ಮುಖವಾಡ ಕಳಚಿಟ್ಟ ರೆನೊ ಕ್ವಿಡ್ ಎಎಂಟಿ vs ಆಲ್ಟೊ ಕೆ10 ಎಎಂಟಿ

By Nagaraja

ಇತ್ತೀಚೆಗಷ್ಟೇ ಸಾಗಿದ 2016 ಆಟೋ ಎಕ್ಸ್ ಪೋದಲ್ಲಿ ಫ್ರಾನ್ಸ್ ಮೂಲದ ರೆನೊ ಸಂಸ್ಥೆಯು ಅತಿ ನೂತನ ಕ್ವಿಡ್ ಆಟೋಮ್ಯಾಟಡ್ ಮ್ಯಾನುವಲ್ ಟ್ರಾನ್ಸಮಿಷನ್ (ಎಎಂಟಿ) ಕಾರನ್ನು ಅನಾವರಣಗೊಳಿಸಿತ್ತು. ಇದರೊಂದಿಗೆ ಮಾರುತಿ ಆಲ್ಟೊ ಕೆ10 ಎಎಂಟಿ ಕಾರಿಗೆ ಪ್ರಬಲ ಪ್ರತಿಸ್ಪರ್ಧಿಯೊಂದು ಮಾರುಕಟ್ಟೆಯಲ್ಲಿ ತೊಡೆ ತಟ್ಟಿ ನಿಂತಿದೆ.

Also Read: ಡ್ರೈವ್ ಸ್ಪಾರ್ಕ್ ವರ್ಷದ ಕಾರು ಯಾವುದು ?

ಈಗ ಮಾರುಕಟ್ಟೆಯಲ್ಲಿರುವ ಕ್ವಿಡ್ ಗಿಂತಲೂ ಶಕ್ತಿಶಾಲಿ ಎನಿಸಿಕೊಳ್ಳಲಿರುವ ನೂತನ ಕ್ವಿಡ್ 1.0 ಲೀಟರ್ ಎಂಜಿನ್ ಜೊತೆ ಎಎಂಟಿ ಗೇರ್ ಬಾಕ್ಸ್ ಪಡೆಯಲಿದೆ. ಅತ್ತ ದೇಶದ ಸರ್ವಕಾಲಿಕ ಶ್ರೇಷ್ಠ ಕಾರೆನಿಸಿಕೊಂಡಿರುವ ಆಲ್ಟೊ, ಕೆ10 ಎಎಂಟಿ ಬಿಡುಗಡೆ ಮಾಡುವ ಮೂಲಕ ಮತ್ತಷ್ಟು ಜನಪ್ರಿಯತೆಯನ್ನು ಕಾಯ್ದುಕೊಂಡಿತ್ತು.

ವಿನ್ಯಾಸ - ಕ್ವಿಡ್ ಎಎಂಟಿ

ವಿನ್ಯಾಸ - ಕ್ವಿಡ್ ಎಎಂಟಿ

ಕ್ವಿಡ್ 800 ಸಿಸಿ ಕಾರಿಗೆ ಸಮಾನವಾದ ಎಸ್‌ಯುವಿ ಶೈಲಿಯ ವಿನ್ಯಾಸವನ್ನು ನೂತನ ಕ್ವಿಡ್ ಎಎಂಟಿ ಕಾರು ಮೈಗೂಡಿಸಿ ಬಂದಿದೆ. ಇದನ್ನು ರೆನೊ-ನಿಸ್ಸಾನ್ ಸಿಎಂಎಫ್-ಎ ತಳಹದಿಯಲ್ಲಿ ನಿರ್ಮಿಸಲಾಗಿದೆ. ದಿಟ್ಟವಾದ ಫ್ರಂಟ್ ಗ್ರಿಲ್, ಸಿ ಆಕಾರದ ಹೆಡ್ ಲ್ಯಾಂಪ್, ಫ್ರಂಟ್ ಫಾಗ್ ಲ್ಯಾಂಪ್ ಮುಂತಾದ ಸೌಲಭ್ಯಗಳಿರಲಿದೆ.

ವಿನ್ಯಾಸ - ಆಲ್ಟೊ ಕೆ10 ಎಎಂಟಿ

ವಿನ್ಯಾಸ - ಆಲ್ಟೊ ಕೆ10 ಎಎಂಟಿ

ತನ್ನ ಹಿಂದಿನ ಮಾದರಿಗಿಂತಲೂ ಪರಿಣಾಮಕಾರಿ ವಿನ್ಯಾಸ ತಂತ್ರಗಾರಿಕೆಯನ್ನು ಆಲ್ಟೊ ಕೆ10 ಕಾರಿನಲ್ಲಿ ಆಳವಡಿಸಲಾಗಿದೆ. ಆಕ್ರಮಣಕಾರಿ ವಿನ್ಯಾಸ, ಎಲ್ಲರನ್ನು ಮನಮೆಚ್ಚುವ ಶೈಲಿ ಆಲ್ಟೊ 10 ಎಎಂಟಿ ಕಾರಿಗೆ ಆಸರೆಯಾಗಿದೆ. ವರ್ಷಗಳಿಂದಲೂ ಸರಳ, ಸುಂದರ ವಿನ್ಯಾಸ ನೀತಿಯನ್ನು ಆಲ್ಟೊ ಅನುಸರಿಸಿಕೊಂಡು ಬಂದಿದೆ.

ಎಂಜಿನ್ ತಾಂತ್ರಿಕತೆ - ಕ್ವಿಡ್ ಎಎಂಟಿ

ಎಂಜಿನ್ ತಾಂತ್ರಿಕತೆ - ಕ್ವಿಡ್ ಎಎಂಟಿ

ನೂತನ ರೆನೊ ಕ್ವಿಡ್ 1.0 ಲೀಟರ್ ಎಸ್‌ಸಿಇ (Smart Control efficiency) ಎಂಜಿನ್ ನಿಂದ ನಿಯಂತ್ರಿಸಲ್ಪಡಲಿದ್ದು, 5 ಸ್ಪೀಡ್ ಎಎಂಟಿ ಈಸಿ-ಆರ್ ಗೇರ್ ಬಾಕ್ಸ್ ಪ್ರಮುಖ ಆಕರ್ಷಣೆಯಾಗಲಿದೆ.

ಈಸಿ-ಆರ್ ಎಎಂಟಿ ಗೇರ್ ಬಾಕ್ಸ್

ಈಸಿ-ಆರ್ ಎಎಂಟಿ ಗೇರ್ ಬಾಕ್ಸ್

ಸಾಂಪ್ರದಾಯಿಕ ಗೇರ್ ಲಿವರ್ ಗಳಿಗಿಂತ ವಿಭಿನ್ನವಾಗಿ ಈಸಿ-ಆರ್ ಎಎಂಟಿ ಗೇರ್ ಬಾಕ್ಸ್ ವೃತ್ತಾಕಾರದಲ್ಲಿದ್ದು, ತಿರುಗಿಸುವ ಮೂಲಕ ಚಾಲನಾ ವಿಧಗಳನ್ನು ಬದಲಾಯಿಸಬಹುದಾಗಿದೆ. ಇದು ನ್ಯೂಟ್ರಲ್, ಡ್ರೈವ್ ಅಥವಾ ರಿವರ್ಸ್ ಚಾಲನಾ ವ್ಯವಸ್ಥೆಗಳನ್ನು ಪಡೆದಿದೆ.

ಎಂಜಿನ್ ತಾಂತ್ರಿಕತೆ - ಆಲ್ಟೊ ಕೆ10 ಎಎಂಟಿ

ಎಂಜಿನ್ ತಾಂತ್ರಿಕತೆ - ಆಲ್ಟೊ ಕೆ10 ಎಎಂಟಿ

ನೂತನ ಆಲ್ಟೊ ಕೆ10 ಆಟೋ ಗೇರ್ ಶಿಫ್ಟ್ ಕಾರು 1.0 ಲೀಟರ್ ತ್ರಿ ಸಿಲಿಂಡರ್ ಕೆ ನೆಕ್ಸ್ಟ್ ಎಂಜಿನ್ ನಿಂದ ನಿಯಂತ್ರಿಸಲ್ಪಡಲಿದ್ದು, 5ಸ್ಪೀಡ್ ಎಜಿಎಸ್ ಗೇರ್ ಬಾಕ್ಸ್ ಪಡೆದಿದೆ. ಇದು 90 ಎನ್ ಎಂ ತಿರುಗುಬಲದಲ್ಲಿ 67 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ.

ಎಜಿಎಸ್ ಗೇರ್ ಬಾಕ್ಸ್

ಎಜಿಎಸ್ ಗೇರ್ ಬಾಕ್ಸ್

ಆಲ್ಟೊ ಕೆ10 ಕಾರಿನಲ್ಲಿರುವ ಎಎಂಟಿ ಗೇರ್ ಬಾಕ್ಸ್ ಆಟೋ ಗೇರ್ ಶಿಫ್ಟ್ ಎಂದು ಹೆಸರಿಸಿಕೊಂಡಿದೆ. ಇದನ್ನು ಮ್ಯಾನುವಲ್ ಜೊತೆಗೆ ನ್ಯೂಟ್ರಲ್, ಡ್ರೈವ್ ಹಾಗೂ ರಿವರ್ಸ್ ಗಳೆಂಬ ಮೂರು ಚಾಲನಾ ವಿಧಗಳನ್ನು ಪಡೆಯಲಿದೆ.

ವೈಶಿಷ್ಟ್ಯಗಳು

ವೈಶಿಷ್ಟ್ಯಗಳು

ಸಣ್ಣ ಕಾರಿನ ಹೊರತಾಗಿಯೂ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಹೊಸ ಕ್ವಿಡ್ ಕಾರಲ್ಲಿ ಪ್ರಮುಖ ಆಕರ್ಷಣೆಯಾಗಲಿದೆ. ಕ್ರೋಮ್ ಫಿನಿಶ್ಡ್ ಏರ್ ವೆಂಟ್ಸ್, ಇದೇ ಮೊದಲ ಬಾರಿಗೆ 7 ಇಂಚುಗಳ ಟಚ್ ಸ್ಕ್ರೀನ್ ಇನ್ಪೋಟೈನ್ಮೆಂಟ್ ಸಿಸ್ಟಂ ಜೊತೆ ನೇವಿಗೇಷನ್ ಸಿಸ್ಟಂ ಹಾಗೂ 300 ಲೀಟರ್ ಢಿಕ್ಕಿ ಜಾಗವಿರಲಿದೆ.

ವೈಶಿಷ್ಟ್ಯಗಳು

ವೈಶಿಷ್ಟ್ಯಗಳು

ಅತ್ತ ಮಾರುತಿ ಆಲ್ಟೊ ಎಜಿಎಸ್ ವಿಎಕ್ಸ್‌ಐ ವೆರಿಯಂಟ್ ಸಹ ಆಡಿಯೋ ಸಿಸ್ಟಂ, ಯುಎಸ್ ಬಿ, ಆಕ್ಸ್ ಕೆನೆಕ್ಟಿವಿಟಿ, ಫ್ರಾಬ್ರಿಕ್ ಸೀಟು ಹಾಗೂ ಪವರ್ ಸ್ಟೀರಿಂಗ್ ಮುಂತಾದ ಸೌಲಭ್ಯಗಳನ್ನು ಪಡೆದಿದೆ.

ಸುರಕ್ಷತೆ

ಸುರಕ್ಷತೆ

ಭಾರತದಲ್ಲಿ 2017ರ ವೇಳೆಯಾಗುವಾಗ ಎಲ್ಲ ಕಾರುಗಳಿಗೂ ಡ್ಯುಯಲ್ ಏರ್ ಬ್ಯಾಗ್, ಎಬಿಎಸ್ ಜೊತೆ ಇಬಿಎಸ್ ಕಡ್ಡಾಯಗೊಳಿಸಲಾಗುವುದು. ಈ ನಿಟ್ಟಿನಲ್ಲಿ ವಾಹನ ತಯಾರಿಕ ಸಂಸ್ಧೆಗಳು ಅಗತ್ಯ ಬದಲಾವಣೆಗಳನ್ನು ತರಲಾಗುವುದು. ಸದ್ಯಕ್ಕೆ ಆಲ್ಟೊ ಕೆ10 ಕಾರಿನಲ್ಲಿ ಈ ಎಲ್ಲ ವೈಶಿಷ್ಟ್ಯಗಳ ಅಲಭ್ಯತೆ ಕಾಡುತ್ತಿದ್ದರೂ ನಿಕಟ ಭವಿಷ್ಯದಲ್ಲೇ ಕೊರತೆಗಳನ್ನು ನೀಗಿಸುವ ಭರವಸೆಯಿದೆ.

ಸುರಕ್ಷತೆ

ಸುರಕ್ಷತೆ

ಅತ್ತ ರೆನೊ ಕ್ವಿಡ್ ಕಾರಿನಲ್ಲಿ ಚಾಲಕ ಬದಿಯ ಏರ್ ಬ್ಯಾಗ್ ಸೌಲಭ್ಯವಿದ್ದರೂ ಎಬಿಎಸ್ ಹಾಗೂ ಇಬಿಡಿ ಅಲಭ್ಯತೆ ಕಾಡಲಿದೆ. ಈ ನಿಟ್ಟಿನಲ್ಲಿ ರೆನೊ ಕೂಡಾ ಗಮನ ವಹಿಸುವುದು ಅನಿವಾರ್ಯವೆನಿಸಿದೆ.

ಬೆಲೆ ಮಾಹಿತಿ

ಬೆಲೆ ಮಾಹಿತಿ

ಮಾರುತಿ ಸುಜುಕಿ ಆಲ್ಟೊ ಕೆ10 ಆಟೋ ಗೇರ್ ಶಿಫ್ಟ್ ಎಕ್ಸ್ ಶೋ ರೂಂ ಬೆಲೆ ಪ್ರಕಾರ 4.06 ಲಕ್ಷ ರು.ಗಳಷ್ಟು ದುಬಾರಿಯೆನಿಸಲಿದೆ. ಇನ್ನೊಂದೆಡೆ ರೆನೊ ಕ್ವಿಟ್ ಆಟೋಮ್ಯಾಟಿಕ್ ಮ್ಯಾನುವಲ್ ಟ್ರಾನ್ಸ್ ಮಿಷನ್ ವೆರಿಯಂಟ್ ಸಹ ನಾಲ್ಕು ಲಕ್ಷ ರು.ಗಳ ಬೆಲೆಯ ಪರಿಧಿಯಲ್ಲೇ ಬಿಡುಗಡೆಯಾಗುವ ಸಾಧ್ಯತೆಯಿದೆ.

ಅಂತಿಮ ತೀರ್ಪು

ಅಂತಿಮ ತೀರ್ಪು

ಭಾರತೀಯ ವಾಹನ ಮಾರುಕಟ್ಟೆಯಲ್ಲಿ ನೆಲೆ ನಿಂತಿರುವ ಆಲ್ಟೊ ಕಾರಿಗೆ ನೂತನ ರೆನೊ ಕ್ವಿಡ್ ಸೆಡ್ಡು ನೀಡುವಲ್ಲಿ ಯಶ ಕಂಡಿದೆ ಎಂಬುದರಲ್ಲಿ ಸಂಶಯವೇ ಇಲ್ಲ. ನೂತನ ಎಎಂಟಿ ಮಾದರಿಯಲ್ಲೂ ಇದೇ ರೀತಿಯ ಫಲಿತಾಂಶವನ್ನು ಗ್ರಾಹಕರನ್ನು ನಿರೀಕ್ಷೆ ಮಾಡಬಹುದಾಗಿದೆ. ಎಸ್ ಯುವಿ ಕಾರಿನ ಶೈಲಿ ಜೊತೆಗಿನ ಆಕ್ರಮಣಕಾರಿ ವಿನ್ಯಾಸ ನೀತಿ ರೆನೊಗೆ ವರದಾನವಾಗಲಿದೆ. ಇವೆಲ್ಲದರ ಜೊತೆಗೆ ಸ್ಪರ್ಧಾತ್ಮಕ ಬೆಲೆಯಲ್ಲಿ ಬಿಡುಗಡೆಯಾಗದ್ದಲ್ಲಿ ಮಗದೊಮ್ಮೆ ರೆನೊ ಕ್ವಿಡ್ ಹವಾ ಎಬ್ಬಿಸಲಿದೆ ಎಂಬುದರಲ್ಲಿ ಸಂಶಯವೇ ಇಲ್ಲ.

ಇವನ್ನೂ ಓದಿ..

ನಂ.1 ಸ್ಥಾನಕ್ಕೆ ರೇಸ್; ಆಲ್ಟೊ vs ಕ್ವಿಡ್ ವಿಜೇತರು ಯಾರು?

ರೆನೊ ಕ್ವಿಡ್ ಚಾಲನಾ ವಿಮರ್ಶೆ; ಪುಟ್ಟ ಕಾರಿನ ಹಿರಿಮೆ

Most Read Articles

Kannada
English summary
Faceoff: Renault Kwid 1.0 AMT Vs Maruti Suzuki Alto K10 AMT Comparison
Story first published: Friday, March 4, 2016, 12:06 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X