ಲಿಕ್ಕರ್ ಮಾತ್ರವಲ್ಲ ಗೋವಾದಲ್ಲಿ ಪೆಟ್ರೋಲ್ ಕೂಡ ಅಗ್ಗ

ಕರ್ನಾಟಕದ ನೆರೆರಾಜ್ಯ ಗೋವಾದಲ್ಲಿ ನೂತನ ಬಿಜೆಪಿ ಸರಕಾರ ಪೆಟ್ರೋಲ್ ಮೇಲಿನ ವ್ಯಾಟನ್ನು ಶೂನ್ಯಕ್ಕೆ ಇಳಿಸಿದೆ. ಪರಿಣಾಮವಾಗಿ ಪೆಟ್ರೋಲ್ ದರ ಹನ್ನೊಂದು ರುಪಾಯಿಯಷ್ಟು ಕಡಿಮೆಯಾಗಲಿದೆ. ಈ ಸುದ್ದಿಯನ್ನು ಕನ್ನಡ ಒನ್ ಇಂಡಿಯಾದಲ್ಲಿ ಓದಬಹುದು.

ಇದಕ್ಕೆ ವಿರುದ್ಧವಾಗಿ ಕರ್ನಾಟಕ ಸರಕಾರ ಇತ್ತೀಚೆಗೆ ಮಂಡಿಸಿದ ಬಜೆಟಿನಲ್ಲಿ ಪೆಟ್ರೋಲ್ ಮೇಲಿನ ತೆರಿಗೆ ಕೊಂಚ ಇಳಿಕೆ ಕಂಡಿದೆ. ಆದರೆ ಇದರಿಂದ ರಾಜ್ಯದ ಜನರಿಗೆ ಲಾಭವಾಗಿರೋದು ಕೇವಲ 60 ಪೈಸೆ ಮಾತ್ರ.

ಇನ್ಮುಂದೆ ಗೋವಾಕ್ಕೆ ಟ್ರಿಪ್ ಹೊರಟರೆ ಗಾಡಿ ಫುಲ್ ಪೆಟ್ರೋಲ್ ತುಂಬಿಸಿಕೊಂಡು ಹೋಗುವರು ಕಡಿಮೆಯಾಗಬಹುದು. ಆದರೆ ಗೋವಾದಿಂದ ವಾಪಸ್ ಬರುವಾಗ ಮಾತ್ರ ಹೆಚ್ಚಿನ ಜನರು ಫುಲ್ ಟ್ಯಾಂಕ್ ಪೆಟ್ರೋಲ್ ತರಬಹುದು.

ಇದರಿಂದ ಗೋವಾಕ್ಕೆ ಹತ್ತಿರದ ಊರುಗಳಲ್ಲಿರುವ ಜನರು ಕೂಡ ಲಾಭ ಪಡೆಯಬಹುದು. ಗೋವಾ ಗಡಿಗೆ ಹತ್ತಿರವಿರುವ ಕರ್ನಾಟಕ ಮತ್ತು ಮಹಾರಾಷ್ಟ್ರದ ವಾಹನ ಚಾಲಕರಿಗೂ ಇದರಿಂದ ಲಾಭವಾಗುವ ನಿರೀಕ್ಷೆಯಿದೆ.

ಗೋವಾ ಮೂಲಕ ಅಂತರ್ ರಾಜ್ಯ ಪ್ರಯಾಣ ಕೈಗೊಳ್ಳುವ ರಾಜ್ಯದ ಜನರು ಸೀಮಿತ ಪೆಟ್ರೋಲ್ ಮೂಲಕ ರಾಜ್ಯದಿಂದ ಹೊರಬೀಳಬಹುದು. ಕರ್ನಾಟಕಕ್ಕಿಂತ ಹನ್ನೊಂದು ರುಪಾಯಿಗೆ ಗೋವಾದಲ್ಲಿ ಪೆಟ್ರೋಲ್ ದೊರಕುವುದರಿಂದ ಇಲ್ಲಿ ಫುಲ್ ಟ್ಯಾಂಕ್ ಪೆಟ್ರೋಲ್ ತುಂಬಿಸುವುದು ಕೂಡ ವ್ಯರ್ಥವೆಂದು ಚಾಲಕರು ಬುದ್ದಿವಂತಿಕೆ ಪ್ರದರ್ಶಿಸಬಹುದು. ಇದರಿಂದ ಕರ್ನಾಟಕಕ್ಕೆ ನಷ್ಟ ಗ್ಯಾರಂಟಿ. (ಕನ್ನಡ ಡ್ರೈವ್ ಸ್ಪಾರ್ಕ್ )

Most Read Articles

Kannada
English summary
Goa Cuts Petrol Prices, Will Other States Follow? Even carmakers will benefit from this development as demand for petrol cars will not fall steeply. Carmakers are currently struggling to sell some of their petrol cars due to the high cost of petrol.
Story first published: Tuesday, March 27, 2012, 16:43 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X