ಕಾರು ವಿಮರ್ಶೆ: ಸ್ಕೋಡಾ ಫಾಬಿಯಾ ಸ್ಕೌಟ್ನಲ್ಲಿ ಏನುಂಟು?

By Super

ಸ್ಕೋಡಾ ಇಂಡಿಯಾ ಕಂಪನಿಯು ಹೆಚ್ಚು ಸದ್ದು ಮಾಡದೇ ಫಾಬಿಯಾ ನೂತನ ಆವೃತ್ತಿ ಸ್ಕೌಟ್ ಪರಿಚಯಿಸಿದೆ (ಸುದ್ದಿ ಓದಿ). ಹಲವು ವರ್ಷಗಳಿಂದ ಯುರೋಪ್ ಮಾರುಕಟ್ಟೆಯಲ್ಲಿ ಓಡಾಡಿಕೊಂಡಿದ್ದ ಸ್ಕೌಟ್ ಕಾರು ದೇಶದ ಗ್ರಾಹಕರ ಗಮನ ಸೆಳೆಯುವುದೇ ಎನ್ನುವುದು ನಮ್ಮ ಸದ್ಯದ ಕುತೂಹಲ. ಬನ್ನಿ ಕಾರು ವಿಮರ್ಶೆ ನೋಡೋಣ.

ನೂತನ ಫಾಬಿಯಾ ಸ್ಕೌಟ್ ದರ ಜಾಸ್ತಿಯಾಯ್ತು ಎನ್ನುವ ವಿಷಯದಿಂದಲೇ ವಿಮರ್ಶೆ ಆರಂಭಿಸೋಣ. ಹಳೆಯ ಫಾಬಿಯಾ ಹ್ಯಾಚ್‌ಬ್ಯಾಕ್ ಕಾರಿನ ಆರಂಭಿಕ ದರ 4.32 ಲಕ್ಷ ರುಪಾಯಿ. ಆದರೆ ಜೆಕ್ ಗಣರಾಜ್ಯದ ಕಾರುಕಂಪನಿ ಹೊರತಂದ ಫಾಬಿಯಾ ಸ್ಕೌಟ್ ಪೆಟ್ರೋಲ್ ಕಾರಿನ ಆರಂಭಿಕ ದರ 6.79 ಲಕ್ಷ ರುಪಾಯಿ. ಡೀಸೆಲ್ ಸ್ಕೌಟ್ ಕಾರಿನ ಆರಂಭಿಕ ದರ 8.10 ಲಕ್ಷ ರುಪಾಯಿ.

ಮಾಮೂಲಿ ಫಾಬಿಯಾ ಕಾರಿಗೆ ಹೋಲಿಸಿದ್ರೆ ಹೊಸ ಸ್ಕೌಟ್ ಫಾಬಿಯಾದಲ್ಲಿ ಹೊಸದು ಏನುಂಟು ಎನ್ನುವ ಪ್ರಶ್ನೆ ಸಹಜ. ಮಹತ್ವದ ಬದಲಾವಣೆ ಏನಿಲ್ಲವೆನ್ನುವುದು ಮೊದಲ ನೋಟಕ್ಕೆ ಸ್ಪಷ್ಟವಾಗುತ್ತದೆ. ಹೊಸ ಮುಂಭಾಗದ ಬಂಪರ್, ಇಂಟಿರಿಯರಿಗೆ ಪ್ರೀಮಿಯಂ ಲುಕ್, ಸ್ಟೀಲ್ ಕಂಟ್ರೋಲ್ ಪ್ಯಾಡೆಲ್ ಇತ್ಯಾದಿಗಳನ್ನು ಅಳವಡಿಸಿ ಹೆಚ್ಚು ಆಕರ್ಷಕವಾಗಿ ಸ್ಕೌಟ್ ವಿನ್ಯಾಸ ಮಾಡಲಾಗಿದೆ. ಆದ್ರೆ ಹಳೆಯ ಫಾಬಿಯಾ ಕಾರಿಗೆ ಹೋಲಿಸಿದರೆ ಈ ಕಾರಿನ ಗ್ರೌಂಡ್ ಕ್ಲಿಯರೆನ್ಸ್ ಹೆಚ್ಚು ಮಾಡಲಾಗಿಲ್ಲ.

ನೂತನ ಫಾಬಿಯಾ ಸ್ಕೌಟ್ ಕಾರಿಗೆ ಅಳವಡಿಸಿರುವ ಹೊಸ ಹೆಚ್ಚುವರಿ ಫೀಚರುಗಳಿಂದ ಕೊಂಚ ದುಬಾರಿಯಾಗಿದೆ ಎನ್ನಬಹುದು. ಪ್ರೊಜೆಕ್ಟರ್ ಹೆಡ್ ಲ್ಯಾಂಪ್, ಸ್ಪೋರ್ಟಿ ವಿನ್ಯಾಸದ ಸ್ಟೈನ್ ಲೆಸ್ ಸ್ಟೀಲ್ ಪೆಡಲ್ ಮತ್ತು ರಿಮೋಟ್ ಲಾಕಿಂಗ್, ಡ್ರೈವರ್ ಮತ್ತು ಮುಂಭಾಗದ ಪ್ರಯಾಣಿಕನ ರಕ್ಷಣೆಗೆ ಏರ್ ಬ್ಯಾಗ್ ಅಳವಡಿಸಲಾಗಿದೆ. ಹೀಗಾಗಿ ಕಾರಲ್ಲಿ ಕೊಂಚ ಸುರಕ್ಷತೆ ಹೆಚ್ಚಾಗಿದೆ. ಆದ್ರೆ ಇಷ್ಟೇ ದುಡ್ಡಲ್ಲಿ ಇದಕ್ಕಿಂತ ಹೆಚ್ಚು ಫೀಚರುಗಳಿರುವ ಕಾರು ದೊರಕುತ್ತದೆ ಅಲ್ವೇ? ಅಂತ ನೀವು ಕೇಳಿದ್ರೆ ನಮ್ಮಲ್ಲಿ ಉತ್ತರ ಲಭ್ಯವಿಲ್ಲ.

ಟೆಕ್ ವಿಶೇಷತೆ ಮೇಲೆ ಕಣ್ಣಾಡಿಸೋಣ. ಫಾಬಿಯಾ ಸ್ಕೌಟ್ ಕಾರು ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಆಯ್ಕೆಗಳಲ್ಲಿ ದೊರಕುತ್ತದೆ. ಪೆಟ್ರೋಲ್ ಎಂಜಿನ್ 1.2 ಲೀಟರ್, ಎಂಪಿಐ 3 ಸಿಲಿಂಡರ್ ಹೊಂದಿದೆ. ಇದು 75 ಅಶ್ವಶಕ್ತಿ ಮತ್ತು 110 ಎನ್ಎಂ ಟಾರ್ಕ್ ಪವರ್ ನೀಡುತ್ತದೆ. 1.2ಲೀಟರಿನ ಟಿಡಿಐ ಸಿಆರ್ ಡೀಸೆಲ್ ಟರ್ಬೊ ಚಾರ್ಜಡ್ 3 ಸಿಲಿಂಡರ್ ಎಂಜಿನ್ 75 ಹಾರ್ಸ್ ಪವರ್ ಮತ್ತು 180 ಎನ್ಎಂ ಟಾರ್ಕ್ ಪವರ್ ನೀಡುತ್ತದೆ. ಇವೆರಡೂ ಎಂಜಿನ್ ಗಳು 5 ಸ್ಪೀಡಿನ ಮ್ಯಾನುಯಲ್ ಗೇರ್ ಹೊಂದಿದೆ.

ಒಟ್ಟಾರೆಯಾಗಿ ಫ್ಯಾಬಿಯಾ ಹ್ಯಾಚ್‌ಬ್ಯಾಕ್ ಕುಟುಂಬದಲ್ಲಿ ನೂತನ ಫಾಬಿಯಾ ಸ್ಕೌಟ್ ಟಾಪ್ ಎಂಡ್ ಸ್ಥಾನದಲ್ಲಿದೆ. ಆದರೆ ಸ್ಕೌಟ್ ಆವೃತ್ತಿಗೆ ಮಾರುಕಟ್ಟೆಯಲ್ಲಿ ಯಾವ ರೀತಿ ಬೇಡಿಕೆ ಬರಲಿದೆ ಎನ್ನುವ ಸಂಶಯ ಎಲ್ಲರಿಗೂ ಇದೆ. ಯಾಕೆಂದರೆ ಇದರ ದರವೇ ಇದರ ಮಾರಾಟಕ್ಕೆ ಅಡ್ಡಗಾಲು ಹಾಕುವ ಸಾಧ್ಯತೆಯಿದೆ. ಮಧ್ಯಮ ವರ್ಗದ ಸೆಗ್ಮೆಂಟಿಗೆ ಸೂಕ್ತವಾದ ಕಾರೊಂದು ದುಬಾರಿ ದರದಲ್ಲಿ ಬಂದ್ರೆ ಹೇಗಿರುತ್ತೆ? ಬಹುಶಃ ಸ್ಕೌಟ್ ಮಾರಾಟದ ಫಲಿತಾಂಶದಲ್ಲಿ ಕಂಪನಿಗೆ ಉತ್ತರ ಸಿಗುವ ನಿರೀಕ್ಷೆಯಿದೆ.

Most Read Articles

Kannada
English summary
Skoda Fabia Scout Review: It will be the second car in line from the Czech manufacturer after the entry-level skoda fabia hatchback which comes at a starting price of Rs 4.32 lakhs. The petrol variant of the Fabia Scout comes at a starting price of Rs 6.79 lakhs while the diesel variant will cost you a higher Rs 8.10
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X