ಭಾರತದ ಮಾರುಕಟ್ಟೆಯಲ್ಲಿ ಅಗ್ಗದ ಬೆಲೆಗೆ ದೂರೆಯುವ ಎಲೆಕ್ಟ್ರಿಕ್ ಸ್ಕೂಟರ್‌ಗಳಿವು!

ದೇಶೀಯ ಆಟೋಮೊಬೈಲ್ ಮಾರುಕಟ್ಟೆಯಲ್ಲಿ ಸದ್ಯ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳ ಪಾರುಪತ್ಯ ಶುರುವಾಗುತ್ತಿದೆ. ಪ್ರತಿದಿನ ಒಂದಿಲ್ಲೊಂದು ಹೊಸ ವಾಹನಗಳು ಬಿಡುಗಡೆಯಾಗುತ್ತಿರುತ್ತವೆ. ಎಷ್ಟೇ ನವೀನ ವೈಶಿಷ್ಯಗಳೊಂದಿಗೆ ವಾಹನಗಳು ಬಂದರೂ ಕಡಿಮೆ ಬೆಲೆಗೆ ಸಿಗುವ ದೊರೆಯುವ ವಾಹನಗಳನ್ನು ಖರೀದಿಸಲು ಗ್ರಾಹಕರು ಇಷ್ಟಪಡುತ್ತಾರೆ. ಜೊತೆಗೆ ಅಂತಹವುಗಳಿಗೆ ಹುಡುಕಾಟ ನಡೆಸುತ್ತಾರೆ.

ಇಲ್ಲಿ 45,000 ರೂ.ನಿಂದ 65,000 ರೂ. (ಎಕ್ಸ್ ಶೋ ರೂಂ, ದೆಹಲಿ) ನಡುವೆ ಲಭ್ಯವಿರುವ ಐದು ಎಲೆಕ್ಟ್ರಿಕ್ ಸ್ಕೂಟರ್‌ಗಳ ಬಗ್ಗೆ ತಿಳಿಸಿಕೊಡುವ ಪ್ರಯತ್ನವನ್ನು ಮಾಡಿದ್ದೇವೆ. ಇವುಗಳಲ್ಲಿ ಅವನ್ ಇ ಸ್ಕೂಟ್, ಬೌನ್ಸ್ ಇನ್ಫಿನಿಟಿ ಇ1, ಹೀರೋ ಎಲೆಕ್ಟ್ರಿಕ್ ಫ್ಲ್ಯಾಶ್, ಅವನ್ ಟ್ರೆಂಡ್ ಇ ಮತ್ತು EeVe Ahava ಸೇರಿವೆ. ಈ ಎಲೆಕ್ಟ್ರಿಕ್ ಸ್ಕೂಟರ್‌ಗಳ ಬೆಲೆಗಳು 65,000 ರೂ.ಕ್ಕಿಂತ ಕಡಿಮೆ ಇರುವುದು ಗಮನಾರ್ಹವಾಗಿದ್ದು, ಗ್ರಾಹಕರನ್ನು ತನ್ನತ್ತ ಆಕರ್ಷಿಸುತ್ತಿವೆ.

Avon E ಸ್ಕೂಟರ್:
ಖರೀದಿದಾರರಿಗೆ ಕೈಗೆಟಕುವ ಬೆಲೆಯಲ್ಲಿ ಲಭ್ಯವಿರುವ ಐದು ಎಲೆಕ್ಟ್ರಿಕ್ ಸ್ಕೂಟರ್‌ಗಳಲ್ಲಿ Avon E ಸ್ಕೂಟರ್ ಸಹ ಒಂದಾಗಿದೆ. ಈ ಎಲೆಕ್ಟ್ರಿಕ್ ಸ್ಕೂಟರ್ ಬೆಲೆ 45,000 ರೂ. (ಎಕ್ಸ್ ಶೋ ರೂಂ, ದೆಹಲಿ) ಇದೆ. ಈ ಸ್ಕೂಟರ್ 215 ವ್ಯಾಟ್ BLDC ಮೋಟಾರ್ ಹೊಂದಿದ್ದು, ಒಂದು ಬಾರಿ ಸಂಪೂರ್ಣ ಚಾರ್ಜ್ ಮಾಡಿದರೆ 65 ಕಿ.ಮೀ.ವರೆಗೆ ಮೈಲೇಜ್ ನೀಡಲಿದೆ. ಅಲ್ಲದೆ, ಇದರ ಗರಿಷ್ಠ ವೇಗ ಗಂಟೆಗೆ 25 ಕಿ.ಮೀ ಇದ್ದು, ಬ್ಯಾಟರಿ ಚಾರ್ಜ್ ಮಾಡಲು 6 ರಿಂದ 8 ಗಂಟೆ ಬೇಕಾಗುತ್ತದೆ.

ಬೌನ್ಸ್ ಇನ್ಫಿನಿಟಿ E1:
ಭಾರತೀಯ ಮಾರುಕಟ್ಟೆಯಲ್ಲಿ ಅತ್ಯಂತ ಜನಪ್ರಿಯ ಎಲೆಕ್ಟ್ರಿಕ್ ಸ್ಕೂಟರ್‌ಗಳಲ್ಲಿ ಬೌನ್ಸ್ ಇನ್ಫಿನಿಟಿ E1 ಪ್ರಮುಖವಾಗಿದೆ. ಈ ಎಲೆಕ್ಟ್ರಿಕ್ ಸ್ಕೂಟರ್ ಬೆಲೆ 45,099 ರೂ. ಇದ್ದು, ಈ ಸ್ಕೂಟರ್ ಒಟ್ಟು 5 ಬಣ್ಣ ಆಯ್ಕೆಗಳಲ್ಲಿ ಗ್ರಾಹಕರಿಗೆ ಖರೀದಿಗೆ ಲಭ್ಯವಿದ್ದು, ಅವುಗಳೆಂದರೆ ಸ್ಪೋರ್ಟಿ ರೆಡ್, ಪರ್ಲ್ ವೈಟ್, ಸ್ಪಾರ್ಕಲ್ ಬ್ಲ್ಯಾಕ್, ಕಾಮೆಟ್ ಗ್ರೇ ಮತ್ತು ಡೆಸರ್ಟ್ ಸಿಲ್ವರ್. ಇವೆಲ್ಲವು ಆಕರ್ಷಕವಾಗಿದ್ದು. ಬಹುತೇಕ ಮಂದಿ ಇಷ್ಟಪಡುತ್ತಾರೆ.

ಕಂಪನಿಯು ಈ ಸ್ಕೂಟರ್‌ ತಯಾರಿಕೆಯಲ್ಲಿ 48V IP67 ಪ್ರಮಾಣೀಕೃತ ವಾಟರ್ ಪ್ರೂಫ್ ಲಿಥಿಯಂ ಐಯಾನ್ ಬ್ಯಾಟರಿ ಪ್ಯಾಕ್ ಅನ್ನು ಬಳಸಿದೆ. ಈ ಸ್ಕೂಟರ್‌ನಲ್ಲಿರುವ ಬ್ಯಾಟರಿಯು ಸಂಪೂರ್ಣವಾಗಿ ಚಾರ್ಜ್ ಆಗಲು 4 ರಿಂದ 5 ಗಂಟೆ ಬೇಕು (0% ರಿಂದ 100%). ಇದನ್ನು ಸಂಪೂರ್ಣ ಚಾರ್ಜ್‌ ಮಾಡಿದರೆ ಸುಮಾರು 85 ಕಿಮೀ ಮೈಲೇಜ್ ನೀಡುತ್ತದೆ. ಇದಲ್ಲದೆ, ಈ ಹೊಸ ಎಲೆಕ್ಟ್ರಿಕ್ ಸ್ಕೂಟರ್‌ನ ಗರಿಷ್ಠ ವೇಗ ಗಂಟೆಗೆ 65 ಕಿ.ಮೀ ಇದೆ.

ಹೀರೋ ಎಲೆಕ್ಟ್ರಿಕ್ ಫ್ಲ್ಯಾಶ್:
ದೇಶೀಯ ಮಾರುಕಟ್ಟೆಯಲ್ಲಿ ಲಭ್ಯವಿರುವ ಪ್ರಮುಖ ಎಲೆಕ್ಟ್ರಿಕ್ ಸ್ಕೂಟರ್ ಪಟ್ಟಿಯಲ್ಲಿ ಹೀರೋ ಎಲೆಕ್ಟ್ರಿಕ್‌ನ ಫ್ಲ್ಯಾಶ್ ಸ್ಥಾನ ಪಡೆದಿದೆ. ಈ ಎಲೆಕ್ಟ್ರಿಕ್ ಸ್ಕೂಟರ್ ಬೆಲೆ 46,640 ರೂ. (ಎಕ್ಸ್ ಶೋ ರೂಂ) ಇದೆ. ಈ ಸ್ಕೂಟರ್ ನೋಡಲು ತುಂಬಾ ಸಿಂಪಲ್ ಆಗಿ ಇದೆ. ಆದರೆ, ಉತ್ತಮ ವಿನ್ಯಾಸದ ಜೊತೆಗೆ ಆಧುನಿಕ ವೈಶಿಷ್ಟ್ಯಗಳನ್ನು ಹೊಂದಿದೆ. ಇದನ್ನು ಒಂದು ಬಾರಿ ಫುಲ್ ಚಾರ್ಜ್ ಮಾಡಿದರೆ ಗರಿಷ್ಠ 85 ಕಿಮೀ ಮೈಲೇಜ್ ನೀಡುತ್ತದೆ. ಅಲ್ಲದೆ, ಈ ಸ್ಕೂಟರ್‌ನ ಗರಿಷ್ಠ ವೇಗ ಗಂಟೆಗೆ 25 ಕಿ.ಮೀ ಇದೆ.

ಈವೆ ಅಹವಾ
ಗ್ರಾಹಕರಿಗೆ 65,000 ರೂ. ಒಳಗೆ ಖರೀದಿಗೆ ದೊರೆಯುವ ಎಲೆಕ್ಟ್ರಿಕ್ ಸ್ಕೂಟರ್‌ಗಳಲ್ಲಿ ಈವೆ ಅಹವಾ ಸಹ ಪ್ರಮುಖವಾಗಿದೆ. ಇದರ ಬೆಲೆ 62,499 ರೂ. (ಎಕ್ಸ್ ಶೋ ರೂಂ) ಇದೆ. ಇದು ಕೇವಲ ಒಂದು ರೂಪಾಂತರದಲ್ಲಿ ಮಾತ್ರ ಖರೀದಿಸಲು ಲಭ್ಯವಿದೆ. ಈ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಒಂದು ಬಾರಿ ಚಾರ್ಜ್‌ ಮಾಡಿದರೆ 60 ಕಿ.ಮೀ - 70 ಕಿ.ಮೀ ತನಕ ಮೈಲೇಜ್ ಅನ್ನು ನೀಡುತ್ತದೆ. ಈ ಎಲೆಕ್ಟ್ರಿಕ್ ಸ್ಕೂಟರ್‌ನ ಚಾರ್ಜ್ ಮಾಡಲು 6-7 ಗಂಟೆಗಳು ಬೇಕಾಗಿದ್ದು, ಇದು ಅನೇಕ ಇತ್ತೀಚಿನ ವೈಶಿಷ್ಟ್ಯಗಳನ್ನು ಹೊಂದಿದೆ.

ಅವನ್ ಟ್ರೆಂಡ್ ಇ:
ಭಾರತದ ಮಾರುಕಟ್ಟೆಯಲ್ಲಿ ಅತ್ಯಂತ ಕೈಗೆಟುಕುವ ಬೆಲೆಯಲ್ಲಿ ದೊರೆಯುವ ಪ್ರಮುಖ ಎಲೆಕ್ಟ್ರಿಕ್ ಸ್ಕೂಟರ್‌ಗಳಲ್ಲಿ ಅವನ್ ಟ್ರೆಂಡ್ ಇ ಸಹ ಒಂದಾಗಿದೆ. ಇದರ ಬೆಲೆ 56,900 ರೂ. (ಎಕ್ಸ್ ಶೋ ರೂಂ) ಇದೆ. ಈ ಸ್ಕೂಟರ್‌ ಸಿಂಗಲ್ ಮತ್ತು ಡಬಲ್ ಬ್ಯಾಟರಿ ಪ್ಯಾಕ್ ಆಯ್ಕೆಗಳೊಂದಿಗೆ ಖರೀದಿಗೆ ಲಭ್ಯವಿದ್ದು, ಬ್ಯಾಟರಿ ಫುಲ್ ಚಾರ್ಜ್ ಮಾಡಿದರೆ 60 ಕಿಮೀ ವರೆಗೆ ಮೈಲೇಜ್ ನೀಡುತ್ತದೆ. ಡಬಲ್ ಬ್ಯಾಟರಿ ಆಯ್ಕೆಯು 110 ಕಿಮೀ ವರೆಗೆ ಮೈಲೇಜ್ ಅನ್ನು ಒದಗಿಸುತ್ತದೆ. ಈ ಎರಡು ರೂಪಾಂತರಗಳ ಗರಿಷ್ಠ ವೇಗ ಗಂಟೆಗೆ 45 ಕಿ.ಮೀ ಇದೆ.

Most Read Articles

Kannada
English summary
The cheapest electric scooters in the indian market
Story first published: Monday, December 5, 2022, 16:50 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X