ಪ್ಯೂಜೊ 301: ಹೊಸ ಕಾರಿಗೆ ಸುಸ್ವಾಗತ

Posted By:
ಪ್ಯೂಜೊ ಫ್ಯಾಕ್ಟರಿಯಿಂದ ದೇಶದ ರಸ್ತೆಗೆ ಆಗಮಿಸಲು ಕಾರುಗಳು ಸರತಿ ಸಾಲಿನಲ್ಲಿ ನಿಂತಿವೆ ಎಂಬ ಸುದ್ದಿ ನಮಗೆ ಸಿಕ್ಕಿದೆ. ಅವುಗಳಲ್ಲಿ ಪ್ಯೂಜೊ 301 ಎಂಬ ಸಣ್ಣ ಸೆಡಾನ್ ಶೋರೋಂಗೆ ಮೊದಲು ಬರಲಿದೆ ಎನ್ನುವುದು ಬಹುತೇಕ ಖಚಿತವಾಗಿದೆ.

ಈಗ ಜಾಗತಿಕ ಕಾರು ಕಂಪನಿಗಳು ಒಂದೊಂದು ದೇಶಕ್ಕೆ ಒಂದೊಂದು ಬಗೆಯ ಕಾರಿನ ವಿನ್ಯಾಸ ಮಾಡಲು ಆರಂಭಿಸಿವೆ. ಪ್ಯೂಜೊ ಕೂಡ ನೂತನ 301 ಕಾರನ್ನು ನಮ್ಮ ರಸ್ತೆಗೆ ತಕ್ಕಂತೆ ರೂಪಿಸುವ ನಿರೀಕ್ಷೆಯಿದೆ.

ಬಹುಶಃ ನಿಮಗೆ 301 ಎಂಬ ಹೆಸರು ಅಚ್ಚರಿ ತಂದಿರಬಹುದು. ಇಲ್ಲಿ 3 ಅಂದ್ರೆ ಸೆಡಾನ್, ಸೊನ್ನೆ ಅಂದ್ರೆ ಸ್ಥಿರ. ಎರಡು ಸೊನ್ನೆ ಬಳಸಿದರೆ ಅದು ಎಸ್ ಯುವಿ ಅಂತೆ. ಯಾವ ದೇಶಕ್ಕೆ ಎನ್ನುವುದು ಕೊನೆಯ ಅಂಕೆ. ಇಲ್ಲಿ ಅಭಿವೃದ್ಧಿಹೊಂದುತ್ತಿರುವ ದೇಶಗಳನ್ನು(ಏಷ್ಯಾ) ಒಂದು ಸಂಖ್ಯೆ ಪ್ರತಿನಿಧಿಸುತ್ತದೆ.

ಮುಂದಿನ ವರ್ಷ ಆಗಮಿಸಲಿರುವ ಪ್ಯೂಜೊ 301 ಎರಡು ಎಂಜಿನ್ ಆಯ್ಕೆಗಳಲ್ಲಿ ಲಭ್ಯವಿರಲಿದೆ. ಎರಡೂ 1.6 ಲೀಟರ್ ಎಂಜಿನಾಗಿರಲಿದೆ. 1.6 ಲೀಟರಿನ ಎಚ್ ಡಿ ಡೀಸೆಲ್ ಎಂಜಿನ್ 92 ಅಶ್ವಶಕ್ತಿ ಮತ್ತು 1.6 ವಿಟಿಐ ಪೆಟ್ರೋಲ್ ಎಂಜಿನ್ 115 ಹಾರ್ಸ್ ಪವರ್ ನೀಡಲಿದೆ.

ನೂತನ ಪ್ಯೂಜೊ 301 ದರವು ಸ್ಕೋಡಾ ರಾಪಿಡ್, ನಿಸ್ಸಾನ್ ಸನ್ನಿ ಮತ್ತು ಫೋಕ್ಸ್ ವ್ಯಾಗನ್ ದರದ ಆಸುಪಾಸಿನಲ್ಲಿರಲಿದೆ.

English summary
Peugeot planned to launch new sedan 301 for developing markets like India. Peugeot 301 Sedan expected launch India by next year.
Story first published: Tuesday, September 4, 2012, 14:49 [IST]
Please Wait while comments are loading...

Latest Photos