ಪ್ಯೂಜೊ ಟ್ವೀಟ್ ಇವೊ ಸ್ಕೂಟರ್ ಬಿಡುಗಡೆ

Written By:

ಫ್ರಾನ್ಸ್‌ನ ಪ್ರಖ್ಯಾತ ವಾಹನ ತಯಾರಕ ಸಂಸ್ಥೆಯಾಗಿರುವ ಪ್ಯೂಜೊ ನಾಲ್ಕು ಚಕ್ರಗಳ ವಾಹನಗಳನ್ನು ತಯಾರಿಸುವದರಲ್ಲಿ ಹೆಸರುವಾಸಿಯಾಗಿದೆ. ಆದರೆ ನಾವೀಗ ಪ್ಯೂಜೊ ದ್ವಿಚಕ್ರ ವಾಹನಗಳನ್ನು ಸಹ ಒದಗಿಸುತ್ತದೆ ಅಂದರೆ ಅಚ್ಚರಿಗೊಳ್ಳಬೇಡಿ.

1810ನೇ ಇಸವಿಯಲ್ಲಿ ಸ್ಥಾಪನೆಯಾಗಿದ್ದ ಪ್ಯೂಜೊ, ಆರಂಭದಲ್ಲಿ ಸೈಕಲ್ ಹಾಗೂ ಕಾಫಿ ಗಿರಣಿ ಉತ್ಪಾದಿಸಿತ್ತು. ಬಳಿಕ 1882ರಲ್ಲಿ ಅರ್ಮಾಂಡ್ ಪ್ಯೂಜೊ ನೇತೃತ್ವದಲ್ಲಿ ವಾಹನೋದ್ಯಮಕ್ಕೆ ಕಾಲಿರಿಸಿತ್ತು. ಪ್ರಸ್ತುತ ಪ್ಯೂಜೊದ ದ್ವಿಚಕ್ರ ವಿಭಾಗವು ಅತ್ಯಾಕರ್ಷಕ ಟ್ವೀಟ್ ಇವೊ ಸ್ಕೂಟರನ್ನು ಬಿಡುಗಡೆಗೊಳಿಸಿದೆ. ಆಧುನಿಕ ವಿನ್ಯಾಸ ಹೊಂದಿರುವ ಈ ಸ್ಕೂಟರ್ ಎಲ್ಲ ವಿಭಾಗದ ಖರೀದಿಗಾರರನ್ನು ಆಕರ್ಷಿಸುವ ನಿರೀಕ್ಷೆಯಲ್ಲಿದೆ.

ಪ್ಯೂಜೊ ಟ್ವೀಟ್ ಇವೊ ಸ್ಕೂಟರ್ ಬಿಡುಗಡೆ

2014 ಟ್ವೀಟ್ ಇವೊ ಒಟ್ಟು ಮೂರು ಬಣ್ಣಗಳಲ್ಲಿ ಲಭ್ಯವಾಗಲಿದೆ. ಅವುಗಳಲ್ಲಿ ಅಂಟಾರ್ಟಿಕ್ ವೈಟ್, ಒನಿಕ್ಸ್ ಗ್ರೇ ಮತ್ತು ಬ್ಲೂಬೆರ್ರಿ ಪ್ರಮುಖವಾಗಿದೆ. ಹಾಗೆಯೇ ಕಪ್ಪು ಮರೂನ್ ಹಾಗೂ ಲೈಟ್ ಬ್ರೌನ್ ಬಣ್ಣಗಳ ಸೀಟು ಕೂಡಾ ಒದಗಿಸಲಾಗುತ್ತಿದೆ.

ಪ್ಯೂಜೊ ಟ್ವೀಟ್ ಇವೊ ಸ್ಕೂಟರ್ ಬಿಡುಗಡೆ

ಅಂಟಾರ್ಟಿಕ್ ವೈಟ್ ಟ್ವೀಟ್ ಇವೊ ಸ್ಕೂಟರನ್ನು ಕಪ್ಪು ಅಲಾಯ್ ವೀಲ್‌ಗಳಲ್ಲಿ ಒದಗಿಸಲಾಗುತ್ತಿದೆ. ಉಳಿದೆರಡು ಮಾದರಿಗಳು ಸಾಮಾನ್ಯ 16 ಇಂಚು ಅಲಾಯ್ ವೀಲ್ ಪಡೆದುಕೊಳ್ಳಲಿದೆ.

ಪ್ಯೂಜೊ ಟ್ವೀಟ್ ಇವೊ ಸ್ಕೂಟರ್ ಬಿಡುಗಡೆ

ಅಂದ ಹಾಗೆ ಟ್ವೀಟ್ ಇವೊ ಎರಡು ಎಂಜಿನ್ ಆಯ್ಕೆಗಳಿಂದ ನಿಯಂತ್ರಿಸಲ್ಪಡಲಿದೆ. ಗ್ರಾಹಕರು ತಮ್ಮ ಬಯಕೆಯ ಅನುಸಾರವಾಗಿ 50 ಸಿಸಿ ಫೋರ್ ಸ್ಟ್ರೋಕ್ ಅಥವಾ 125 ಸಿಸಿ ಫೋರ್ ಸ್ಟ್ರೋಕ್ ಎಂಜಿನ್ ಆಯ್ಕೆ ಮಾಡಬಹುದಾಗಿದೆ.

ಪ್ಯೂಜೊ ಟ್ವೀಟ್ ಇವೊ ಸ್ಕೂಟರ್ ಬಿಡುಗಡೆ

ಇನ್ನು ಬೆಲೆ ಬಗ್ಗೆ ಮಾತನಾಡುವುದಾದ್ದಲ್ಲಿ 50 ಸಿಸಿ ಟ್ವೀಟ್ ಇವೊ 1.81 ಲಕ್ಷ ರು.ಗಳಷ್ಟು ದುಬಾರಿಯಾದರೆ 125 ಸಿಸಿ ಸ್ಕೂಟರ್ 2.11 ಲಕ್ಷ ರು.ಗಳಷ್ಟು ಬೆಲೆ ಬಾಳಲಿದೆ. ಇವೆರಡಕ್ಕೂ ಎರಡು ವರ್ಷಗಳ ಅನಿಯಮಿತ ಮೈಲೇಜ್ ವಾರಂಟಿ ಸೌಲಭ್ಯವಿರಲಿದೆ.

ಪ್ಯೂಜೊ ಟ್ವೀಟ್ ಇವೊ ಸ್ಕೂಟರ್ ಬಿಡುಗಡೆ

ಹಾಗಿದ್ದರೂ ಇದೀಗ ಬಿಡುಗಡೆಯಾಗಿರುವ ಟ್ವೀಟ್ ಇವೊ ಸದ್ಯಕ್ಕಂತೂ ಭಾರತ ಮಾರುಕಟ್ಟೆ ಪ್ರವೇಶ ಪಡೆಯುತ್ತಿಲ್ಲ. ಅಲ್ಲದೆ ದೇಶದಲ್ಲಿ ಬಿಡುಗಡೆಯಾದ್ದಲ್ಲಿ ಇದರ ಬೆಲೆ ಸ್ಕೂಟರ್ ಯಶಸ್ಸಿನಲ್ಲಿ ದೊಡ್ಡ ಪಾತ್ರ ವಹಿಸಲಿದೆ.

English summary
The two wheeler department of Peugeot has launched a new scooter christened the Tweet Evo. The scooter has a modern-retro appeal to it and will be likeable to most buyers.
Story first published: Friday, June 13, 2014, 18:13 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark