ಬೆಂಗಳೂರಿನಲ್ಲಿ ಘಟಕ ಸ್ಥಾಪನೆಗೆ ಸ್ಕಾನಿಯಾ ನಿರ್ಧಾರ

Posted By:
Scania to set-up plant in Bangalore
ಸ್ವೀಡನಿನ ವಾಣಿಜ್ಯ ವಾಹನ ತಯಾರಿಕಾ ಕಂಪನಿ ಸ್ಕಾನಿಯಾ ದೇಶದ ವಾಹನ ಮಾರುಕಟ್ಟೆಗೆ ಸುಮಾರು 150 ಕೋಟಿ ರುಪಾಯಿ ಹೂಡಿಕೆ ಮಾಡಲು ನಿರ್ಧರಿಸಿದೆ. ಕಂಪನಿಯು ಬೆಂಗಳೂರಿನಲ್ಲಿ ಮುಂದಿನ 12 ತಿಂಗಳೊಳಗೆ ನೂತನ ಉತ್ಪಾದನಾ ಘಟಕ ನಿರ್ಮಿಸುವುದಾಗಿ ಹೇಳಿದೆ.

ಕಂಪನಿಯು ಕರ್ನಾಟಕಕ್ಕೆ ಸುಮಾರು 1 ಸಾವಿರ ಅಂತರ್ ನಗರ ಬಸ್ ಮತ್ತು 2 ಸಾವಿರ ಭಾರಿ ಟ್ರಕುಗಳನ್ನು ಬಿಡುಗಡೆ ಮಾಡಲಿದೆ. ಇದೇ ಕಾರಣಕ್ಕಾಗಿ ಸ್ಕಾನಿಯ ಕಂಪನಿಯು ಬೆಂಗಳೂರಿನಲ್ಲಿ ಘಟಕ ನಿರ್ಮಿಸಲಿದೆ. ಇಲ್ಲಿನ ನರ್ಸಪುರ ಕೈಗಾರಿಕಾ ಪ್ರದೇಶದಲ್ಲಿ ಕಂಪನಿಯು ಮೊದಲ ಟ್ರಕ್ಕನ್ನು ಉತ್ಪಾದಿಸಲಿದೆ. ಇದು ಮುಂದಿನ ವರ್ಷದ ಮೊದಲ ತ್ರೈಮಾಸಿಕದಲ್ಲಿ ರಸ್ತೆಗಿಳಿಯಲಿದೆ.

ಸ್ವಿಡನಿನ ವಾಹನ ಕಂಪನಿ 2007ರಲ್ಲಿ ದೇಶಕ್ಕೆ ಆಗಮಿಸಿತ್ತು. ಇದು ಲಾರ್ಸೆನ್ ಆಂಡ್ ಟೋಬ್ರೊ(ಎಲ್ ಆಂಡ್ ಟಿ) ಜೊತೆ ಮೈತ್ರಿ ಮಾಡಿಕೊಂಡಿದೆ. ಕಂಪನಿಯು ಇಲ್ಲಿ ಸ್ಕಾನಿಯ ಕಮರ್ಷಿಯಲ್ ವೆಹಿಕಲ್ಸ್ ಇಂಡಿಯಾ ಹೆಸರಿನಲ್ಲಿ ವಹಿವಾಟು ನಡೆಸುತ್ತಿದೆ.

English summary
Swedish commercial vehicle maker Scania announced planning to invest Rs 150 crore in the Indian auto market. Scania will set-up plant in Bangalore.
Story first published: Thursday, February 2, 2012, 11:47 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark