ವಿಮರ್ಶೆ- ಕ್ಲಾಸಿಕಲ್ ಬೈಕ್ ಸವಾರಿಗೆ ಬೇಕು ಟ್ರಯಂಫ್ ಟ್ರಕ್ಸ್‌ಟಾನ್ ಆರ್..!!

Written By:

1960ರಲ್ಲಿ ಮೊದಲ ಬಾರಿಗೆ ಬೆೊನೊವಿಲ್ಲೆ ಐಷಾರಾಮಿ ಬೈಕ್ ಆವೃತ್ತಿಗಳ ಮೂಲಕ ಆಟೋ ಉದ್ಯಮದಲ್ಲಿ ಹೊಸ ಅಧ್ಯಾಯ ಆರಂಭಿಸಿದ್ದ ಬ್ರಿಟಿಷ್ ಮೋಟಾರ್ ಸೈಕಲ್ ಉತ್ಪಾದನಾ ಸಂಸ್ಥೆ ಟ್ರಯಂಫ್, ಹತ್ತು ಹಲವು ಉತ್ಪನ್ನಗಳ ಮೂಲಕ ಜನಪ್ರಿಯತೆ ಗಳಿಸಿ ಇದೀಗ ಟ್ರಕ್ಸ್‌ಟ್ರಾನ್ ಆರ್ ಮಾರಾಟದಲ್ಲಿ ಹೊಸ ಭರವಸೆ ಹುಟ್ಟುಹಾಕಿದೆ.

ವಿಮರ್ಶೆ- ಕ್ಲಾಸಿಕಲ್ ಬೈಕ್ ಸವಾರಿಗೆ ಬೇಕು ಟ್ರಯಂಫ್ ಟ್ರಕ್ಸ್‌ಟಾನ್ ಆರ್..!!

ಯುವ ಪಿಳಿಗೆಯ ಬೇಡಿಕೆಗೆ ತಕ್ಕಂತೆ ಹೊಸ ಲುಕ್‌ನೊಂದಿಗೆ ಟ್ರಕ್ಸ್‌ಟಾನ್ ಆರ್ ಆವೃತ್ತಿಯನ್ನು ಬಿಡುಗಡೆಗೊಳಿಸಿರುವ ಟ್ರಯಂಪ್, ಐಷಾರಾಮಿ ಬೈಕ್ ಚಾಲನೆಗೆ ಸಹಕಾರಿಯಾಗುವಂತೆ ವಿನೂತನ ವಿನ್ಯಾಸಗಳನ್ನು ಕೈಗೊಂಡಿರುವುದು ಮೊದಲ ನೋಟದಲ್ಲೇ ಮೋಡಿ ಮಾಡುವಂತಿವೆ.

ವಿಮರ್ಶೆ- ಕ್ಲಾಸಿಕಲ್ ಬೈಕ್ ಸವಾರಿಗೆ ಬೇಕು ಟ್ರಯಂಫ್ ಟ್ರಕ್ಸ್‌ಟಾನ್ ಆರ್..!!

ಕಳೆದ ವರ್ಷ ನವೆಂಬರ್‌ನಲ್ಲೇ ಟ್ರಕ್ಸ್‌ಟಾನ್ ಆರ್ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಿದ್ದು, ಮುಂದುವರಿದ ಆವೃತ್ತಿಯಲ್ಲಿ ಡ್ರೈವ್ ಸ್ಪಾರ್ಕ್ ತಂಡ ನಡೆಸಿದ ಹೊಸ ಬೈಕಿನ ಚಾಲನಾ ವಿಮರ್ಶೆ ಇಲ್ಲಿದೆ.

ವಿಮರ್ಶೆ- ಕ್ಲಾಸಿಕಲ್ ಬೈಕ್ ಸವಾರಿಗೆ ಬೇಕು ಟ್ರಯಂಫ್ ಟ್ರಕ್ಸ್‌ಟಾನ್ ಆರ್..!!

ಐಷಾರಾಮಿ ಜೊತೆ ಕ್ಲಾಸಿಕಲ್ ವೈಶಿಷ್ಟ್ಯತೆಗಳನ್ನು ಮೈಗೂಡಿಸಿಕೊಂಡಿರುವ ಟ್ರಕ್ಸ್‌ಟಾನ್ ಆರ್ ಬೈಕ್ ಮಾದರಿಯೂ 'ಕಫೆ ರೇಸರ್'ನೊಂದಿಗೆ ಅಭಿವೃದ್ಧಿ ಹೊಂದಿದ್ದು, ಟ್ರ್ಯಾಕ್ ರೇಸರ್ ಆವೃತ್ತಿಯ ತಾಂತ್ರಿಕ ಅಂಶಗಳನ್ನು ಹೊಂದಿದೆ.

ವಿಮರ್ಶೆ- ಕ್ಲಾಸಿಕಲ್ ಬೈಕ್ ಸವಾರಿಗೆ ಬೇಕು ಟ್ರಯಂಫ್ ಟ್ರಕ್ಸ್‌ಟಾನ್ ಆರ್..!!

ಹೀಗಾಗಿ ಅದ್ಭುತ ಹೊರನೋಟವನ್ನು ಹೊಂದಿರುವ ಟ್ರಯಂಫ್ ಟ್ರಕ್ಸ‌್‌ಟಾನ್ ಆರ್, ವ್ಯಾನ್ಸ್ ಆ್ಯಂಡ್ ಹೈನ್ಸ್, ಎಕ್ಸಾಸ್ಟ್ ಎಂಡ್ ಕ್ಯಾನ್‌ಗಳು ಮತ್ತು ಸಂಕ್ಷಿಪ್ತ ಮಾದರಿಯ ಟೈಲ್ ವ್ಯವಸ್ಥೆಗಳನ್ನು ಕಲ್ಪಿಸಲಾಗಿದೆ.

ವಿಮರ್ಶೆ- ಕ್ಲಾಸಿಕಲ್ ಬೈಕ್ ಸವಾರಿಗೆ ಬೇಕು ಟ್ರಯಂಫ್ ಟ್ರಕ್ಸ್‌ಟಾನ್ ಆರ್..!!

ಇನ್ನು ರೆಟ್ರೋ ಸ್ಟೈಲ್ ರೌಂಡ್ ಹೆಡ್‌ಲ್ಯಾಂಪ್ ಟ್ರಕ್ಸ‌್‌ಟಾನ್ ಆರ್ ಅಂದವನ್ನು ಹೆಚ್ಚಿಸಿದ್ದು, ಎಲ್ಇಡಿ ಡಿಆರ್‌ಎಲ್‌ಎಸ್, ಟೈಲ್ ಲ್ಯಾಂಪ್, ಹೆಚ್‌ಡಿ ಇಂಡಿಕೇಟರ್‌ಗಳ ವಿನ್ಯಾಸಗಳು ಪ್ರಸ್ತುತ ಮಾರುಕಟ್ಟೆಗೆ ತಕ್ಕಂತೆ ಸಿದ್ಧಗೊಳಿಸಲಾಗಿದೆ.

Recommended Video - Watch Now!
Triumph Thruxton R Review: Specifications
ವಿಮರ್ಶೆ- ಕ್ಲಾಸಿಕಲ್ ಬೈಕ್ ಸವಾರಿಗೆ ಬೇಕು ಟ್ರಯಂಫ್ ಟ್ರಕ್ಸ್‌ಟಾನ್ ಆರ್..!!

ಬೈಕ್‌ನ ತಾಂತ್ರಿಕ ಅಂಶಗಳಗಳ ಬಗೆಗೆ ಮಾತನಾಡುವುದಾದರೇ ಡ್ಯುಯಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಲಾರ್ಜ್ ಅನಲಾಗ್ ಸ್ಪಿಡೋ ಮೀಟರ್, ಟಾಕೋಮೀಟರ್, ಸಣ್ಣದಾದ ಡಿಜಿಟಲ್ ಸ್ರ್ಕೀನ್, ಗೇರ್ ಪೋಜಿಶನ್ ಇಂಡಿಕೇಟರ್, ಟ್ರಿಫ್ ಮೀಟರ್, ಫ್ಯೂಲ್ ಮೀಟರ್, ಪವರ್ ಮೂಡ್‌ಗಳನ್ನು ಹೊಂದಿದೆ.

ವಿಮರ್ಶೆ- ಕ್ಲಾಸಿಕಲ್ ಬೈಕ್ ಸವಾರಿಗೆ ಬೇಕು ಟ್ರಯಂಫ್ ಟ್ರಕ್ಸ್‌ಟಾನ್ ಆರ್..!!

ಎಂಜಿನ್

1,200-ಸಿಸಿ ಎಂಜಿನ್ ಹೊಂದಿರುವ ಟ್ರಕ್ಸ‌್‌ಟಾನ್ ಆರ್, ಬೊನೊವಿಲ್ಲೆ ಮತ್ತು ಟಿ120 ಬೈಕ್ ಆವೃತ್ತಿಗಳಷ್ಟೇ ಎಂಜಿನ್ ಪವರ್ ಪಡೆದುಕೊಂಡಿದೆ. ಆದ್ರೆ ಟ್ರಕ್ಸ‌್‌ಟಾನ್ ಆರ್‌ನಲ್ಲಿ ಇಂಧನ ಕಾರ್ಯಕ್ಷಮತೆ ಹೆಚ್ಚಿಸಲಾಗಿದ್ದು, 96-ಬಿಎಚ್‌ಪಿ ಮತ್ತು 112-ಎನ್ಎಂ ಟಾರ್ಕ್ ಉತ್ಪಾದನೆ ಮಾಡುತ್ತದೆ.

ವಿಮರ್ಶೆ- ಕ್ಲಾಸಿಕಲ್ ಬೈಕ್ ಸವಾರಿಗೆ ಬೇಕು ಟ್ರಯಂಫ್ ಟ್ರಕ್ಸ್‌ಟಾನ್ ಆರ್..!!

ಇದರ ಜೊತೆಗೆ 6-ಸ್ಪೀಡ್ ಗೇರ್‌ಬಾಕ್ಸ್ ಪಡೆದುಕೊಂಡಿರುವ ಟ್ರಕ್ಸ‌್‌ಟಾನ್ ಆರ್, ಸ್ವಿಚ್‌ಬೆಲ್ ಟ್ರಾನ್‌ಕ್ಷನ್ ಕಂಟ್ರೋಲ್, ಎಬಿಎಸ್, ರೈಡ್ ಬೈ ವೈರ್ ತಂತ್ರಜ್ಞಾನ ಸೇರಿದಂತೆ ರೋಡ್, ರೈನ್ ಮತ್ತು ಸ್ಪೋರ್ಟ್ ಮೂಡ್‌ಗಳಲ್ಲಿ ಬೈಕ್ ಸವಾರಿ ಮಾಡಬಹುದಾಗಿದೆ.

ವಿಮರ್ಶೆ- ಕ್ಲಾಸಿಕಲ್ ಬೈಕ್ ಸವಾರಿಗೆ ಬೇಕು ಟ್ರಯಂಫ್ ಟ್ರಕ್ಸ್‌ಟಾನ್ ಆರ್..!!

ಈ ಮೂಲಕ ಕೇವಲ 4 ಸೇಕೆಂಡುಗಳಲ್ಲಿ 100 ಕಿಮಿ ವೇಗವನ್ನು ಸಾಧಿಸಬಹುದಾಗಿದ್ದು, ಗರಿಷ್ಠ ಮಟ್ಟದಲ್ಲಿ ಪ್ರತಿ ಗಂಟೆಗೆ 200 ಕಿಮಿ ಕ್ರಮಿಸಬಹುದಾಗಿದೆ. ಆದ್ರೆ ಸಿಂಗಲ್ ಸೀಟ್ ಹಿನ್ನೆಲೆ ದೂರದ ಪ್ರಯಾಣಕ್ಕೆ ಇದು ಸೂಕ್ತವಲ್ಲ.

ವಿಮರ್ಶೆ- ಕ್ಲಾಸಿಕಲ್ ಬೈಕ್ ಸವಾರಿಗೆ ಬೇಕು ಟ್ರಯಂಫ್ ಟ್ರಕ್ಸ್‌ಟಾನ್ ಆರ್..!!

ಟ್ರಕ್ಸ‌್‌ಟಾನ್ ಆರ್‌ ಬೈಕಿನ ಮುಂಭಾಗದ ಚಕ್ರದಲ್ಲಿ 310ಎಂಎಂ ಫ್ಲೋಟಿಂಗ್ ಡಿಸ್ಕ್ ಜೊತೆ 4 ಪಿಸ್ಟನ್ ರ‍್ಯಾಡಿಕಲ್ ಮೊನೊಬ್ಲೊಕ್ ಕ್ಯಾಲಿಪರ್ ಮತ್ತು ಹಿಂಭಾಗದ ಚಕ್ರಗಳಲ್ಲಿ 220ಎಂಎಂ ಡಿಸ್ಕ್ ಜೊತೆ 2 ಪಿಸ್ಟನ್ ಪ್ಲೋಟಿಂಗ್ ಕ್ಯಾಲಿಪರ್‌ಗಳನ್ನು ಜೋಡಿಸಲಾಗಿದೆ.

ವಿಮರ್ಶೆ- ಕ್ಲಾಸಿಕಲ್ ಬೈಕ್ ಸವಾರಿಗೆ ಬೇಕು ಟ್ರಯಂಫ್ ಟ್ರಕ್ಸ್‌ಟಾನ್ ಆರ್..!!

ಇಂಧನ ಕಾರ್ಯಕ್ಷಮತೆ

ಟ್ರಕ್ಸ‌್‌ಟಾನ್ ಆರ್ ನಲ್ಲಿ ಕ್ಲಾಸಿಕಲ್ ಬೈಕ್ ಸವಾರಿಗೆ ಹೆಚ್ಚಿನ ಒತ್ತು ನೀಡಲಾಗಿದ್ದು, ಪ್ರತಿ ಲೀಟರ್ ಪೆಟ್ರೋಲ್‌ಗೆ ನಗರ ಪ್ರದೇಶಗಳಲ್ಲಿ 13ಕಿಮಿ ಮೈಲೇಜ್ ಹಾಗೂ ಹೆದ್ದಾರಿಗಳಲ್ಲಿ ಪ್ರತಿ ಲೀಟರ್‌ಗೆ 19 ಕಿಮಿ ಮೈಲೇಜ್ ನೀಡುತ್ತದೆ.

ವಿಮರ್ಶೆ- ಕ್ಲಾಸಿಕಲ್ ಬೈಕ್ ಸವಾರಿಗೆ ಬೇಕು ಟ್ರಯಂಫ್ ಟ್ರಕ್ಸ್‌ಟಾನ್ ಆರ್..!!

ಬೆಲೆ

ಐಷಾರಾಮಿ ಬೈಕ್ ಆವೃತ್ತಿಗಳಲ್ಲೇ ಅತಿಹೆಚ್ಚು ಬೇಡಿಕೆ ಪಡೆದುಕೊಳ್ಳುತ್ತಿರುವ ಟ್ರಕ್ಸ‌್‌ಟಾನ್ ಆರ್ ಬೆಲೆಯು ದೆಹಲಿ ಎಕ್ಸ್‌ಶೋರಂ ಪ್ರಕಾರ ರೂ.14.75 ಲಕ್ಷಕ್ಕೆ ಲಭ್ಯವಿದ್ದು, ಕ್ಲಾಸಿಕಲ್ ಮೋಟಾರ್ ಸೈಕಲ್ ಪ್ರೇಮಿಗಳಿಗೆ ಹೇಳಿ ಮಾಡಿಸಿದಂತಿದೆ.

ವಿಮರ್ಶೆ- ಕ್ಲಾಸಿಕಲ್ ಬೈಕ್ ಸವಾರಿಗೆ ಬೇಕು ಟ್ರಯಂಫ್ ಟ್ರಕ್ಸ್‌ಟಾನ್ ಆರ್..!!

ಡ್ರೈವ್ ಸ್ಪಾರ್ಕ್ ಅಭಿಪ್ರಾಯ

ಹತ್ತು ಹಲವು ವಿಶೇಷತೆಗಳೊಂದಿಗೆ ಸಿದ್ಧಗೊಂಡಿರುವ ಟ್ರಕ್ಸ‌್‌ಟಾನ್ ಆರ್ ಪ್ರಸ್ತುತ ಮಾರುಕಟ್ಟೆಯಲ್ಲಿನ ಬೇಡಿಕೆಗಳಿಗೆ ಅನುಗುಣವಾಗಿ ಸಿದ್ಧಗೊಂಡಿದ್ದು, ಯುವ ಪೀಳಿಗೆಯ ನೆಚ್ಚಿನ ಬೈಕ್ ಮಾದರಿ ಆಗುವುದರಲ್ಲಿ ಯಾವುದೇ ಸಂದೇಹವಿಲ್ಲ.

English summary
Read in Kannada about Triumph Thruxton R bike review.
Story first published: Tuesday, August 22, 2017, 19:55 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark