ದೇಶದ ರಸ್ತೆಗೆ ಎರಡು ಹೊಸ ಹರ್ಲಿ ಡೇವಿಡ್ ಸನ್ ಬೈಕ್

Posted By:

ಹರ್ಲಿ ಡೇವಿಡ್ ಸನ್ ದೇಶದ ರಸ್ತೆಗಿಳಿದು ಸುಮಾರು ಎರಡು ವರ್ಷಗಳಾಗಿವೆ. ಕಂಪನಿಯು ಇಲ್ಲಿ ಹಲವು ಸೂಪರ್ ಬೈಕುಗಳನ್ನು ಪರಿಚಯಿವೆ. ಇದೀಗ ಕಂಪನಿಯು ಸಾವಿರ ಸಿಸಿಗಿಂತ ಹೆಚ್ಚು ಶಕ್ತಿಶಾಲಿಯಾದ ಎರಡು ಸೂಪರ್ ಬೈಕುಗಳನ್ನು ದೇಶದ ರಸ್ತೆಗೆ ಬಿಟ್ಟಿದೆ. ಇಷ್ಟವಾದರೆ ಖರೀದಿಸಬಹುದು.

Harley Davidson India Offers Additional CKD Models

ಹರ್ಲಿ ಡೇವಿಡ್ ಸನ್ ಇಂಡಿಯಾ, ಸಿಕೆಡಿ ಘಟಕದ ಮೂಲಕ ವಿಸ್ತರಣೆ ಯೋಜನೆಗಳನ್ನು ಪ್ರಕಟಿಸಿದೆ. ಕಂಪನಿಯು ದೇಶದ ರಸ್ತೆಗೆ ಎರಡು ಹೊಸ ಬೈಕುಗಳನ್ನು ಪರಿಚಯಿಸಿದೆ. ದೆಹಲಿ ವಾಹನ ಪ್ರದರ್ಶನದಲ್ಲಿ ಪಾಲ್ಗೊಂಡ ಹರ್ಲಿ ಕಂಪನಿಯು ಪ್ರಸಕ್ತ ವರ್ಷ ದೇಶದ ದ್ವಿಚಕ್ರ ಮಾರುಕಟ್ಟೆಯಲ್ಲಿ ಹೆಚ್ಚು ಮಾರುಕಟ್ಟೆ ಪಾಲು ಪಡೆಯುವ ಉತ್ಸಾಹ ತೋರಿಸಿದೆ.

ಹರ್ಲಿ ಡೇವಿಡ್ ಸನ್ ಕಂಪನಿಯು ದೇಶದ ರಸ್ತೆಗೆ ಎಫ್ಎಕ್ಸ್ ಡಿಬಿ ಸ್ಟ್ರೀಟ್ ಬೊಬೊ ಮತ್ತು ಎಫ್ಎಕ್ಸ್ ಡಿಸಿ ಸೂಪರ್ ಗ್ಲೈಡ್ ಕಸ್ಟಮ್ ಎಂಬ ಎರಡು ಸೂಪರ್ ಬೈಕುಗಳನ್ನು ಪರಿಚಯಿಸಿದೆ. ಇವೆರಡರ ಎಕ್ಸ್ ಶೋರೂಂ ದರ ಕ್ರಮವಾಗಿ 9.95 ಲಕ್ಷ ರುಪಾಯಿ ಮತ್ತು 11.5 ಲಕ್ಷ ರುಪಾಯಿ ಆಗಿದೆ.

ಇದರಲ್ಲಿ ಸ್ಟ್ರೀಟ್ ಬೂಬ್ ಬೈಕಿಗೆ ಈ ಹಿಂದೆ 13.95 ಲಕ್ಷ ರು. ಇತ್ತು. ಆದರೆ ಕಂಪನಿಯು ಈಗ ಸಿಕೆಡಿ ಯುನಿಟ್ ಮೂಲಕ ಈ ಬೈಕುಗಳನ್ನು ಕಡಿಮೆ ದರಕ್ಕೆ ಮಾರಾಟ ಮಾಡಲು ನಿರ್ಧರಿಸಿದೆ. ಗ್ಲೈಡ್ ಕಸ್ಟಮ್ ಬೈಕ್ ದರ ಕೂಡ 15 ಲಕ್ಷ ರು.ಗೆ ಬದಲಾಗಿ 11.5 ಲಕ್ಷ ರುಪಾಯಿಗೆ ದೊರಕುತ್ತದೆ.

ಸುಮಾರು 1,600 ಸಿಸಿ ಬೈಕನ್ನು ಕಂಪನಿಯು ಹತ್ತು ಲಕ್ಷ ರು.ಗಿಂತ ಕಡಿಮೆ ಮಾರಾಟ ಮಾಡಲು ಯೋಜಿಸಿದೆ. ಹೀಗಾಗಿ ಕಂಪನಿಯ ಈ ಎರಡು ದುಬಾರಿ ಬೈಕುಗಳ ದರ ಕೆಲವು ಲಕ್ಷ ರು. ಕಡಿಮೆಯಾಗಿದೆ.

"ದೇಶದ ರಸ್ತೆಯಲ್ಲಿ ಅತ್ಯುತ್ತಮ ಕಾರ್ಯಕ್ಷಮತೆ ಮತ್ತು ಅತ್ಯಧಿಕ ಅಶ್ವಶಕ್ತಿಯ ರೈಡಿಂಗ್ ಸಂಸ್ಕೃತಿಯನ್ನು ಬೆಳೆಸಲು ಇಚ್ಚಿಸುತ್ತದೆ. ಇದಕ್ಕಾಗಿ ಕಂಪನಿಯು ಹೆಚ್ಚು ಶಕ್ತಿಶಾಲಿ ಸೂಪರ್ ಬೈಕುಗಳನ್ನು ಪರಿಚಯಿಸುತ್ತಿದೆ" ಎಂದು ಹರ್ಲಿ ಡೇವಿಡ್ ಸನ್ ಇಂಡಿಯಾ ಕಂಪನಿಯ ಎಂಡಿ ಅನೂಪ್ ಪ್ರಕಾಶ್ ಹೇಳಿದ್ದಾರೆ. (ಬಣ್ಣಬಣ್ಣದ ಬೈಕುಗಳು)

English summary
Harley Davidson India Offers Additional CKD Models. Company launched two new bikes named FXDB Street Bob and SXDC Super Glide Costum to be available at Rs 9.95 laks and Rs 11.5 lakh respectively(ex-showroom).
Story first published: Tuesday, January 10, 2012, 16:05 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark