ಐಷಾರಾಮಿ ಸ್ಕೌಟ್‌ ‘ಸಿಕ್ಸ್‌ಟಿ’ ಬೈಕ್ ಮೊದಲ ಚಾಲನಾ ವಿಮರ್ಶೆ

Written By:

ಅಮೆರಿಕದ ಮೊದಲ ಮೋಟಾರ್‌ ಸೈಕಲ್‌ ಕಂಪೆನಿ ಪೊಲಾರಿಸ್‌ ಇಂಡಸ್ಟ್ರೀಸ್‌ ಇಂಕ್‌ನ ಪ್ರಸಿದ್ಧ 'ಇಂಡಿಯನ್‌ ಸ್ಕೌಟ್‌' ಸರಣಿಯ ದುಬಾರಿ ಬೈಕ್ "ಸಿಕ್ಸ್‌ಟಿ" ಬೆಂಗಳೂರಿಗೆ ತಲುಪಿದ್ದು, ಮೊದಲ ಚಾಲನಾ ವಿಮರ್ಶೆ ಇಲ್ಲಿದೆ.

ಐಷಾರಾಮಿ ಸ್ಕೌಟ್‌ ‘ಸಿಕ್ಸ್‌ಟಿ’ ಬೈಕ್ ಮೊದಲ ಚಾಲನಾ ವಿಮರ್ಶೆ

ಆಪ್ ರೋಡಿಂಗ್ ಹಾಗೂ ಐಷಾರಾಮಿ ವೈಶಿಷ್ಟ್ಯತೆಗಳನ್ನು ಹೊಂದಿರುವ ಇಂಡಿಯನ್ ಸ್ಕೌಟ್ ಸಿಕ್ಸ್‌ಟಿ, ವಿಶೇಷ ವಿನ್ಯಾಸಗಳಿಂದಾಗಿ ಬೈಕ್ ಪ್ರಿಯರನ್ನು ಮೊದಲ ನೋಟದಲ್ಲೇ ಮೋಡಿ ಮಾಡಬಲ್ಲ ಶಕ್ತಿ ಹೊಂದಿದೆ.

ಐಷಾರಾಮಿ ಸ್ಕೌಟ್‌ ‘ಸಿಕ್ಸ್‌ಟಿ’ ಬೈಕ್ ಮೊದಲ ಚಾಲನಾ ವಿಮರ್ಶೆ

ಎಲ್ಲ ರೀತಿಯ ಭೂ ಪ್ರದೇಶಗಳಿಗೂ ಹೊಂದಿಕೊಳ್ಳಬಲ್ಲ ವಿಶೇಷ ಗುಣಹೊಂದಿರುವ ಇಂಡಿಯನ್ ಸ್ಕೌಟ್ ಸಿಕ್ಸ್‌ಟಿ ಬೈಕ್, ಕೇವಲ ದುಬಾರಿ ಬೆಲೆಗಳಿಂದಷ್ಟೇ ಅಲ್ಲದೇ ಅದ್ಭುತ ಚಾಲನಾ ಅನುಭವ ನೀಡಬಲ್ಲದಾಗಿದೆ.

ಐಷಾರಾಮಿ ಸ್ಕೌಟ್‌ ‘ಸಿಕ್ಸ್‌ಟಿ’ ಬೈಕ್ ಮೊದಲ ಚಾಲನಾ ವಿಮರ್ಶೆ

ಬೈಕ್ ಸವಾರಿಗೆ ವಿಶೇಷ ಚಾಲನಾ ಅನುಭವ ನೀಡಲೇಂದೇ ವಿಶೇಷ ಸೀಟಿನ ವಿನ್ಯಾಸವನ್ನು ಅಭಿವೃದ್ಧಿಗೊಳಿಸಲಾಗಿದ್ದು, ಈ ಹಿಂದಿನ 2016ರ ಇಂಡಿಯನ್‌ ಸ್ಕೌಟ್‌ ಸಿಕ್ಸ್‌ಟಿ ಬೈಕ್‌ಗಿಂತಲೂ ವಿಭಿನ್ನವಾಗಿದೆ.

ಐಷಾರಾಮಿ ಸ್ಕೌಟ್‌ ‘ಸಿಕ್ಸ್‌ಟಿ’ ಬೈಕ್ ಮೊದಲ ಚಾಲನಾ ವಿಮರ್ಶೆ

999 ಸಿಸಿ ಸಾಮರ್ಥ್ಯ ಹೊಂದಿರುವ ಸ್ಕೌಟ್ ಸಿಕ್ಸ್‌ಟಿ ಬೈಕ್‌ ಕೇವಲ ದೂರದ ಸವಾರಿಗೆ ಮಾತ್ರವಲ್ಲದೇ ನಗರಗಳಲ್ಲಿಯೂ ಅರಾಮವಾಗಿ ಸಂಚರಿಸಲೂ ಅನುಕೂಲವಾಗುವಂತೆ ವಿನ್ಯಾಸ ಮಾಡಲಾಗಿದೆ.

ಐಷಾರಾಮಿ ಸ್ಕೌಟ್‌ ‘ಸಿಕ್ಸ್‌ಟಿ’ ಬೈಕ್ ಮೊದಲ ಚಾಲನಾ ವಿಮರ್ಶೆ

ನಿರ್ಮಾಣ ಗುಣಮಟ್ಟ ಮತ್ತು ವಿಶ್ವಾಸಾರ್ಹತೆಯಲ್ಲಿ ಅತ್ಯುತ್ತಮ ಮನ್ನಣೆಯನ್ನು ಗಿಟ್ಟಿಸಿಕೊಂಡಿರುವ ಅಮೆರಿಕದ ಮೂಲದ ಐಕಾನಿಕ್ ಇಂಡಿಯನ್ ಮೋಟಾರ್ ಸೈಕಲ್ ಸಂಸ್ಥೆಯಿಂದ ಭಾರತಕ್ಕೆ ಇದು ಮಗದೊಂದು ಕೊಡುಗೆ ಎಂದೇ ಹೇಳಬಹುದು.

ಐಷಾರಾಮಿ ಸ್ಕೌಟ್‌ ‘ಸಿಕ್ಸ್‌ಟಿ’ ಬೈಕ್ ಮೊದಲ ಚಾಲನಾ ವಿಮರ್ಶೆ

ಇದರಲ್ಲಿರುವ 999ಸಿಸಿ ಎಂಜಿನ್ 88.8 ಎನ್ ಎಂ ತಿರುಗುಬಲದಲ್ಲಿ 78 ಅಶ್ವಶಕ್ತಿಯನ್ನು ಉತ್ಪಾದಿಸಲಿದ್ದು, 5 ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಇದರಲ್ಲಿರುತ್ತದೆ.

ಐಷಾರಾಮಿ ಸ್ಕೌಟ್‌ ‘ಸಿಕ್ಸ್‌ಟಿ’ ಬೈಕ್ ಮೊದಲ ಚಾಲನಾ ವಿಮರ್ಶೆ

ಪ್ರಮುಖ ವಿಚಾರವೆಂದ್ರೆ 60 ಕ್ಯೂಬಿಕ್ ಇಂಚುಗಳ (999 ಸಿಸಿ ) ಎಂಜಿನ್ ನಿಂದಾಗಿ ಇಂಡಿಯನ್ ಸ್ಕೌಟ್ ಸಿಕ್ಸ್ಟಿ ಎಂಬ ಹೆಸರನ್ನಿಡಲಾಗಿದ್ದು, ಇದರಲ್ಲಿ 999 ಸಿಸಿ ಲಿಕ್ವಿಡ್ ಕೂಲ್ಡ್ ಫ್ಯೂಯಲ್ ಇಂಜೆಕ್ಟಡ್ ವಿ-ಟ್ವಿನ್ ಎಂಜಿನ್ ಆಳವಡಿಸಲಾಗಿದೆ.

ಐಷಾರಾಮಿ ಸ್ಕೌಟ್‌ ‘ಸಿಕ್ಸ್‌ಟಿ’ ಬೈಕ್ ಮೊದಲ ಚಾಲನಾ ವಿಮರ್ಶೆ

ಹೊಸ ಬೈಕ್ ಬಗೆಗೆ ವಿಶೇಷ ಚಾಲನಾ ಟೂರ್ ಕೈಗೊಂಡಿದ್ದ ಡ್ರೈವ್ ಸ್ಪಾರ್ಕ್ ತಂಡದ ಸದಸ್ಯರು, ಬೆಂಗಳೂರು ಸೇರಿದಂತೆ ಆಂಧ್ರದ ಗುಡ್ಡಗಾಡು ಪ್ರದೇಶಗಳಿಗೆ ಭೇಟಿ ನೀಡುವ ಮೂಲಕ ಹೊಸ ಬೈಕ್‌ನ ಅದ್ಭುತ ಚಾಲನಾ ಅನುಭವ ಪಡೆದುಕೊಂಡಿದ್ದಾರೆ.

ಐಷಾರಾಮಿ ಸ್ಕೌಟ್‌ ‘ಸಿಕ್ಸ್‌ಟಿ’ ಬೈಕ್ ಮೊದಲ ಚಾಲನಾ ವಿಮರ್ಶೆ

ಸ್ಕೌಟ್ ಸಿಕ್ಸ್‌ಟಿ ಪಕ್ಷಿನೋಟ

ಆನ್ ರೋಡ್ ಬೆಲೆ- ರೂ.14 ಲಕ್ಷ

ಫ್ಯೂಲ್ ಟ್ಯಾಂಕ್ ಸಾಮರ್ಥ್ಯ- 12.5-ಲೀಟರ್

ಮೈಲೇಜ್- 15 ಕಿ.ಮಿ (ಪ್ರತಿ ಲೀಟರ್)

ಫ್ಯೂಲ್ ಟ್ಯಾಂಕ್ ರೇಂಜ್- 200 ಕಿ.ಮಿ (ಅಂದಾಜು)

ಟಾಪ್ ಸ್ಪೀಡ್- 180 ಕಿ.ಮಿ (ಅಂದಾಜು)

ಐಷಾರಾಮಿ ಸ್ಕೌಟ್‌ ‘ಸಿಕ್ಸ್‌ಟಿ’ ಬೈಕ್ ಮೊದಲ ಚಾಲನಾ ವಿಮರ್ಶೆ

ಹೊಸ ಬೈಕ್ ಬಗೆಗೆ ಡ್ರೈವ್ ಸ್ಪಾರ್ಕ್ ಅಭಿಪ್ರಾಯ

ಈ ಹಿಂದಿನ ಸ್ಕೌಟ್ ಸಿಕ್ಸ್‌ಟಿ ಮಾದರಿಗಿಂತ ಹೆಚ್ಚು ಬಲಿಷ್ಠತೆಯನ್ನು ಪಡೆದಿರುವ ಹೊಸ ಮಾದರಿಯೂ, ಎಲ್ಲ ಭೂ ಪ್ರದೇಶಗಳಿಗೂ ಒಗ್ಗಿಕೊಳ್ಳಬಲ್ಲ ಗುಣ ಹೊಂದಿದೆ. ಜೊತೆಗೆ ಐಷಾರಾಮಿ ಬೈಕ್ ಇಷ್ಟಪಡುವ ಭಾರತೀಯ ಗ್ರಾಹಕರಿಗೂ ಇದು ಹೊಸ ಅನುಭವ ನೀಡುವುದಲ್ಲಿ ಯಾವುದೇ ಸಂದೇಹವಿಲ್ಲ.

English summary
Read in Kannada about Indian Scout Sixty Review.
Story first published: Friday, June 16, 2017, 17:48 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark