ಬೆಂಗ್ಳೂರಲ್ಲಿ ರಸ್ತೆ ಅಪಘಾತಕ್ಕೆ ಪ್ರತಿ ದಿನ 2 ಬಲಿ!

Written By:
ಪತ್ರಿಕಾ ಪ್ರಕಟಣೆ: ಪೊಲೀಸ್ ಇಲಾಖೆ

ಬೆಂಗಳೂರು ನಗರದ ರಸ್ತೆಗಳಲ್ಲಿ ಅಪಘಾತಗಳಿಂದಾಗಿ ಪ್ರತಿ ದಿನ ಸರಾಸರಿ ಇಬ್ಬರು ಸಾವನ್ನಪ್ಪುತ್ತಾರೆ. ನಗರದ ರಸ್ತೆಗಳಲ್ಲಿ ಪ್ರಾಣ ಕಳೆದುಕೊಳ್ಳುವವರಲ್ಲಿ ಬಹುಪಾಲು ಜನರು ಪಾದಚಾರಿಗಳಾಗಿರುತ್ತಾರೆ. ಸಾವಿರಾರು ಸಂಖ್ಯೆ ಪಾದಚಾರಿಗಳು ಗಾಯಾಳುಗಳಾಗುತ್ತಿದ್ದಾರೆ.

ಒಂದಲ್ಲ ಒಂದು ಸಯಮದಲ್ಲಿ ಪ್ರತಿಯೊಬ್ಬ ನಾಗರಿಕರೂ ಸಹ ಪಾದಚಾರಿಯಾಗಿರುತ್ತಾರೆ. ಆದ್ದರಿಂದ ನಗರ ರಸ್ತೆಗಳಲ್ಲಿ ಪಾದಚಾರಿಗಳ ಅಮೂಲ್ಯ ಜೀವಗಳನ್ನು ಉಳಿಸಲು ಧ್ಯೇಯದೊಂದಿಗೆ ಬೆಂಗಳೂರು ನಗರ ಸಂಚಾರ ಪೊಲೀಸ್ ವಿಭಾಗವು ಪ್ರತಿ ವರ್ಷ ಮಾರ್ಚ್ ತಿಂಗಳನ್ನು 'ಪಾದಚಾರಿ ಸುರಕ್ಷತಾ ಮಾಸಾಚರಣೆ' ಎಂಬುದಾಗಿ ಆಚರಣೆ ಮಾಡಲು ನಿರ್ಧರಿಸುತ್ತಾರೆ.

'ಪಾದಚಾರಿ ಸುರಕ್ಷತಾ ಮಾಸಾಚಾರಣೆ-2013' ಅಂಗವಾಗಿ ಈಗಾಗಲೇ ಈ ಸಾಲಿನಲ್ಲಿ ಇಲ್ಲಿಯ ವರೆಗೆ ವಿಶೇಷ ಕಾರ್ಯಾಚರಣೆ ನಡೆಸಿ ಪ್ರಕರಣಗಳನ್ನು ದಾಖಲಿಸಿದ್ದು ಅವುಗಳ ವಿವರ ಕೆಳಕಂಡಂತಿದೆ.

ನಿಯಮ ಉಲ್ಲಂಘನೆ (ದಾಖಲಿಸಿದ ಒಟ್ಟು ಪ್ರಕರಣಗಳು)

  • ಫುಟ್‌ಪಾತ್ ಮೇಲೆ ವಾಹನ ನಿಲುಗಡೆ- 7509
  • ಫುಟ್‌ಪಾತ್ ಮೇಲೆ ವಾಹನ ಚಾಲನೆ- 2350
  • ಫುಟ್‌ಪಾತ್ ಒತ್ತುವರಿ ಮಾಡಿರುವುದನ್ನು ತೆರವುಗೊಳಿಸಿರುವುದು- 4112

ಪಾದಚಾರಿ ರಸ್ತೆಗಳು ಪಾದಚಾರಿಗಳ ಹಕ್ಕು. ಅವುಗಳನ್ನು ಬೇರೆ ಕಾರ್ಯಗಳಿಗೆ ಉಪಯೋಗಿಸಿಕೊಂಡರೆ ಅನಿವಾರ್ಯವಾಗಿ ಪಾದಚಾರಿಗಳು ರಸ್ತೆಗಳಲ್ಲಿಯೇ ಓಡಾಡಬೇಕಾಗುತ್ತದೆ. ಇದರಿಂದ ಅವರಿಗೆ ಅಪಘಾತವಾಗುವ ಸಂಭವಗಳು ಹೆಚ್ಚು. ಪಾದಚಾರಿಗಳ ಅಮೂಲ್ಯ ಜೀವರಕ್ಷಣೆ ಹಾಗೂ ಪಾದಚಾರಿಗಳ ಸುರಕ್ಷತೆಯೇ ಪಾದಚಾರಿ ಸುರಕ್ಷತಾ ಮಾಸಾಚರಣೆಯ ಪ್ರಮುಖ ಉದ್ದೇಶವಾಗಿದೆ. ಈ ಮಾಸಾಚರಣೆಯಲ್ಲಿ ಫುಟ್‌ಪಾತ್ ಮೇಲೆ ವಾಹನ ನಿಲುಗಡೆ ಮಾಡುವವರ ವಿರುದ್ಧ, ಫುಟ್‌ಪಾತ್ ಮೇಲೆ ವಾಹನ ಚಾಲನೆ ಮಾಡುವವರ ವಿರುದ್ಧ ಹಾಗೂ ಫುಟ್‌ಪಾತ್‌ಗಳನ್ನು ಒತ್ತುವರಿ ಮಾಡಿಕೊಳ್ಳುವವರ ವಿರುದ್ಧ ವಿಶೇಷ ಕಾರ್ಯಾಚರಣೆಗಳನ್ನು ನಡೆಸಿ ಕಠಿಣ ಕ್ರಮಗಳನ್ನು ಕೈಗೊಳ್ಳಲಾಗುವುದು.

ಟ್ವಿಟರ್‌ನಲ್ಲಿ ನಮ್ಮನ್ನು ಫಾಲೋ ಮಾಡಿ

English summary
Every day on an average two people die in Bangalore city. Majority among them are pedestrians and also thousands are being injured. That is the reason, to save the precious life Bangalore city traffic police started this month i.e. MARCH -2013 as “Pedestrian Safety Month”.
Story first published: Thursday, March 7, 2013, 17:27 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark