ಮಹೀಂದ್ರ, ಸ್ಯಾಂಗ್ಯೊಗಿನಿಂದ ಹೊಸ ಕಾರುಗಳು

ಕೊರಿಯಾದ ಅಂಗಸಂಸ್ಥೆ ಸ್ಯಾಂಗ್ಯೊಂಗ್ ಜೊತೆ ಸೇರಿ ಮಹೀಂದ್ರ ಕಂಪನಿಯು ನೂತನ ಪ್ಲಾಟ್ ಫಾರ್ಮಿನಲ್ಲಿ ಹೊಸ ಕಾರುಗಳನ್ನು ಅಭಿವೃದ್ಧಿಪಡಿಸುತ್ತಿದೆ. ಹೊಸ ಕಾರುಗಳನ್ನು ಅಭಿವೃದ್ಧಿಪಡಿಸಲು ಕಂಪನಿಯು ಸುಮಾರು 1,500 ಕೋಟಿ ರುಪಾಯಿ ಹೂಡಿಕೆ ಮಾಡಲಿದೆ.

ಸ್ಯಾಂಗ್ಯೊಂಗ್ ಮೋಟರಿನಲ್ಲಿ ಮಹೀಂದ್ರ ಆಂಡ್ ಮಹೀಂದ್ರ ಕಂಪನಿಯು ಶೇಕಡ 70ರಷ್ಟು ಮಾರುಕಟ್ಟೆ ಪಾಲು ಹೊಂದಿದೆ. ಕಂಪನಿಯು 2010ರಲ್ಲಿ ಸುಮಾರು 2,100 ಕೋಟಿ ರು.ಗೆ ಸ್ಯಾಂಗ್ಯೊಂಗ್ ಮಾರುಕಟ್ಟೆ ಪಾಲನ್ನು ಸ್ವಾಧೀನಪಡಿಸಿಕೊಂಡಿತ್ತು.

ಮಹೀಂದ್ರ ಆಂಡ್ ಮಹೀಂದ್ರ ಕಂಪನಿಯು ಸ್ಯಾಂಗ್ಯೊಂಗ್ ಜೊತೆ ಸೇರಿ ಹೊಸ ಮೂರು ವಾಹನಗಳನ್ನು ಹೊರತರಲು ಸದ್ಯ ಯೋಜಿಸಿದೆ. ಇದರಲ್ಲಿ ರೆಕ್ಸ್ಟಾನ್ ಎಂಬ ಸ್ಪೋರ್ಟ್ ಯುಟಿಲಿಟಿ ವೆಹಿಕಲ್ ಮೊದಲ ಉತ್ಪನ್ನವಾಗಲಿದೆ.

ಹೊಸ ಎಂಜಿನ್ ಪ್ಲಾಟ್ ಫಾರ್ಮಿನಲ್ಲಿ ಕಂಪನಿಯು ನೂತನ ಕಾರುಗಳನ್ನು ಉತ್ಪಾದಿಸಲಿದೆ. ಈ ಕಾರುಗಳು ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಆಯ್ಕೆಯಲ್ಲಿ ಲಭ್ಯವಿರಲಿದೆ ಎಂದು ಕಂಪನಿಯ ಮೂಲಗಳು ತಿಳಿಸಿವೆ.

ಸ್ಯಾಂಗ್ಯೊಂಗ್ ಕಾರುಗಳಿಗೆ ದೇಶದಲ್ಲಿ ಗ್ರಾಹಕರಿಂದ ಅತ್ಯುತ್ತಮ ಬೇಡಿಕೆ ವ್ಯಕ್ತವಾಗುವ ನಿರೀಕ್ಷೆಯನ್ನು ಮಹೀಂದ್ರ ವ್ಯಕ್ತಪಡಿಸಿದೆ. ಕಂಪನಿಯು ದೇಶದಲ್ಲಿ ಇಲ್ಲಿ ವರ್ಷಕ್ಕೆ ಸುಮಾರು 10 ಸಾವಿರ ಸ್ಯಾಂಗ್ಯೊಂಗ್ ಕಾರುಗಳನ್ನು ಮಾರಾಟ ಮಾಡುವ ಗುರಿ ಹೊಂದಿದೆ.

Most Read Articles

Kannada
English summary
Mahindra is developing a new vehicle platform with its Korean subsidiary Ssangyong Motor. The company on this regards is looking to invest INR 1500 crore. Mahindra & Mahindra currently holds 70% stake in Ssangyong Motor.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X