ನ್ಯಾನೊ ಕಾರಿನ ಕುರಿತು ನಿಮ್ಮ ಅಭಿಪ್ರಾಯವೇನು?

Posted By:
ಸಣ್ಣ ಕಾರು ಜಗತ್ತಿನಲ್ಲಿ ನ್ಯಾನೊ ಅತ್ಯದ್ಭುತವನ್ನು ಸೃಷ್ಟಿಸಬೇಕಿತ್ತು. ಆದರೆ ಇತ್ತೀಚಿನ ದಿನಗಳ ಬೆಳವಣಿಗೆ ನೋಡಿದರೆ ಹಾಗೇನೂ ಸಂಭವಿಸಿಲ್ಲ. ತನ್ನ ಕನಸಿನ ಕೂಸು ನ್ಯಾನೊ ಕುರಿತು ರತನ್ ಟಾಟಾ ಮತ್ತೊಮ್ಮೆ ಎರಡು ಮಾತನಾಡಿದ್ದಾರೆ. ನ್ಯಾನೊ ಬೇಡಿಕೆ ಹೆಚ್ಚಿಸಲು ಹೊಸ ಸಾಧ್ಯತೆಗಳತ್ತ ಗಮನ ಹರಿಸುವ ಅಗತ್ಯವನ್ನು ಅವರು ಒತ್ತಿ ಹೇಳಿದ್ದಾರೆ.

ಇತ್ತೀಚೆಗೆ ಬ್ಲೂಮ್ ಬರ್ಗ್ ಟಿವಿಗೆ ನೀಡಿದ ಸಂದರ್ಶನದಲ್ಲಿ, "ನ್ಯಾನೊ ಕಾರನ್ನು ಯಶಸ್ವಿಗೊಳಿಸುವುದನ್ನು ಸವಾಲಾಗಿ ಸ್ವೀಕರಿಸಬೇಕಾಗಿದೆ. ಈಗ ಅದಕ್ಕಿರುವ ಸಾಮರ್ಥ್ಯವನ್ನು ನಾವಿನ್ನೂ ಸಮರ್ಥವಾಗಿ ಬಳಸಿಲ್ಲ. ಅದನ್ನು ಗ್ರಾಹಕರು ಹೆಚ್ಚು ಇಷ್ಟಪಡುವಂತೆ ಮಾಡಲು ಒತ್ತು ನೀಡಬೇಕಿದೆ" ಎಂದು ರತನ್ ಟಾಟಾ ಹೇಳಿದ್ದಾರೆ.

ನಿವೃತ್ತಿ ಅಂಚಿನಲ್ಲಿರುವ ರತನ್ ಟಾಟಾಗೆ ನ್ಯಾನೊ ಕಾರಿನ ಭವಿಷ್ಯದ ಕುರಿತು ಚಿಂತೆ ಆರಂಭವಾದಂತಿದೆ ಎಂದು ವಾಹನ ವಿಶ್ಲೇಷಕರೊಬ್ಬರು ಹೇಳಿದ್ದಾರೆ. ನ್ಯಾನೊ ಕಾರಿನ ಕುರಿತು ಒಳ್ಳೆಯ ಕ್ರಮ, ಹೆಜ್ಜೆಗಳನ್ನು ಇಡಲು ಇದು ಸೂಕ್ತ ಸಮಯವೆಂದು ರತನ್ ಟಾಟಾ ಹೇಳಿದ್ದಾರೆ.

"ಈಗ ನ್ಯಾನೊ ಬೇಡಿಕೆ ಅತ್ಯಾಕರ್ಷಕವಾಗಿಲ್ಲ. ಆದರೆ ಇದಕ್ಕೆ ಇನ್ನಷ್ಟು ಉತ್ತೇಜನ ನೀಡಬಹುದಾಗಿದೆ. ಕಾಲ ಮೀರುವ ಮುನ್ನ ಅದರ ಮಾರಾಟ ಹೆಚ್ಚಿಸಲು ಇನ್ನಷ್ಟು ರಚನಾತ್ಮಕ ಕ್ರಮ ಕೈಗೊಳ್ಳಬೇಕಿದೆ" ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಕಳೆದ ಮಾರ್ಚ್ ತಿಂಗಳಲ್ಲಿ ಕಂಪನಿಯು ಸುಮಾರು 10,400 ನ್ಯಾನೊ ಕಾರುಗಳನ್ನು ಮಾರಾಟ ಮಾಡಿತ್ತು. ಆದರೆ ಇದೀಗ ಈ ಸಂಖ್ಯೆ 5,500ಕ್ಕೆ ತಲುಪಿದೆ. ನ್ಯಾನೊ ಉತ್ಪಾದನೆಗಾಗಿ ಸನಂದ್ ಘಟಕಕ್ಕೆ ಕಂಪನಿಯು 2 ಸಾವಿರ ಕೋಟಿ ರುಪಾಯಿ ಹೂಡಿಕೆ ಮಾಡಿದೆ. ಇಲ್ಲಿ ವರ್ಷಕ್ಕೆ ಎರಡೂವರೆ ಲಕ್ಷಕ್ಕಿಂತ ಹೆಚ್ಚು ಕಾರುಗಳನ್ನು ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ.

ಟಾಟಾ ನ್ಯಾನೊ ಬೇಡಿಕೆ ಹೆಚ್ಚಲು ಕಂಪನಿ ಏನು ಮಾಡಬೇಕು? ನ್ಯಾನೊ ಕಾರಿನ ಕುರಿತು ನಿಮ್ಮ ಅಭಿಪ್ರಾಯವೇನು? ಓದುಗರೇ ನಿಮ್ಮ ಅಭಿಪ್ರಾಯ ತಿಳಿಸಿ.

English summary
Tata Nano was expected to take the small car industry by storm. However in recent times, that has not turned to be true. Ratan Tata the Chairman of Tata Motors limited, has voiced out his concern.

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark