ಕಳೆದ ತಿಂಗಳು ಎಷ್ಟು ನ್ಯಾನೊ ಮಾರಾಟವಾಗಿದೆ?
ಕೇಂದ್ರ ಬಜೆಟಿನಲ್ಲಿ ಹೆಚ್ಚುವರಿ ಸುಂಕ ವಿಧಿಸುವ ಭೀತಿಯಲ್ಲಿ ಬಜೆಟ್ ಪೂರ್ವದಲ್ಲಿ ಕಾರುಗಳಿಗೆ ಬೇಡಿಕೆ ಹೆಚ್ಚಾದದ್ದು ಕೂಡ ಕಂಪನಿಯ ಮಾರಾಟ ಹೆಚ್ಚಳಕ್ಕೆ ನೆರವಾಗಿದೆ. "ಇದೇ ಸಮಯದಲ್ಲಿ ಕಂಪನಿಯ ಪ್ರಯಾಣಿಕ ವಾಹನಗಳ ಮಾರಾಟ 36,984 ಯುನಿಟಿಗೆ ತಲುಪಿದೆ. ಕಳೆದ ವರ್ಷದ ಮಾರ್ಚ್‌ಗೆ ಹೋಲಿಸಿದರೆ ಇದು ಶೇಕಡ 34ರಷ್ಟು ಏರಿಕೆಯಾಗಿದೆ" ಎಂದು ಟಾಟಾ ಮೋಟರ್ಸ್ ಪ್ರಕಟಣೆಯಲ್ಲಿ ತಿಳಿಸಿದೆ.
ಈ ಸಮಯದಲ್ಲಿ ಇಂಡಿಕಾ ಕಾರುಗಳ ಮಾರಾಟ ಶೇಕಡ 65ರಷ್ಟು ಏರಿಕೆ ಕಂಡಿದೆ. ಟಾಟಾ ಮೋಟರ್ಸ್ ಕಂಪನಿಯು ಕಳೆದ ತಿಂಗಳು 11,420 ಯುನಿಟ್ ಇಂಡಿಕಾ ಮಾದರಿ ಕಾರುಗಳನ್ನು ಮಾರಾಟ ಮಾಡಿದೆ.
ಟಾಟಾ ಮೋಟರ್ಸ್ ಕಂಪನಿಯ ಸಣ್ಣಕಾರು ನ್ಯಾನೊ ಮಾರಾಟ ಕೂಡ ಕಳೆದ ತಿಂಗಳು ಗಮನಾರ್ಹವಾಗಿ ಏರಿಕೆ ಕಂಡಿದೆ. 2012ರ ಮಾರ್ಚ್ ತಿಂಗಳಲ್ಲಿ ಕಂಪನಿಯು 10,475 ಯುನಿಟ್ ನ್ಯಾನೊ ಕಾರುಗಳನ್ನು ಮಾರಾಟ ಮಾಡಿದ್ದು, ಕಳೆದ ವರ್ಷದ ಮಾರ್ಚ್ ತಿಂಗಳ 8,707 ಯುನಿಟ್ ಮಾರಾಟಕ್ಕೆ ಹೋಲಿಸಿದರೆ ಗಮನಾರ್ಹ ಪ್ರಗತಿ ದಾಖಲಿಸಿದೆ.
ಇಂಡಿಗೊ ಶ್ರೇಣಿಯ ವಾಹನ ಮಾರಾಟ 8,295 ಯುನಿಟಿಗೆ ತಲುಪಿ ಶೇಕಡ 15ರಷ್ಟು ಏರಿಕೆ ಕಂಡಿದೆ. ಸಫಾರಿ, ಸುಮೊ ಎಸ್‌ಯುವಿ, ಆರಿಯಾ ಎಂಪಿವಿ ಒಟ್ಟಾರೆ ಮಾರಾಟ 6,794 ಯುನಿಟಿಗೆ ತಲುಪಿದೆ. ಇದೇ ಸಮಯದಲ್ಲಿ ಕಂಪನಿಯ ವಾಣಿಜ್ಯ ವಾಹನ ಮಾರಾಟ ಸುಮಾರು ಶೇಕಡ 17ರಷ್ಟು ಏರಿಕೆ ದಾಖಲಿಸಿದೆ. (ಕನ್ನಡ ಡ್ರೈವ್ ಸ್ಪಾರ್ಕ್)


Click it and Unblock the Notifications









