ರಾಯಲ್ ಎನ್‌ಫೀಲ್ಡ್‌ನಿಂದ ಹೊಸ 400ಸಿಸಿ ಎಂಜಿನ್ ಅಭಿವೃದ್ಧಿ

By Nagaraja

ಭಾರತದಲ್ಲಿ ರಾಯಲ್ ಎನ್‌ಫೀಲ್ಡ್ ಬುಲೆಟ್ ಸಕತ್ ಫೇಮಸ್ಸು. ಸಮಾಜದಲ್ಲಿ ಶ್ರೀಮಂತರು ಮಾತ್ರ ರಾಯಲ್ ಎನ್‌ಫೀಲ್ಡ್ ಹೊಂದಿರುತ್ತಿದ್ದರು. ಹಿಂದೆಲ್ಲ ರಾಜರ ಆಳ್ವಿಕೆ ಕಾಲಘಟ್ಟದಲ್ಲಿ ಮಹಾರಾಜ ರಾಜರೋಷವಾಗಿ ಕುದರೆ ಸವಾರಿ ಮಾಡುವ ರೀತಿಯಲ್ಲಿಯೇ ಸಮಕಾಲೀನ ಜಗತ್ತಿನಲ್ಲಿ ರಾಯಲ್ ಎನ್‌ಫೀಲ್ಡ್ ಓಡಿಸಿದರೆ ಅದಕ್ಕೆ ಸಿಗುವ ಡಿಮ್ಯಾಂಡೇ ಬೇರೆ.

ಪ್ರಸ್ತುತ ಚೆನ್ನೈ ಮೂಲದ ಎನ್‌ಫೀಲ್ಡ್ ಸಂಸ್ಥೆಯು ನೂತನ 400 ಸಿಸಿ ಎಂಜಿನ್ ಅಭಿವೃದ್ಧಿಪಡಿಸುತ್ತಿದೆ. ಎಂಟ್ರಿ ಲೆವೆಲ್ ಮೋಟಾರುಸೈಕಲ್‌ನಲ್ಲಿರುವ ಸಿಂಗಲ್ ಸಿಲಿಂಡರ್ 346 ಸಿಸಿ ಯುನಿಟ್ ತಲಹದಿಯಲ್ಲಿ ನೂತನ ಎಂಜಿನ್ ನಿರ್ಮಾಣವಾಗುತ್ತಿರುವುದು ಇನ್ನಷ್ಟು ಉತ್ಸಾಹಕ್ಕೆ ಕಾರಣವಾಗಿದೆ.

ರಾಯಲ್ ಎನ್‌ಫೀಲ್ಡ್‌ನಿಂದ ಹೊಸ 400ಸಿಸಿ ಎಂಜಿನ್ ಅಭಿವೃದ್ಧಿ

ರಾಯಲ್ ಎನ್‌ಫೀಲ್ಡ್ ತನ್ನ ಬಹುತೇಕ ಮೋಟಾರುಸೈಕಲುಗಳಿಗೆ ಸಿಂಗಲ್ ಸಿಲಿಂಡರ್ ಏರ್ ಕೂಲ್ಡ್ 346 ಸಿಸಿ ಎಂಜಿನ್ ಹಾಗೂ 499 ಸಿಸಿ ಯುನಿಟ್ ಬಳಕೆ ಮಾಡುತ್ತಿದೆ. ಇದೀಗ ಅಭಿವೃದ್ಧಿ ಹಂತದಲ್ಲಿರುವ ನೂತನ 400ಸಿಸಿ ಎಂಜಿನ್ ಇವೆರಡರ ಮಧ್ಯದಲ್ಲಿ ಗುರುತಿಸಿಕೊಳ್ಳಲಿದೆ.

ರಾಯಲ್ ಎನ್‌ಫೀಲ್ಡ್‌ನಿಂದ ಹೊಸ 400ಸಿಸಿ ಎಂಜಿನ್ ಅಭಿವೃದ್ಧಿ

ಅಂದ ಹಾಗೆ 346 ಸಿಸಿ ಎಂಜಿನ್, 20 ಅಶ್ವಶಕ್ತಿ (28 ಎನ್‌ಎಂ ಟಾರ್ಕ್) ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಅದೇ ರೀತಿ 499 ಸಿಸಿ ಎಂಜಿನ್ 28 ಅಶ್ವಶಕ್ತಿ (41 ಎನ್‌ಎಂ ಟಾರ್ಕ್) ಉತ್ಪಾದಿಸುತ್ತದೆ. ಅಂದರೆ ನೂತನ 400 ಸಿಸಿ ಎಂಜಿನ್ 22ರಿಂದ 25ರಷ್ಟು ಅಶ್ವಶಕ್ತಿ ಉತ್ಪಾದಿಸುವ ಸಾಧ್ಯತೆಯಿದೆ.

ರಾಯಲ್ ಎನ್‌ಫೀಲ್ಡ್‌ನಿಂದ ಹೊಸ 400ಸಿಸಿ ಎಂಜಿನ್ ಅಭಿವೃದ್ಧಿ

ಇನ್ನು ರಾಯಲ್ ಎನ್‌ಫೀಲ್ಡ್ 346 ಸಿಸಿ ಬೇಸ್ ದರ ಒಂದು ಲಕ್ಷ ರು.ಗಳ ಅಸುಪಾಸಿನಲ್ಲಿದೆ. ಹಾಗೆಯೇ 499 ಸಿಸಿ ಆರಂಭಿಕ ದರ 1.5 ಲಕ್ಷ ರು.ಗಳಿಷ್ಟಿದೆ. ಸಹಜವಾಗಿಯೇ ನೂತನ 400 ಸಿಸಿ ಬೈಕ್ ದರ ಇವೆರಡ ನಡುವೆ ಕಾಣಿಸಿಕೊಳ್ಳಲಿದೆ.

ರಾಯಲ್ ಎನ್‌ಫೀಲ್ಡ್‌ನಿಂದ ಹೊಸ 400ಸಿಸಿ ಎಂಜಿನ್ ಅಭಿವೃದ್ಧಿ

ಇಲ್ಲಿ ಗಮನಾರ್ಹ ವಿಷಯವೆಂದರೆ ನೂತನ 400ಸಿಸಿ ಎಂಜಿನ್, 346 ಸಿಸಿ ಯುನಿಟ್‌ನ ದೊಡ್ಡದಾದ ಆವೃತ್ತಿ ಆಗಿರಲಿದೆ.

ರಾಯಲ್ ಎನ್‌ಫೀಲ್ಡ್‌ನಿಂದ ಹೊಸ 400ಸಿಸಿ ಎಂಜಿನ್ ಅಭಿವೃದ್ಧಿ

499ಸಿಸಿ ಎಂಜಿನ್ ವಿಚಾರದಲ್ಲೂ ಇದಕ್ಕೆ ಸಮಾನವಾದ ನೀತಿಯನ್ನು ರಾಯಲ್ ಎನ್‌ಫೀಲ್ಡ್ ಅನುಸರಿಸಿತ್ತು. ಇನ್ನುಳಿದಂತೆ ಹೊಸದಾಗಿ ಆಗಮನವಾಗಿರುವ ಕಾಂಟಿನೆಂಟಲ್ ಜಿಟಿ ಕೆಫೆ ರೇಸರ್‌, 535 ಸಿಸಿ ಎಂಜಿನ್ (29 ಅಶ್ವಶಕ್ತಿ) ಪಡೆದಿತ್ತು.

ರಾಯಲ್ ಎನ್‌ಫೀಲ್ಡ್‌ನಿಂದ ಹೊಸ 400ಸಿಸಿ ಎಂಜಿನ್ ಅಭಿವೃದ್ಧಿ

ಅಂತಿಮವಾಗಿ ವಿವಿಧ ದರಗಳಲ್ಲಿ ನಾಲ್ಕು ಎಂಜಿನ್ ಆಯ್ಕೆಗಳಲ್ಲಿ ಎನ್‌ಫೀಲ್ಡ್ ಲಭ್ಯವಾಗಲಿದ್ದು, ಇದು ಪ್ರೀಮಿಯಂ ಮೋಟಾರುಸೈಕಲ್ ವಿಭಾಗದಲ್ಲಿ ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯಲು ನೆರವಾಗಲಿದೆ.

Most Read Articles

Kannada
English summary
Royal Enfield is said to be developing a new engine. But do not get too excited just yet because the ‘new' engine is said to be a 400cc unit that will be based on the existing single cylinder 346cc unit that powers the company's entry level motorcycles.
Story first published: Monday, March 3, 2014, 17:42 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X