ಹೊಸ ರಾಯಲ್ ಎನ್ ಫೀಲ್ಡ್ ಬುಲೆಟ್- ಥಂಡರ್ ಬರ್ಡ್ 500

ದೇಶದ ರಸ್ತೆಯಲ್ಲಿ ಬುಲೆಟ್ ಬೈಕುಗಳೆಂದರೆ ಹೆಚ್ಚಿನವರಿಗೆ ಕ್ರೇಝು. ಅದರ ಬುಡುಬುಡು ಸದ್ದು, ಗಾಂಭಿರ್ಯ, ಠೀವಿ ಇಷ್ಟಪಡದವರು ಇರಲಿಕ್ಕಲ್ಲ. ರಾಯಲ್ ಎನ್ ಫೀಲ್ಡ್ ಬುಲೆಟ್ ಪ್ರೀಯರಿಗೆ ಇಷ್ಟವಾಗುವ ಸುದ್ದಿ ಇಲ್ಲಿದೆ. ಕಂಪನಿಯು ಥಂಡರ್ ಬರ್ಡ್ 500 ಎಂಬ ಬೈಕನ್ನು ಅನಾವರಣ ಮಾಡಿದೆ.

ದೆಹಲಿಯ ಪ್ರಗತಿ ಮೈದಾನದಲ್ಲಿ ಆರಂಭವಾದ ವಾಹನ ಪ್ರದರ್ಶನದಲ್ಲಿ ರಾಯಲ್ ಎನ್ ಫೀಲ್ಡ್ ಕಂಪನಿಯು 500 ಸಿಸಿಯ ಥಂಡರ್ ಬರ್ಡ್ ಬುಲೆಟ್ ಬೈಕನ್ನು ಅನಾವರಣ ಮಾಡಿದೆ. ಹಳೆಯ ಥಂಡರ್ ಬರ್ಡ್ ಬುಲೆಟ್ ಗಿಂತ ಹೆಚ್ಚು ಶಕ್ತಿಶಾಲಿಯಾಗಿರುವ ಈ ಬುಲೆಟ್ ನೋಡಲು ಹೆಚ್ಚು ಆಕರ್ಷಕವಾಗಿದೆ.

ಈ ಬುಲೆಟ್ ದರ ಮತ್ತು ಇನ್ನಿತರ ಟೆಕ್ ಮಾಹಿತಿಗಳನ್ನು ಕನ್ನಡ ಡ್ರೈವ್ ಸ್ಪಾರ್ಕ್ ಶೀಘ್ರದಲ್ಲಿ ನೀಡಲಿದೆ. ರಾಯಲ್ ಎನ್ ಫೀಲ್ಡ್ ಕಂಪನಿಯು ಪ್ರಗತಿ ಮೈದಾನದಲ್ಲಿ ಜಾಕೆಟ್ ಸೇರಿದಂತೆ ನೂತನ ಮಾದರಿಯ ಹಲವು ಆಕ್ಸೆಸರಿಗಳನ್ನು ಕೂಡ ಹೊರತಂದಿದೆ.

ಕಳೆದ ವರ್ಷ ರಾಯಲ್ ಎನ್ ಫೀಲ್ಡ್ ಕಂಪನಿಯು 73 ಸಾವಿರ ಬುಲೆಟ್ ಬೈಕುಗಳನ್ನು ಮಾರಾಟ ಮಾಡಿತ್ತು. ಇದಕ್ಕೂ ಹಿಂದಿನ ವರ್ಷ 50 ಸಾವಿರ ಬುಲೆಟ್ ಬೈಕುಗಳನ್ನು ಭಾರತದಲ್ಲಿ ಮಾರಾಟ ಮಾಡಿತ್ತು.

ನೂತನ ಥಂಡರ್ ಬರ್ಡ್ 500 ಬುಲೆಟ್ ಪ್ರಸಕ್ತ ವರ್ಷದ ಮಧ್ಯಾವದಿಯಲ್ಲಿ ದೇಶದ ರಸ್ತೆಗಿಳಿಯಲಿದೆ.

Most Read Articles

Kannada
English summary
Royal Enfield launched a 500cc Thunderbird in Delhi auto expo 2012. New 500 cc bullet Thunderbird will be on the market by mid 2012.
Story first published: Thursday, January 5, 2012, 15:48 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X