ಬಜೆಟ್ ಬೈಕ್ ಹುಡುಕಾಟದಲ್ಲಿದ್ದೀರಾ? ನಿಮ್ಮ ಆಯ್ಕೆ ಇಲ್ಲಿದೆ

By Nagaraja

ಭಾರತದ ದ್ವಿಚಕ್ರ ವಾಹನ ವಾಹನ ಮಾರುಕಟ್ಟೆಯಲ್ಲಿ ಪ್ರಯಾಣಿಕ ಬೈಕ್ ಗಳಿಗೆ ಅತಿ ಹೆಚ್ಚಿನ ಬೇಡಿಕೆಯಿದೆ. ಇದೇ ಕಾರಣಕ್ಕಾಗಿ ದೇಶದ ಮುಂಚೂಣಿಯ ಸಂಸ್ಥೆಗಳು ಮಧ್ಯಮ ವರ್ಗದ ಗ್ರಾಹಕರನ್ನೇ ಗುರಿಯಾಗಿಸಿಕೊಂಡು ನೂತನ ಮಾದರಿಗಳನ್ನು ಪರಿಚಯಿಸುತ್ತಿದೆ.

Also Read : ಆಕ್ಟಿವಾ ತ್ರಿಜಿ vs ಮಹೀಂದ್ರ ಗಸ್ಟೊ; ಯಾವ ಸ್ಕೂಟರ್ ಬೆಸ್ಟ್?

ಜಪಾನ್ ಮೂಲದ ಹೋಂಡಾ ಮೋಟಾರ್ ಸೈಕಲ್ ಆ್ಯಂಡ್ ಸ್ಕೂಟರ್ಸ್ ಇಂಡಿಯಾ ಸಂಸ್ಥೆಯು ಇತ್ತೀಚೆಗಷ್ಟೇ ಬಿಡುಗಡೆ ಮಾಡಿರುವ ಲಿವೊ ಇದಕ್ಕೊಂದು ಹೊಸ ಸೇರ್ಪಡೆಯಾಗಿದೆ. 110 ಸಿಸಿ ವಿಭಾಗದಲ್ಲಿ ಗುರುತಿಸಿಕೊಂಡಿರುವ ಲಿವೊ ಸ್ಪರ್ದಾತ್ಮಕ ಬೆಲೆಗಳಲ್ಲಿ ಮಾರುಕಟ್ಟೆಗೆ ಎಂಟ್ರಿ ಕೊಟ್ಟಿದ್ದು, ಶೈಲಿ ವಿಚಾರದಲ್ಲೂ ಯಾವುದೇ ರಾಜಿಗೂ ತಯಾರಾಗಿಲ್ಲ.

ವಿನ್ಯಾಸ

ವಿನ್ಯಾಸ

ಸಹಜವಾಗಿಯೇ ಡ್ರೀಮ್ ಶ್ರೇಣಿ ಬೈಕ್ ಗಳ ಮೇಪಂಕ್ತಿಯಲ್ಲಿ ಗುರುತಿಸಿಕೊಂಡಿರುವ ಹೊಸ ಲಿವೊ ಹೆಚ್ಚಿನ ಪ್ರೀಮಿಯಂ ವೈಶಿಷ್ಟ್ಯಗಳನ್ನು ಪಡೆದುಕೊಂಡಿದೆ. ಇದು ದೈನಂದಿನ ಬಳಕೆಗೆ ಹೆಚ್ಚು ಸೂಕ್ತವೆನಿಸಲಿದೆ.

ಹೋಂಡಾ ಲಿವೊ 110 ಸಿಸಿ ಬೈಕ್ ವಿಮರ್ಶೆ

ಹಿಂಬದಿಯಿಂದ ನೋಡಿದಾಗಲೂ ಟೈಲ್ ಲ್ಯಾಂಪ್ ಹೆಚ್ಚು ಆಕರ್ಷಕವೆನಿಸುತ್ತಿದೆ. ಇಲ್ಲಿ ಹೋಂಡಾ ತನ್ನ ಘೋಷವಾಕ್ಯದಲ್ಲೇ ತಿಳಿಸಿರುವಂತೆಯೇ 'ಟೈಮ್ ಟು ಲಿವ್' ಹೆಚ್ಚು ಮಹತ್ವಪೂರ್ಣವೆನಿಸುತ್ತದೆ.

ಎಂಜಿನ್ ತಾಂತ್ರಿಕತೆ ಮತ್ತು ಗೇರ್ ಬಾಕ್ಸ್

ಎಂಜಿನ್ ತಾಂತ್ರಿಕತೆ ಮತ್ತು ಗೇರ್ ಬಾಕ್ಸ್

  • ಎಂಜಿನ್ ವಿಧ: ಏರ್ ಕೂಲ್ಡ್, 4 ಸ್ಟ್ರೋಕ್, ಎಸ್‍ಐ ಎಂಜಿನ್,
  • ಸಾಮರ್ಥ್ಯ: 109.19 ಸಿಸಿ
  • ಅಶ್ವಶಕ್ತಿ: 8.2
  • ತಿರುಗುಬಲ: 8.63 ಎನ್‌ಎಂ
  • ಗೇರ್: 4 ಸ್ಪೀಡ್
  • ಮೈಲೇಜ್, ವೇಗ ಮತ್ತು ಇಂಧನ ಟ್ಯಾಂಕ್ ಸಾಮರ್ಥ್ಯ

    ಮೈಲೇಜ್, ವೇಗ ಮತ್ತು ಇಂಧನ ಟ್ಯಾಂಕ್ ಸಾಮರ್ಥ್ಯ

    ಭಾರತೀಯ ವಾಹನ ಅಧ್ಯಯನ ಸಂಸ್ಥೆಯ ಪ್ರಕಾರ ನೂತನ ಹೋಂಡಾ ಲಿವೊ 110 ಸಿಸಿ ಬೈಕ್ ಪ್ರತಿ ಲೀಟರ್ ಗೆ 74 ಕೀ.ಮೀ. ಮೈಲೇಜ್ ನೀಡುವ ಸಾಮರ್ಥ್ಯ ಹೊಂದಿರಲಿದೆ.

    • ಗರಿಷ್ಠ ವೇಗ: 86 kmph
    • ಇಂಧನ ಟ್ಯಾಕ್ ಸಾಮರ್ಥ್ಯ: 8.5 ಲೀಟರ್
    • ವೈಶಿಷ್ಟ್ಯ

      ವೈಶಿಷ್ಟ್ಯ

      • ಮುಂದುವರಿದ ಫ್ರಂಟ್ ಫಾರ್ಕ್,
      • ಆಕರ್ಷಕ ಮಫ್ಲರ್,
      • ಎಚ್ ಇಟಿ ಹೋಂಡಾ ಎಂಜಿನ್,
      • ಎನರ್ಜಿಟಿಕ್ ಟ್ಯಾಂಕ್, ತ್ರಿಡಿ ವಿಂಗ್ ಮಾರ್ಕ್,
      • ಆಕರ್ಷಕ ಟೈಲ್ ಲೈಟ್, ಗ್ರಾಬ್ ರೈಲ್,
      • ಟ್ಯೂಬ್ ಲೆಸ್ ಚಕ್ರ,
      • ನಾನೀನ್ಯತೆಯ ಮೀಟರ್ ಡಿಸೈನ್,
      • ಐದು ವಿಧಗಳಲ್ಲಿ ಹೊಂದಾಣಿಸಬಹುದಾದ ಸಸ್ಪೆನ್ಷನ್,
      • ಎಂಎಫ್ ಬ್ಯಾಟರಿ ಮತ್ತು ಸ್ಥಿಗತೆ ಫಿಲ್ಟರ್
      • ಭಾರ ಮತ್ತು ಆಯಾಮ

        ಭಾರ ಮತ್ತು ಆಯಾಮ

        ಎಲ್ಲರಿಗೂ ಸಂಚಾರ ಯೋಗ್ಯವೇ ಎಂಬುದು ಪ್ರಮುಖವೆನಿಸುತ್ತದೆ. ಈ ನಿಟ್ಟಿನಲ್ಲಿ ಕೆಲಸ ಮಾಡಿರುವ ಹೋಂಡಾ ಸಂಸ್ಥೆಯು 111 ಕೆ.ಜಿ ಭಾರದ ಲಿವೊ ಹೊರ ತಂದಿದೆ.

        ಆಯಾಮ

        • ಉದ್ದ: 2020 ಎಂಎಂ
        • ಅಗಲ: 746 ಎಂಎಂ
        • ಎತ್ತರ: 1099 ಎಂಎಂ
        • ಚಂಕ್ರಾಂತರ: 1285 ಎಂಎಂ
        • ಗ್ರೌಂಡ್ ಕ್ಲಿಯರನ್ಸ್: 180 ಎಂಎಂ
        • ಕರ್ಬ್ ವೇಟ್: 111 ಕೆ.ಜಿ
        • ಬಣ್ಣಗಳು

          ಬಣ್ಣಗಳು

          • ಅಥ್ಲೆಟಿಕ್ ಬ್ಲೂ ಮೆಟ್ಯಾಲಿಕ್
          • ಬ್ಲ್ಯಾಕ್
          • ಸನ್ ಸೆಟ್ ಬ್ರೌನ್ ಮೆಟ್ಯಾಲಿಕ್
          • ಪಿಯರ್ಲ್ ಅಮೇಜಿಂಗ್ ವೈಟ್
          • ಚಕ್ರ ಮತ್ತು ಸಸ್ಪೆನ್ಷನ್

            ಚಕ್ರ ಮತ್ತು ಸಸ್ಪೆನ್ಷನ್

            ಅತ್ಯುತ್ತಮ ಚಾಲನೆಗಾಗಿ ಚಕ್ರ ಹಾಗೂ ಸಸ್ಪೆನ್ಷನ್ ವ್ಯವಸ್ಥೆ ನಿರ್ಣಾಯಣ ಪಾತ್ರ ವಹಿಸುತ್ತದೆ. ಹೊಸತಾದ ಹೋಂಡಾ ಲಿವೊದಲ್ಲಿ ಟ್ಯೂಬ್ ಲೆಸ್ ಚಕ್ರ ಬಳಕೆ ಮಾಡಲಾಗಿದೆ.

            ಸಸ್ಪೆನ್ಷನ್

            • ಫ್ರೇಮ್ ವಿಧ: ಡೈಮಂಡ್
            • ಫ್ರಂಟ್: ಟೆಲಿಸ್ಕಾಪಿಕ್ ಫಾರ್ಕ್
            • ರಿಯರ್: ಸ್ಪ್ರಿಂಗ್ ಲೋಡಡ್ ಹೈಡ್ರಾಲಿಕ್
            • ಚಕ್ರ ವಿಧ (ಮುಂದುಗಡೆ, ಹಿಂದುಗಡೆ): ಟ್ಯೂಬ್ ಲೆಸ್
            • ಬ್ರೇಕ್

              ಬ್ರೇಕ್

              ಇಲ್ಲಿ ಗ್ರಾಹಕರು ತಮ್ಮ ಬಜೆಟ್ ಗೆ ಅನುಸಾರವಾಗಿ (ಬೆಲೆ ತುಲನೆ ಮಾಡಿ ನೋಡಿ) ಡ್ರಮ್ ಅಥವಾ ಡಿಸ್ಕ್ ಬ್ರೇಕ್ ಗಳನ್ನು ಆಯ್ಕೆ ಮಾಡಬಹುದಾಗಿದೆ.

              • ಬ್ರೇಕ್ ವಿಧ (ಫ್ರಂಟ್): ಡ್ರಮ್ 130/ಡಿಸ್ಕ್ 240ಎಂಎಂ
              • ಬ್ರೇಕ್ ವಿಧ (ರಿಯರ್): ಡ್ರಮ್ 130 ಎಂಎಂ
              • ಸ್ಟ್ಯಾರ್ಟಿಂಗ್ ವಿಧ: ಕಿಕ್/ಸೆಲ್ಫ್
              • ಇನ್ಸ್ಟ್ರುಮೆಂಟ್

                ಇನ್ಸ್ಟ್ರುಮೆಂಟ್

                ಹೋಂಡಾ ಲಿವೊ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಸರಳವಾಗಿದ್ದು ಚಾಲನೆ ವೇಳೆ ಗ್ರಹಿಸಲು ಯೋಗ್ಯವಾಗಿದೆ. ಇದರಲ್ಲಿ ವೇಗ, ಇಂಧನ ಮಟ್ಟ ಮತ್ತು ವಾರ್ನಿಂಗ್ ಲೈಟ್ಸ್ ಗಳನ್ನು ಕಾಣಬಹುದಾಗಿದೆ.

                ಸ್ವಿಚ್ ನಿಯಂತ್ರಣ

                ಸ್ವಿಚ್ ನಿಯಂತ್ರಣ

                ಎಲ್ಲ ಹೋಂಡಾ ಬೈಕ್ ಗಳಂತೆ ಲಿವೊದಲ್ಲೂ ಸ್ವಿಚ್ ಬಳಕೆ ಬಹಳ ಸುಲಭವಾಗಿದೆ. ಎಡಬದಿಯಲ್ಲಿ ಹೆಡ್ ಲೈಟ್, ಇಂಡಿಕೇಟರ್, ಹಾರ್ನ್, ಪಾಸಿಂಗ್ ಲೈಟ್ ಮತ್ತು ಬಲಬದಿಯಲ್ಲಿ ಎಲೆಕ್ಟ್ರಿಕ್ ಸ್ಟ್ಯಾರ್ಟ್ ಬಟನ್ ವ್ಯವಸ್ಥೆಯನ್ನು ಕೊಡಲಾಗಿದೆ.

                ಬೆಲೆ ಮಾಹಿತಿ

                ಬೆಲೆ ಮಾಹಿತಿ

                ಬೆಲೆ ಮಾಹಿತಿ (ಎಕ್ಸ್ ಶೂ ರೂಂ ದೆಹಲಿ)

                • ಡ್ರಮ್ - 52,989 ರು.
                • ಡಿಸ್ಕ್ - 55,489 ರು.
                •  ಅಂತಿಮ ತೀರ್ಪು

                  ಅಂತಿಮ ತೀರ್ಪು

                  ನಿಸ್ಸಂಶವಾಗಿಯೂ 110 ಸಿಸಿ ವಿಭಾಗದಲ್ಲಿ ಒಂದು ಆಕರ್ಷಕ ಬೈಕ್ ನಿರ್ಮಿಸುವಲ್ಲಿ ದೇಶದ ಎರಡನೇ ಅತಿ ದೊಡ್ಡ ದ್ವಿಚಕ್ರ ವಾಹನ ತಯಾರಿಕ ಸಂಸ್ಥೆಯಾಗಿರುವ ಹೋಂಡಾ ಯಶಸ್ವಿಯಾಗಿದೆ. ಕಳೆಗುಂದಿರುವ ಸಿಬಿ ಟ್ವಿಸ್ಟರ್ ಸ್ಥಾನವನ್ನು ತುಂಬಲಿರುವ ನೂತನ ಲಿವೊದಲ್ಲಿ ಡ್ರೀಮ್ ಹಾಗೂ ಟ್ವಿಸ್ಟರ್ ವಿನ್ಯಾಸವನ್ನು ಆಮದು ಮಾಡಿಕೊಳ್ಳಲಾಗಿದೆ. ಅಂತೆಯೇ ವಿಶ್ವಾಸಾರ್ಹ ಎಂಜಿನ್ ಗಳಿಗೆ ಹೆಸರು ಮಾಡಿರುವ ಲಿವೊ ದೇಶದ ಮಾರುಕಟ್ಟೆಯಲ್ಲಿ ಯಶ ಸಾಧಿಸಲಿದೆಯೇ ಎಂಬುದಕ್ಕೆ ಮುಂದಿನ ದಿನಗಳಲ್ಲಿ ಉತ್ತರ ಲಭ್ಯವಾಗಲಿದೆ.

                  ಹೊಸ ಹೊಸ ಕಾರು ಬೈಕ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪುಟಕ್ಕೊಂದು ಲೈಕ್ ಒತ್ತಿರಿ


Most Read Articles

Kannada
English summary
Honda recently launched the Livo, a stylish looking motorcycle for the commuters in India. So, can Honda make a mark in this segment? Or has the company only given India just another motorcycle? Let's find out!
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X