Auto Expo 2023: 'ಅಲ್ಟ್ರಾವೈಲೆಟ್ F99' ರೇಸಿಂಗ್ ಬೈಕ್ ಪ್ರದರ್ಶನ - ಎಂತಹ ಕಾರ್ಯಕ್ಷಮತೆ..!

ಬೆಂಗಳೂರು ಮೂಲದ ಜನಪ್ರಿಯ ಇವಿ ಸ್ಟಾರ್ಟಪ್ ಕಂಪನಿ 'ಅಲ್ಟ್ರಾವೈಲೆಟ್' ಈಗಾಗಲೇ ತನ್ನ ಎಲೆಕ್ಟ್ರಿಕ್ ಸ್ಪೋರ್ಟ್ಸ್ ಬೈಕ್ 'ಎಫ್77' ಅನ್ನು ಬಿಡುಗಡೆ ಮಾಡಿರುವುದು ಎಲ್ಲರಿಗೂ ತಿಳಿದಿದೆ. ಇದೀಗ ಮತ್ತೊಂದು ಹೊಸ ಎಲೆಕ್ಟ್ರಿಕ್ ಬೈಕ್ ಅನ್ನು ಆಟೋ ಎಕ್ಸ್‌ಪೋದಲ್ಲಿ ಪ್ರದರ್ಶಿಸಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ನೀಡಲಾಗಿದೆ.

ಆಟೋ ಎಕ್ಸ್‌ಪೋದಲ್ಲಿ ಅನಾವರಣಗೊಂಡಿರುವ ಈ ಎಲೆಕ್ಟ್ರಿಕ್ ಬೈಕ್ ಅನ್ನು 'ಎಫ್99 ಫ್ಯಾಕ್ಟರಿ ರೇಸಿಂಗ್ ಪ್ಲಾಟ್‌ಫಾರ್ಮ್' ಎಂಬ ಹೆಸರಿನಿಂದ ಕರೆಯಲಾಗಿದೆ. ಈ ಅತ್ಯಾಧುನಿಕ ಎಲೆಕ್ಟ್ರಿಕ್ ಬೈಕ್ ಗಂಟೆಗೆ 200 ಕಿ.ಮೀ ಟಾಪ್ ಸ್ವೀಡ್ ಹೊಂದಿರಲಿದೆ. ಹಾಗಾಗಿ, ಈ ಎಲೆಕ್ಟ್ರಿಕ್ ಬೈಕ್, ಅಲ್ಟ್ರಾವೈಲೆಟ್ ಎಫ್77 ಬೈಕ್ ಗಿಂತ ಭಿನ್ನವಾಗಿ ರೇಸ್ ಟ್ರ್ಯಾಕ್ ಗೆ ಸೀಮಿತವಾಗಿದೆ ಎಂದು ಹೇಳಬಹುದು. ಟ್ರ್ಯಾಕ್‌ನಲ್ಲಿ ಅತ್ಯುತ್ತಮ ಕಾರ್ಯಕ್ಷಮತೆಯನ್ನು ನೀಡುವಂತೆ ಈ ಬೈಕ್ ಅನ್ನು ವಿನ್ಯಾಸ ಮಾಡಲಾಗಿದ್ದು, ರೇಸಿಂಗ್ ಪ್ರಿಯರಿಗೆ ಖಂಡಿತ ಇಷ್ಟವಾಗಲಿದೆ.

F77ನಂತೆಯೇ ಅಲ್ಟ್ರಾವೈಲೆಟ್ F99, 120 ವೋಲ್ಟ್ ಆರ್ಕಿಟೆಕ್ಚರ್ ಅನ್ನು ಹೊಂದಿದೆ. ಸುರಕ್ಷತಾ ದೃಷ್ಟಿಯಿಂದ ಎಲ್ಲೂ ರಾಜಿಯಾಗದಂತೆ ಇದರ ಎಲೆಕ್ಟ್ರಿಕ್ ಮೋಟರ್ ಅನ್ನು ಮರುನಿರ್ಮಾಣ ಮಾಡಲಾಗಿದೆ. ಇದು 50 kW ಅಥವಾ 68 hp ಪವರ್ ಉತ್ಪಾದಿಸುವ ಮೋಟಾರ್ ಹೊಂದಿದ್ದು, 200kph ಟಾಪ್ ಸ್ವೀಡ್ ಪಡೆಯಲಿದೆ ಎಂದು ಕಂಪನಿ ಹೇಳಿಕೊಂಡಿದೆ. ಇದು 0-60kph ಅಥವಾ 0-100kph ವೇಗವನ್ನು ಹೊಂದಿದೆ ಎಂಬುದರ ಬಗ್ಗೆ ಮಾಹಿತಿಯನ್ನು ಬಹಿರಂಗಪಡಿಸಿಲ್ಲ.

ಇದು ಅಲ್ಟ್ರಾವೈಲೆಟ್ F77 ರೆಕಾನ್ ಗಿಂತ ಹೆಚ್ಚು (3.1 ಸೆಕೆಂಡುಗಳಲ್ಲಿ 0-60kph ಮತ್ತು 8 ಸೆಕೆಂಡುಗಳಲ್ಲಿ 0-100kph) ವೇಗವಾಗಿರಲಿದೆ. ಅಲ್ಟ್ರಾವೈಲೆಟ್ F99 ಹೆಚ್ಚಿನ ದಕ್ಷತೆ ಹೊಂದಿರುವ ಎಲೆಕ್ಟ್ರಿಕ್ ಮೋಟಾರ್ ಪಡೆಯುವ ಮೂಲಕ ಎಲ್ಲರನ್ನು ಬೆರಗುಗೊಳಿಸುತ್ತದೆ ಎಂದು ಹೇಳಬಹುದು. ಇದಲ್ಲದೆ ಈ ಬೈಕ್ ಸ್ವಲ್ಪ ತೆಳುವಾದ ಮತ್ತು ಗಟ್ಟಿಯಾದ ಸೀಟನ್ನು ಹೊಂದಿದ್ದು, ವಾಹನ ಸವಾರರಿಗೆ ಖಂಡಿತ ಇಷ್ಟವಾಗುತ್ತದೆ. ಈ ಬೈಕ್‌ನ ಬಾಡಿ ಪ್ಯಾನೆಲ್‌ಗಳನ್ನು ಕಾರ್ಬನ್ ಫೈಬರ್‌ನಿಂದ ಮಾಡಲಾಗಿದ್ದು ಇದು ತೂಕವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಅಲ್ಟ್ರಾವೈಲೆಟ್ F99 ಬೈಕ್ ಬ್ರೆಂಬೊ ಮಾಸ್ಟರ್ ಸಿಲಿಂಡರ್ ಮತ್ತು ಪಿರೆಲ್ಲಿ ಸೂಪರ್‌ಕೋರ್ಸಾ ಟೈರ್‌ಗಳೊಂದಿಗೆ ಟ್ವೀಕ್ ಮಾಡಲಾದ ಬ್ರೇಕಿಂಗ್ ಸಿಸ್ಟಮ್ ಅನ್ನು ಹೊಂದಿದ್ದು, ಇದನ್ನು ರೇಸ್ ಟ್ರ್ಯಾಕ್‌ನಲ್ಲಿ ಉತ್ತಮ ಹಿಡಿತವನ್ನು ಸಾಧಿಸಲು ವಿನ್ಯಾಸಗೊಳಿಸಲಾಗಿದೆ ಎಂದು ಹೇಳಬಹುದು. ಈ ರೇಸ್ ಟ್ರ್ಯಾಕ್ ಬೈಕ್ ಆಗಿರುವ ಅಲ್ಟ್ರಾವೈಲೆಟ್ F99, ಮೆಟಿಯರ್ ಗ್ರೇ ಮತ್ತು ಪ್ಲಾಸ್ಮಾ ರೆಡ್ ನ ಡ್ಯುಯಲ್ ಟೋನ್ ಬಣ್ಣದ ಆಯ್ಕೆಯನ್ನು ಹೊಂದಿದ್ದು, ಆದ್ದರಿಂದ ವೀಕ್ಷಿಸಲು ತುಂಬಾ ಆಕರ್ಷಕವಾಗಿದೆ ಎಂದು ಹೇಳಬಹುದು.

ಸದ್ಯ ಕಂಪನಿಯು ಈ ಎಫ್99 ಬೈಕ್ ಬಗ್ಗೆ ಹೆಚ್ಚಿನ ಮಾಹಿತಿ ನೀಡಿಲ್ಲ. ಆದರೆ, ಈ ವರ್ಷ ಒನ್ ಮೇಕ್ ರೇಸಿಂಗ್ ಸಿರೀಸ್ ನಡೆಸಲು ಯೋಜಿಸಿದ್ದು, ಬಹುಶಃ ಈ ಬೈಕ್ ಬಗ್ಗೆ ಹೆಚ್ಚಿನ ವಿವರಗಳು ಆ ವೇಳೆ ಲಭ್ಯವಾಗಲಿದೆ ಎಂದು ವರದಿಯಾಗಿದೆ. ಕಂಪನಿಯು ಈಗಾಗಲೇ ಅಲ್ಟ್ರಾವೈಲೆಟ್ F77, F77 ರೆಕಾನ್ ಮತ್ತು F77 ಲಿಮಿಟೆಡ್ ಆವೃತ್ತಿಯನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದೆ. ಅವುಗಳ ಬೆಲೆ ಕ್ರಮವಾಗಿ ರೂ.3.80 ಲಕ್ಷ, ರೂ. 4.55 ಲಕ್ಷ, ರೂ. 5.50 ಲಕ್ಷ (ಎಕ್ಸ್ ಶೋ ರೂಂ) ಇದೆ.

ಅಲ್ಟ್ರಾವೈಲೆಟ್ F77 ವೈಶಿಷ್ಟ್ಯಗಳ ಬಗ್ಗೆ ಹೇಳುವುದಾದರೆ, ಬ್ಲೂಟೂತ್ ಮತ್ತು ಸ್ಮಾರ್ಟ್‌ಫೋನ್ ಸಂಪರ್ಕದೊಂದಿಗೆ 5-ಇಂಚಿನ TFT ಇನ್ಸ್ರುಮೆಂಟಲ್ ಕನ್ಸೋಲ್‌ ಅನ್ನು ಹೊಂದಿದ್ದು, LED ಲೈಟಿಂಗ್, ರೈಡ್ ಅನಾಲಿಟಿಕ್ಸ್, ನ್ಯಾವಿಗೇಷನ್, ಜಿಯೋಫೆನ್ಸಿಂಗ್, ಕ್ರ್ಯಾಶ್ ಡಿಟೆಕ್ಷನ್, 9-ಆಕ್ಸಿಸ್ IMU ಸೇರಿದಂತೆ ಹತ್ತು ಹಲವು ವೈಶಿಷ್ಟ್ಯಗಳನ್ನು ಹೊಂದಿದೆ. ಜೊತೆಗೆ ಮೂರು ರೈಡ್ ಮೋಡ್‌ಗಳನ್ನು ಪಡೆದುಕೊಂಡಿದೆ. ಅವುಗಳೆಂದರೇ, ಗ್ಲೈಡ್, ಕಾಂಬ್ಯಾಟ್ ಮತ್ತು ಬ್ಯಾಲಿಸ್ಟಿಕ್. ಇವು ಬೈಕ್ ಪ್ರಿಯರಿಗೆ ಇಷ್ಟವಾಗುತ್ತದೆ ಎಂದು ಹೇಳಬಹುದು.

ಅಲ್ಟ್ರಾವೈಲೆಟ್ F77 ಕಾರ್ಯಕ್ಷಮತೆಯ ವಿಷಯದಲ್ಲಿ ಯಾವುದೇ ರಾಜಿ ಇಲ್ಲ. ಅದೇರೀತಿ ಬೆಲೆಯನ್ನು ಹೊಂದಿದೆ. ಆದಾಗ್ಯೂ, ಖರೀದಿದಾರರು, ಟಾರ್ಕ್ Kratos, Oben Rorr, Revolt RV400 ಮತ್ತು ಮ್ಯಾಟರ್ ಮೋಟಾರ್‌ಬೈಕ್ ಸೇರಿದಂತೆ ಹೆಚ್ಚು ಕೈಗೆಟುಕುವ ಎಲೆಕ್ಟ್ರಿಕ್ ಬೈಕುಗಳು ಪರ್ಯಾಯ ಆಯ್ಕೆಗಳಾಗಿವೆ. ಅಲ್ಟ್ರಾವೈಲೆಟ್ F77 ಕಾರ್ಯಕ್ಷಮತೆ ವಿಷಯದಲ್ಲಿ, ಬಿಎಂಡಬ್ಲ್ಯೂ G 310 RR ಮತ್ತು ಟಿವಿಎಸ್ Apache RR 310ನಂತಹ ಪೆಟ್ರೋಲ್-ಚಾಲಿತ ಸೂಪರ್‌ಸ್ಪೋರ್ಟ್‌ಗಳಿಗೆ F77 ಪ್ರತಿಸ್ಪರ್ಧಿಯಾಗಿದೆ. ಆದರೆ, ಬೆಲೆಯ ವಿಷಯದಲ್ಲಿ ಕವಾಸಕಿ ನಿಂಜಾ 400ಗೆ ಪೈಪೋಟಿ ನೀಡಲಿದೆ.

Most Read Articles

Kannada
English summary
Auto expo 2023 ultraviolet f99 racing bike showcased details kannada
Story first published: Friday, January 13, 2023, 17:14 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X