ಹೊಸ ತಲೆಮಾರಿನ ವೈಶಿಷ್ಟ್ಯತೆ ಹೊಂದಿರುವ ಮಹೀಂದ್ರಾ ಸ್ಕಾರ್ಪಿಯೋ-ಎನ್ ಫಸ್ಟ್ ಡ್ರೈವ್ ರಿವ್ಯೂ

ಮಹೀಂದ್ರಾ ಕಂಪನಿಯು ಹೊಸ ತಲೆಮಾರಿನ ಕಾರು ಮಾದರಿಗಳ ಮೂಲಕ ಗ್ರಾಹಕರ ಆಕರ್ಷಿಸುತ್ತಿದ್ದು, ಕಂಪನಿಯು ಈ ಬಾರಿ ತನ್ನ ಮತ್ತೊಂದು ಜನಪ್ರಿಯ ಕಾರು ಮಾದರಿಯಾದ ಸ್ಕಾರ್ಪಿಯೋ-ಎನ್ ರಸ್ತೆಗಿಳಿಸಿದೆ.

Recommended Video

Mahindra Scorpio-N Kannada Review | 3 ನೇ ಸಾಲಿನ ಆಸನ, ಆಫ್-ರೋಡ್, ಡೀಸೆಲ್ ಎಂಜಿನ್, ಟೆರೆನ್ ರೆಸ್ಪಾನ್ಸ್

ಹೊಸ ಕಾರು ಮಾದರಿಯು ಈ ಹಿಂದೆಂದಿಗಿಂತಲೂ ಹೆಚ್ಚು ಹೊಸ ತಂತ್ರಜ್ಞಾನ ಪ್ರೇರಣೆಯೊಂದಿಗೆ ಭಾರೀ ಬದಲಾವಣೆ ಪಡೆದುಕೊಂಡಿದ್ದು, ಹೊಸ ಕಾರಿನಲ್ಲಿ ಆಗಿರುವ ಬದಲಾವಣೆ, ಹೊಸ ಎಂಜಿನ್ ಆಯ್ಕೆಗಳು ಮತ್ತು ಆಫ್ ರೋಡ್ ಸಾಮರ್ಥ್ಯದ ಕುರಿತು ಈ ವಿಮರ್ಶೆ ಲೇಖನದಲ್ಲಿ ನಾವು ಚರ್ಚಿಸಿದ್ದೆವೆ.

ಹೊಸ ಮಹೀಂದ್ರಾ ಸ್ಕಾರ್ಪಿಯೋ-ಎನ್ ಫಸ್ಟ್ ಡ್ರೈವ್ ರಿವ್ಯೂ

ಸ್ಕಾರ್ಪಿಯೋ ಮಾದರಿಯ ಮೂಲಕ ಹಲವಾರು ಹೊಸ ದಾಖಲೆಗಳಿಗೆ ಕಾರಣವಾಗಿರುವ ಮಹೀಂದ್ರಾ ಕಂಪನಿಯು ಇದೀಗ ಮತ್ತೊಂದು ಹಂತದ ಬೆಳವಣಿಗೆ ಕಂಡುಕೊಳ್ಳಲು ಸಿದ್ದವಾಗುತ್ತಿದೆ. ಸ್ಕಾರ್ಪಿಯೋ ಮಾದರಿಯನ್ನು ಮೊದಲ ಬಾರಿಗೆ 2002ರಲ್ಲಿ ಬಿಡುಗಡೆ ಮಾಡಿದ್ದ ಮಹೀಂದ್ರಾ ಕಂಪನಿಯು 20 ವರ್ಷಗಳ ಮಧ್ಯಂತರದಲ್ಲಿ ನಾಲ್ಕು ಬಾರಿ ಪ್ರಮುಖ ಬದಲಾವಣೆಗಳನ್ನು ಪರಿಚಯಿಸಿದ್ದು, ಇದೀಗ ಮತ್ತೊಂದು ಹಂತದ ಬದಲಾವಣೆಯೊಂದಿಗೆ ಹೊಸ ತಲೆಮಾರಿನ ವೈಶಿಷ್ಟ್ಯತೆಯೊಂದಿಗೆ ಬಿಡುಗಡೆ ಮಾಡಿದೆ.

ಹೊಸ ಮಹೀಂದ್ರಾ ಸ್ಕಾರ್ಪಿಯೋ-ಎನ್ ಫಸ್ಟ್ ಡ್ರೈವ್ ರಿವ್ಯೂ

ಎಸ್‌ಯುವಿ ವಿಭಾಗದಲ್ಲಿ ತನ್ನದೆ ಆದ ವಿಶಿಷ್ಟ್ಯತೆ ಹೊಂದಿರುವ ಸ್ಕಾರ್ಪಿಯೋ ಮಾದರಿಯು ಬಲಿಷ್ಠ ಎಂಜಿನ್ ಮೂಲಕ ಲಕ್ಷಾಂತರ ಗ್ರಾಹಕರನ್ನು ಹೊಂದಿದ್ದು, ಇದೀಗ ಸ್ಕಾರ್ಪಿಯೋ-ಎನ್ ಹೆಸರಿನೊಂದಿಗೆ ಹೊಸ ಕಾರು ಮತ್ತೊಮ್ಮೆ ಭಾರೀ ಬೇಡಿಕೆ ಪಡೆದುಕೊಳ್ಳುವ ಸಿದ್ದತೆಯಲ್ಲಿದೆ.

ಹೊಸ ಮಹೀಂದ್ರಾ ಸ್ಕಾರ್ಪಿಯೋ-ಎನ್ ಫಸ್ಟ್ ಡ್ರೈವ್ ರಿವ್ಯೂ

ಹೊಸ ಸ್ಕಾರ್ಪಿಯೋ-ಎನ್ ಮಾದರಿಯು ಈ ಹಿಂದಿನ ಮಾದರಿಗಿಂತಲೂ ಸಾಕಷ್ಟು ವಿಭಿನ್ನತೆ ಹೊಂದಿದ್ದು, ಕಾರಿನ ವಿನ್ಯಾಸಗಳು, ಎಂಜಿನ್ ಆಯ್ಕೆ, ಬದಲಾದ ಬ್ರಾಂಡ್ ಲೋಗೋ, ಐಷಾರಾಮಿ ಅನುಭವ ನೀಡುವ ಇಂಟಿರಿಯರ್, ನವೀಕರಿಸಲಾದ ಆಸನ ಸೌಲಭ್ಯಗಳು ಸಂಪೂರ್ಣವಾಗಿ ಹೊಸತನ ಹೊಂದಿದೆ. ಹೀಗಾಗಿ ಸ್ಕಾರ್ಪಿಯೋ-ಎನ್ ಮಾದರಿಯು ಪ್ರತಿಸ್ಪರ್ಧಿ ಮಾದರಿಗಳಿಗೆ ಭರ್ಜರಿ ಪೈಪೋಟಿ ನೀಡುವ ತವಕದಲ್ಲಿದ್ದು, ಹೊಸ ಕಾರು ಚಾಲನೆಯಲ್ಲಿ ಹೇಗಿದೆ ಎನ್ನುವುದನ್ನು ಇಲ್ಲಿ ನೋಡೋಣ.

ಸ್ಕಾರ್ಪಿಯೋ ಮಾದರಿಯನ್ನು ಮಹೀಂದ್ರಾ ಕಂಪನಿಯು ಮೊಟ್ಟ ಮೊದಲ ಬಾರಿಗೆ 1997ರಲ್ಲಿ ಅನಾವರಣಗೊಳಿಸುವ ಮೂಲಕ 2002ರಲ್ಲಿ ಅಧಿಕೃತವಾಗಿ ಬಿಡುಗಡೆ ಮಾಡಿತ್ತು. ಸುಮಾರು ಐದು ವರ್ಷಗಳ ಕಾಲ ಹೊಸ ಕಾರು ಮಾದರಿಯ ಅಭಿವೃದ್ದಿಗಾಗಿ ಶ್ರಮಿಸಿದ ಮಹೀಂದ್ರಾ ಕಂಪನಿಯು ವಿಲ್ಲಿಸ್ ಜೀಪ್ ಆಧರಿಸಿ ಹೊಸ ಸ್ಕಾರ್ಪಿಯೋ ಹೊರತಂದಿತ್ತು.

ಹೊಸ ಮಹೀಂದ್ರಾ ಸ್ಕಾರ್ಪಿಯೋ-ಎನ್ ಫಸ್ಟ್ ಡ್ರೈವ್ ರಿವ್ಯೂ

2002ರಲ್ಲಿ ಮೊದಲ ತಲೆಮಾರಿನ ಸ್ಕಾರ್ಪಿಯೋ ಬಿಡುಗಡೆಯ ನಂತರ ಕಂಪನಿಯು 2006 ರಲ್ಲಿ ಸ್ಕಾರ್ಪಿಯೊದ ಫೇಸ್‌ಲಿಫ್ಟ್ ಆವೃತ್ತಿಯನ್ನು ಪ್ರಾರಂಭಿಸಿತ್ತು. ತದನಂತರ 2007 ರಲ್ಲಿ ಪಿಕಪ್ ಟ್ರಕ್ ವರ್ಷನ್ ಸ್ಕಾರ್ಪಿಯೋ ಬಿಡುಗಡೆಯಾಗಿತ್ತು. ಆದಾದ ಬಳಿಕ 2008 ರಲ್ಲಿ ಮಹೀಂದ್ರಾ ಸ್ಕಾರ್ಪಿಯೊವನ್ನು 6-ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್‌ನೊಂದಿಗೆ ಬಿಡುಗಡೆ ಮಾಡಿತು. ಇದು ಆಟೋಮ್ಯಾಟಿಕ್ ವೈಶಿಷ್ಟ್ಯದೊಂದಿಗೆ ಬಿಡುಗಡೆಯಾದ ಈ ವಿಭಾಗದ ಮೊದಲ ಎಸ್‌ಯುವಿ ಮಾದರಿಯಾಗಿತ್ತು.

ಹೊಸ ಮಹೀಂದ್ರಾ ಸ್ಕಾರ್ಪಿಯೋ-ಎನ್ ಫಸ್ಟ್ ಡ್ರೈವ್ ರಿವ್ಯೂ

2009 ರಲ್ಲಿ ಮಹೀಂದ್ರಾ ಕಂಪನಿಯು ಸ್ಕಾರ್ಪಿಯೋ ಎರಡನೇ ಫೇಸ್‌ಲಿಫ್ಟ್ ಬಿಡುಗಡೆ ಮಾಡಿತ್ತು. ಇದು ನಯವಾದ ಮತ್ತು ಹೊಸ ಫ್ರಂಟ್ ಫ್ಯಾಸಿಯಾವನ್ನು ಹೊಂದಿತ್ತು. ಅಂತಿಮವಾಗಿ 2014 ರಲ್ಲಿ ಮೂರನೇ ಫೇಸ್‌ಲಿಫ್ಟ್ ಅನ್ನು ಆಧುನಿಕ ವಿನ್ಯಾಸ, ಹೆಚ್ಚು ಶಕ್ತಿಶಾಲಿ ಎಂಜಿನ್ ಆಯ್ಕೆಗಳೊಂದಿಗೆ ಬಿಡುಗಡೆಗೊಂಡಿತ್ತು.

ಹೊಸ ಮಾದರಿಯೊಂದಿಗೆ ಸ್ಕಾರ್ಪಿಯೋ ಕಾರು ಭಾರತೀಯ ಗ್ರಾಹಕರ ಆಯ್ಕೆಯಲ್ಲಿ ಅಗ್ರಸ್ಥಾನ ಕಾಯ್ದುಕೊಳ್ಳುತ್ತಿದ್ದು, ಕಾಲಕಾಲಕ್ಕೆ ಹೊಸ ಬದಲಾವಣೆಗಳೊಂದಿಗೆ ಉತ್ತಮ ಬೇಡಿಕೆ ಕಾಯ್ದುಕೊಂಡಿದೆ. ಇದೀಗ ಸ್ಕಾರ್ಪಿಯೊ ಮಾದರಿಯು ಹೊಸ ತಲೆಮಾರಿನ ವೈಶಿಷ್ಟ್ಯತೆಗಳೊಂದಿಗೆ ಮಾರುಕಟ್ಟೆ ಪ್ರವೇಶಿಸಿದ್ದು, ಹೊಸ ಮಾದರಿಯ ಹೊರತಾಗಿಯೂ ಸ್ಕಾರ್ಪಿಯೋ ಹಳೆಯ ಆವೃತ್ತಿಯು ಮಾರಾಟ ಮುಂದುವರಿಯಲಿದೆ.

ಹೊಸ ಮಹೀಂದ್ರಾ ಸ್ಕಾರ್ಪಿಯೋ-ಎನ್ ಫಸ್ಟ್ ಡ್ರೈವ್ ರಿವ್ಯೂ

ಮಹೀಂದ್ರಾ ಹೊಸ ತಲೆಮಾರಿನ ವೈಶಿಷ್ಟ್ಯತೆ ಬಿಡುಗಡೆಯಾಗಿರುವ ಮಾದರಿಯನ್ನು ಸ್ಕಾರ್ಪಿಯೋ-ಎನ್ ಹೆಸರಿನಲ್ಲಿ ಮತ್ತು ಹಳೆಯ ಮಾದರಿಯನ್ನು ಸ್ಕಾರ್ಪಿಯೋ ಕ್ಲಾಸಿಕ್ ಹೆಸರಿನಲ್ಲಿ ಮಾರಾಟ ಮಾಡಲು ನಿರ್ಧರಿಸಿದ್ದು, ಸದ್ಯಕ್ಕೆ ಬಿಡುಗಡೆಯಾಗಿರುವ ಸ್ಕಾರ್ಪಿಯೋ-ಎನ್ ಹೊಸ ಮಾದರಿಯ ಕುರಿತಾಗಿ ಇಲ್ಲಿ ಚರ್ಚಿಸಲಾಗಿದೆ.

ಹೊಸ ಮಹೀಂದ್ರಾ ಸ್ಕಾರ್ಪಿಯೋ-ಎನ್ ಫಸ್ಟ್ ಡ್ರೈವ್ ರಿವ್ಯೂ

ವಿನ್ಯಾಸ ಮತ್ತು ಶೈಲಿ

ಮಹೀಂದ್ರಾ ಸ್ಕಾರ್ಪಿಯೋ-ಎನ್ ಮಾದರಿಯು ಮೊದಲ ನೋಟದಲ್ಲಿಯೇ ಆಕರ್ಷಣೆ ಮಾಡುವಂತಹ ಸಾಮರ್ಥ್ಯವನ್ನು ಹೊಂದಿದೆ. ಹೊಸ ಮಾದರಿಗಾಗಿ ಕಾರು ವಿನ್ಯಾಸಕರು ಸ್ಕಾರ್ಪಿಯೋ-ಎನ್ ಅನ್ನು ವಿನ್ಯಾಸಗೊಳಿಸಲು ಹಲವಾರು ಸವಾಲಿನ ಜೊತೆಗೆ ಅಸಾಧಾರಣ ಬದಲಾವಣೆ ತರಲು ಯತ್ನಿಸಿದ್ದಾರೆ ಎಂದು ಹೇಳಬಹುದು.

ಇದರಲ್ಲಿ ಮುಖ್ಯ ಅಂಶವೊಂದನ್ನು ಹೇಳುವುದಾದರೆ ಸ್ಕಾರ್ಪಿಯೋ ಬ್ಯಾಡ್ಜ್ ಬದಲಾಗಿರುವುದು ಹೊಸ ಕಾರಿನ ವಿನ್ಯಾಸವನ್ನು ಈ ಹಿಂದಿನ ಮಾದರಿಯೊಂದಿಗೆ ತೆಗೆದುಕೊಂಡು ಹೋಗುವುದು ಒಂದು ಸವಾಗಿತ್ತು. ಈ ವಿಚಾರದಲ್ಲಿ ಸಾಕಷ್ಟು ಶ್ರಮವಹಿಸಿರುವ ವಿನ್ಯಾಸ ತಂಡವು ಹಳೆಯ ಮಾದರಿಯ ಭಾವನೆಯನ್ನು ಹೊಸ ಮಾದರಿಯಲ್ಲೂ ಉಳಿಸಿಕೊಂಡಿದ್ದಾರೆ.

ಹೊಸ ಮಹೀಂದ್ರಾ ಸ್ಕಾರ್ಪಿಯೋ-ಎನ್ ಫಸ್ಟ್ ಡ್ರೈವ್ ರಿವ್ಯೂ

ಸ್ಕಾರ್ಪಿಯೊ-ಎನ್ ತನ್ನ ವಿಭಾಗದಲ್ಲಿಯೇ ಅತಿದೊಡ್ಡ ಎಸ್‌ಯುವಿ ಆಗಿದ್ದು, ಹೊಸ ಮಾದರಿಯಲ್ಲಿನ ತಾಂತ್ರಿಕ ಅಂಶಗಳು, ಸೊಗಸಾದ ವಿನ್ಯಾಸದಿಂದಾಗಿ ಮಹೀಂದ್ರಾ ಕಂಪನಿಯು ಭಾರೀ ನೀರಿಕ್ಷೆಯಿಟ್ಟುಕೊಂಡಿದೆ.

ಹೊಸ ಕಾರಿನ ಮುಂಭಾಗದಲ್ಲಿ ಹೊಚ್ಚ ಹೊಸ ಎಲ್ಇಡಿ ಹೆಡ್‌ಲ್ಯಾಂಪ್ ಘಟಕಗಳು ಹಳೆಯ ಸ್ಕಾರ್ಪಿಯೊವನ್ನು ಸ್ವಲ್ಪಮಟ್ಟಿಗೆ ನೆನಪಿಸುತ್ತವೆ. ಇದು ಪ್ರೊಜೆಕ್ಟರ್ ಮತ್ತು ರಿಫ್ಲೆಕ್ಟರ್ ಸಿಸ್ಟಮ್ ಎರಡನ್ನೂ ಪಡೆಯುತ್ತದೆ ಮತ್ತು ಹೆಡ್‌ಲ್ಯಾಂಪ್‌ಗಳನ್ನು ಸ್ವಲ್ಪ ಹಿಂದಕ್ಕೆ ತಿರುಗಿಸಲಾಗುತ್ತದೆ. ಗ್ರಿಲ್ ದೊಡ್ಡದಾಗಿದ್ದು ಮತ್ತು ಸಮತಲ ಸ್ಲ್ಯಾಟ್‌ಗಳೊಂದಿಗೆ ಹೊಸ ನೋಟ ನೀಡುತ್ತವೆ.

ಹೊಸ ಮಹೀಂದ್ರಾ ಸ್ಕಾರ್ಪಿಯೋ-ಎನ್ ಫಸ್ಟ್ ಡ್ರೈವ್ ರಿವ್ಯೂ

ಇದರಲ್ಲಿ ಆರು ಲಂಬ ಕ್ರೋಮ್ ಪಟ್ಟಿಗಳು ಮತ್ತು ದೊಡ್ಡ ಸಮತಲ ಕ್ರೋಮ್ ಪಟ್ಟಿಗಳಿದ್ದು, ಮಹೀಂದ್ರಾದ ಹೊಸ ಲೋಗೋ ಸ್ಕಾರ್ಪಿಯೋ-ಎನ್‌ನಲ್ಲಿ ಆಕರ್ಷಣೆಯಾಗಿ ಕಾಣುತ್ತಿದೆ.

ಹಾಗೆಯೇ ಬಂಪರ್ ವಿನ್ಯಾಸವು ಈ ಹಿಂದಿನ ಮಾದರಿಗಿಂತಲೂ ತುಸು ದಪ್ಪವಾಗಿದ್ದು, ಫಾಗ್ ಲ್ಯಾಂಪ್‌ಗಳ ಬಳಿ ಸಿ-ಆಕಾರದ ಕ್ರೋಮ್ ಇನ್‌ಸರ್ಟ್‌ಗಳನ್ನು ಹೊಂದಿದೆ. ಕೆಳಭಾಗದಲ್ಲಿ ಸಿಲ್ವರ್ ಸ್ಕಫ್ ಪ್ಲೇಟ್ ಇದೆ. ಹಾಗೆಯೇ ಬಾನೆಟ್ ಕೂಡಾ ಈ ಹಿಂದಿನ ಮಾದರಿಗಿಂತಲೂ ಉದ್ದವಾಗಿದ್ದು, ಅದರ ಮೇಲೆ ಸ್ನಾಯು ವಿನ್ಯಾಸದ ಸಾಲುಗಳನ್ನು ನೀಡಲಾಗಿದೆ.

ಹೊಸ ಮಹೀಂದ್ರಾ ಸ್ಕಾರ್ಪಿಯೋ-ಎನ್ ಫಸ್ಟ್ ಡ್ರೈವ್ ರಿವ್ಯೂ

ಸ್ಕಾರ್ಪಿಯೋ-ಎನ್ ಅನ್ನು ಸೈಡ್ ವ್ಯೂನಲ್ಲಿ ನೋಡಿದಾಗ ಮಾತ್ರ ಇದರ ಹೊಸ ಖದರ್ ನಿಮಗೆ ಸ್ಪಷ್ಟವಾಗುತ್ತದೆ. ಹೊಸ ಕಾರಿನ ಸೈಡ್ ಪ್ರೊಫೈಲ್‌ನಲ್ಲಿ ಕಾರಿನ ಗಾತ್ರದ ಉತ್ತಮವಾಗಿದ್ದು, ಸ್ಪೋರ್ಟಿಯಾಗಿರುವ ಚಕ್ರಗಳ ಕಮಾನುಗಳು ಎದ್ದು ಕಾಣುತ್ತವೆ ಮತ್ತು ಎ-ಪಿಲ್ಲರ್‌ನಿಂದ ಸಿ-ಪಿಲ್ಲರ್‌ವರೆಗೆ ಕಿಟಕಿಯ ರೇಖೆಯ ಮೇಲೆ ಚಲಿಸುವ ಸಿಲ್ವರ್ ಟ್ರಿಮ್ ಅಲ್ಲಿ ಅದು ಹಿಂದಿನ ಕಿಟಕಿಯ ಮೇಲಿನ ರೇಖೆಯನ್ನು ಕೂಡಾ ಆವರಿಸುತ್ತದೆ.

ಹೊಸ ಮಹೀಂದ್ರಾ ಸ್ಕಾರ್ಪಿಯೋ-ಎನ್ ಫಸ್ಟ್ ಡ್ರೈವ್ ರಿವ್ಯೂ

ಹೀಗೆ ಕ್ರಿಯಾತ್ಮಕವಾಗಿರುವ ಮೇಲ್ಛಾವಣಿ ಹಳಿಗಳನ್ನು ಸಿಲ್ವರ್ ಆಕ್ಸೆಂಟ್ ಮೂಲಕ ಪೂರ್ಣಗೊಳಿಸಲಾಗಿದ್ದು, ಬಿ ಮತ್ತು ಸಿ ಪಿಲ್ಲರ್‌ಗಳು ಮಾತ್ರ ಸಂಪೂರ್ಣವಾಗಿ ಕಪ್ಪು ಆವೃತ್ತದಿಂದ ಕೂಡಿವೆ. ಇದರೊಂದಿಗೆ ಹೊಸ ಕಾರಿನ ಬಾಗಿಲಿನ ಹಿಡಿಕೆಗಳು ನೀವು ನಿರೀಕ್ಷಿಸಿದಷ್ಟು ಉತ್ತಮವಾಗಿದ್ದು, ಅವುಗಳು ಕ್ರೋಮ್ ಸ್ಟ್ರಿಪ್ ಅನ್ನು ಸಂಯೋಜಿಸುತ್ತವೆ.

ಹೊಸ ಮಹೀಂದ್ರಾ ಸ್ಕಾರ್ಪಿಯೋ-ಎನ್ ಫಸ್ಟ್ ಡ್ರೈವ್ ರಿವ್ಯೂ

ಇನ್ನು ಕೆಳಭಾಗದಲ್ಲಿ ಉತ್ತಮವಾದ ಮತ್ತು ದಪ್ಪವಾದ ಸಿಲ್ವರ್ ಕ್ರೋಮ್ ಅಂಶವನ್ನು ಹೊಂದಿರುವ ಸೂಪರ್ ಸ್ಟೈಲಿಶ್ ಕಪ್ಪು ಹೊದಿಕೆಯೊಂದಿಗೆ ಸಂಯೋಜಿಸಲಾಗಿದೆ. ಇದು ಸೈಡ್ ಪ್ರೊಫೈಲ್‌ನಲ್ಲಿನ ಅತ್ಯಂತ ಸೊಗಸಾದ ಅಂಶಗಳಲ್ಲಿ ಒಂದಾಗಿದ್ದು, ಡೈಮಂಡ್-ಕಟ್ 18-ಇಂಚಿನ ಚಕ್ರಗಳು ಕಾರಿನ ಗಾತ್ರಕ್ಕೆ ಉತ್ತಮವಾಗಿವೆ.

ಹೊಸ ಮಹೀಂದ್ರಾ ಸ್ಕಾರ್ಪಿಯೋ-ಎನ್ ಫಸ್ಟ್ ಡ್ರೈವ್ ರಿವ್ಯೂ

ಹೊಸ ಕಾರಿನಲ್ಲಿ ಹಳೆಯ ಸ್ಕಾರ್ಪಿಯೊದಲ್ಲಿರುವಂತೆ ಟೈಲ್‌ಗೇಟ್‌ನ ಎಡಭಾಗದಲ್ಲಿರುವ ದಪ್ಪದಾದ ಬಾಗಿಲಿನ ಹಿಡಿಕೆಯನ್ನು ಹೊಂದಿದ್ದು, ಹಳೆಯ ಮಾದರಿಯಲ್ಲಿರುವಂತೆ ಇದು ಟೈಲ್‌ಗೇಟ್ ಅನ್ನು ಪಕ್ಕಕ್ಕೆ ತೆರೆದುಕೊಳ್ಳುತ್ತದೆ. ಟೈಲ್‌ಗೇಟ್ ಮೇಲೆ ಮಹೀಂದ್ರಾ ಬ್ಯಾಡ್ಜಿಂಗ್, ಸ್ಕಾರ್ಪಿಯೋ-ಎನ್ ಬ್ಯಾಡ್ಜಿಂಗ್ ಮತ್ತು 4XPLOR ಬ್ಯಾಡ್ಜಿಂಗ್ ಕೂಡಾ ಹೊಚ್ಚ ಹೊಸದಾಗಿದ್ದು, ಹಿಂಬದಿಯ ಬಂಪರ್ ಕೂಡಾ ಉತ್ತಮ ವಿನ್ಯಾಸವನ್ನು ಹೊಂದಿದೆ.

ಹೊಸ ಮಹೀಂದ್ರಾ ಸ್ಕಾರ್ಪಿಯೋ-ಎನ್ ಫಸ್ಟ್ ಡ್ರೈವ್ ರಿವ್ಯೂ

ಇನ್ನು ಕ್ರೋಮ್ ಅಂಶಗಳು ಮತ್ತು ಸಿಲ್ವರ್ ಸ್ಕಫ್ ಪ್ಲೇಟ್ ಅನ್ನು ಹಿಂಭಾಗದ ಬಂಪರ್‌ನಲ್ಲಿ ಅಳವಡಿಸಲಾಗಿದ್ದು, ಒಟ್ಟಾರೆಯಾಗಿ ಹೊಸ ಮಹೀಂದ್ರಾ ಸ್ಕಾರ್ಪಿಯೋ-ಎನ್ ಒಂದು ಸುಂದರ ಎಸ್‌ಯುವಿ ಮಾದರಿಯಾಗಿ ಗುರುತಿಸಿಕೊಳ್ಳಲಿದ್ದು, ಇದು ಇದುವರೆಗಿನ ಮಹೀಂದ್ರಾ ನಿರ್ಮಾಣದ ಕಾರುಗಳಲ್ಲಿಯೇ ಅತ್ಯಂತ ಆಕರ್ಷಕವಾದ ಎಸ್‌ಯುವಿ ಎನ್ನಬಹುದು.

ಹೊಸ ಮಹೀಂದ್ರಾ ಸ್ಕಾರ್ಪಿಯೋ-ಎನ್ ಫಸ್ಟ್ ಡ್ರೈವ್ ರಿವ್ಯೂ

ಒಳಾಂಗಣ ವಿನ್ಯಾಸ ಮತ್ತು ತಂತ್ರಜ್ಞಾನ

ಮೇಲೆ ತಿಳಿಸಿದಂತೆ ಮೊದಲ ತಲೆಮಾರಿನ ಸ್ಕಾರ್ಪಿಯೋ ಮಹೀಂದ್ರಾಗೆ ಇಂಟಿರಿಯರ್‌ ಉತ್ತಮವಾಗಿದ್ದು, ಇದು ಎಸ್‌ಯುವಿ ಬೇಡಿಕೆಯನ್ನು ಹೆಚ್ಚಿಸುವ ಮೊದಲ ಅಂಶವಾಗಿದೆ. ಈ ಹಿಂದಿನ ಸ್ಕಾರ್ಪಿಯೋದಲ್ಲಿ ಅದ್ಭುತವಾದ ಒಳಭಾಗದ ಮೂಲಕ ಟ್ಯಾಕೋಮೀಟರ್‌ನೊಂದಿಗೆ ಕಾಕ್‌ಪಿಟ್, ಸಣ್ಣದಾದ ಎಲ್‌ಸಿಡಿ ಡಿಸ್ಪ್ಲೇ ಇತ್ಯಾದಿಗಳನ್ನು ಒಳಗೊಂಡಿತ್ತು. ಆದರೆ ಬದಲಾದ ಮಾರುಕಟ್ಟೆ ಸನ್ನಿವೇಶದಲ್ಲಿ ಹೊಸ ಕಾರು ಪ್ರತಿಸ್ಪರ್ಧಿ ಮಾದರಿಗೆ ಪೈಪೋಟಿ ನೀಡುವ ಹಲವಾರು ಹೊಸ ತಾಂತ್ರಿಕ ಅಂಶಗಳನ್ನು ಒಳಗೊಂಡಿದೆ.

ಹೊಸ ಮಹೀಂದ್ರಾ ಸ್ಕಾರ್ಪಿಯೋ-ಎನ್ ಫಸ್ಟ್ ಡ್ರೈವ್ ರಿವ್ಯೂ

ಹೊಸ ಮಾದರಿಯಲ್ಲಿ ಉತ್ತಮ ಹಿಡಿಕೆ ಹೊಂದಿರುವ ಡೋರ್ ಹ್ಯಾಂಡಲ್‌ಗಳನ್ನು ಟಗ್ ಮಾಡಿದಾಗ ಹೊಸ ಪ್ರೀಮಿಯಂ ಸೌಲಭ್ಯಗಳು ಕಾರಿನ ಕುರಿತಾದ ನಿಮ್ಮ ಭಾವನೆಗಳೇ ಬದಲಾಗುವಷ್ಟು ಹೊಸತನಗಳಿಂದ ಕೂಡಿದೆ.

ಸ್ಕಾರ್ಪಿಯೊ-ಎನ್ ಮಾದರಿಯಲ್ಲಿ ಮಹೀಂದ್ರಾ ಕಂಪನಿಯು ಕಾಫಿ ಬ್ಲ್ಯಾಕ್ ಬಣ್ಣದ ಲೆದರ್ ಒಳಾಂಗಣವನ್ನು ಹೊಂದಿದ್ದು, ಹೊಸ ಬಣ್ಣ ಸಂಯೋಜನೆಯು ನಿಜವಾಗಿಯೂ ಅದನ್ನು ಪ್ರತ್ಯೇಕಿಸುತ್ತದೆ. ಹೀಗಾಗಿ ಆಸನದ ಬದಿಗಳನ್ನು ಕಪ್ಪು ಬಣ್ಣದೊಂದಿಗೆ ಅಭಿವೃದ್ದಿಗೊಳಿಸಿದರೆ ಮುಂಭಾಗದ ಅಂಶವನ್ನು ಕಾಫಿ ಬ್ಲ್ಯಾಕ್ ವಿನ್ಯಾಸದೊಂದಿಗೆ ಅಭಿವೃದ್ದಿಗೊಳಿಸಿದೆ. ಅದಕ್ಕಾಗಿಯೇ ಈ ಥೀಮ್‌ನಲ್ಲಿ ಡೋರ್ ಪ್ಯಾಡ್‌ಗಳು, ಡ್ಯಾಶ್‌ಬೋರ್ಡ್, ಸೆಂಟರ್ ಕನ್ಸೋಲ್ ಇತ್ಯಾದಿಗಳನ್ನು ಒಳಗೊಂಡಂತೆ ಎಲ್ಲೆಡೆ ಕಂಡುಬರುತ್ತದೆ.

ಹೊಸ ಮಹೀಂದ್ರಾ ಸ್ಕಾರ್ಪಿಯೋ-ಎನ್ ಫಸ್ಟ್ ಡ್ರೈವ್ ರಿವ್ಯೂ

ಹೊಸ ಕಾರಿನಲ್ಲಿ ಎಕ್ಸ್‌ಯುವಿ700 ಮಾದರಿಂದ ಎರವಲು ಪಡೆದುಕೊಳ್ಳಲಾದ ಸ್ಟೀರಿಂಗ್ ಚಕ್ರವಿದ್ದು, ಆಡಿಯೊ ಮತ್ತು ಕ್ರೂಸ್ ನಿಯಂತ್ರಣಕ್ಕಾಗಿ ಸ್ಟೀರಿಂಗ್-ಮೌಂಟೆಡ್ ನಿಯಂತ್ರಣಗಳಿದ್ದು, ತುಂಬಾ ಸರಳ ಮತ್ತು ಬಳಸಲು ಸುಲಭವಾಗಿವೆ.

ಸ್ಟೀರಿಂಗ್ ಚಕ್ರದ ಹಿಂದೆ ಡಿಜಿಟಲ್-ಅನಲಾಗ್ ಡಿಸ್ಪ್ಲೇ ಇದ್ದು, ಇದು ನಿಜವಾಗಿಯೂ ಉತ್ತಮ ತಾಂತ್ರಿಕ ಅಂಶವಾಗಿದೆ. ಹಾಗೆಯ ಸ್ಪೀಡೋಮೀಟರ್ ಮತ್ತು ಟ್ಯಾಕೋಮೀಟರ್ ಅನಲಾಗ್ ಡಯಲ್‌ಗಳಾಗಿವೆ ಮತ್ತು ಅವುಗಳ ನಡುವೆ 7.0-ಇಂಚಿನ ಪೂರ್ಣ ಬಣ್ಣದ ಪರದೆಯು ಸಾಕಷ್ಟು ಮಾಹಿತಿಯನ್ನು ಪ್ರದರ್ಶಿಸುತ್ತದೆ. ಇದರಲ್ಲಿ ಟ್ರಿಪ್ ಮೀಟರ್‌ಗಳು, ಓಡೋಮೀಟರ್, ಸರಾಸರಿ ಇಂಧನ ದಕ್ಷತೆಯ ಸೂಚಕವನ್ನು ನೋಡಬಹುದಾಗಿದ್ದು, ಇದು ಚಾಲಕನ ಅರೆನಿದ್ರಾವಸ್ಥೆಯನ್ನು ಪತ್ತೆಹಚ್ಚುವ ಮೂಲಕ ಆಗಬಹುದಾದ ಅನಾಹುತಗಳನ್ನು ತಡೆಯುತ್ತದೆ.

ಹೊಸ ಮಹೀಂದ್ರಾ ಸ್ಕಾರ್ಪಿಯೋ-ಎನ್ ಫಸ್ಟ್ ಡ್ರೈವ್ ರಿವ್ಯೂ

ಡ್ಯಾಶ್‌ಬೋರ್ಡ್‌ನಲ್ಲಿ ಲಂಬವಾದ ಹವಾನಿಯಂತ್ರಣ ದ್ವಾರಗಳನ್ನು ಒಳಗೊಂಡಿದ್ದು, ಕಾಫಿ ಬ್ರೌನ್ ಲೆದರ್ ಸ್ಟ್ರಿಪ್‌ನಲ್ಲಿ ಇರಿಸಲಾಗಿದೆ. ಡ್ಯಾಶ್‌ಬೋರ್ಡ್‌ನ ಮಧ್ಯಭಾಗದಲ್ಲಿ ಇನ್ಫೋಟೈನ್‌ಮೆಂಟ್ ಯೂನಿಟ್ ಅನ್ನು ಸುತ್ತುವರೆದಿದ್ದು, ಎರಡು ಲಂಬವಾದ AC ವೆಂಟ್‌ಗಳಿವೆ. ಇದು 8 ಇಂಚಿನ ಟಚ್‌ಸ್ಕ್ರೀನ್ ಆಗಿದ್ದು, ಆ್ಯಪಲ್ ಕಾರ್‌ಪ್ಲೇ ಮತ್ತು ಅಂಡ್ರಾಯಿಡ್ ಆಟೋ ಹೊಂದಿದೆ.

ಹೊಸ ಮಹೀಂದ್ರಾ ಸ್ಕಾರ್ಪಿಯೋ-ಎನ್ ಫಸ್ಟ್ ಡ್ರೈವ್ ರಿವ್ಯೂ

ಹಾಗೆಯೇ ಹೊಸ ಕಾರಿನಲ್ಲಿ 12-ಸ್ಪೀಕರ್ ಸೋನಿ ಆಡಿಯೊ ಸಿಸ್ಟಮ್ ಜೋಡಿಸಲಾಗಿದ್ದು, ಇದು ಸರೌಂಡ್ ಸಿಸ್ಟಂ ಮೂಲಕ ಅತ್ಯುತ್ತಮವಾಗಿದೆ. ಹಾಗೆಯೇ 8 ಇಂಚಿನ ಡಿಸ್‌ಪ್ಲೇ ಈ ದೊಡ್ಡದಾದ ಎಸ್‌ಯುವಿಗೆ ಸ್ವಲ್ಪ ಚಿಕ್ಕದಾಗಿ ಕಂಡರೂ ಉತ್ತಮ ಫೀಚರ್ಸ್ ಹೊಂದಿದ್ದು, 10.25-ಇಂಚಿನ ಇನ್ಪೋಟೈನ್‌ಮೆಂಟ್ ಸಿಸ್ಟಂ ನೀಡಲಾಗಿದೆ.

ಹೊಸ ಮಹೀಂದ್ರಾ ಸ್ಕಾರ್ಪಿಯೋ-ಎನ್ ಫಸ್ಟ್ ಡ್ರೈವ್ ರಿವ್ಯೂ

ಡಿಸ್‌ಪ್ಲೇ ಕೆಳಗೆ ಕೆಲವು ಬಟನ್‌ಗಳು ಮತ್ತು ಟಚ್‌ಸ್ಕ್ರೀನ್‌ಗೆ ಪೂರಕವಾಗಿ ಒಂದೆರಡು ನಾಬ್‌ಗಳಿದ್ದು, ಈ ಬಟನ್‌ಗಳ ಕೆಳಗೆ ಹವಾನಿಯಂತ್ರಣಕ್ಕಾಗಿ ನಿಯಂತ್ರಕಗಳನ್ನು ನೀಡಲಾಗಿದೆ. ತದನಂತರ ವಾಹನದ ವಿವಿಧ ಕಾರ್ಯಗಳಿಗಾಗಿ ಇನ್ನೂ ಕೆಲವು ಸ್ವಿಚ್‌ಗಳನ್ನು ನೀಡಲಾಗಿದ್ದು, ಈ ಎಲ್ಲಾ ಬಟನ್‌ಗಳನ್ನು ಪಿಯಾನೋ ಕಪ್ಪು ಫಲಕದಲ್ಲಿ ಹೊಂದಿಸಲಾಗಿದೆ.

ಮಹೀಂದ್ರಾ ಸ್ಕಾರ್ಪಿಯೊ-ಎನ್ ನಲ್ಲಿ ವೈರ್‌ಲೆಸ್ ಸ್ಮಾರ್ಟ್‌ಫೋನ್ ಚಾರ್ಜಿಂಗ್ ವೈಶಿಷ್ಟ್ಯಗಳನ್ನು ಹೊಂದಿದ್ದು, ವೈರ್‌ಲೆಸ್ ಚಾರ್ಜಿಂಗ್ ಸ್ಲಾಟ್‌ನ ಮೇಲ್ಭಾಗದಲ್ಲಿ ನಿಮ್ಮ ಸ್ಮಾರ್ಟ್‌ಫೋನ್ ಅನ್ನು ಚಾರ್ಜ್ ಮಾಡಲು ಅಥವಾ ಇನ್ಫೋಟೈನ್‌ಮೆಂಟ್‌ಗೆ ಸಂಪರ್ಕಿಸಲು ಒಂದೆರಡು ಯುಎಸ್‌ಬಿ ಪೋರ್ಟ್‌ಗಳಿವೆ.

ಹೊಸ ಮಹೀಂದ್ರಾ ಸ್ಕಾರ್ಪಿಯೋ-ಎನ್ ಫಸ್ಟ್ ಡ್ರೈವ್ ರಿವ್ಯೂ

ಸೆಂಟರ್ ಕನ್ಸೋಲ್‌ನಲ್ಲಿ ಬ್ರಷ್ ಮಾಡಿದ ಅಲ್ಯೂಮಿನಿಯಂ ಸರೌಂಡ್‌ನೊಂದಿಗೆ ಗೇರ್ ಲಿವರ್ ಮತ್ತು ಅದರ ಹಿಂದೆ 4XPLOR ನಿಯಂತ್ರಣ ಫಲಕವಿದೆ. ಈಗ ಇದು ಹೆಚ್ಚು ಅಲಂಕಾರಿಕ ವೈಶಿಷ್ಟ್ಯವಾಗಿದ್ದು, ನಾವು ಕೆಲವು ದುಬಾರಿ ಮತ್ತು ಪ್ರೀಮಿಯಂ ಬ್ರಿಟಿಷ್ ಎಸ್‌ಯುವಿಗಳಲ್ಲಿ ಈ ವೈಶಿಷ್ಟ್ಯ ನೋಡುತ್ತೇವೆ. ಇದು ವಾಸ್ತವವಾಗಿ 4ಡಬ್ಲ್ಯುಡಿ ಸಿಸ್ಟಂ ನಿಯಂತ್ರಣದ ಫಲಕವಾಗಿದೆ.

ಹೊಸ ಮಹೀಂದ್ರಾ ಸ್ಕಾರ್ಪಿಯೋ-ಎನ್ ಫಸ್ಟ್ ಡ್ರೈವ್ ರಿವ್ಯೂ

ಹೊಸ ಕಾರಿನ ಡ್ರೈವ್‌ಟ್ರೇನ್ ಅನ್ನು 4WD ಗಾಗಿ ಕಡಿಮೆ ಅಥವಾ 4WD ಹೈ ಗೆ ಬದಲಾಯಿಸಬಹುದಾಗಿದ್ದು, ನಾಬ್ ಅನ್ನು ತಿರುಗಿಸುವ ಮೂಲಕ ಚಾಲಕನು ರೋಡ್, ಮಡ್, ಸ್ನೋ, ಸ್ಯಾಂಡ್ ಮೋಡ್‌ಗಳಿಗೆ ಬದಲಾಯಿಸಿಕೊಳ್ಳಬಹುದು. ಇದು ಹಳೆಯ ಸ್ಕಾರ್ಪಿಯೋದಲ್ಲಿ ಕಂಡುಬರುತ್ತಿದ್ದ ಪ್ಲೇನ್-ಜೇನ್ 2H-4H-4L ನಾಬ್‌ಗಿಂತ ಒಂದು ದೊಡ್ಡ ಹೆಜ್ಜೆಯಾಗಿದೆ ಎನ್ನಬಹುದು.

ಹೊಸ ಮಹೀಂದ್ರಾ ಸ್ಕಾರ್ಪಿಯೋ-ಎನ್ ಫಸ್ಟ್ ಡ್ರೈವ್ ರಿವ್ಯೂ

ಇದರೊಂದಿಗೆ ಸೆಂಟರ್ ಕನ್ಸೋಲ್ ದೊಡ್ಡ ಆರ್ಮ್‌ರೆಸ್ಟ್ ಅನ್ನು ಸಹ ಹೊಂದಿದ್ದು, ಅದು ಉತ್ತಮವಾಗಿ ಕಾಣುವುದಲ್ಲದೆ ತುಂಬಾ ಆರಾಮದಾಯಕವಾಗಿಸುತ್ತದೆ. ಅದರ ಕೆಳಗಿರುವ ಆಳವಾದ ಕ್ಯೂಬಿಹೋಲ್ ಅನ್ನು ಪ್ರವೇಶಿಸಲು ಆರ್ಮ್ ರೆಸ್ಟ್ ಅನ್ನು ಮೇಲಕ್ಕೆತ್ತಬಹುದಾಗಿದೆ.

ಹೊಸ ಮಹೀಂದ್ರಾ ಸ್ಕಾರ್ಪಿಯೋ-ಎನ್ ಫಸ್ಟ್ ಡ್ರೈವ್ ರಿವ್ಯೂ

ಪ್ರಾಯೋಗಿಕ ಅಂಶಗಳು

ಹೊಸ ಕಾರಿನಲ್ಲಿ ಆರಾಮದಾಯಕ ಮತ್ತು ಪ್ರಾಯೋಗಿಕ ಅಂಶಗಳು ಖಂಡಿತವಾಗಿಯೂ ಸ್ಕಾರ್ಪಿಯೋ-ಎನ್ ಮಾದರಿಯ ಭದ್ರಕೋಟೆಗಳಾಗಿವೆ. ಇದು ಯಾವಾಗಲೂ ಅತ್ಯಂತ ಆರಾಮದಾಯಕ ಎಸ್‌ಯುವಿಗಳಲ್ಲಿ ಒಂದಾಗಿದೆ. ಮೃದುವಾದ ಸಸ್ಷೆಷನ್, ಐಷಾರಾಮಿ ಅನುಭವ ನೀಡುವ ಆಸನಗಳು ಮತ್ತು ವಿಶಾಲವಾದ ಕ್ಯಾಬಿನ್ ಗ್ರಾಹಕರನ್ನು ಸೆಳೆಯಲಿದೆ.

ಹೊಸ ಕಾರಿನ ಆಸನಗಳು ಅತ್ಯುತ್ತಮವಾಗಿದ್ದು, ಹೊಸ ಆಸನಗಳು ಪ್ರಯಾಣಿಕರಿಗೆ ಆಯಾಸವಾಗದಂತ ಸೊಂಟದ ಬೆಂಬಲ, ತೊಡೆಯ ಬೆಂಬಲ ಮತ್ತು ಬೆನ್ನಿನ ಬೆಂಬಲಕ್ಕಾಗಿ ಉತ್ತಮವಾಗಿ ವಿನ್ಯಾಸ ಮಾಡಲಾಗಿದೆ. ಹಿಂಬದಿಯ ಆಸನದ ಸೌಕರ್ಯವೂ ಕೂಡಾ ಉತ್ತಮವಾಗಿದ್ದು, ಈ ವಿಭಾಗದಲ್ಲಿನ ಇತರೆ ಎಸ್‌ಯುವಿಗಳಿಗೆ ಹೋಲಿಸಿದರೆ ಇದು ಖಂಡಿತವಾಗಿಯೂ ಹೆಚ್ಚು ಸ್ಥಳಾವಕಾಶವನ್ನು ಹೊಂದಿದೆ.

ಹೊಸ ಮಹೀಂದ್ರಾ ಸ್ಕಾರ್ಪಿಯೋ-ಎನ್ ಫಸ್ಟ್ ಡ್ರೈವ್ ರಿವ್ಯೂ

ಸ್ಕಾರ್ಪಿಯೋ ಹೊಸ ಮಾದರಿಯು ನಿಜವಾಗಿಯೂ ಪ್ರಾಯೋಗಿಕವಾಗಿರುವ ಹಲವು ಅಂಶಗಳನ್ನು ಒಳಗೊಂಡಿದೆ. ಇದರಲ್ಲಿ ಎ-ಪಿಲ್ಲರ್‌ನಲ್ಲಿ ಮತ್ತು ಸೆಂಟರ್ ಕನ್ಸೋಲ್‌ನಲ್ಲಿ ಗ್ರಾಬ್ ಹ್ಯಾಂಡಲ್‌ಗಳನ್ನು ಒಳಗೊಂಡಿದ್ದು, ಇವುಗಳು ಸ್ಕಾರ್ಪಿಯೋ-ಎನ್ ಒಳಗೆ ಮತ್ತು ಹೊರಗೆ ಹೋಗುವಾಗ ಸಹಾಯಕವಾಗಬಲ್ಲ ಅಂಶಗಳಾಗಿವೆ ಮತ್ತು ರಸ್ತೆಯಿಂದ ಹೊರಗಿರುವಾಗ ಸಾಕಷ್ಟು ಸಹಕಾರಿಯಾಗಿದೆ.

ಹೊಸ ಮಹೀಂದ್ರಾ ಸ್ಕಾರ್ಪಿಯೋ-ಎನ್ ಫಸ್ಟ್ ಡ್ರೈವ್ ರಿವ್ಯೂ

ಮ್ಯಾನುವಲ್ ಹ್ಯಾಂಡ್‌ಬ್ರೇಕ್ ಬಳಕೆದಾರರಿಗೆ ಸ್ಕಾರ್ಪಿಯೊದ ಒರಟಾದ ಸ್ವಭಾವವನ್ನು ನೆನಪಿಸುವ ಮತ್ತೊಂದು ಅಂಶವಾಗಿದೆ. ಪ್ರಾಯೋಗಿಕತೆಯ ವಿಷಯದಲ್ಲಿ ಸ್ಕಾರ್ಪಿಯೋ-ಎನ್‌ನಲ್ಲಿ ಹಲವಾರು ಶೇಖರಣಾ ಸ್ಥಳಗಳಿದ್ದು, ಇದು ಆಳವಾದ ಗ್ಲೋವ್‌ಬಾಕ್ಸ್, ಸೆಂಟರ್ ಕನ್ಸೋಲ್‌ನಲ್ಲಿ ಕ್ಯೂಬಿಹೋಲ್, ಡೋರ್ ಪ್ಯಾನೆಲ್‌ಗಳಲ್ಲಿ ಆಳವಾದ ಪಾಕೆಟ್‌ಗಳನ್ನು ಸೇರಿದಂತೆ ಇತ್ಯಾದಿಗಳನ್ನು ಅಂಶಗಳನ್ನು ಒಳಗೊಂಡಿದೆ.

ಮಹೀಂದ್ರಾ ನಿಖರವಾದ ಬೂಟ್ ಸ್ಪೇಸ್ ಅಂಕಿಅಂಶಗಳನ್ನು ಬಹಿರಂಗಪಡಿಸದಿದ್ದರೂ, ಎಲ್ಲಾ ಮೂರು ಸಾಲುಗಳಿದ್ದರೂ ಸಹ ಇದು ಅತ್ಯಂತ ವಿಶಾಲವಾದ ಬೂಟ್‌ಗಳಲ್ಲಿ ಒಂದಾಗಿದೆ ಎಂದು ನಾವು ಖಚಿತಪಡಿಸಬಹುದು. ಮೂರನೇ ಸಾಲನ್ನು ಕೆಳಗೆ ಮಡಿಕೆ ಮಾಡಿದಾದ ಜಾಗವು ದೊಡ್ಡದಾಗಲಿದ್ದು, ಇಂಧನ ಟ್ಯಾಂಕ್ ಸಾಮರ್ಥ್ಯವು 57-ಲೀಟರ್ ಆಗಿದೆ.

ಹೊಸ ಮಹೀಂದ್ರಾ ಸ್ಕಾರ್ಪಿಯೋ-ಎನ್ ಫಸ್ಟ್ ಡ್ರೈವ್ ರಿವ್ಯೂ

ಎಂಜಿನ್ ಕಾರ್ಯಕ್ಷಮತೆ ಮತ್ತು ಚಾಲನಾ ಅನಿಸಿಕೆಗಳು

ಈ ಮೊದಲು ಮಹೀಂದ್ರಾ ಸ್ಕಾರ್ಪಿಯೊ ತನ್ನ 2.6-ಲೀಟರ್ CRDe ಡೀಸೆಲ್ ಟರ್ಬೊ-ಡೀಸೆಲ್ ಎಂಜಿನ್‌ನಿಂದ ಮೊದಲ ಬಾರಿಗೆ ಬಿಡುಗಡೆಯಾದಾಗ ಅದರ ವಿಭಾಗದಲ್ಲಿ ಅತ್ಯಂತ ಶಕ್ತಿಶಾಲಿ ಎಸ್‌ಯುವಿ ಆಗಿತ್ತು. ತದನಂತರದ ವರ್ಷಗಳಲ್ಲಿ mHawk ಎಂಜಿನ್ ಆಗಮನದೊಂದಿಗೆ ಸ್ಕಾರ್ಪಿಯೋ ಇನ್ನಷ್ಟು ಶಕ್ತಿಶಾಲಿಯಾಯಿತು. ಮಹೀಂದ್ರಾ ಇದೀಗ ಸ್ಕಾರ್ಪಿಯೊ-ಎನ್ ವಿಭಾಗದಲ್ಲಿ ಕೆಲವು ಅತ್ಯಂತ ಶಕ್ತಿಶಾಲಿ ಎಂಜಿನ್‌ಗಳನ್ನು ಸೇರ್ಪಡೆಗೊಳಿಸಿದೆ.

ಹೊಸ ಮಹೀಂದ್ರಾ ಸ್ಕಾರ್ಪಿಯೋ-ಎನ್ ಫಸ್ಟ್ ಡ್ರೈವ್ ರಿವ್ಯೂ

ಡ್ರೈವಿಂಗ್ ಕುರಿತಾಗಿ ಹೇಳುವ ಮೊದಲ ಕಾರಿನ ಎಂಜಿನ್ ಮಾಹಿತಿ ಪಡೆದುಕೊಳ್ಳೋಣ. ಇದರಲ್ಲಿ 2.2-ಲೀಟರ್ mHark ಡೀಸೆಲ್ ಎಂಜಿನ್ ಇದ್ದು, ಇದು ಎರಡು ಮಾದರಿಯಲ್ಲಿ ಟ್ಯೂನ್‌ ಮಾಡಲಾಗಿದೆ. ಇದರಲ್ಲಿ ಮೊದಲ ಬಾರಿಗೆ 2.0-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್ ಅನ್ನು ಸಹ ನೀಡಲಾಗಿದೆ.

ಈ ಎಲ್ಲಾ ಎಂಜಿನ್‌ಗಳು ಸದ್ಯ ಮಾರುಕಟ್ಟೆಯಲ್ಲಿರುವ ಎಕ್ಸ್‌ಯುವಿ700 ನಲ್ಲಿಯೂ ನೋಡಬಹುದಾಗಿದ್ದು, 2.0-ಲೀಟರ್ mStallion ಪೆಟ್ರೋಲ್ ಎಂಜಿನ್ ಮಾದರಿಯು 5,000 ಆರ್‌ಪಿಎಂ ನಲ್ಲಿ 200 ಬಿಎಚ್‌ಪಿ ಮತ್ತು 1,750 ಮತ್ತು 3,000 ಆರ್‌ಪಿಎಂ ನಡುವೆ 370 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ.

ಹೊಸ ಮಹೀಂದ್ರಾ ಸ್ಕಾರ್ಪಿಯೋ-ಎನ್ ಫಸ್ಟ್ ಡ್ರೈವ್ ರಿವ್ಯೂ

2.2-ಲೀಟರ್ ಡಿಸೇಲ್ ಮಾದರಿಯು ಆಯಿಲ್-ಬರ್ನರ್ ನೊಂದಿಗೆ 3,750 ಆರ್‌ಪಿಎಂ ನಲ್ಲಿ 130 ಬಿಎಚ್‌ಪಿ ಮತ್ತು 1,500 ಮತ್ತು 3,000 ಆರ್‌ಪಿಎಂ ನಡುವೆ 300 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ ಮತ್ತು ಇದು ಮ್ಯಾನುವಲ್ ಗೇರ್‌ಬಾಕ್ಸ್ ಮತ್ತು ರಿಯರ್ ಡ್ರೈವ್‌ನೊಂದಿಗೆ ಮಾತ್ರ ಲಭ್ಯವಿದೆ. ಇದು ನಾವು ಓಡಿಸದ ಮತ್ತೊಂದು ಮಾದರಿಯಾಗಿದ್ದು, 4WD ಮತ್ತು RWD ಮಾದರಿಗಳಲ್ಲಿ ಟಾಪ್-ಸ್ಪೆಕ್ ಡೀಸೆಲ್ ಎಂಜಿನ್ ಆಗಿದೆ.

ಹೊಸ ಮಹೀಂದ್ರಾ ಸ್ಕಾರ್ಪಿಯೋ-ಎನ್ ಫಸ್ಟ್ ಡ್ರೈವ್ ರಿವ್ಯೂ

ಉನ್ನತ ಮಾದರಿಯಾಗಿರುವ 2.2-ಲೀಟರ್ ಡೀಸೆಲ್ ಎಂಜಿನ್ 3,500 ಆರ್‌ಪಿಎಂ ನಲ್ಲಿ 172.4 ಬಿಎಚ್‌ಪಿ ಉತ್ಪಾದಿಸಲಿದ್ದು,ಇದು ಆಟೋಮ್ಯಾಟಿಕ್ ರೂಪಾಂತರಗಳ ನಡುವಿನ ಟಾರ್ಕ್ ಔಟ್ಪುಟ್ ಭಿನ್ನವಾಗಿರುತ್ತದೆ. ಮ್ಯಾನುವಲ್ ರೂಪಾಂತರವು 1,500 ಮತ್ತು 3,000 ಆರ್‌ಪಿ ನಡುವೆ 370 ಎನ್ಎಂ ಉತ್ಪಾದಿಸಲಿದ್ದು, ಆಟೋಮ್ಯಾಟಿಕ್ ರೂಪಾಂತರವು 1,750 ಮತ್ತು 2,750 ಆರ್‌ಪಿಎಂ ನಡುವೆ 400 ಎನ್ಎಂನಲ್ಲಿ ಹೆಚ್ಚು ಶಕ್ತಿಯನ್ನು ಹೊರಹಾಕುತ್ತದೆ.

ಹೊಸ ಮಹೀಂದ್ರಾ ಸ್ಕಾರ್ಪಿಯೋ-ಎನ್ ಫಸ್ಟ್ ಡ್ರೈವ್ ರಿವ್ಯೂ

ವಿಮರ್ಶೆ ಸಮಯದಲ್ಲಿ ನಾವು ಸ್ವಯಂಚಾಲಿತ ರೂಪಾಂತರಗಳನ್ನು ಮಾತ್ರ ಓಡಿಸಿದ್ದು, ರಿಯಲ್ ವ್ಹೀಲ್ ಡ್ರೈವ್‌ನಿಂದ ಪ್ರಾರಂಭಿಸಿದಾಗ ಇದು ಸಾಕಷ್ಟು ಅನುಭವವಾಗುತ್ತದೆ. 2.2-ಲೀಟರ್ mHawk ಎಂಜಿನ್ ಯಾವಾಗಲೂ ಉತ್ತಮ ಚಾಲನಾ ಅನುಭವ ಹೊಂದಿದ್ದು, ವೇಗವರ್ಧನೆಯು ಚುರುಕಾಗಿರುತ್ತದೆ ಮತ್ತು ಡೀಸೆಲ್ ಎಂಜಿನ್‌ಗೆ ಥ್ರೊಟಲ್ ಪ್ರತಿಕ್ರಿಯೆಯು ಉತ್ತಮವಾಗಿದೆ.

ಇದು ಪವರ್ ಬ್ಯಾಂಡ್‌ನಲ್ಲಿರುವಾಗ 1,750 ಆರ್‌ಪಿನಿಂದ ಪ್ರಾರಂಭವಾಗುವ ಮತ್ತು 3,500 ಆರ್‌ಪಿಎಂವರೆಗೆ ಚಲಿಸುವ ಟಾರ್ಕ್ ಮತ್ತು ಶಕ್ತಿಯ ಬೃಹತ್ ಅಲೆಯ ಮೇಲೆ ಸರಳವಾಗಿ ಚಲಿಸುತ್ತದೆ. ಇದು 3,500 ಆರ್‌ಪಿಎಂ ನಂತರ ತುಸು ನಿಧಾನವಾದರೂ 1,500 ಆರ್‌ಪಿಎಂ ಅಡಿಯಲ್ಲಿ ಕೆಲವು ಟರ್ಬೊ ಲ್ಯಾಗ್ ಇರುತ್ತದೆ. ಈ ಟರ್ಬೊ ಲ್ಯಾಗ್ ಅನ್ನು 6-ಸ್ಪೀಡ್ ಸ್ವಯಂಚಾಲಿತ ಗೇರ್‌ಬಾಕ್ಸ್‌ನಿಂದ ಮಾತ್ರ ಹೆಚ್ಚಿಸಬಹುದಾಗಿದೆ.

ಹೊಸ ವೈಶಿಷ್ಟ್ಯತೆ ಹೊಂದಿರುವ ಮಹೀಂದ್ರಾ ಸ್ಕಾರ್ಪಿಯೋ-ಎನ್ ಫಸ್ಟ್ ಡ್ರೈವ್ ರಿವ್ಯೂ

ಇದರೊಂದಿಗೆ 6-ವೇಗದ ಮ್ಯಾನುವಲ್ ಮಾದರಿಯು ಖಂಡಿತವಾಗಿಯೂ ಉತ್ತಮ ಗುಣಲಕ್ಷಣಗಳೊಂದಿಗೆ ಚಾಲನೆಗೆ ಅನುಕೂಲಕರವಾಗಿದ್ದು, ತದನಂತರ 4 ವ್ಹೀಲ್ ಡ್ರೈವ್‌ಯೊಂದಿಗೆ ಸ್ಕಾರ್ಪಿಯೋ-ಎನ್ ಅನ್ನು ಓಡಿಸಲಾಯ್ತು.

ಇದು ಕೂಡಾ ಪ್ರಭಾವಶಾಲಿಯಾದ ಮಾದರಿಯಾಗಿದ್ದು, ನಾವು ಈ ಮಾದರಿಯನ್ನು ಆನ್-ರೋಡ್‌ನಲ್ಲಿ ಚಾಲನೆ ಮಾಡಿದೆವು. ಹೊಸ ಸಸ್ಷೆಂಷನ್ ಸೆಟಪ್‌ನ ಮೃದುವಾಗಿದ್ದು, ಮುಂಭಾಗದಲ್ಲಿ ಕಾಯಿಲ್-ಓವರ್ ಶಾಕ್‌ಗಳೊಂದಿಗೆ ಡಬಲ್ ವಿಶ್‌ಬೋನ್‌ಗಳಿವೆ.

ಹೊಸ ವೈಶಿಷ್ಟ್ಯತೆ ಹೊಂದಿರುವ ಮಹೀಂದ್ರಾ ಸ್ಕಾರ್ಪಿಯೋ-ಎನ್ ಫಸ್ಟ್ ಡ್ರೈವ್ ರಿವ್ಯೂ

ಹೊಸ ಕಾರಿನ ಸ್ಟೀರಿಂಗ್ ವೀಲ್ಹ್ ಹಗುರವಾದ ಬದಿಯಲ್ಲಿರುವಂತೆ ಟ್ಯೂನ್ ಮಾಡಲಾಗಿದ್ದು, ರಸ್ತೆಯಲ್ಲಿ ಇನ್ನು ಸ್ವಲ್ಪ ಹೆಚ್ಚು ತೂಕವನ್ನು ನೀರಿಕ್ಷಿಸಲಾಗುತ್ತದೆ. ರಸ್ತೆಯ ಹೊರಗೆ ಉತ್ತಮವಾಗಿ ಕಾರ್ಯನಿರ್ವಹಿಸಲು ಇದನ್ನು ಟ್ಯೂನ್ ಮಾಡಲಾಗಿದ್ದು, ಅದು ಖಂಡಿತವಾಗಿಯೂ ಆಫ್ ರೋಡ್ ಪ್ರಿಯರಿಗೆ ಇಷ್ಟವಾಗಲಿದೆ.

ಇನ್ನು ಹೊಸ ಎಸ್‌ಯುವಿ ಸಾಮರ್ಥ್ಯಗಳನ್ನು ಪ್ರದರ್ಶಿಸುವ ವಿಶೇಷವಾಗಿ ಕ್ಯುರೇಟೆಡ್ ಟ್ರ್ಯಾಕ್‌ನಲ್ಲಿ ನಾವು ಸ್ಕಾರ್ಪಿಯೋ-ಎನ್ ಅನ್ನು ರಸ್ತೆಯಿಂದ ಹೊರಗಿಡಲಾಗಿತ್ತು. ಅಂತಹ ಭೂಪ್ರದೇಶದಲ್ಲಿ ಲೈಟ್ ಸ್ಟೀರಿಂಗ್ ಖಂಡಿತವಾಗಿಯೂ ಒಂದು ವರವಾಗಿದ್ದು, ಪ್ರಭಾವಶಾಲಿ ಬಿಟ್ ಖಂಡಿತವಾಗಿಯೂ 4WD ಸಿಸ್ಟಂ ಮೂಲಕ ಗಮನಸೆಳೆಯುತ್ತದೆ.

ಹೊಸ ವೈಶಿಷ್ಟ್ಯತೆ ಹೊಂದಿರುವ ಮಹೀಂದ್ರಾ ಸ್ಕಾರ್ಪಿಯೋ-ಎನ್ ಫಸ್ಟ್ ಡ್ರೈವ್ ರಿವ್ಯೂ

ಇದಲ್ಲದೆ ಮಹೀಂದ್ರಾ ಸ್ಕಾರ್ಪಿಯೋ-ಎನ್ ಅನ್ನು 4XPLOR ನೊಂದಿಗೆ ಸಜ್ಜುಗೊಳಿಸಿರುವುದು ಉತ್ತಮ ಥ್ರೊಟಲ್ ಪ್ರತಿಕ್ರಿಯೆಯನ್ನು ಹೆಚ್ಚಿಸಿದ್ದು, ಎಂಜಿನ್ ಎಲ್ಲಾ ನಾಲ್ಕು ಚಕ್ರಗಳಿಗೆ ಶಕ್ತಿಯನ್ನು ಕಳುಹಿಸುವ ವಿಧಾನವನ್ನು ಬದಲಾಯಿಸುತ್ತದೆ.

4XPLOR ಸಿಸ್ಟಂ ಮೂಲಕ ವಿವಿಧ ಭೂಪ್ರದೇಶಗಳಲ್ಲಿ ಸುಲಭವಾಗಿ ನುಗ್ಗಬಹುದಾಗಿದ್ದು, ಚಾಲಕನು ರೋಡ್, ಸ್ನೋ, ಸ್ಯಾಂಡ್ ಮತ್ತು ಮಡ್ ನಡುವೆ ಆಯ್ಕೆ ಮಾಡಬಹುದು ಮತ್ತು ಸ್ಕಾರ್ಪಿಯೋ-ಎನ್ ಭೂಪ್ರದೇಶದ ಮೂಲಕ ಹೋಗಲು ಅಗತ್ಯವಿರುವ ಶಕ್ತಿಯನ್ನು ನಿಖರವಾಗಿ ನೀಡುತ್ತದೆ.

ಈ ಮೂಲಕ ಹೊಸ ಕಾರು ಅತ್ಯಂತ ಪ್ರಭಾವಶಾಲಿ ಎಸ್‌ಯುವಿ ಆಗಿದ್ದು, ಮಹೀಂದ್ರಾ ಇದೀಗ ಮತ್ತೊಂದು ಇಂಜಿನಿಯರಿಂಗ್ ಮಾಸ್ಟರ್‌ಪೀಸ್ ಅನ್ನು ವಿತರಿಸಿದೆ ಎನ್ನಬಹುದು.

ಹೊಸ ವೈಶಿಷ್ಟ್ಯತೆ ಹೊಂದಿರುವ ಮಹೀಂದ್ರಾ ಸ್ಕಾರ್ಪಿಯೋ-ಎನ್ ಫಸ್ಟ್ ಡ್ರೈವ್ ರಿವ್ಯೂ

ಬೆಲೆ ಮತ್ತು ವೆರಿಯೆಂಟ್

ಹೊಸ ಕಾರನ್ನು ಗ್ರಾಹಕರು 6 ಸೀಟರ್ ಮತ್ತು 7 ಸೀಟರ್ ಸೌಲಭ್ಯದೊಂದಿಗೆ ಖರೀದಿ ಮಾಡಬಹುದಾಗಿದ್ದು, ಹೊಸ ಕಾರು ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ. 11.99 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 19.49 ಲಕ್ಷ ಬೆಲೆ ಹೊಂದಿದೆ.

ವಿವಿಧ ಎಂಜಿನ್ ಆಯ್ಕೆಗಳಿಗೆ ಅನುಗುಣವಾಗಿ ಜೆಡ್2, ಜೆಡ್4, ಜೆಡ್6, ಜೆಡ್8 ಮತ್ತು ಜೆಡ್ಎಲ್ ವೆರಿಯೆಂಟ್‌ಗಳನ್ನು ಹೊಂದಿದ್ದು,4,662 ಎಂಎಂ ಉದ್ದಳತೆ ಮತ್ತು 2,750 ಎಂಎಂ ವಿಸ್ತರಿತ ವೀಲ್ಹ್ ಬೆಸ್ ಮೂಲಕ ಅರಾಮದಾಯಕವಾದ ಆಸನ ಸೌಲಭ್ಯ ಹೊಂದಿದೆ.

ಹೊಸ ವೈಶಿಷ್ಟ್ಯತೆ ಹೊಂದಿರುವ ಮಹೀಂದ್ರಾ ಸ್ಕಾರ್ಪಿಯೋ-ಎನ್ ಫಸ್ಟ್ ಡ್ರೈವ್ ರಿವ್ಯೂ

ಸುರಕ್ಷತೆ ಮತ್ತು ಪ್ರಮುಖ ಲಕ್ಷಣಗಳು

ಒಂದು ದಶಕದ ಹಿಂದೆ ಮಹೀಂದ್ರಾ ಮತ್ತು ಅದರ ಇತರೆ ಎಸ್‌ಯುವಿಗಳು ಸುರಕ್ಷತೆಯ ವಿಷಯದಲ್ಲಿ ಸಾಕಷ್ಟು ಹಿಂದುಳಿದ ಮಾದರಿಗಳಿಗಾಗಿದ್ದವು. ಆದರೆ ಇದೀಗ ಪರಿಸ್ಥಿತಿ ಬದಲಾಗಿದ್ದು, ಇತ್ತೀಚಿನ ದಿನಗಳಲ್ಲಿ ಮಹೀಂದ್ರಾ ಕೆಲವು ಅದ್ಭುತವಾದ ಸುರಕ್ಷಿತ ಕಾರುಗಳನ್ನು ತಯಾರಿಸಿದೆ. ಎಕ್ಸ್‌ಯುವಿ300 ನಂತರ ಎಕ್ಸ್‌ಯುವಿ700 ಮಾದರಿಯು ಆಧುನಿಕ ಮತ್ತು ಸುರಕ್ಷಿತ ಮಾದರಿಗಳಾಗಿ ಹೊರಹೊಮ್ಮಿದ್ದು, ಇದೀಗ ಸ್ಕಾರ್ಪಿಯೋ-ಎನ್ ಕೂಡಾ ಉತ್ತಮ ಸುರಕ್ಷಾ ಅಂಶಗಳನ್ನು ಅಭಿವೃದ್ದಿಗೊಂಡಿದೆ ಎನ್ನಬಹುದು.

ಹೊಸ ವೈಶಿಷ್ಟ್ಯತೆ ಹೊಂದಿರುವ ಮಹೀಂದ್ರಾ ಸ್ಕಾರ್ಪಿಯೋ-ಎನ್ ಫಸ್ಟ್ ಡ್ರೈವ್ ರಿವ್ಯೂ

ಸುರಕ್ಷತೆ ವೈಶಿಷ್ಟ್ಯಗಳು

- ಆರು ಏರ್‌ಬ್ಯಾಗ್‌ಗಳು

- 18 ವೈಶಿಷ್ಟ್ಯಗಳೊಂದಿಗೆ ಎಲೆಕ್ಟ್ರಾನಿಕ್ ಸ್ಥಿರತೆ ನಿಯಂತ್ರಣ

- SOS ಬಟನ್

- ಹಿಲ್ ಹೋಲ್ಡ್

- ಹಿಲ್ ಹೋಲ್ಡ್ ಕಂಟ್ರೋಲ್

- ಐಸೋಫಿಕ್ಸ್ ಚೈಲ್ಡ್ ಸೀಟ್ ಮೌಂಟ್ಸ್

- ಇಬಿಡಿ ಜೊತೆಗೆ ಎಬಿಎಸ್

- ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಂ

ಸ್ಕಾರ್ಪಿಯೊ-ಎನ್ ಪ್ರಮುಖ ಲಕ್ಷಣಗಳು:

- 6 ಹಂತಗಳಲ್ಲಿ ಹೊಂದಾಣಿಕೆಯ ಡ್ರೈವರ್ ಸೀಟ್

- 12 ಸ್ಪೀಕರ್‌ಗಳೊಂದಿಗೆ ಸೋನಿ 3D ಆಡಿಯೋ

- ಮುಂಭಾಗದ ಕ್ಯಾಮರಾ ಮತ್ತು ಪಾರ್ಕಿಂಗ್ ಸಂವೇದಕಗಳು

- ವೈರ್‌ಲೆಸ್ ಸ್ಮಾರ್ಟ್‌ಫೋನ್ ಚಾರ್ಜರ್

- ಐಚ್ಛಿಕ ಕ್ಯಾಪ್ಟನ್ ಆಸನಗಳು

- ಕೀಲಿ ರಹಿತ ಪ್ರವೇಶ ಮತ್ತು ಪುಶ್ ಬಟನ್ ಸ್ಟಾರ್ಟ್

- ಎಲ್‌ಇಡಿ ಲೈಟಿಂಗ್

- ಆಟೋ ಹೆಡ್‌ಲ್ಯಾಂಪ್‌ಗಳು ಮತ್ತು ಆಟೋ ವೈಪರ್

- 8 ಇಂಚಿನ ಟಚ್‌ಸ್ಕ್ರೀನ್

- ವೈರ್‌ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್‌ಪ್ಲೇ

- ಸನ್‌ರೂಫ್

ಬಣ್ಣದ ಆಯ್ಕೆಗಳು

ಮಹೀಂದ್ರಾ ಸ್ಕಾರ್ಪಿಯೊ-ಎನ್ ಏಳು ಕ್ಲಾಸಿ ಬಣ್ಣಗಳ ಆಯ್ಕೆಗಳಲ್ಲಿ ಖರೀದಿಗೆ ಲಭ್ಯವಿದೆ.

- ಡ್ಯಾಜಲಿಂಗ್ ಸಿಲ್ವರ್

- ಡೀಪ್ ಫಾರೆಸ್ಟ್

- ಗ್ರ್ಯಾಂಡ್ ಕ್ಯಾನ್ಯನ್

- ಎವರೆಸ್ಟ್ ವೈಟ್

- ನಾಪೋಲಿ ಕಪ್ಪು

- ರೆಡ್ ರೇಜ್

- ರಾಯಲ್ ಗೋಲ್ಡ್

ಹೊಸ ವೈಶಿಷ್ಟ್ಯತೆ ಹೊಂದಿರುವ ಮಹೀಂದ್ರಾ ಸ್ಕಾರ್ಪಿಯೋ-ಎನ್ ಫಸ್ಟ್ ಡ್ರೈವ್ ರಿವ್ಯೂ

ಡ್ರೈವ್‌ಸ್ಪಾರ್ಕ್ ಅಭಿಪ್ರಾಯ

20 ವರ್ಷಗಳ ಹಿಂದೆ ಗೇಮ್ ಚೇಂಜರ್ ಅನ್ನು ಪ್ರಾರಂಭಿಸಿದ್ದ ಮಹೀಂದ್ರಾ ಕಂಪನಿಯು ಸ್ಕಾರ್ಪಿಯೋ ಮೂಲಕ ಭಾರತೀಯ ಆಟೋಮೋಟಿವ್‌ನಲ್ಲಿ ತನ್ನದೆ ಜನಪ್ರಿಯತೆ ಹೊಂದಿದೆ. ಇದೀಗ ಕಂಪನಿಯು ಸ್ಕಾರ್ಪಿಯೋ-ಎನ್ ಮೂಲಕ ಮತ್ತೊಂದು ಗೇಮ್ ಚೇಂಜರ್ ಅನ್ನು ಬಿಡುಗಡೆ ಮಾಡಿದ್ದು, ಸ್ಕಾರ್ಪಿಯೋ-ಎನ್ ಭಾರತೀಯ ಆಟೋ ಮಾರುಕಟ್ಟೆಯಲ್ಲಿ ಹೊಸ ಅಧ್ಯಾಯ ಆರಂಭಿಸುವುದರಲ್ಲಿ ಯಾವುದೇ ಅನುಮಾನವಿಲ್ಲ ಎನ್ನಬಹುದು.

Most Read Articles

Kannada
English summary
Mahindra scorpio n frist drive review design specs performance features details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X