ರೋಡ್ ಟೆಸ್ಟ್ ರಿವ್ಯೂ- ಹೊಸ ಚಾಲನಾ ಅನುಭೂತಿ ನೀಡುವ ಡುಕಾಟಿ ಮಾನ್‌ಸ್ಟರ್ 797

Written By:

ಕಳೆದ 25 ವರ್ಷಗಳಿಂದ ಸೂಪರ್ ಬೈಕ್ ಮಾದರಿಗಳ ನಿರ್ಮಾಣದಲ್ಲಿ ಮುಂಚೂಣಿ ಸಾಧಿಸುತ್ತಿರುವ ಇಟಾಲಿ ಮೂಲದ ಡುಕಾಟಿ ಸಂಸ್ಥೆಯು ಇದುವರೆಗೆ ಹತ್ತಾರು ಬೈಕ್ ಉತ್ಪನ್ನಗಳನ್ನು ಹೊರತಂದಿದ್ದು, ಇದೀಗ ಭಾರತೀಯ ಮಾರುಕಟ್ಟೆಯಲ್ಲಿ ಮಾನ್‌ಸ್ಟರ್ 797 ಬಿಡುಗಡೆಗೊಳಿಸುವ ಮೂಲಕ ಹೊಸ ನೀರಿಕ್ಷೆ ಹುಟ್ಟುಹಾಕಿದೆ.

ರೋಡ್ ಟೆಸ್ಟ್ ರಿವ್ಯೂ- ಹೊಸ ಚಾಲನಾ ಅನುಭೂತಿ ನೀಡುವ ಡುಕಾಟಿ ಮಾನ್‌ಸ್ಟರ್ 797

ದೇಶಿಯ ಮಾರುಕಟ್ಟೆಯಲ್ಲಿ ಸ್ಕ್ಯಾಂಬ್ಲರ್ ಆವೃತ್ತಿಗಳಿಗೆ ವಿಶೇಷ ಬೇಡಿಕೆಯಿದ್ದು, ಈ ಹಿನ್ನೆಲೆ ಸೂಪರ್ ಬೈಕ್ ಪ್ರಿಯರನ್ನು ಸೆಳೆಯಲು ತಂತ್ರ ರೂಪಿಸಿರುವ ಡುಕಾಟಿ ಸಂಸ್ಥೆಯು ಮಾನ್‌ಸ್ಟರ್ 797 ಹೊರತಂದಿದೆ. ಹತ್ತು ಹಲವು ವಿಶೇಷತೆಗಳೊಂದಿಗೆ ಗ್ರಾಹಕರನ್ನು ಸೆಳೆಯುತ್ತಿದ್ದು, ಈ ಹಿನ್ನೆಲೆ ಡ್ರೈವ್‌ಸ್ಪಾರ್ಕ್ ತಂಡವನ್ನು ಹೊಸ ಬೈಕಿನ ಎಂಜಿನ್ ಕಾರ್ಯಕ್ಷಮತೆ ಕುರಿತಾಗಿ ರೋಡ್ ಟೆಸ್ಟ್ ನಡೆಸಿದೆ.

ರೋಡ್ ಟೆಸ್ಟ್ ರಿವ್ಯೂ- ಹೊಸ ಚಾಲನಾ ಅನುಭೂತಿ ನೀಡುವ ಡುಕಾಟಿ ಮಾನ್‌ಸ್ಟರ್ 797

ಡುಕಾಟಿ ಸಂಸ್ಥೆಯ ಪ್ರಕಾರ, ಮಾನ್‌ಸ್ಟರ್ 797 ಬೈಕ್‌ಗಳು ಭಾರತೀಯ ಮಾರುಕಟ್ಟೆಯಲ್ಲಿನ ಗ್ರಾಹಕರ ಅಭಿರುಚಿಗೆ ಅತ್ಯುತ್ತಮ ಮಾದರಿಯೆಂದೇ ನಿರ್ಣಯಿಸಿದ್ದು, 400ಸಿಸಿಗಿಂತ ಹೆಚ್ಚಿನ ಮಟ್ಟದ ಬೈಕ್ ಮಾದರಿಗಳನ್ನು ಇಷ್ಟ ಪಡುವರಿಗೆ ಇದೊಂದು ಉತ್ತಮ ಆಯ್ಕೆ ಎಂದಿದೆ. ಹಾಗಾದ್ರೆ ಗ್ರಾಹಕರಿಗೆ ಇಷ್ಟವಾಗುವ ಗುಣವೈಶಿಷ್ಟ್ಯತೆಗಳು ಏನಿವೆ ಅನ್ನೋದನ್ನು ನಾವಿಂದು ತಿಳಿಸಿಕೊಡಲಿದ್ದೇವೆ.

ರೋಡ್ ಟೆಸ್ಟ್ ರಿವ್ಯೂ- ಹೊಸ ಚಾಲನಾ ಅನುಭೂತಿ ನೀಡುವ ಡುಕಾಟಿ ಮಾನ್‌ಸ್ಟರ್ 797

ಬೈಕಿನ ಡಿಸೈನ್‌ಗಳು

ಮಾನ್‌ಸ್ಟರ್ ಸರಣಿ ಬೈಕ್‌ಗಳಂತೆ ಮಸ್ಕ್ಯೂರಲ್ ಡಿಸೈನ್ ಹೊಂದಿರುವ ಮಾನ್‌ಸ್ಟರ್ 797 ಬೈಕ್‌ಗಳು ಬುಲ್‌ಬೌಸ್ ಫ್ಯೂಲ್ ಟ್ಯಾಂಕ್, ವಿಶಾಲವಾದ ಹ್ಯಾಂಡಲ್ ಬಾರ್, ಟ್ರೆಲೀಸ್ ಫ್ರೇಮ್ ಮತ್ತು ಡಬಲ್ ಸೈಡೆಡ್ ಸ್ವಿಂಗ್ಆರ್ಮ್ ಬೈಕ್ ವಿನ್ಯಾಸಕ್ಕೆ ಮೆರಗು ತಂದಿವೆ.

ರೋಡ್ ಟೆಸ್ಟ್ ರಿವ್ಯೂ- ಹೊಸ ಚಾಲನಾ ಅನುಭೂತಿ ನೀಡುವ ಡುಕಾಟಿ ಮಾನ್‌ಸ್ಟರ್ 797

ಮುಂಭಾಗದಲ್ಲಿ ಹೆಡ್‌ಲೈಟ್‌ಗಳು ಎಲ್‌ಇಡಿ ಡಿಆರ್‌ಎಲ್‌ಗಳನ್ನು ಹೊಂದಿದ್ದರೂ ಟಾಪ್ ಎಂಡ್ ಮಾನ್‌ಸ್ಟರ್ ಸರಣಿಗಳಂತೆ ಎಲ್ಇಡಿ ಹೆಡ್‌ಲ್ಯಾಂಪ್‌ಗಳ ಬದಲಾಗಿ ಹಾಲೋಜೆನ್ ಬಲ್ಪ್ ಬಳಸಲಾಗಿದೆ. ಹೀಗಾಗಿ ಹೆಡ್‌ಲ್ಯಾಂಪ್ ಕಸ್ಟರ್ ಸ್ಪಲ್ಪ ಇಳಿಮುಖ ವಿನ್ಯಾಸ ಹೊಂದಿದ್ದು, ಹಿಂಭಾಗದಲ್ಲಿ ಒದಗಿಸಲಾಗಿರುವ ರಿಯರ್ ಸಸ್ಪೆಷನ್‌ಗಳು ಹೊಸ ಚಾಲನಾ ಅನುಭೂತಿ ನೀಡುವುದರಲ್ಲಿ ಯಾವುದೇ ಅನುಮಾನವಿಲ್ಲ.

ರೋಡ್ ಟೆಸ್ಟ್ ರಿವ್ಯೂ- ಹೊಸ ಚಾಲನಾ ಅನುಭೂತಿ ನೀಡುವ ಡುಕಾಟಿ ಮಾನ್‌ಸ್ಟರ್ 797

ಇನ್ನು ಎಲ್‌ಸಿಡಿ ಇನ್ಸ್ಟ್ರುಮೆಂಟೇಷನ್ ಪ್ರದರ್ಶನವು ಹೆಡ್‌ಲ್ಯಾಂಪ್‌ಗಿಂತ ಮೇಲಿರುತ್ತದೆ ಮತ್ತು ಹಗಲು ಬೆಳಕಿನಲ್ಲೂ ಸಾಕಷ್ಟು ಪ್ರಕಾಶಮಾನವಾಗಿರುತ್ತದೆ. ಇದರ ಜೊತೆಗೆ ಟೈಮ್, ಟ್ರಿಪ್ ಮೀಟರ್‌ಗಳು, ಆರ್‌ಪಿಎಂ ವೇಗ ಮತ್ತು ಕೆಲವು ಇತರ ಮೂಲಭೂತ ನಿಯತಾಂಕಗಳಂತಹ ಸ್ಕ್ರೀನ್‌ನಲ್ಲಿ ಪ್ರದರ್ಶಿಸವಾಗುತ್ತವೆ.

ರೋಡ್ ಟೆಸ್ಟ್ ರಿವ್ಯೂ- ಹೊಸ ಚಾಲನಾ ಅನುಭೂತಿ ನೀಡುವ ಡುಕಾಟಿ ಮಾನ್‌ಸ್ಟರ್ 797

ಹೀಗಾಗಿ ಮಾನ್‌ಸ್ಟರ್ ಸರಣಿಯ ಈ ಹಿಂದಿನ ಬೈಕಿನಂತೆಯೇ ಬಹುತೇಕ ವಿನ್ಯಾಸ ಹೊಂದಿರುವ ಮಾನ್‌ಸ್ಟರ್ 797 ಬೈಕ್‌ಗಳು 809ಎಂಎಂ ಸೀಟಿನ ಎತ್ತರ ಪಡೆದಿದ್ದು, ಲೋವರ್ ಫುಟ್ ಪೆಗ್, ವೈಡರ್ ಹ್ಯಾಂಡಲ್ ಬಾರ್, ತೂಕದಲ್ಲಿ ಹಗುರದಾಯಕವಾಗಿರುವುದರಿಂದ ಚಾಲನೆಯಲ್ಲಿ ಚುರುಕು ತನ ಪಡೆದಿದೆ.

ರೋಡ್ ಟೆಸ್ಟ್ ರಿವ್ಯೂ- ಹೊಸ ಚಾಲನಾ ಅನುಭೂತಿ ನೀಡುವ ಡುಕಾಟಿ ಮಾನ್‌ಸ್ಟರ್ 797

ಜೊತೆಗೆ ಸ್ಪೋರ್ಟಿ ಲುಕ್ ಹೊಂದಿರುವ ಮಾನ್‌ಸ್ಟರ್ 797 ಬೈಕ್‌ಗಳು ಐಚ್ಛಿಕವಾಗಿ ಎಲ್ಇಡಿ ಸೂಚಕಗಳು ಮತ್ತು ಹೆಡ್ಲ್ಯಾಂಪ್ನಲ್ಲಿ ಫ್ಲೈಸ್ಕ್ರೀನ್ ಹೊಂದಿವೆ. ಹೀಗಾಗಿ ಅದ್ಬುತ ಆಕರ್ಷಣೆ ಕಾರಣವಾಗಿರುವ ಈ ಬೈಕಿನ ಸೀಟಿನ ತಳಭಾಗದಲ್ಲಿ ಯುಎಸ್‌ಬಿ ಸಾಕೆಟ್ ಜೋಡಿಸಲಾಗಿದೆ.

ರೋಡ್ ಟೆಸ್ಟ್ ರಿವ್ಯೂ- ಹೊಸ ಚಾಲನಾ ಅನುಭೂತಿ ನೀಡುವ ಡುಕಾಟಿ ಮಾನ್‌ಸ್ಟರ್ 797

ಎಂಜಿನ್ ಸಾಮರ್ಥ್ಯ

ಬಿಎಸ್ 6 ವೈಶಿಷ್ಟ್ಯತೆಗಳೊಂದಿಗೆ 803ಸಿಸಿ ಡೆಸ್ಮೂಡ್ ಟ್ವಿನ್ ಸಿಲಿಂಡರ್ ಎಂಜಿನ್ ಹೊಂದಿರುವ ಮಾನ್‌ಸ್ಟರ್ 797 ಬೈಕ್‌ಗಳು 73ಬಿಎಚ್‌ಪಿ ಮತ್ತು 67ಎನ್ಎಂ ಟಾರ್ಕ್ ಉತ್ಪಾದನಾ ಶಕ್ತಿಯನ್ನು ಹೊಂದಿದ್ದು, ಬೆಸ್ಟ್ ಪರ್ಫಾಮೆನ್ಸ್ ಬೈಕ್ ಆವೃತ್ತಿಯಾಗಿದೆ.

ರೋಡ್ ಟೆಸ್ಟ್ ರಿವ್ಯೂ- ಹೊಸ ಚಾಲನಾ ಅನುಭೂತಿ ನೀಡುವ ಡುಕಾಟಿ ಮಾನ್‌ಸ್ಟರ್ 797

ಇದರೊಂದಿಗೆ ಪರ್ಫೆಕ್ಟ್ ರೈಡಿಂಗ್‌ಗೆ ಸಹಕಾರಿಯಾಗುವಂತೆ 6-ಸ್ಪೀಡ್ ಗೇರ್‌ಬಾಕ್ಸ್ ಜೋಡಿಸಲಾಗಿದ್ದು, ಈ ಮೂಲಕ ಸುರಕ್ಷಾ ಬೈಕ್ ಸವಾರಿಯನ್ನು ಖಾತ್ರಿಪಡಿಸುತ್ತವೆ.

ರೋಡ್ ಟೆಸ್ಟ್ ರಿವ್ಯೂ- ಹೊಸ ಚಾಲನಾ ಅನುಭೂತಿ ನೀಡುವ ಡುಕಾಟಿ ಮಾನ್‌ಸ್ಟರ್ 797

ಇದಲ್ಲದೇ ಮಾನ್‌ಸ್ಟರ್ 797 ಬೈಕ್‌ಗಳಲ್ಲಿ ಒದಗಿಸಲಾಗಿರುವ ಕ್ಲಚ್‌ಗಳು ಎಪಿಟಿಸಿ ತಂತ್ರಜ್ಞಾನ ಪ್ರೇರಣೆ ಪಡೆದಿದ್ದು, ಆಕ್ರಮಣಕಾರಿ ಸವಾರಿ ವೇಳೆ ಹಿಂಭಾಗದ ಚಕ್ರವನ್ನು ಲಾಕ್ ಮಾಡದಂತೆ ತಡೆಯಲು ಇದು ಸಹಕಾರಿಯಾಗಲಿದೆ.

ರೋಡ್ ಟೆಸ್ಟ್ ರಿವ್ಯೂ- ಹೊಸ ಚಾಲನಾ ಅನುಭೂತಿ ನೀಡುವ ಡುಕಾಟಿ ಮಾನ್‌ಸ್ಟರ್ 797

ಆದ್ರೆ ಈ ಮೋಟಾರ್ ಸೈಕಲ್‌ನಲ್ಲಿ ಇತರೆ ಪ್ರೀಮಿಯಂ ಮೋಟಾರ್ ಸೈಕಲ್‌ಗಳಲ್ಲಿ ಕಂಡುಬರುವ ಫ್ಯಾನ್ಸಿ ಎಲೆಕ್ಟ್ರಾನಿಕ್ಸ್‌ ಸೌಲಭ್ಯಗಳಾದ ರೈಡ್-ಬೈ-ವೈರ್, ರೈಡಿಂಗ್ ಮೋಡ್ಸ್, ಟ್ರ್ಯಾಕ್ಷನ್ ಕಂಟ್ರೋಲ್ ಹೊಂದಿರುವುದಿಲ್ಲ, ಬಾಷ್ ಸಂಸ್ಥೆಯ ಎಬಿಎಸ್ ಅಳವಡಿಕೆ ಮಾತ್ರ ಹೊಂದಿದೆ.

ರೋಡ್ ಟೆಸ್ಟ್ ರಿವ್ಯೂ- ಹೊಸ ಚಾಲನಾ ಅನುಭೂತಿ ನೀಡುವ ಡುಕಾಟಿ ಮಾನ್‌ಸ್ಟರ್ 797

ದೈತ್ಯಾಕಾರದ ಎಂಜಿನ್ ವಿನ್ಯಾಸವು ಮೊದಲ ನೋಟದಲ್ಲಿ ಅಕ್ರಮಣಕಾರಿ ಎನ್ನಿಸಿದರೂ ಸ್ಮೂತ್ ಹಾಗೂ ಹಾರ್ಡ್ ಬೈಕ್ ರೈಡ್‌ಗೆ ಇದು ಸೂಕ್ತ ಮಾದರಿಯಾಗಿದ್ದು, ಹೆಚ್ಚಿನ ವೇಗದಲ್ಲೂ ಸುಲಭ ಪ್ರಯಾಣವನ್ನು ಖಾತ್ರಿ ಪಡಿಸುತ್ತೆ.

ರೋಡ್ ಟೆಸ್ಟ್ ರಿವ್ಯೂ- ಹೊಸ ಚಾಲನಾ ಅನುಭೂತಿ ನೀಡುವ ಡುಕಾಟಿ ಮಾನ್‌ಸ್ಟರ್ 797

ಟಾಪ್ ಸ್ಪೀಡ್

ಡುಕಾಟಿ ಮಾನ್‌ಸ್ಟರ್ 797 ನಲ್ಲಿನ ಎಂಜಿನ್ ಸಾಮರ್ಥ್ಯವು ಮಿಡ್‌ರೆಂಜ್‌ನಲ್ಲಿ ಪ್ರಬಲವಾದ ಪವರ್‌ ಬ್ರಾಂಡ್ ಆಗಿದ್ದು, ಈ ಕಾರಣದಿಂದಾಗಿ ಓವರ್‌ಟೆಕಿಂಗ್ ಸುಲಭವಾಗುತ್ತದೆ ಮತ್ತು ಸ್ವಲ್ಪ ಸಮಯದಲ್ಲೂ ಕೆಳಮಟ್ಟದ ಬದಲಾವಣೆಯ ಅಗತ್ಯವಿರುವುದಿಲ್ಲ. ಈ ಮೂಲಕ ಕೆಲವೇ ಸೇಕೆಂಡುಗಳಲ್ಲಿ ಟಾಪ್ ಸ್ಪೀಡ್ ತಲುಪುದಲ್ಲದೇ ಗಂಟೆಗೆ 210 ಕಿಮಿ ಟಾಪ್ ಸ್ಪೀಡ್ ತಲುಪುತ್ತದೆ.

ರೋಡ್ ಟೆಸ್ಟ್ ರಿವ್ಯೂ- ಹೊಸ ಚಾಲನಾ ಅನುಭೂತಿ ನೀಡುವ ಡುಕಾಟಿ ಮಾನ್‌ಸ್ಟರ್ 797

ಬ್ರೇಕಿಂಗ್ ವಿಭಾಗ

ಬ್ರೆಂಬೊ ಮೊನೊಬ್ಲಾಕ್ M4.32 ಕ್ಯಾಲಿಪರ್‌ಗಳ ಜೊತೆ ಫೌರ್ ಪಿಸ್ಟನ್ ಹೊಂದಿರುವ ಮೊನ್‌ಸ್ಟರ್ 797 ಬೈಕ್‌ಗಳು ಮುಂಭಾಗದಲ್ಲಿ ಚಕ್ರದಲ್ಲಿ 320ಎಂಎಂ ಡಿಸ್ಕ್ ಬ್ರೇಕ್ ಮತ್ತು ಹಿಂಭಾಗದ ಚಕ್ರದಲ್ಲಿ 245ಎಂಎಂ ಡಿಸ್ಕ್ ಬ್ರೇಕ್ ಪಡೆದಿದೆ.

ರೋಡ್ ಟೆಸ್ಟ್ ರಿವ್ಯೂ- ಹೊಸ ಚಾಲನಾ ಅನುಭೂತಿ ನೀಡುವ ಡುಕಾಟಿ ಮಾನ್‌ಸ್ಟರ್ 797

ಅಲ್ಲದೇ ಹೊಸ ಮೋಟಾರ್ ಸೈಕಲ್‌ನಲ್ಲಿ ಜಿಗುಟು ಮಾದರಿಯ ಪೈರೆಲಿ ಡಯಾಬ್ಲೊ ರೊಸ್ಸೊ II ಟೈರ್ ಬಳಕೆ ಮಾಡಲಾಗಿದ್ದು, 120/70 / ZR17 (ಮುಂಭಾಗ) ಮತ್ತು 180/55 / ZR17 (ಹಿಂಭಾಗ) ವಿನ್ಯಾಸ ಹೊಂದಿದೆ. ಇದರಿಂದ ವಿಶೇಷವಾಗಿ ಕಾರ್ನರ್‌ಗಳಲ್ಲಿ ಇದು ಅತ್ಯುತ್ತಮ ಹಿಡಿತವನ್ನು ಒದಗಿಸುತ್ತದೆ.

ರೋಡ್ ಟೆಸ್ಟ್ ರಿವ್ಯೂ- ಹೊಸ ಚಾಲನಾ ಅನುಭೂತಿ ನೀಡುವ ಡುಕಾಟಿ ಮಾನ್‌ಸ್ಟರ್ 797

ಮೈಲೇಜ್

ಸೂಪರ್ ಬೈಕ್‌ಗಳನ್ನು ಖರೀದಿಸುವ ಗ್ರಾಹಕರು ಹೆಚ್ಚಾಗಿ ಮೈಲೇಜ್ ವಿಚಾರವಾಗಿ ಹೆಚ್ಚು ತಲೆಕೆಡಿಸಿಕೊಳ್ಳಲಾರರು. ಆದರೂ ಪರ್ಫಾಮೆನ್ಸ್‌ಗಾಗಿ ಉತ್ತಮವಾಗಿರುವ ಮಾನ್‌ಸ್ಟರ್ ಬೈಕ್‌ಗಳು ನಗರ ಪ್ರದೇಶಗಳಲ್ಲಿ ಪ್ರತಿ ಲೀಟರ್‌ಗೆ 16ಕಿ.ಮೀ ಮತ್ತು ಹೆದ್ದಾರಿಗಳಲ್ಲಿ 18ಕಿ.ಮೀ ಮೈಲೇಜ್ ಹಿಂದಿರುಗಿಸಬಲ್ಲವು.

ರೋಡ್ ಟೆಸ್ಟ್ ರಿವ್ಯೂ- ಹೊಸ ಚಾಲನಾ ಅನುಭೂತಿ ನೀಡುವ ಡುಕಾಟಿ ಮಾನ್‌ಸ್ಟರ್ 797

ಬೆಲೆಗಳು (ಎಕ್ಸ್‌ಶೋರಂ ಪ್ರಕಾರ)

ಸೂಪರ್ ಬೈಕ್‌ಗಳಲ್ಲೇ ವಿಶೇಷ ಏನಿಸಿರುವ ಮಾನ್‌ಸ್ಟರ್ 797 ಬೈಕ್‌ಗಳು ಎಕ್ಸ್‌ಶೋರಂ ಪ್ರಕಾರ ರೂ. 8.05 ಲಕ್ಷ ಬೆಲೆ ಹೊಂದಿದ್ದು, ಬೆಲೆ ದುಬಾರಿ ಎನ್ನಿಸಿದರೂ ನಕೆಡ್ ಬೈಕ್‌ ಮಾದರಿಗಳಾದ ಟ್ರಯಂಫ್ ಸ್ಟ್ರೀಟ್ ಟ್ರಿಪ್ಪಲ್ ಎಸ್, ಕವಾಸಕಿ ಝೆಡ್900 ಬೈಕ್‌ಗಳಿಗೆ ನೇರ ಪೈಪೋಟಿ ನೀಡಲಿದೆ.

ರೋಡ್ ಟೆಸ್ಟ್ ರಿವ್ಯೂ- ಹೊಸ ಚಾಲನಾ ಅನುಭೂತಿ ನೀಡುವ ಡುಕಾಟಿ ಮಾನ್‌ಸ್ಟರ್ 797

ಮಾನ್‌ಸ್ಟರ್ 797 ಬಗೆಗೆ ಡ್ರೈವ್‌ಸ್ಪಾರ್ಕ್ ಅಭಿಪ್ರಾಯ

ಸೂಪರ್ ಬೈಕ್ ಅಪ್ಗ್ರಡ್ ಮಾಡುವ ಗ್ರಾಹಕರಿಗೆ ಮಾನ್‌ಸ್ಟರ್ ಉತ್ತಮ ಆಯ್ಕೆ ಎನ್ನಬಹುದಾಗಿದ್ದು, ಡುಕಾಟಿ ಸಂಸ್ಥೆಯ ಇತರೆ ಮಾನ್‌ಸ್ಟರ್ ಸರಣಿಗಳಿಂತ ಇದು ಭಿನ್ನವಾಗಿದೆ. ಇದರಿಂದಾಗಿ ಟ್ರಯಂಫ್ ಮತ್ತು ಕವಾಸಕಿ ನಕೆಡ್ ಮಾದರಿಗಳಿಗೆ ಉತ್ತಮ ಪೈಪೋಟಿ ನೀರಿಕ್ಷೆಯಿದೆ.

Read more on bike review ducati
English summary
Ducati Monster 797 Road Test Review.
Story first published: Thursday, April 26, 2018, 19:31 [IST]

Latest Photos

ಕರ್ನಾಟಕ ವಿಧಾನಸಭೆ ಚುನಾವಣೆ 2018

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark