ಫಸ್ಟ್ ರೈಡ್ ರಿವ್ಯೂ: ದೇಶದ ಮೊದಲ ಮ್ಯಾಕ್ಸಿ ಸ್ಕೂಟರ್ ಸುಜುಕಿ ಬರ್ಗ್‌ಮನ್ ಸ್ಟ್ರೀಟ್

ಭಾರತದಲ್ಲಿ ದ್ವಿಚಕ್ರ ವಾಹನಗಳ ಸಂಖ್ಯೆಯು ದಿನದಿಂದ ದಿನಕ್ಕೆ ಅಧಿಕವಾಗುತಿದ್ದು, ಇದರಿಂದ ಟ್ರಾಫಿಕ್ ಸಮಸ್ಯೆಯು ಹೆಚ್ಚುತ್ತಲೆ ಇದೆ.

By Rahul Ts

ಭಾರತದಲ್ಲಿ ದ್ವಿಚಕ್ರ ವಾಹನಗಳ ಸಂಖ್ಯೆಯು ದಿನದಿಂದ ದಿನಕ್ಕೆ ಅಧಿಕವಾಗುತ್ತಿದ್ದು, ಇದರಿಂದ ಟ್ರಾಫಿಕ್ ಸಮಸ್ಯೆಯು ಹೆಚ್ಚುತ್ತಲೇ ಇದೆ. ಈ ಮಧ್ಯೆ ಹೊಸ ವಾಹನ ಮಾರಾಟವು ಮತ್ತೊಂದು ಹಂತಕ್ಕೆ ತಲುಪುತ್ತಿದ್ದು, ಮಾರುಕಟ್ಟೆಯಲ್ಲಿ 110ಸಿಸಿ ಸ್ಕೂಟರ್‌ಗಳ ಮಾರಾಟವು ಉತ್ತಮವಾಗುತ್ತಿದೆ. ಇದರಿಂದ ದ್ವಿಚಕ್ರ ವಾಹನ ತಯಾರಕ ಸಂಸ್ಥೆಗಳು 125ಸಿಸಿ ಎಂಜಿನ್ ಸಾಮರ್ಥ್ಯದ ಸ್ಕೂಟರ್‍‍ಗಳನ್ನು ಉತ್ಪಾದಿಸುವ ಯೋಜನೆಯಲ್ಲಿದ್ದಾರೆ. ದೇಶಿಯ ಮಾರುಕಟ್ಟೆಯಲ್ಲಿ 125ಸಿಸಿ ಸ್ಕೂಟರ್ ಬೇಡಿಕೆಯು ಹೆಚ್ಚಿದ್ದು, ಕಳೆದ ಸುಮಾರು ದಿನಗಳಿಂದ 125ಸಿಸಿ ಸೆಗ್ಮೆಂಟ್ ಸ್ಕೂಟರ್‍‍ಗಳಲ್ಲಿ ಹಲವಾರು ವಾಹನಗಳು ಬಿಡುಗಡೆಗೊಂಡಿದೆ.

ಫಸ್ಟ್ ರೈಡ್ ರಿವ್ಯೂ: ದೇಶದ ಮೊದಲ ಮ್ಯಾಕ್ಸಿ ಸ್ಕೂಟರ್ ಸುಜುಕಿ ಬರ್ಗ್‍‍ಮನ್ ಸ್ಟ್ರೀಟ್

ಅವುಗಳಲ್ಲಿ ಸುಜುಕಿ ಬರ್ಗ್‌ಮನ್ ಸ್ಟ್ರೀಟ್ ಕೂಡಾ ಒಂದಾಗಿದ್ದು, ಇದು ಭಾರತದ ಮೊದಲ ಮ್ಯಾಕ್ಸಿ ಸ್ಕೂಟರ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಮಾರುಕಟ್ಟೆಯಲ್ಲಿ ದೊರೆಯುತ್ತಿರುವ ಇನ್ನಿತರೆ ಸ್ಕೂಟರ್‍‍ಗಳಿಗಿಂತ ಇದರಲ್ಲಿರುವ ವಿಭಿನ್ನವಾದ ವಿನ್ಯಾಸ ಮತ್ತು ವೈಶಿಷ್ಟ್ಯತೆಗಳು ಗ್ರಾಹಕರನ್ನು ತನ್ನತ್ತ ಸೆಳೆಯುತ್ತಿದೆ.

ಫಸ್ಟ್ ರೈಡ್ ರಿವ್ಯೂ: ದೇಶದ ಮೊದಲ ಮ್ಯಾಕ್ಸಿ ಸ್ಕೂಟರ್ ಸುಜುಕಿ ಬರ್ಗ್‍‍ಮನ್ ಸ್ಟ್ರೀಟ್

ಸುಜುಕಿ ಇನ್‌ಟ್ರುಡರ್ 150, ಜಿಕ್ಸರ್ ಪ್ಲಾಟ್‍‍ಫಾರ್ಮ್ ಅನ್ನು ಆಧರಿಸಿದ ಹಾಗೆಯೇ, ಸುಜುಕಿ ಬರ್ಗ್‍‍ಮನ್ ಸ್ಟ್ರೀಟ್ 125 ಕೂಡಾ ಸುಜುಕಿ ಆಕ್ಸಿಸ್ 125 ಸ್ಕೂಟರ್‍‍ನ ಪ್ಲಾಟ್‍‍ಫಾರ್ಮ್ ಅನ್ನು ಆಧರಿಸಿದೆ. ಒಂದೇ ರೀತಿಯ ಪ್ಲಾಟ್‍‍ಫಾರ್ಮ್ ಅನ್ನು ಹಂಚಿಕೊಂಡ ಸುಜುಕಿ ಬರ್ಗ್‍‍ಮನ್ ಸ್ಟ್ರೀಟ್ ಸುಜುಕಿ ಆಕ್ಸಿಸ್ 125 ಸ್ಕೂಟರ್‍‍ಗಿಂತ ಏಕೆ ಬೆಲೆಯಲ್ಲಿ 8,800 ಹೆಚ್ಚು ಎಂಬ ಮಾಹಿತಿ ಮತ್ತು ಬರ್ಗ್‍‍ಮನ್ ಸ್ಟ್ರೀಟ್ ಸ್ಕೂಟರ್‍ ಬಗೆಗಿನ ಇನ್ನಿತರೆ ಮಾಹಿತಿಯನ್ನು ನಾವಿಂದು ನಿಮಗೆ ನೀಡಲಿದ್ದೇವೆ.

ಫಸ್ಟ್ ರೈಡ್ ರಿವ್ಯೂ: ದೇಶದ ಮೊದಲ ಮ್ಯಾಕ್ಸಿ ಸ್ಕೂಟರ್ ಸುಜುಕಿ ಬರ್ಗ್‍‍ಮನ್ ಸ್ಟ್ರೀಟ್

ಮೊದಲಿಗೆ ಸುಜುಕಿ ಬರ್ಗ್‍‍ಮನ್ ಸ್ಟ್ರೀಟ್ ನೋಡುಗರ ಆಕರ್ಷಣೆಯನ್ನು ತನ್ನತ ಸೆಳೆಯುತ್ತದೆ. ಏಕೆಂದರೆ ಇದರ ವಿನ್ಯಾಸವನ್ನು ಮಾರುಕಟ್ಟೆಯಲ್ಲಿನ ಇನ್ಯಾವ ಸ್ಕೂಟರ್‍‍ಗಳಲ್ಲಿಯು ನೀವು ಕಂಡಿರುವುದಿಲ್ಲ. ಸ್ಕೂಟರ್‍‍ನ ಮುಂಭಾಗದಲ್ಲಿ ಎಲ್‍ಇಡಿ ಹೆಡ್‍‍ಲೈಟ್ ಅನ್ನು ಅಳವಡಿಸಲಾಗಿದ್ದು, ಫ್ಲೈಸ್ಕ್ರೀನ್‍‍ನ ಕೆಳಗೆಯೇ ಡಿಆರ್‍ಎಲ್‍‍ಗಳನ್ನು ಅಳವಡಿಸಲಾಗಿದೆ. ಮತ್ತು ಟರ್ನ್ ಇಂಡಿಕೇಟರ್‍‍ಗಳನ್ನು ಅಚ್ಚುಕಟ್ಟಾಗಿ ನೀಡಲಾಗಿದೆ.

ಫಸ್ಟ್ ರೈಡ್ ರಿವ್ಯೂ: ದೇಶದ ಮೊದಲ ಮ್ಯಾಕ್ಸಿ ಸ್ಕೂಟರ್ ಸುಜುಕಿ ಬರ್ಗ್‍‍ಮನ್ ಸ್ಟ್ರೀಟ್

ಸ್ಕೂಟರ್‍‍ನ ಸೈಡ್ ಪ್ರೊಫೈಲ್ ಅನ್ನು ಗಮನಿಸಿದ್ದಲ್ಲಿ, ಬರ್ಗ್‍‍ಮನ್ ಸ್ಟ್ರೀಟ್ ಎಂಬ ಚಿಹ್ನೆಯು ಸ್ಕೂಟರ್‍‍ನ ಲುಕ್ ಅನ್ನು ಮತ್ತಷ್ಟು ಹೆಚ್ಚಿಸುತ್ತದೆ. ಇನ್ನು ಸ್ಕೂಟರ್‍‍ನ ಹಿಂಭಾಗದಲ್ಲಿ ಎಲ್‍ಇಡಿ ಟೈಲ್ ಲೈಟ್ ಅನ್ನು ನೀಡಲಾಗಿದ್ದು, ಟರ್ನ್ ಇಂಡಿಕೇಟರ್‍‍ಗಳನ್ನು ಕೂಡಾ ಎಲ್ಇಡಿ ಇಂದ ಸುಜ್ಜುಗೊಳಿಸಬೇಕಾಗಿತ್ತು.

ಫಸ್ಟ್ ರೈಡ್ ರಿವ್ಯೂ: ದೇಶದ ಮೊದಲ ಮ್ಯಾಕ್ಸಿ ಸ್ಕೂಟರ್ ಸುಜುಕಿ ಬರ್ಗ್‍‍ಮನ್ ಸ್ಟ್ರೀಟ್

ಇನ್ನು ಈ ಸ್ಕೂಟರ್‍‍ನ ದೊಡ್ಡದಾದ ಗಾತ್ರವನ್ನು ಹೊಂದಿದ್ದು, ಉದ್ದನೆಯ ಸಿಂಗಲ್ ಪೀಸ್ ಸೀಟ್ ಅನ್ನು ನೀಡಲಾಗಿದೆ. ಈ ಸೀಟ್ ಅನ್ನು ಮೃದುವಾದ ಬಟ್ಟೆಗಳಿಂದ ಸಜ್ಜುಗೊಳಿಸಲಾಗಿದ್ದು, ಚಾಲಕನಿಗೆ ಮತ್ತು ಪಿಲಿಯಾನ್ ರೈಡರ್‍‍ಗಳಿಗೆ ಆರಾಮದಾಯಕ ಪ್ರಯಾಣದ ಅನುಭವವನ್ನು ನೀಡುತ್ತದೆ. ಇದಲ್ಲದೆ ಈ ಸ್ಕೂಟರ್‍‍ಗೆ ಗ್ರ್ಯಾಬ್ ರೈಲ್ ಅನ್ನು ತುದಿಯಲ್ಲಿ ನೀಡಲಾಗಿದ್ದು, ಸ್ಕೂಟರ್‍‍ನ ವಿನ್ಯಾಸಕ್ಕೆ ತಕ್ಕ ಹಾಗೆ ಸ್ಪೋರ್ಟಿ ಲುಕ್‍‍ನಿಂದ ಕೂಡಿರುವ ಎಕ್ಸಾಸ್ಟ್ ಮಫ್ಲರ್ ಅನ್ನು ಒದಗಿಸಲಾಗಿದೆ.

ಫಸ್ಟ್ ರೈಡ್ ರಿವ್ಯೂ: ದೇಶದ ಮೊದಲ ಮ್ಯಾಕ್ಸಿ ಸ್ಕೂಟರ್ ಸುಜುಕಿ ಬರ್ಗ್‍‍ಮನ್ ಸ್ಟ್ರೀಟ್

ವಿಷಾದಕರ ವಿಷವೇನೆಂದರೆ, ಇದರಲ್ಲಿ ಕೇವಲ 10 ಇಂಚಿನ ಅಲಾಯ್ ವ್ಹೀಲ್ ಅನ್ನು 100ಎಮ್ಎಮ್‍‍ನ ಟೈರ್‍‍ನಲ್ಲಿ ಅಳವಡಿಸಲಾಗಿದೆ. ಸುಜುಕಿ ಸಂಸ್ಥೆಯು ಈ ಸ್ಕೂಟರ್‍‍ನಲ್ಲಿ ಇನ್ನು ಕೊಂಚ ದಪ್ಪನೆಯ ಗಾತ್ರದ ಟೈರ್ ಅನ್ನು ನೀಡಬಹುದಾಗಿತ್ತು ಎಂದು ನಮ್ಮ ಭಾವನೆ.

ಫಸ್ಟ್ ರೈಡ್ ರಿವ್ಯೂ: ದೇಶದ ಮೊದಲ ಮ್ಯಾಕ್ಸಿ ಸ್ಕೂಟರ್ ಸುಜುಕಿ ಬರ್ಗ್‍‍ಮನ್ ಸ್ಟ್ರೀಟ್

ಬರ್ಗ್‍‍ಮನ್ ಸ್ಟ್ರೀಟ್ ಪೂರ್ಣ ಇನ್ಸ್ಟ್ರೂಮೆಂಟ್ ಕ್ಲಸ್ಟರ್ ಅನ್ನು ಪಡೆದ ಸುಜುಕಿ ಸಂಸ್ಥೆಯ ಮೊದಲ ಸ್ಕೂಟರ್ ಆಗಿದ್ದು, ಇದರ ಸ್ಕ್ರೀನ್ ಅನ್ನು ಬಿಳಿ ಬಣ್ಣದಿಂದ ಸಜ್ಜುಗೊಳಿಸಿದ ಕಾರಣ ಇದು ಸೂರ್ಯನ ಬೆಳಕಿನಲ್ಲಿಯು ಸ್ಪಷ್ಟವಾಗಿ ಕಾಣಿಸುತ್ತದೆ. ಇದು ಸ್ಪೀಡೊ‍‍ಮೀಟರ್, ಓಡೊಮೀಟರ್, ಟೂ ಟ್ರಿಪ್ ಮೀಟರ್ಸ್, ಕ್ಲಾಕ್ ಮತ್ತು ಫ್ಯುಯಲ್ ಗೌಜ್ ಅನ್ನು ತೋರಿಸುತ್ತದೆ. ಆದರೇ ಪ್ರೀಮಿಯಮ್ ಅನುಭವವನ್ನು ನೀಡಲು ಸಂಸ್ಥೆಯು ಅಂದವಾದ ಸ್ವೀಚ್ ಗೇರ್ ಅನ್ನು ನೀಡಬಹುದಾಗಿತ್ತು.

ಫಸ್ಟ್ ರೈಡ್ ರಿವ್ಯೂ: ದೇಶದ ಮೊದಲ ಮ್ಯಾಕ್ಸಿ ಸ್ಕೂಟರ್ ಸುಜುಕಿ ಬರ್ಗ್‍‍ಮನ್ ಸ್ಟ್ರೀಟ್

ಹೊಸ ಬರ್ಗ್‍‍ಮನ್ ಸ್ಟ್ರೀಟ್ ಸ್ಕೂಟರ್ ಅನೇಕ ವಿಶಿಷ್ಟವಾದ ವೈಶಿಷ್ಟ್ಯತೆಗಳನ್ನು ಪಡೆದುಕೊಂಡಿದೆ. ಈ ಸ್ಕೂಟರ್‍‍ನ ಮುಂಭಾಗದಲ್ಲಿ ಅಗಲವಾದ ಸ್ಟೋರೇಜ್ ಕಂಪಾರ್ಟ್‍‍ಮೆಂಟ್‍‍ನ ಜೊತೆಗೆ ಎರಡು ಲೀಟರ್ ನೀರಿನ ಬಾಟಲ್ ಇಡಬಹುದಾದ ಬಾಟಲ್ ಹೋಲ್ಡರ್ ಅನ್ನು ನೀಡಲಾಗಿದೆ. ಇದಲ್ಲದೇ ಪಕ್ಕದಲ್ಲಿಯೆ 12 ವೋಲ್ಟ್ಸ್ ನ ಚಾರ್ಜಿಂಗ್ ಸಾಕೆಟ್ ಮತ್ತು ಸಣ್ಣದಾದ ಜಾಗವನ್ನು ನೀಡಲಾಗಿದ್ದು, ಇಲ್ಲಿ ಪ್ರಯಾಣಿಕರು ತಮ್ಮ ಮೊಬೈಲ್ ಅಥವಾ ವಾಲೆಟ್‍‍ಗಳನ್ನು ಇರಿಸಿಕೊಳ್ಳಬಹುದಾಗಿದೆ.

MOST READ: ಕಾರು ರಿಪೇರಿಗೆ ಹೋದ ಸ್ಕೋಡಾ ಮಾಲಕಿಗೆ ಡೀಲರ್ಸ್ ಹೀಗಾ ಮಾಡೋದು.?

ಫಸ್ಟ್ ರೈಡ್ ರಿವ್ಯೂ: ದೇಶದ ಮೊದಲ ಮ್ಯಾಕ್ಸಿ ಸ್ಕೂಟರ್ ಸುಜುಕಿ ಬರ್ಗ್‍‍ಮನ್ ಸ್ಟ್ರೀಟ್

ಲಗೇಜ್ ಅನ್ನು ಸುಲಭವಾಗಿ ಇರಿಸಿಕೊಳ್ಳಲು ಇದರಲ್ಲಿ ಎರಡು ಹೂಕ್‍‍ಗಳನ್ನು ನೀಡಲಾಗಿದೆ. ಈ ಸ್ಕೂಟರ್ ವಿಶಾಲವಾದ ಫೂಟ್‍‍‍ಬೋರ್ಡ್ ಅನ್ನು ನೀಡಲಾಗಿದ್ದು, ಅರಾಮದಾಯಕವಾಗಿ ನಿಮ್ಮ ಕಾಲುಗಳನ್ನು ವಿಸರಿಸಿಕೊಳ್ಳಬಹುದು. ಇದಲದೇ ಹಿಂಭಾಗದ ಸವಾರರಿಗೆ ಅಲ್ಯೂಮೀನಿಯಮ್ ಫೂಟ್‍‍ರೆಸ್ಟ್ ಅನ್ನು ನೀಡಲಾಗಿದೆ.

ಫಸ್ಟ್ ರೈಡ್ ರಿವ್ಯೂ: ದೇಶದ ಮೊದಲ ಮ್ಯಾಕ್ಸಿ ಸ್ಕೂಟರ್ ಸುಜುಕಿ ಬರ್ಗ್‍‍ಮನ್ ಸ್ಟ್ರೀಟ್

ಬರ್ಗ್‍ಮನ್ ಸ್ಟ್ರೀಟ್ ಸ್ಕೂಟರ್‍‍ನಲ್ಲಿ ಮಲ್ಟಿ ಫಂಕ್ಷನ್ ಕೀ ಸ್ಲಾಟ್ ಸಹಾಯದಿಂದ ತೆರೆಯಬಹುದಾದ 21.5 ಲೀಟರ್ ಕೆಪಾಸಿಟಿಯ ಅಂಡರ್ ಸೀಟ್ ಸ್ಟೋರೇಜ್ ಸ್ಪೇಸ್ ಅನ್ನು ಹೊಂದಿದ್ದು, ಇದು ಈ ಸ್ಕೂಟರ್‍‍‍ನ ಸೆಗ್ಮೆಂಟ್‍‍ನಲ್ಲಿ ಇದು ವಿಶಾಲವಾದ ಸ್ಟೋರೇಜ್ ಅನ್ನು ಪಡೆದುಕೊಂಡಿದೆ. ಆದರೆ ಇದರಲ್ಲಿ ಫುಲ್ ಹೆಲ್ಮೆಟ್ ಅನ್ನು ಇರಿಸಲು ಸಾಧ್ಯವಾಗುವುದಿಲ್ಲ.

ಫಸ್ಟ್ ರೈಡ್ ರಿವ್ಯೂ: ದೇಶದ ಮೊದಲ ಮ್ಯಾಕ್ಸಿ ಸ್ಕೂಟರ್ ಸುಜುಕಿ ಬರ್ಗ್‍‍ಮನ್ ಸ್ಟ್ರೀಟ್

ಎಂಜಿನ್ ಸಾಮರ್ಥ್ಯ

ಬರ್ಗ್‍‍‍ಮನ್ ಸ್ಟ್ರೀಟ್ ಸ್ಕೂಟರ್ ಸುಜುಕಿ ಆಕ್ಸಿಸ್ 125 ಸ್ಕೂಟರ್‍‍ನಿಂದ ಪಡೆದ 124ಸಿಸಿ ಎಂಜಿನ್ ಅನ್ನು ನೀಡಲಾಗಿದ್ದು, ಇದು 8.6 ಬಿಹೆಚ್‍‍ಪಿ ಮತ್ತು 10.2ಎನ್ಎಮ್ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದುಕೊಂಡಿದೆ. ಸುಜುಕಿ ಆಕ್ಸಿಸ್ ಗಿಂತಾ ತೂಕದಲ್ಲಿ ಸುಮಾರು 8 ಕಿಲೋಗ್ರಾಂ ಹೆಚ್ಚಿರಲಿದ್ದು ಸ್ಮೂತ್ ರೈಡಿಂಗ್ ಅನುಭವವನ್ನು ನೀಡುತ್ತದೆ.

ಫಸ್ಟ್ ರೈಡ್ ರಿವ್ಯೂ: ದೇಶದ ಮೊದಲ ಮ್ಯಾಕ್ಸಿ ಸ್ಕೂಟರ್ ಸುಜುಕಿ ಬರ್ಗ್‍‍ಮನ್ ಸ್ಟ್ರೀಟ್

ಸುಜುಕಿ ಆಕ್ಸಿಸ್ ಸ್ಕೂಟರ್‍‍ನಿಂದ ಪಡೆದ ಗುಣಲಕ್ಷಣಗಳಿಂದ ಟ್ರಾಫಿಕ್‍‍ನಲ್ಲಿ ಕೂಡಾ ಬರ್ಗ್‍‍ಮನ್ ಸ್ಟೀಟ್ ಸ್ಕೂಟರ್‍ ಅನ್ನು ಆರಾಮದಾಯಕವಾಗಿ ಚಲಿಸಬಹುದಾಗಿದ್ದು, ಈ ಸ್ಕೂಟರ್‍‍ನಲ್ಲಿ ಪ್ರಯಾಣಿಕರ ಸುರಕ್ಷತೆಗಾಗಿ ಮುಂಭಾಗದಲ್ಲಿ ಡಿಸ್ಕ್ ಬ್ರೇಕ್ ಹಾಗು ಹಿಂಭಾಗದಲ್ಲಿ ಡ್ರಮ್ ಬ್ರೇಕ್‍‍ಗಳನ್ನು ಒದಗಿಸುವುದಲ್ಲದೆ ಕಂಬೈನ್ಡ್ ಬ್ರೆಕಿಂಗ್ ಸಿಸ್ಟಮ್ ಅನ್ನು ಕೂಡಾ ಒದಗಿಸಲಾಗಿದೆ. ಇದಲ್ಲದೇ ಸುಜುಕಿ ಇಕೊ ಪರ್ಫಾರ್ಮೆನ್ಸ್ ಟೆಕ್ನಾಲಜಿಯನ್ನು ಬಳಸಲಾಗಿದ್ದು, ಇದು ಸ್ಕೂಟರ್‍‍ನ ಪರ್ಫಾರ್ಮೆನ್ ಅನ್ನು ಉತ್ತಮಗೊಳಿಸುವಲ್ಲಿ ಸಹಾಯಕವಾಗಿದೆ.

ಫಸ್ಟ್ ರೈಡ್ ರಿವ್ಯೂ: ದೇಶದ ಮೊದಲ ಮ್ಯಾಕ್ಸಿ ಸ್ಕೂಟರ್ ಸುಜುಕಿ ಬರ್ಗ್‍‍ಮನ್ ಸ್ಟ್ರೀಟ್

ಸುಜುಕಿ ಬರ್ಗ್‍‍ಮನ್ ಸ್ಟ್ರೀಟ್ ಸ್ಕೂಟರ್‍‍ನ ಮುಂಭಾಗದಲ್ಲಿ ಟೆಲಿಸ್ಕೋಪಿಕ್ ಫ್ರಂಟ್ ಫೋರ್ಕ್ಸ್ ಮತ್ತು ಹಿಂಭಾಗದಲ್ಲಿ ಮೊನೋಶಾಕ್ ಅನ್ನು ನೀಡಲಾಗಿದೆ. ಇದರಲ್ಲಿನ ಸಸ್ಪೆಂಷನ್ ಯೂನಿಟ್ ರಸ್ತೆಯಲ್ಲಿ ಮೃದುವಾದ ರೈಡಿಂಗ್ ಅನುಭವವನ್ನು ನೀಡುತ್ತದೆ. ಇದರಲ್ಲಿನ ಮೈನಸ್ ಪಾಯಿಂಟ್ ಎಂದರೇ ಅದು ಹ್ಯಾಂಡಲ್ ಬಾರ್‍‍ಗಳು.

MOST READ: ರಷ್ಯಾದ ಕಂಪೆನಿಯೊಂದು ತಯಾರು ಮಾಡಿದ ರೋಲ್ಸ್ ರಾಯ್ಸ್ ಫ್ಯಾಂಟಮ್‍‍ನ ನಕಲು ಹೇಗಿದೆ ನೋಡಿ..

ಫಸ್ಟ್ ರೈಡ್ ರಿವ್ಯೂ: ದೇಶದ ಮೊದಲ ಮ್ಯಾಕ್ಸಿ ಸ್ಕೂಟರ್ ಸುಜುಕಿ ಬರ್ಗ್‍‍ಮನ್ ಸ್ಟ್ರೀಟ್

ಆಕ್ಸಿಸ್ ಸ್ಕೂಟರ್‍‍ಗಿಂತ ಕಡಿಮೆ ಗಾತ್ರದಲ್ಲಿ ಇದಕ್ಕೆ ಹ್ಯಾಂಡಲ್‍‍ಬಾರ್‍‍ಗಳನ್ನು ನೀಡಲಾಗಿದ್ದು, ಯೂ-ಟರ್ನ್ ತೆಗೆದುಕೊಳ್ಳಬೇಕಾದ ಸಂದರ್ಭದಲ್ಲಿ ಇವುಗಳು ಕೈ‍‍ಗಳನ್ನು ತಾಕುತ್ತವೆ. ಉದ್ದನೆಯ ಆಕಾರ ಇರುವ ವ್ಯಕ್ತಿಗಳು ಈ ಸ್ಕೂಟರ್‍ ಅನ್ನು ಚಲಾಯಿಸಲು ಕೊಂಚ ಕಷ್ಟವಾಗಬಹುದು.

ಫಸ್ಟ್ ರೈಡ್ ರಿವ್ಯೂ: ದೇಶದ ಮೊದಲ ಮ್ಯಾಕ್ಸಿ ಸ್ಕೂಟರ್ ಸುಜುಕಿ ಬರ್ಗ್‍‍ಮನ್ ಸ್ಟ್ರೀಟ್

ಸುಜುಕಿ ಬರ್ಗ್‍‍ಮನ್ ಸ್ಟ್ರೀಟ್ ಸ್ಕೂಟರ್ ಪ್ರತೀ ಲೀಟರ್‍‍ಗೆ 53 ಕಿಲೋಮೀಟರ್ ನೀಡಲಿದ್ದು, ನಗರ ಪ್ರದೇಶಗಳಲ್ಲಿ ಇದು ಕೇವಲ 45 ಕಿಲೋಮೀಟರ್ ಮೈಲೇಜ್ ಅನ್ನು ನೀಡುತ್ತದೆ. ಇದರಲ್ಲಿ 5.6 ಲೀಟರ್‍‍ನ ಇಂಧನವನ್ನು ತುಂಬಿಕೊಳ್ಳಬಹುದಾಗಿದ್ದು, ಸರಾಸರಿಯಾಗಿ 250 ಕಿಲೋಮೀಟರ್‍‍ಗಳ ಪ್ರಯಾಣವನ್ನು ಸುಲಭವಾಗಿ ಸಾಗಿಸಬಹುದಾಗಿದೆ.

ಫಸ್ಟ್ ರೈಡ್ ರಿವ್ಯೂ: ದೇಶದ ಮೊದಲ ಮ್ಯಾಕ್ಸಿ ಸ್ಕೂಟರ್ ಸುಜುಕಿ ಬರ್ಗ್‍‍ಮನ್ ಸ್ಟ್ರೀಟ್

ಡ್ರೈವ್‍‍ಸ್ಪಾರ್ಕ್ ಕನ್ನಡ ಅಭಿಪ್ರಾಯ

ಆಧುನಿಕ ವಿನ್ಯಾಸದ ಸ್ಕೂಟರ್‍ ಅನ್ನು ಖರೀದಿಸಲು ಇಚ್ಛಿಸುವವರಿಗೆ ಸುಜುಕಿ ಬರ್ಗ್‍‍ಮನ್ ಸ್ಟ್ರೀಟ್ ಹೇಳಿ ಮಾಡಿಸಿದ ಸ್ಕೂಟರ್ ಎಂದೇ ಹೇಳಬಹುದು. ಈ ಸ್ಕೂಟರ್ ಮುಂಬೈ‍‍ನ ಎಕ್ಸ್ ಶೋರಂ ಪ್ರಕಾರ ರೂ. 68,000 ಬೆಲೆ ಪಡೆದುಕೊಂಡಿದ್ದು, ಮಾರುಕಟ್ಟೆಯಲ್ಲಿ ವೆಸ್ಪಾ 125 ಸ್ಕೂಟರ್‍‍ಗಳಿಗೆ ತೀವ್ರ ಪೈಪೋಟಿಯನ್ನು ನೀಡುತ್ತಿದೆ.

Most Read Articles

Kannada
English summary
Suzuki Burgman Street Road Test Review — India's First Maxi-Scooter.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X