ಎಲೆಕ್ಟ್ರಿಕ್ ಬೈಕ್ ಆಗಿ ಮಾಡಿಫೈಗೊಂಡ ಕೆಟಿಎಂ ಡ್ಯೂಕ್: ಇದರ ಟಾಪ್ ಸ್ಪೀಡ್ ಗಂಟೆಗೆ 140 ಕಿ.ಮೀ

ಎಲೆಕ್ಟ್ರಿಕ್ ವಾಹನಗಳು ಭಾರತದಲ್ಲಿ ತ್ವರಿತ ಜನಪ್ರಿಯತೆಯನ್ನು ಪಡೆಯುತ್ತಿವೆ, ವಿಶೇಷವಾಗಿ ದ್ವಿಚಕ್ರ ವಾಹನ ವಿಭಾಗದಲ್ಲಿ ಅನೇಕ ಎಲೆಕ್ಟ್ರಿಕ್ ವಾಹನ ಉತ್ಪಾದನಾ ಕಂಪನಿಗಳು ತಮ್ಮ ಉತ್ಪನ್ನಗಳನ್ನು ಮಾರುಕಟ್ಟೆಯಲ್ಲಿ ಈಗಾಗಲೇ ಬಿಡುಗಡೆ ಮಾಡಿ ಯಶಸ್ಸು ಕಂಡಿವೆ. ಆದರೆ ಪ್ರಸ್ತುತ ಹೆಚ್ಚಿನ ಕಾರ್ಯಕ್ಷಮತೆಯ ಎಲೆಕ್ಟ್ರಿಕ್ ಮೋಟಾರ್ಸೈಕಲ್‌ಗಳು ಇನ್ನೂ ಮಾರುಕಟ್ಟೆಗೆ ಬಂದಿಲ್ಲ.

ಎಲೆಕ್ಟ್ರಿಕ್ ಬೈಕ್ ಆಗಿ ಮಾಡಿಫೈಗೊಂಡ ಕೆಟಿಎಂ ಡ್ಯೂಕ್: ಇದರ ಟಾಪ್-ಸ್ಪೀಡ್ ಗಂಟೆಗೆ 140 ಕಿ.ಮೀ

ಈ ನಡುವೆ ಹಲವರು ತಮ್ಮ ಬೈಕ್‌ಗಳನ್ನು ಸ್ವಂತವಾಗಿ ಎಲೆಕ್ರಿಕ್‌ ಬೈಕ್‌ಗಳಂತೆ ಪರಿವರ್ತಿಸುತ್ತಿದ್ದಾರೆ. ಇಲ್ಲಿಯೂ ಕೂಡ ಕೆಟಿಎಂ ಡ್ಯೂಕ್ ಅನ್ನು ಎಲೆಕ್ಟ್ರಿಕ್ ಬೈಕ್ ಆಗಿ ಪರಿವರ್ತಿಸಿ ಹೆಚ್ಚಿನ ಕಾರ್ಯಕ್ಷಮತೆ ನೀಡುವಂತೆ ಚೀನಾ ಮೆಕ್ಯಾನಿಕ್ಸ್‌ ಮಾಡಿಫೈಗೊಳಿಸಿದ್ದಾರೆ. ಈ ಬೈಕ್ ಗರಿಷ್ಠ 140 ಕಿ.ಮೀ/ಗಂ ವೇಗದಲ್ಲಿ ಚಲಿಸುವಂತೆ ಮಾರ್ಪಡಿಸಲಾಗಿದೆ.

ಎಲೆಕ್ಟ್ರಿಕ್ ಬೈಕ್ ಆಗಿ ಮಾಡಿಫೈಗೊಂಡ ಕೆಟಿಎಂ ಡ್ಯೂಕ್: ಇದರ ಟಾಪ್-ಸ್ಪೀಡ್ ಗಂಟೆಗೆ 140 ಕಿ.ಮೀ

ಇದು ಹೈ-ಪರ್ಫಾರ್ಮೆನ್ಸ್ ಮೋಟಾರ್ಸೈಕಲ್ ಆಗಿದ್ದು, ಗಂಟೆಗೆ 140 ಕಿ.ಮೀ ಗರಿಷ್ಠ ವೇಗವನ್ನು ತಲುಪುತ್ತದೆ. ಈ ಮೋಟಾರ್ ಸೈಕಲ್ ಅನ್ನು ಮಾರ್ಪಡಿಸುವ ಸಂಪೂರ್ಣ ಪ್ರಕ್ರಿಯೆಯನ್ನು ಸಾಮಾಜಿಕ ಮಾಧ್ಯಮದಲ್ಲಿ ತಿಳಿಸಲಾಗಿದೆ. ಈ ಪ್ರಕ್ರಿಯೆಯಲ್ಲಿ, ಬೈಕಿನ ಪೆಟ್ರೋಲ್ ಎಂಜಿನ್ ಅನ್ನು ತೆಗೆದುಹಾಕಿ, 4,000 ವ್ಯಾಟ್ ಎಲೆಕ್ಟ್ರಿಕ್ ಮೋಟರ್ ಅನ್ನು ಅಳವಡಿಸಲಾಗಿದೆ.

ಎಲೆಕ್ಟ್ರಿಕ್ ಬೈಕ್ ಆಗಿ ಮಾಡಿಫೈಗೊಂಡ ಕೆಟಿಎಂ ಡ್ಯೂಕ್: ಇದರ ಟಾಪ್-ಸ್ಪೀಡ್ ಗಂಟೆಗೆ 140 ಕಿ.ಮೀ

ಯೂಟ್ಯೂಬ್ ಚಾನೆಲ್ ಹೋಮ್ ಮೇಡ್‌ನಲ್ಲಿ ಪ್ರಕಟವಾದ ಬೈಕಿನ ವೀಡಿಯೊವನ್ನು ನೀವು ನೋಡಬಹುದು. ಎಲೆಕ್ಟ್ರಿಕ್ ಮೋಟಾರ್ ಸಿಸ್ಟಮ್ 3.7-ವೋಲ್ಟ್ ಲಿಥಿಯಂ-ಐಯಾನ್ ಬ್ಯಾಟರಿ ಸೆಟ್‌ನಿಂದ ಚಾಲಿತವಾಗಿದ್ದು, 5000 ಎಂಎಎಚ್ ಸಾಮರ್ಥ್ಯವನ್ನು ಹೊಂದಿದೆ. ಬ್ಯಾಟರಿ ಪ್ಯಾಕೇಜ್ ಅನ್ನು ಬೈಕಿನ ಎಡಭಾಗದಲ್ಲಿ ಒದಗಿಸಲಾಗಿದೆ. ಅದರಂತೆ, ಬೈಕಿನ ಕೆಲವು ಭಾಗಗಳಲ್ಲಿ ವೈರಿಂಗ್ ಕೆಲಸವನ್ನು ಮಾಡಲಾಗಿದೆ.

ಎಲೆಕ್ಟ್ರಿಕ್ ಬೈಕ್ ಆಗಿ ಮಾಡಿಫೈಗೊಂಡ ಕೆಟಿಎಂ ಡ್ಯೂಕ್: ಇದರ ಟಾಪ್-ಸ್ಪೀಡ್ ಗಂಟೆಗೆ 140 ಕಿ.ಮೀ

ಕಸ್ಟಮ್ ಬ್ಯಾಟರಿ ಪ್ಯಾಕ್ ಅನ್ನು ಮಾಡ್ಯೂಲ್‌ನಲ್ಲಿ ಜೋಡಿಸಲಾಗಿದೆ. ಈ ಮೋಟಾರ್‌ಸೈಕಲ್‌ನಲ್ಲಿ ಎಂಜಿನ್ ಬದಲಿಗೆ ಬ್ಯಾಟರಿ ಪ್ಯಾಕ್ ಅನ್ನು ಸ್ಥಾಪಿಸಲಾಗಿದೆ. ಈ ಮಾರ್ಪಾಡಿನ ಸಮಯದಲ್ಲಿ ಮೋಟಾರ್‌ಸೈಕಲ್‌ನಲ್ಲಿ ಸಾಕಷ್ಟು ವಿದ್ಯುತ್ ಸಂಪರ್ಕಗಳನ್ನೂ ಮಾಡಲಾಗಿದೆ. ಇದರ ನಂತರ, ರೈಡರ್‌ ಜಿಪಿಎಸ್ ಅಪ್ಲಿಕೇಶನ್ ಮೂಲಕ ಮೋಟಾರ್‌ಸೈಕಲ್‌ನ ಕಾರ್ಯಕ್ಷಮತೆಯನ್ನು ಪರಿಶೀಲಿಸುತ್ತಿರುವುದು ವಿಡಿಯೋದಲ್ಲಿ ನೋಡಬಹುದು.

ಎಲೆಕ್ಟ್ರಿಕ್ ಬೈಕ್ ಆಗಿ ಮಾಡಿಫೈಗೊಂಡ ಕೆಟಿಎಂ ಡ್ಯೂಕ್: ಇದರ ಟಾಪ್-ಸ್ಪೀಡ್ ಗಂಟೆಗೆ 140 ಕಿ.ಮೀ

ಫೋನ್ ಸ್ಕ್ರೀನ್ ಮೇಲಿನ ರೀಡಿಂಗ್‌ಗಳ ಪ್ರಕಾರ, ಈ ಮೋಟಾರ್ ಸೈಕಲ್ ಗಂಟೆಗೆ 121 ಕಿ.ಮೀ ಗರಿಷ್ಠ ವೇಗವನ್ನು ತಲುಪುತ್ತಿದ್ದು, ಸ್ಪೀಡೋಮೀಟರ್‌ನಲ್ಲಿ, ಈ ಮೋಟಾರ್ ಸೈಕಲ್ ಗಂಟೆಗೆ ಸುಮಾರು 140 ಕಿ.ಮೀ ಗರಿಷ್ಠ ವೇಗವನ್ನು ತಲುಪುತ್ತಿದೆ. ಈ ಮೋಟರ್ ರ್ಸೈಕಲ್‌ಗೆ ವಿವಿಧ ಮೋಡ್‌ಳನ್ನು ಸಹ ನೀಡಲಾಗಿದೆ, ಅವುಗಳನ್ನು ವಿದ್ಯುತ್ ವಿತರಣೆಯನ್ನು ಬದಲಾಯಿಸಲು ಅಳವಡಿಸಲಾಗಿದೆ.

ಎಲೆಕ್ಟ್ರಿಕ್ ಬೈಕ್ ಆಗಿ ಮಾಡಿಫೈಗೊಂಡ ಕೆಟಿಎಂ ಡ್ಯೂಕ್: ಇದರ ಟಾಪ್-ಸ್ಪೀಡ್ ಗಂಟೆಗೆ 140 ಕಿ.ಮೀ

ಕೆಟಿಎಂ ಎಲೆಕ್ಟ್ರಿಕ್ ಬೈಕ್ ಕೂಡ ವಿಭಿನ್ನ ಮೋಡ್‌ಗಳನ್ನು ಹೊಂದಿದೆ. ಪ್ರತಿ ಮೋಡ್‌ನಲ್ಲಿ ಬೈಕ್ ಸ್ವೀಕರಿಸುವ ಚಲನ ಶಕ್ತಿಯು ವಿಭಿನ್ನವಾಗಿರುತ್ತದೆ. ಇಕೋ ಮೋಡ್‌ನಲ್ಲಿ ಬೈಕ್ ಪೂರ್ಣ ಚಾರ್ಜ್‌ನಲ್ಲಿ ಗರಿಷ್ಠ 130 ಕಿ.ಮೀ ದೂರವನ್ನು ಕ್ರಮಿಸಲು ಸಾಧ್ಯವಾಗುತ್ತದೆ. ಇದು ಸ್ಪೋರ್ಟ್ ಮೋಡ್‌ನಲ್ಲಿ ಎಲೆಕ್ಟ್ರಿಕ್ ಮೋಟರ್ ಒದಗಿಸುವ ಶಕ್ತಿಯನ್ನು ಹೆಚ್ಚಿಸುವುದರಿಂದ ಬೈಕ್‌ನ ವ್ಯಾಪ್ತಿಯನ್ನು ಸಹ ಕಡಿಮೆ ಮಾಡುತ್ತದೆ. ಈ ಮೋಡ್‌ನಲ್ಲಿ ಒಮ್ಮೆ ಸಂಪೂರ್ಣವಾಗಿ ಚಾರ್ಜ್ ಮಾಡುವ ಮೂಲಕ 80 ಕಿ.ಮೀ ಪ್ರಯಾಣಿಸಬಹುದು.

ಎಲೆಕ್ಟ್ರಿಕ್ ಬೈಕ್ ಆಗಿ ಮಾಡಿಫೈಗೊಂಡ ಕೆಟಿಎಂ ಡ್ಯೂಕ್: ಇದರ ಟಾಪ್-ಸ್ಪೀಡ್ ಗಂಟೆಗೆ 140 ಕಿ.ಮೀ

ಜನಪ್ರಿಯವಾಗುತ್ತಿವೆ ಇವಿ ಪರಿವರ್ತನೆಯ ಕಿಟ್‌ಗಳು

ವಿವಿಧ ರೀತಿಯ ವಾಹನಗಳ ಇವಿ ಪರಿವರ್ತನಾ ಕಿಟ್‌ಗಳು ಈಗ ಮಾರುಕಟ್ಟೆಯಲ್ಲಿ ಲಭ್ಯವಿದೆ. ವಾಸ್ತವವಾಗಿ, ಭಾರತ ಸರ್ಕಾರವು ನಾಲ್ಕು ಚಕ್ರದ ಹಳೆಯ ವಾಹನಗಳಿಗೆ ಪರಿವರ್ತನಾ ಕಿಟ್‌ಗಳನ್ನು ಅಳವಡಿಕೆಗೆ ಅನುಮೋದಿಸಿದೆ. ಆದರೆ ದ್ವಿಚಕ್ರ ವಾಹನ ಮಾರುಕಟ್ಟೆಗೆ ಇನ್ನೂ ಎಆರ್ಎಐ ಪ್ರಮಾಣೀಕೃತ ಕಿಟ್ ಅನ್ನು ನೀಡಿಲ್ಲ.

ಎಲೆಕ್ಟ್ರಿಕ್ ಬೈಕ್ ಆಗಿ ಮಾಡಿಫೈಗೊಂಡ ಕೆಟಿಎಂ ಡ್ಯೂಕ್: ಇದರ ಟಾಪ್-ಸ್ಪೀಡ್ ಗಂಟೆಗೆ 140 ಕಿ.ಮೀ

ಈ ಹಿಂದೆಯೂ ಸಹ ಅನೇಕ ಇತರ ದೇಶೀಯ ಮಾರ್ಪಾಡುಗಳು ಹೊರಬಂದಿವೆ, ಇದರಲ್ಲಿ ಹೋಂಡಾ ಆಕ್ಟಿವಾದಂತಹ ಜನಪ್ರಿಯ ಸ್ಕೂಟರ್‌ಗಳನ್ನು ಎಲೆಕ್ಟ್ರಿಕ್ ವಾಹನಗಳಾಗಿ ಪರಿವರ್ತಿಸಲಾಗಿದೆ. ಆದರೆ ಅಂತಹ ಪರಿವರ್ತಿತ ವಾಹನಗಳನ್ನು ರಸ್ತೆಗಳಲ್ಲಿ ಓಡಿಸುವುದು ಕಾನೂನುಬದ್ಧವಲ್ಲ ಎಂದು ಹೆಚ್ಚಿನ ಜನರಿಗೆ ತಿಳಿದಿಲ್ಲ.

ಎಲೆಕ್ಟ್ರಿಕ್ ಬೈಕ್ ಆಗಿ ಮಾಡಿಫೈಗೊಂಡ ಕೆಟಿಎಂ ಡ್ಯೂಕ್: ಇದರ ಟಾಪ್-ಸ್ಪೀಡ್ ಗಂಟೆಗೆ 140 ಕಿ.ಮೀ

ಭಾರತದಲ್ಲಿ, ವಾಹನದಲ್ಲಿ ಯಾವುದೇ ರಚನಾತ್ಮಕ ಮತ್ತು ಎಂಜಿನ್ ಬದಲಾವಣೆಗಳನ್ನು ಮಾಡುವುದನ್ನು ಕಾನೂನುಬದ್ಧವಾಗಿ ನಿಷೇಧಿಸಲಾಗಿದೆ. ವಾಹನದಲ್ಲಿ ಅಂತಹ ಮಾರ್ಪಾಡು ಕಂಡುಬಂದರೆ, ಪೊಲೀಸರು ಅದನ್ನು ವಶಪಡಿಸಿಕೊಳ್ಳಬಹುದು. ಅನುಮೋದಿತ ಇವಿ ಪರಿವರ್ತನಾ ಕಿಟ್ ಅನ್ನು ಪೆಟ್ರೋಲ್ / ಡೀಸೆಲ್ ಎಂಜಿನ್‌ಗಳನ್ನು ಬದಲಾಯಿಸಲು ಬಳಸಬಹುದು.

ಎಲೆಕ್ಟ್ರಿಕ್ ಬೈಕ್ ಆಗಿ ಮಾಡಿಫೈಗೊಂಡ ಕೆಟಿಎಂ ಡ್ಯೂಕ್: ಇದರ ಟಾಪ್-ಸ್ಪೀಡ್ ಗಂಟೆಗೆ 140 ಕಿ.ಮೀ

ಆದರೆ ವಾಸ್ತವವಾಗಿ, ಅಂತಹ ಕಸ್ಟಮ್ಸ್ ಬದಲಾವಣೆಗಳು ಭಾರತದಲ್ಲಿ ಕಾನೂನುಬಾಹಿರವಾಗಿವೆ. ಅಂತಹ ವಾಹನಗಳು ರಸ್ತೆಯಲ್ಲಿ ಚಲಿಸಲು ಅನುಮತಿಸಲಾಗುವುದಿಲ್ಲ. ಅನಧಿಕೃತ ಕಸ್ಟಮ್ಸ್ ಸಂಸ್ಥೆಗಳು ವಾಹನದ ಬಣ್ಣವನ್ನು ಬದಲಾಯಿಸುವುದನ್ನು ಹೊರತುಪಡಿಸಿ ಬೈಕ್ ನಲ್ಲಿ ಯಾವುದೇ ಬದಲಾವಣೆ ಮಾಡಲು ಕಾನೂನುಬದ್ಧವಾಗಿ ಅನುಮತಿಸುವುದಿಲ್ಲ. ಏಕೆಂದರೆ ನಮ್ಮ ಆಯ್ಕೆಗೆ ಅನುಗುಣವಾಗಿ ನಾವು ಬದಲಾಯಿಸುವ ವಾಹನಗಳು ಅನಿರೀಕ್ಷಿತ ಅಪಘಾತಗಳಿಗೆ ಕಾರಣವಾಗುವ ಸಾಧ್ಯತೆ ಹೆಚ್ಚು. ಹಾಗಾಗಿ ಪೊಲೀಸರು ಮಾಡಿಫೈ ಎಲೆಕ್ಟ್ರಿಕ್ ಬೈಕುಗಳನ್ನು ರಸ್ತೆಯಲ್ಲಿ ನೋಡಿದರೆ, ಅವುಗಳನ್ನು ವಶಪಡಿಸಿಕೊಳ್ಳುವ ಸಾಧ್ಯತೆಯಿದೆ.

ಎಲೆಕ್ಟ್ರಿಕ್ ಬೈಕ್ ಆಗಿ ಮಾಡಿಫೈಗೊಂಡ ಕೆಟಿಎಂ ಡ್ಯೂಕ್: ಇದರ ಟಾಪ್-ಸ್ಪೀಡ್ ಗಂಟೆಗೆ 140 ಕಿ.ಮೀ

ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳ ಬೆಲೆಗಳು ಭಾರತೀಯ ಮಾರುಕಟ್ಟೆಯಲ್ಲಿ ಸಾಮಾನ್ಯ ಇಂಧನ ಎಂಜಿನ್ ದ್ವಿಚಕ್ರ ವಾಹನಗಳಿಗಿಂತ ಸ್ವಲ್ಪ ಹೆಚ್ಚಾಗಿದೆ. ಹೆಚ್ಚಿನ ಕಾರ್ಯಕ್ಷಮತೆಯ ಬ್ಯಾಟರಿಗಳು ಮತ್ತು ಎಲೆಕ್ಟ್ರಿಕ್ ಮೋಟರ್‌ಗಳನ್ನು ಅಳವಡಿಸಿದರೆ ದ್ವಿಚಕ್ರ ವಾಹನಗಳ ಬೆಲೆಗಳು ಮತ್ತಷ್ಟು ಹೆಚ್ಚಾಗುತ್ತವೆ. ಭಾರತದಲ್ಲಿ ಬಿಡುಗಡೆ ಮಾಡಲು ಕೆಲವು ದಕ್ಷ ಮೋಟಾರ್ ಸೈಕಲ್‌ಗಳು ಸಾಲಾಗಿ ನಿಂತಿವೆ. ಆದರೆ ಅವು ಮಾರಾಟಕ್ಕೆ ಹೋಗಲು ಇನ್ನೂ ಹಲವಾರು ತಿಂಗಳುಗಳು ಬೇಕಾಗಬಹುದು.

Most Read Articles

Kannada
English summary
Ktm duke motorcycle converted in to electric bike with conversion kit details
Story first published: Wednesday, March 23, 2022, 12:25 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X