ಜನವರಿಯಲ್ಲಿ XUV5OO ಬುಕ್ಕಿಂಗ್ ಪುನಾರಂಭ

Posted By:
To Follow DriveSpark On Facebook, Click The Like Button
Mahindra to re-open XUV5OO bookings in January 2012
ಇತ್ತೀಚೆಗೆ ರಸ್ತೆಗಿಳಿದ ಮಹೀಂದ್ರ XUV5OO ಕಾರು ಖರೀದಿಸಲು ತುದಿಗಾಲಲ್ಲಿ ನಿಂತವರಿಗೆ ಇದು ಸಿಹಿ ಸುದ್ದಿ. ಯಾಕೆಂದರೆ ಕಂಪನಿಯು ಇತ್ತೀಚೆಗೆ ಪರಿಚಯಿಸಿದ ಈ ಎಕ್ಸ್ ಯುವಿ ಕಾರಿನ ಬುಕ್ಕಿಂಗ್ ಮುಂದಿನ ವರ್ಷದ ಜನವರಿಯಲ್ಲಿ ಪುನಾರಂಭಗೊಳ್ಳಲಿದೆ ಎಂದು ಕಂಪನಿ ಪ್ರಕಟಣೆಯಲ್ಲಿ ತಿಳಿಸಿದೆ.

ಕೆಲವು ತಿಂಗಳ ಹಿಂದೆ ಅಂದರೆ ಸೆಪ್ಟಂಬರ್ ಅಂತ್ಯದಲ್ಲಿ ಮಹೀಂದ್ರ ಕಂಪನಿಯು ನೂತನ XUV5OO ಕಾರನ್ನು ಅನಾವರಣ ಮಾಡಿತ್ತು. ಈ ಕಾರು ರಸ್ತೆಗಿಳಿಯುವ ಮುನ್ನವೇ ಸಾಕಷ್ಟು ಹವಾ ಸೃಷ್ಟಿಸಿತ್ತು. ಅನಾವರಣಗೊಂಡ ಹತ್ತು ದಿನಗಳಲ್ಲೇ ಸುಮಾರು 8 ಸಾವಿರ ಕಾರು ಬುಕ್ಕಿಂಗ್ ಆಗಿರುವುದು ಇದರ ಮತ್ತೊಂದು ಹೆಗ್ಗಳಿಕೆ.

ಈ ಸೆಗ್ಮೆಂಟಿನ ಕಾರುಗಳಿಗೆ ಹೋಲಿಸಿದರೆ ಇದರ ದರವೂ ಆಕರ್ಷಕ. ಸಾಕಷ್ಟು ಫೀಚರ್ಸ್, ವಿನ್ಯಾಸ ಎಲ್ಲವೂ ಗ್ರಾಹಕರನ್ನು ಸೆಳೆದಿತ್ತು. ಕಂಪನಿಯು XUV5OO ಉತ್ಪಾದನೆಯನ್ನು ಚಕನ್ ಘಟಕದಲ್ಲಿ ಹೆಚ್ಚಿಸಲು ಯತ್ನಿಸುತ್ತಿದೆ.

ಬೆಂಗಳೂರು, ಚೆನ್ನೈ, ದೆಹಲಿ, ಮುಂಬೈ ಮತ್ತು ಪುಣೆ ನಗರಗಳಲ್ಲಿ ಕಂಪನಿಯು ಈ ಕಾರನ್ನು ಹೊರತಂದಿತ್ತು. ಇದೀಗ ನೂತನ ಬುಕ್ಕಿಂಗ್ ಮತ್ತೆ ಮುಂದಿನ ವರ್ಷದ ಆರಂಭದಲ್ಲಿ ಆರಂಭವಾಗಲಿದೆ ಎಂದು ಕಂಪನಿ ಹೇಳಿದೆ. XUV5OO ಕಾರಿನ ಕುರಿತು ಹೆಚ್ಚು ಜನರು ವಿಚಾರಿಸುತ್ತಿದ್ದಾರೆ ಎಂದು ಬೆಂಗಳೂರು ಡೀಲರುಗಳ ಹೇಳುತ್ತಾರೆ.

ಮಹೀಂದ್ರ ಎಕ್ಸ್ ಯುವಿ 5ಒಒ ಕಾರಿನ ದರ, ವಿಮರ್ಶೆ ಗಾಗಿ ಇಲ್ಲಿ ಕ್ಲಿಕ್ ಮಾಡಿರಿ

ಓದಿ: ನೈಸ್ ರಸ್ತೆಯಲ್ಲಿ ನಿಸ್ಸಾನ್ ಸನ್ನಿ ಟೆಸ್ಟ್ ಡ್ರೈವ್

English summary
Mahindra & Mahindra Ltd. (M&M), a part of the US $14.4 billion Mahindra Group, today announced that it would re-open bookings of its XUV5OO in January 2012.
Story first published: Saturday, December 3, 2011, 10:34 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark