ಆಲ್ಟೊ ದಾಖಲೆ; ದಿನವೊಂದರಲ್ಲಿ 200 ಕಾರುಗಳ ಹಸ್ತಾಂತರ

Posted By:

ಈಗಾಗಲೇ ದೇಶದ ಆಟೋಮೊಬೈಲ್ ರಂಗದಲ್ಲಿ ಸೆನ್ಸಷನಲ್ ಸೃಷ್ಟಿ ಮಾಡಿರುವ ಅತಿ ದೊಡ್ಡ ಕಾರು ತಯಾರಕ ಸಂಸ್ಧೆ ಮಾರುತಿ ಸುಜುಕಿ ಇದೀಗ ಮತ್ತೆ ಸುದ್ದಿಯಲ್ಲಿದ್ದು, ದಿನವೊಂದರಲ್ಲೇ 200 ನೂತನ ಆಲ್ಟೊ 800 ಕಾರುಗಳನ್ನು ಗ್ರಾಹಕರಿಗೆ ಹಸ್ತಾಂತರಿಸುವ ಮೂಲಕ ನೂತನ ದಾಖಲೆ ಸ್ಥಾಪಿಸಿದೆ. ಕೇರಳದ ಮಲಪ್ಪುರಂ ಜಿಲ್ಲೆಯ ಮಾರುತಿ ಡೀಲರ್‌ಶಿಪ್ ಈ ಅದ್ಭುತ ಸಮಾರಂಭಕ್ಕೆ ಸಾಕ್ಷಿಯಾಗಿತ್ತು. ಮಲ್ಲಪ್ಪುರಂನ ಕೊಟ್ಟಕುನ್ನು ಜಿಲ್ಲೆಯಲ್ಲಿ ಮಾರುತಿ ಡೀಲರ್‌ಶಿಪ್‌ನಿಂದ 200 ಕಾರುಗಳನ್ನು ಗ್ರಾಹಕರಿಗೆ ಹಸ್ತಾಂತರಿಸಲಾಗಿದೆ.

ಇದೇ ಮೊದಲ ಬಾರಿಗೆ ಇಂಡಿಯನ್ ಆಟೋಮೊಬೈಲ್ ಇತಿಹಾಸದಲ್ಲಿ ಒಂದೇ ಸಮಯಕ್ಕೆ 200 ನೂತನ ಕಾರುಗಳನ್ನು ಗ್ರಾಹಕರಿಗೆ ಹಸ್ತಾಂತರಿಸಲಾಗಿದೆ. ನೂತನ ವಿನ್ಯಾಸ ಸೇರಿದಂತೆ ಪ್ರತಿ ಲೀಟರ್‌ಗೆ 22.4 ಕಿಲೋ ಮೀಟರ್ ಇಂಧನ ದಕ್ಷತೆಯನ್ನು ಹೊಸ ಆಲ್ಟೊ ಹೊಂದಿದೆ.

ಇನ್ನೂ ವಿಶೇಷವೆಂದರೆ ಕಾರಿನ ಚಿತ್ರಣ ನೋಡಿರದ ಹೊರತು, ದರ ಬಗ್ಗೆ ಯಾವುದೇ ಮಾಹಿತಿ ಇಲ್ಲದೆಯೂ ಆಲ್ಟೊ ಬಿಡುಗಡೆ ಮೊದಲೇ ಇಷ್ಟೊಂದು ಸಂಖ್ಯೆಯ ಗ್ರಾಹಕರು ಕಾರನ್ನು ಮುಂಗಡವಾಗಿ ಬುಕ್ಕಿಂಗ್ ಮಾಡಿರುವುದು ಅಚ್ಚರಿಗೆ ಕಾರಣವಾಗಿದೆ.

ಮಾರುತಿ ಆಲ್ಟೊ 800 ದಾಖಲೆ

ಮಾರುತಿ ಆಲ್ಟೊ 800 ದಾಖಲೆ

ನೂತನ ಆಲ್ಟೊ 800 ಬಿಡುಗಡೆಗೆ ಮೊದಲೇ 10 ಸಾವಿರ ಬುಕ್ಕಿಂಗ್‌ಗಳನ್ನು ಗಿಟ್ಟಿಸಿಕೊಂಡಿತ್ತು. ಇದೀಗ ಒಂದೇ ಸಂದರ್ಭದಲ್ಲಿ 200 ಕಾರುಗಳನ್ನು ಗ್ರಾಹಕರಿಗೆ ಹಸ್ತಾಂತರಿಸುವ ಮೂಲಕ ದಾಖಲೆ ಮಾಡಿದೆ.

ಇಂಧನ ಕ್ಷಮತೆ

ಇಂಧನ ಕ್ಷಮತೆ

ನೂತನ ಆಲ್ಟೊ 800 ಪ್ರತಿ ಲೀಟರ್‌ಗೆ 22.74 ಕೀ. ಮೀ. ಇಂಧನ ಕ್ಷಮತೆ ಹೊಂದಿರುವುದು ಕಾರಿನ ಪ್ರಮುಖ ಫೀಚರ್ ಆಗಿದೆ. ಇದು ಈ ಹಿಂದಿನ ಮಾದರಿಗೆ ಹೋಲಿಸಿದಾಗ ಶೇಕಡಾ 15ರಷ್ಟು ಹೆಚ್ಚಾಗಿದೆ. ಈ ಮೂಲಕ ಗ್ರಾಹಕರ ಅಚ್ಚುಮೆಚ್ಚಿನ ಕಾರು ಎನಿಸಿಕೊಂಡಿದೆ.

ಮಾರುತಿ ಆಲ್ಟೊ 800 ಕಾರು ವೆರಿಯಂಟ್:

ಮಾರುತಿ ಆಲ್ಟೊ 800 ಕಾರು ವೆರಿಯಂಟ್:

ಒಟ್ಟು ಆರು ವೆರಿಯಂಟ್‌ಗಳಲ್ಲಿ ಕಾರು ಲಭ್ಯವಿರಲಿದೆ. ಸಿಎನ್‌ಜಿ ಹಾಗೂ ಪೆಟ್ರೋಲ್ ಆವೃತ್ತಿಗಳಲ್ಲಿ ತಲಾ ಮೂರರಂತೆ ಬಿಡುಗಡೆಯಾಗಲಿದೆ.

ಕಲರ್:

ಫ್ರೋಸ್ಟ್ ಬ್ಲೂ, ಗ್ರಾನೈಟ್ ಗ್ರೇ, ಸುಪಿರಿಯರ್ ವೈಟ್, ಬ್ಲಾಜಿಂಗ್ ರೆಡ್, ಸಿಲ್ಕಿ ಸಿಲ್ವರ್ ಹಾಗೂ ಟರ್ಕ್ಯೂ ಬ್ಲೂ ಸೇರಿದಂತೆ ಆರು ಆಕರ್ಷಕ ಬಣ್ಣಗಳಲ್ಲಿ ಲಭ್ಯವಾಗಲಿದೆ.

ಮಾರುತಿ ಆಲ್ಟೊ 800

ಮಾರುತಿ ಆಲ್ಟೊ 800

ಮಾರುತಿ ಆಲ್ಟೊ 800 ಇಂಟಿರಿಯರ್:

ಫ್ಯಾಶನ್ ಆಂಡ್ ಟ್ರೆಂಡಿ ಲುಕ್

ಸ್ಪೋರ್ಟ್ ಸ್ಟೈಲಿಷ್ ಹೆಡ್‌ಲ್ಯಾಂಪ್ಸ್

ಬೆಟರ್ ಹೆಡ್‌ರೂಂ ಆಂಡ್ ಲೆಗ್‌ರೂಂ

ಮಾರುತಿ ಆಲ್ಟೊ 800 ಮೈಲೇಜ್:

ಮಾರುತಿ ಆಲ್ಟೊ 800 ಮೈಲೇಜ್:

ಪೆಟ್ರೋಲ್ ಎಂಜಿನ್ ಮಾರುತಿ ಆಲ್ಟೊ 800 ಆವೃತ್ತಿ ಪ್ರತಿ ಲೀಟರ್‌ಗೆ 23 ಕೀಲೋ ಮೀಟರ್ ಇಂಧನ ಕ್ಷಮತೆ ನೀಡಲಿದೆ. ಮತ್ತೊಂದೆಡೆ ಸಿಎನ್‌ಜಿ ಆವೃತ್ತಿಯು ಪ್ರತಿ ಲೀಟರ್‌ಗೆ ಗರಿಷ್ಠ 31 ಕೀಲೋ ಮೀಟರ್ ಮೈಲೇಜ್ ನೀಡಲಿದೆ

English summary
Maruti Suzuki delivered record 200 nos of just launched Alto 800s at a single sales outlet to customers in Kottakkunnu in Mallapuram distt, near Calicut, Kerala.
Please Wait while comments are loading...

Latest Photos