ಷೆವರ್ಲೆ ಕ್ಯಾಪ್ಟಿವಾ ಕಾರಿಗೆ 2 ಲಕ್ಷ ರು ಡಿಸ್ಕೌಂಟ್

Posted By:

ಜನರಲ್ ಮೋಟರ್ಸ್ ಕಂಪನಿಯ ಸ್ಪೋರ್ಟ್ಸ್ ಯುಟಿಲಿಟಿ ಕಾರೊಂದನ್ನು ಖರೀದಿಸಲು ಬಯಸುವರಿಗಿದು ಸೂಕ್ತ ಸಮಯ. ಹಳೆಯ ಕ್ಯಾಪ್ಟಿವಾ ಕಾರಿಗೆ ಕಂಪನಿಯು ಸುಮಾರು 2 ಲಕ್ಷ ರುಪಾಯಿವರೆಗೆ ದರ ವಿನಾಯಿತಿ ನೀಡುತ್ತಿದೆ. ಇತ್ತೀಚೆಗೆ ಪರಿಷ್ಕೃತ ನೂತನ ಷೆವರ್ಲೆ ಕ್ಯಾಪ್ಟಿವಾ ಆಗಮಿಸಿದ ಹಿನ್ನೆಲೆಯಲ್ಲಿ ಕಂಪನಿಯು ಹಳೆಯ ಕ್ಯಾಪ್ಟಿವಾದ ದಾಸ್ತಾನು ಖಾಲಿ ಮಾಡಲು ವಿನಾಯಿತಿ ದರದಲ್ಲಿ ಮಾರಾಟ ಮಾಡುತ್ತಿದೆ.

ಸುಮಾರು 19.26 ಲಕ್ಷ ರುಪಾಯಿ ಆಸುಪಾಸಿನಲ್ಲಿದ್ದ ಷೆವರ್ಲೆ ಕ್ಯಾಪ್ಟಿವಾ ಎಸ್‌ಯುವಿ ಈಗ ದರ ವಿನಾಯಿತಿ ನಂತರ ಸುಮಾರು 17.26 ಲಕ್ಷ ರುಪಾಯಿಗೆ ದೊರಕಲಿದೆ. ಅಂದ ಹಾಗೆ ಈ ಭಾರಿ ಪ್ರಮಾಣದ ದರ ವಿನಾಯಿತಿಯು ಷೆವರ್ಲೆ ಕ್ಯಾಪ್ಟಿವಾದ ಮ್ಯಾನುಯಲ್ ಗೇರ್ ಆವೃತ್ತಿಗೆ ಮಾತ್ರ ದೊರಕಲಿದೆ.

To Follow DriveSpark On Facebook, Click The Like Button

ಷೆವರ್ಲೆ ಕ್ಯಾಪ್ಟಿವಾದ ಮಾರಾಟವಾಗದೆ ಉಳಿದಿರುವ ದಾಸ್ತಾನಿನಿಂದಾಗಿ ಮಾರ್ಚ್-ಮೇ ಅವಧಿಯಲ್ಲಿ ಕಂಪನಿಯ ಮಾರಾಟ ಇಳಿಮುಖವಾಗಿತ್ತು. ಈ ಅವಧಿಯಲ್ಲಿ ಜನರಲ್ ಮೋಟರ್ಸ್ ಇಂಡಿಯಾ ಕಂಪನಿಗೆ ಕೇವಲ 88 ಯುನಿಟ್ ಕ್ಯಾಪ್ಟಿವಾ ಮಾರಾಟ ಮಾಡಲು ಸಾಧ್ಯವಾಗಿತ್ತು.

ಆಟೋಮ್ಯಾಟಿಕ್ ಗೇರ್ ಆಯ್ಕೆಯಲ್ಲಿ ಬಂದಿರುವ 2.2 ಲೀಟರಿನ ನೂತನ ಕ್ಯಾಪ್ಟಿವಾ 2012, ಖರೀದಿಸಲು ಇಷ್ಟಪಡದವರು ಮ್ಯಾನುಯಲ್ ಗೇರ್ ಕ್ಯಾಪ್ಟಿವಾ ಖರೀದಿಸಬಹುದು. ಆದರೆ ಕೇವಲ 144 ಯುನಿಟ್ ಹಳೆಯ ಕ್ಯಾಪ್ಟಿವಾ ಉಳಿದಿದ್ದು, ಭಾರಿ ಪ್ರಮಾಣದ ದರ ವಿನಾಯಿತಿಯ ಹಿನ್ನಲೆಯಲ್ಲಿ ಇದು ಶೀಘ್ರದಲ್ಲಿ ಮಾರಾಟವಾಗುವ ನಿರೀಕ್ಷೆಯಿದೆ. ನಿಮಗೆ ಮ್ಯಾನುಯಲ್ ಗೇರಿನ ಕ್ಯಾಪ್ಟಿವಾ ಬೇಕೆಂದರೆ ಹತ್ತಿರದ ಜನರಲ್ ಮೋಟರ್ಸ್ ಶೋರೂಂಗೆ ಧಾವಿಸಬಹುದು.

English summary
General Motors India had recently launched the upgraded all new Chevrolet Captiva soft SUV. Now, the American car maker is offering a whopping discount of Rs 2 lakh on the old Captiva in order to clear the stock.
Story first published: Tuesday, July 3, 2012, 9:54 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark