭಾರತದಲ್ಲಿ ಬಿಡುಗಡೆ

ಇದರೊಂದಿಗೆ ಹೊಸ ಬೈಕ್ ಮಾದರಿಗಳಲ್ಲಿ ಹಲವಾರು ಪ್ರೀಮಿಯಂ ಫೀಚರ್ಸ್‌ಗಳಿದ್ದು, ಭಾರತೀಯ ಗ್ರಾಹಕರ ಅಭಿರುಚಿಗೆ ಅನುಗುಣವಾಗಿ ಹೊಸ ಬೈಕ್ ಉತ್ಪನ್ನಗಳನ್ನು ಮಾರುಕಟ್ಟೆಗೆ ಪರಿಚಯಿಸಿದೆ.

ಕೀವೇ ಕೆ300 ಎನ್ ಮತ್ತು ಕೆ300 ಆರ್ ಮೋಟಾರ್‌ಸೈಕಲ್ ಭಾರತದಲ್ಲಿ ಬಿಡುಗಡೆ

ಭಾರತದಲ್ಲಿ ಸದ್ಯ ಹೊಸ ಕೆ300 ಎನ್ ಮತ್ತು ಕೆ300 ಆರ್ ಮಾದರಿಗಳ ಜೊತೆಗೆ ಕೀವೇ ಕಂಪನಿಯು ಸಿಕ್ಸ್ಟೀಸ್ 300ಐ ಮತ್ತು ವಿಯೆಸ್ಟೆ 300 ಮ್ಯಾಕ್ಸಿ ಸ್ಕೂಟರ್‌ಗಳು, ಕೆ-ಲೈಟ್ ಕ್ರೂಸರ್ ಬೈಕ್ ಮತ್ತು ವಿ320ಸಿ ಬಾಬರ್ ಶೈಲಿಯ ಮೋಟಾರ್‌ಸೈಕಲ್ ಮಾರಾಟ ಮಾಡುತ್ತಿದೆ.

ಕೀವೇ ಕೆ300 ಎನ್ ಮತ್ತು ಕೆ300 ಆರ್ ಮೋಟಾರ್‌ಸೈಕಲ್ ಭಾರತದಲ್ಲಿ ಬಿಡುಗಡೆ

ಕೀವೇ ಕಂಪನಿಯು ಜಾಗತಿಕ ಮಾರುಕಟ್ಟೆಗಳಲ್ಲಿ ಗ್ರಾಹಕರ ಬೇಡಿಕೆಯೆಂತೆ 125 ಸಿಸಿ ಯಿಂದ 1,200 ಸಿಸಿ ವರೆಗೂ ವಿವಿಧ ಎಂಜಿನ್‌ಗಳೊಂದಿಗೆ ಹಲವಾರು ಸ್ಕೂಟರ್‌, ಬೈಕ್‌ಗಳು ಮತ್ತು ಎಟಿವಿಗಳ ನಿರ್ಮಾಣದಲ್ಲಿ ಮುಂಚೂಣಿ ಸಾಧಿಸುತ್ತಿದ್ದು, ಇದೀಗ ಭಾರತದಲ್ಲೂ ತನ್ನ ಹೊಸ ಉತ್ಪನ್ನಗಳೊಂದಿಗೆ ಗ್ರಾಹಕರ ಸೆಳೆಯುತ್ತಿದೆ.

Most Read Articles

Kannada
Read more on ಕೀವೇ keeway
English summary
Keeway k300 n k300 r bikes launched in india details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X